ನಾನು ಸವಾಲುಗಳನ್ನು ಎದುರಿಸಿದ್ದೇನೆ: ತಮ್ಮ ಬದುಕು, ವೃತ್ತಿ ಜೀವನದ ಬಗ್ಗೆ ಮಾತನಾಡಿದ ಇಸ್ರೋ ಮುಖ್ಯಸ್ಥ ಸೋಮನಾಥ್

ತಮ್ಮ ವೃತ್ತಿ ಜೀವನದ ಸವಾಲುಗಳ ಬಗ್ಗೆ ಮಾತನಾಡಿದ ಎಸ್. ಸೋಮನಾಥ್, ನನ್ನ ಜೀವನದಲ್ಲಿ ಎಲ್ಲವೂ  ಚೆನ್ನಾಗಿತ್ತು ಎಂದು ಭಾವಿಸಬೇಡಿ. ನಾನು ವೈಯಕ್ತಿಕ ಜೀವನ ಮತ್ತು ಅಧಿಕೃತ ಜೀವನದಲ್ಲಿ ಸವಾಲುಗಳನ್ನು ಎದುರಿಸಿದ್ದೇನೆ. ನಮ್ಮನ್ನೂ ಸಂಸ್ಥೆಯಿಂದ ಹೊರಹಾಕಬಹುದು. ನಮ್ಮ ಸ್ಥಾನಕ್ಕೂ ಬೆದರಿಕೆ ಇರುತ್ತದೆ. ಕೆಲವೊಮ್ಮೆ ಗೌರವದಿಂದ ನಡೆಸಿಕೊಳ್ಳುವುದಿಲ್ಲ. ಹಲವು ವರ್ಷಗಳ ಹಿಂದೆಪಿಎಸ್‌ಎಲ್‌ವಿ ಮಾರ್ಕ್-III ಉಡಾವಣೆಯಲ್ಲಿ ವೈಫಲ್ಯದ ಎಲ್ಲಾ ಸಾಧ್ಯತೆಗಳಿದ್ದವು

ನಾನು ಸವಾಲುಗಳನ್ನು ಎದುರಿಸಿದ್ದೇನೆ: ತಮ್ಮ ಬದುಕು, ವೃತ್ತಿ ಜೀವನದ ಬಗ್ಗೆ ಮಾತನಾಡಿದ ಇಸ್ರೋ ಮುಖ್ಯಸ್ಥ ಸೋಮನಾಥ್
ಎಸ್. ಸೋಮನಾಥ್
Follow us
ರಶ್ಮಿ ಕಲ್ಲಕಟ್ಟ
|

Updated on:Sep 25, 2023 | 6:08 PM

ಬೆಂಗಳೂರು ಸೆಪ್ಟೆಂಬರ್ 25: ಕಳೆದ ತಿಂಗಳು ಚಂದ್ರನ ದಕ್ಷಿಣ ಧ್ರುವದ ಬಳಿ ವಿಕ್ರಮ್ ಲ್ಯಾಂಡರ್ ಸಾಫ್ಟ್‌ ಲ್ಯಾಂಡಿಂಗ್ ಆದ ನಂತರ ಬಾಹ್ಯಾಕಾಶ ಇತಿಹಾಸದತ್ತ ದೇಶಕ್ಕೆ ಮಾರ್ಗದರ್ಶನ ನೀಡಿದ ನೂರಾರು ವಿಜ್ಞಾನಿಗಳು, ಎಂಜಿನಿಯರ್‌ಗಳು ಮತ್ತು ತಂತ್ರಜ್ಞರ ಹತ್ತಾರು ಗಂಟೆಗಳ ಸಂಶೋಧನೆ ಮತ್ತು ವಿಶ್ಲೇಷಣೆಯ ಫಲಿತಾಂಶವನ್ನು ಚಂದ್ರಯಾನ-3 (Chandrayaan-3)  ಯಶಸ್ಸಿನಲ್ಲಿ ಕಾಣಬಹುದು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಪ್ರಯತ್ನಗಳ ನೇತೃತ್ವವನ್ನು ಏಜೆನ್ಸಿ ಮುಖ್ಯಸ್ಥ ಎಸ್ ಸೋಮನಾಥ್ (S Somanath)  ಅವರು ಶನಿವಾರ ಎನ್​​ಡಿಟಿವಿ ಜತೆ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಪ್ರಯಾಣ ಮತ್ತು ಚಂದ್ರ, ಮಂಗಳ ಮತ್ತು ಬಾಹ್ಯಾಕಾಶ ಯೋಜನೆಗಳ ಬಗ್ಗೆಯೂ ಮಾತನಾಡಿದ್ದಾರೆ.

ತಮ್ಮ ವೃತ್ತಿ ಜೀವನದ ಸವಾಲುಗಳ ಬಗ್ಗೆ ಮಾತನಾಡಿದ ಎಸ್. ಸೋಮನಾಥ್, ನನ್ನ ಜೀವನದಲ್ಲಿ ಎಲ್ಲವೂ  ಚೆನ್ನಾಗಿತ್ತು ಎಂದು ಭಾವಿಸಬೇಡಿ. ನಾನು ವೈಯಕ್ತಿಕ ಜೀವನ ಮತ್ತು ಅಧಿಕೃತ ಜೀವನದಲ್ಲಿ ಸವಾಲುಗಳನ್ನು ಎದುರಿಸಿದ್ದೇನೆ. ನಮ್ಮನ್ನೂ ಸಂಸ್ಥೆಯಿಂದ ಹೊರಹಾಕಬಹುದು. ನಮ್ಮ ಸ್ಥಾನಕ್ಕೂ ಬೆದರಿಕೆ ಇರುತ್ತದೆ. ಕೆಲವೊಮ್ಮೆ ಗೌರವದಿಂದ ನಡೆಸಿಕೊಳ್ಳುವುದಿಲ್ಲ. ಹಲವು ವರ್ಷಗಳ ಹಿಂದೆಪಿಎಸ್‌ಎಲ್‌ವಿ ಮಾರ್ಕ್-III ಉಡಾವಣೆಯಲ್ಲಿ ವೈಫಲ್ಯದ ಎಲ್ಲಾ ಸಾಧ್ಯತೆಗಳಿದ್ದವು. ಆದರೆ ಯಾರಾದರೂ (ಉಡಾವಣೆ) ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿತ್ತು. ನಾನು ಅದನ್ನು ತೆಗೆದುಕೊಂಡೆ. ಅದು ವೈಫಲ್ಯ ಆಗಬಹುದು ಎಂದು ನನ್ನಲ್ಲಿ ಹೆದರಿಕೆ ಹುಟ್ಟಿಸಿದ್ದರು.ಆದರೆ ಬೇರೆ ಯಾರೂ ಮಾಡದೇ ಇದ್ದುದನ್ನು ನಾನು ಮಾಡಿದೆ. ಅದು ಯಶಸ್ವಿಯಾಯಿತು. ಜೀವನದಲ್ಲಿ ಅನೇಕ ಸಂಗತಿಗಳು ಹಾಗೆ ನಡೆಯುತ್ತವೆ.

ನನ್ನನ್ನು ಟೀಕಿಸಿದ್ದರು, ನನ್ನನ್ನು ಪ್ರಶ್ನಿಸಿದ್ದರು. ಕೆಲವರ ಕೆಟ್ಟ ಮಾತು,ಕೆಟ್ಟ ನಡೆ ಇವುಗಳನ್ನೆಲ್ಲ ಹಿಂದೆ ತಳ್ಳಿ ನಾನು ಮುಂದೆ ಹೆಜ್ಜೆ ಇಟ್ಟಿದ್ದೇನೆ.

ನಾನು (ಈ ಸ್ಥಾನಕ್ಕೆ ) ಸೂಕ್ತ ವ್ಯಕ್ತಿ ಅಲ್ಲ ಎಂದು ಹೇಳುವ ಟೀಕೆಗಳನ್ನು ಕೇಳಿದ್ದೇನೆ. ನಾನು ಇದನ್ನೆಲ್ಲ ಮೀರಿ ಮುಂದೆ ಸಾಗಿದ್ದೇನೆ. ಇಂಥಾ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳದೆ ಆತ್ಮವಿಶ್ವಾಸದಿಂದ ಮುಂದೆ ಸಾಗಿದಾಗ ನಿಮ್ಮನ್ನು ಟೀಕಿಸಿದ ಜನರತ್ತ ನೋಡಿ ನೀವು ಮುಗುಳ್ನಗಬಹುದು. ಅವರ ಮೂರ್ಖ ನಡೆಗಳನ್ನು ನೀವು ಕಡೆಗಣಿಸಬೇಕು.

ಅದನ್ನು ಮಾಡುವುದು ಹೇಗೆ? ಅದೊಂದು ಪ್ರಕ್ರಿಯೆಯನ್ನು ರೂಢಿಸಿಕೊಳ್ಳಬೇಕು. ನೀವು ಆತ್ಮ ವಿಶ್ವಾಸವನ್ನು ಹೇಗೆ ಬೆಳೆಸಿಕೊಳ್ಳುವುದು ಹೇಗೆ ಎಂದು ಕಲಿಯಬೇಕು. ಒಮ್ಮೆ ನೀವು ಅದನ್ನು ಮಾಡಿದರೆ ಈ ಮೂರ್ಖ ಜನರು ಮತ್ತು ಅವರ ಮಾತುಗಳ ಬಗ್ಗೆ ನೀವು ಚಿಂತಿಸುವುದಿಲ್ಲ ಎಂದು ಸೋಮನಾಥ್ ಹೇಳಿದ್ದಾರೆ.

ಭಾರತದ ಅತಿ ದೊಡ್ಡ ಬಾಹ್ಯಾಕಾಶ ಕನಸುಗಳನ್ನು ನನಸಾಗಿಸಿದ ಮೃದುಭಾಷಿ, ಪಾಂಡಿತ್ಯ ಹೊಂದಿರುವ ಸೋಮನಾಥ್ ತಾನೊಬ್ಬ “ಅನ್ವೇಷಕ” ಎಂದು ಹೇಳಿದ್ದಾರೆ. “ನಾನು ಚಂದ್ರನನ್ನು ಅನ್ವೇಷಿಸುತ್ತೇನೆ. ಇದು ಅಂತರಂಗದ ಪರಿಶೋಧನೆಯೂ ಹೌದು. ಇದು ವಿಜ್ಞಾನ ಮತ್ತು ಆಧ್ಯಾತ್ಮಿಕತೆಯನ್ನು ಅನ್ವೇಷಿಸಲು ನನ್ನ ಜೀವನದ ಪ್ರಯಾಣದ ಭಾಗವಾಗಿದೆ ಎಂದು ಚಂದ್ರಯಾನ -3 ಯಶಸ್ವಿ ನಂತರ ದೇವಾಸ್ಥಾನಕ್ಕೆ ಭೇಟಿ ಕೊಟ್ಟ ವೇಳೆ ಅವರು ಈ ಮಾತು ಹೇಳಿದ್ದರು.

ಆ “ಪ್ರಯಾಣ” ಒಬ್ಬರ ದೌರ್ಬಲ್ಯಗಳು ಮತ್ತು ಮಿತಿಗಳ ತಿಳುವಳಿಕೆಯನ್ನು ಒಳಗೊಂಡಿರುತ್ತದೆ.

ನನಗೆ ಹಲವಾರು ಮಿತಿಗಳಿದ್ದವು. ತಾಂತ್ರಿಕ ಸಾಮರ್ಥ್ಯಗಳು ಮತ್ತು ನನ್ನ ಸ್ವಂತ ಸಾಮರ್ಥ್ಯಗಳೆರಡರಲ್ಲೂ. ನೀವು ನಿಮ್ಮದೇ ಆದ ರೀತಿಯಲ್ಲಿ ಸಮಯದ ಅವಧಿಯಲ್ಲಿ ಕೆಲಸ ಮಾಡುತ್ತೀರಿ. ನನಗೆ, ನನ್ನ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ವಿಷಯ ಜ್ಞಾನದ ಬೆಳವಣಿಗೆಗಾಗಿ ನನ್ನ ಜೀವನದಲ್ಲಿ ವಿವಿಧ ಸಮಯಗಳಲ್ಲಿ ಬಂದು ನನಗೆ ಒಳನೋಟವನ್ನು ನೀಡಿದ ವಿವಿಧ ಜನರಿಗೆ ಧನ್ಯವಾದಗಳು ಎಂದು ಇಸ್ರೋ ಮುಖ್ಯಸ್ಥರು ಹೇಳಿದ್ದಾರೆ.

ಇದನ್ನೂ ಓದಿ: ಇಸ್ರೋ ಚಂದ್ರಯಾನ ಮಹಾಕ್ವಿಜ್; 300ಕ್ಕೂ ಹೆಚ್ಚು ಮಂದಿಗೆ ಬಹುಮಾನ; ಮೊದಲು ಬಂದವರಿಗೆ ಲಕ್ಷ ರೂ; ನೀವೂ ಪಾಲ್ಗೊಳ್ಳುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಮಂಗಳ, ಚಂದ್ರನ ಮೇಲೆ ಭಾರತದ ಆವಾಸಸ್ಥಾನ

ಭಾರತದ ಭವಿಷ್ಯದ ಬಾಹ್ಯಾಕಾಶ ಯೋಜನೆಗಳಲ್ಲಿ  ಆದಿತ್ಯ ಎಲ್ 1 ಸೌರಯಾನ ಮತ್ತು ಮಾನವಸಹಿತ ಗಗನ್‌ಯಾನ್ ಮಿಷನ್ ಸೇರಿದಂತೆ ಸೋಮನಾಥ್ ಅವರು ಮಾನವರು ಭೂಮಿಯಾಚೆಗೆ ಪ್ರಯಾಣಿಸಲು ಯೋಜಿಸಿದರೆ, ಚಂದ್ರ ಮತ್ತು ಮಂಗಳ ಗ್ರಹಗಳಲ್ಲಿ ಆವಾಸಸ್ಥಾನವನ್ನು ರಚಿಸುವ ಅಗತ್ಯವಿದೆ. ಭಾರತೀಯರು ಅಲ್ಲಿರಬೇಕು ಎಂದು ಹೇಳಿದ್ದಾರೆ.

“ನಾವು ಇಂದು ನಮ್ಮನ್ನು ತುಂಬಾ ಕೆಳಮಟ್ಟದ್ದಲ್ಲಿದ್ದೇವೆ ಎಂದು ಭಾವಿಸುತ್ತೇವೆ. ನಾವು ತಾಂತ್ರಿಕವಾಗಿ ಮುಂದುವರಿದಿಲ್ಲ, ಆರ್ಥಿಕವಾಗಿ ಶಕ್ತಿಯುತವಾಗಿಲ್ಲ ಮತ್ತು ನಾವು ಯಾವಾಗಲೂ ಬಡವರೆಂದು ಭಾವಿಸುತ್ತೇವೆ. ಆದ್ದರಿಂದ ನಾವು ಎಲ್ಲದರಲ್ಲೂ ಹೂಡಿಕೆ ಮಾಡಲು ಸಾಧ್ಯವಿಲ್ಲ. ಜ್ಞಾನದ ಸೃಷ್ಟಿಕರ್ತರು ತಾವೇ ಎಂದು ಭಾವಿಸುವ ರಾಷ್ಟ್ರದಲ್ಲಿ ಇದು ಹೋಗಬೇಕು ಎಂದು ನಾನು ನಂಬುತ್ತೇನೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:06 pm, Mon, 25 September 23

ಮಿಡಲ್ ಸ್ಟಂಪ್... ಮೊದಲ ಇನಿಂಗ್ಸ್​ನ ಹೀರೋನ ಝೀರೋ ಮಾಡಿದ ಬುಮ್ರಾ
ಮಿಡಲ್ ಸ್ಟಂಪ್... ಮೊದಲ ಇನಿಂಗ್ಸ್​ನ ಹೀರೋನ ಝೀರೋ ಮಾಡಿದ ಬುಮ್ರಾ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್