N Biren Singh ಮಣಿಪುರದ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಎನ್ ಬಿರೇನ್ ಸಿಂಗ್

ಬಿಜೆಪಿ  ಪ್ರಚಂಡ ವಿಜಯದೊಂದಿಗೆ ಅಧಿಕಾರಕ್ಕೆ ಮರಳಿದ 11 ದಿನಗಳ ನಂತರ, ಎನ್ ಬಿರೇನ್ ಸಿಂಗ್ ಸೋಮವಾರ ಮಣಿಪುರದಲ್ಲಿ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

N Biren Singh ಮಣಿಪುರದ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಎನ್ ಬಿರೇನ್ ಸಿಂಗ್
ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಎನ್ ಬಿರೇನ್ ಸಿಂಗ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Mar 21, 2022 | 4:32 PM

ಇಂಫಾಲ್:  ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ  ಪ್ರಚಂಡ ವಿಜಯದೊಂದಿಗೆ ಅಧಿಕಾರಕ್ಕೆ ಮರಳಿದ 11 ದಿನಗಳ ನಂತರ, ಎನ್ ಬಿರೇನ್ ಸಿಂಗ್ (N Biren Singh) ಸೋಮವಾರ ಮಣಿಪುರದಲ್ಲಿ (Manipur) ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda), ಬಿಜೆಪಿಯ ಮಣಿಪುರ ಘಟಕದ ಅಧ್ಯಕ್ಷ ಅಧಿಕಾರಿಮಯುಮ್ ಶಾರದಾ ದೇವಿ, ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಮತ್ತು ಪಕ್ಷದ ಇತರ ನಾಯಕರ ಸಮ್ಮುಖದಲ್ಲಿ ಸಿಂಗ್ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು, ಇಂಫಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಂಗ್, ನಡ್ಡಾ ಅವರನ್ನು ಸ್ವಾಗತಿಸಿದರು. “ಬಿಜೆಪಿಯ ಗೌರವಾನ್ವಿತ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ ಜಿ ಅವರಿಗೆ ಇಂಫಾಲ್ ಅವರಿಗೆ ಆತ್ಮೀಯ ಸ್ವಾಗತ. ಹೊಸ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಇಂಫಾಲಕ್ಕೆ ಬಂದಿದ್ದಕ್ಕಾಗಿ ಬಿಜೆಪಿ ಮಣಿಪುರದ ಸಂಪೂರ್ಣ ರಾಜ್ಯ ಘಟಕವು ನಿಮಗೆ ಧನ್ಯವಾದ ಹೇಳುತ್ತದೆ ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.  ಭಾನುವಾರ ನಡೆದ ಸಭೆಯಲ್ಲಿ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಸಿಂಗ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇದರಲ್ಲಿ ಪಕ್ಷದ ಕೇಂದ್ರ ವೀಕ್ಷಕರಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಭಾಗವಹಿಸಿದ್ದರು.

ಕಳೆದ ವಾರ ಸಿಂಗ್ ಅವರು ದೆಹಲಿಯಲ್ಲಿ ಸ್ವಲ್ಪ ಸಮಯ ಕಳೆದಿದ್ದು, ಅಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದರು. ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಸಿಂಗ್ ಫುಟ್ಬಾಲ್ ಆಟಗಾರರಾಗಿದ್ದರು ಮತ್ತು ಪತ್ರಿಕೋದ್ಯಮದಲ್ಲಿಯೂ ಕೆಲಸ ಮಾಡಿದ್ದರು. ಅವರು ಡೆಮಾಕ್ರಟಿಕ್ ರೆವಲ್ಯೂಷನರಿ ಪೀಪಲ್ಸ್ ಪಾರ್ಟಿಯೊಂದಿಗೆ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ಅವರು 2002 ರಲ್ಲಿ ಹೀಂಗಾಂಗ್ ವಿಧಾನಸಭಾ ಕ್ಷೇತ್ರದಿಂದ ತಮ್ಮ ಮೊದಲ ಚುನಾವಣೆಯಲ್ಲಿ ಯಶಸ್ವಿಯಾಗಿ ಸ್ಪರ್ಧಿಸಿದ್ದರು.

ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡುವುದು ನನ್ನ ಸರ್ಕಾರದ ಮೊದಲ ಹೆಜ್ಜೆ. ರಾಜ್ಯದಲ್ಲಿ ಭ್ರಷ್ಟಾಚಾರ ತೊಲಗಿಸಲು ಹಗಲಿರುಳು ಶ್ರಮಿಸುತ್ತೇನೆ. ನಂತರದ್ದು ಯಾವುದೇ ರೀತಿಯ ಡ್ರಗ್ಸ್ -ಸಂಬಂಧಿತ ವಿಷಯವನ್ನು ರಾಜ್ಯದಿಂದ ಹೋಗಲಾಡಿಸುವುದು. ಮೂರನೆಯದಾಗಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಬಂಡುಕೋರರನ್ನು ಸಂಧಾನದ ಮೇಜಿಗೆ ತಂದು ಸಂವಾದಗಳನ್ನು ಮಾಡಲು ನಾನು ಪ್ರಯತ್ನಿಸುತ್ತೇನೆ. ಈ ಮೂರು ನನ್ನ ಪ್ರಾಥಮಿಕ ಕರ್ತವ್ಯಗಳಾಗಿವೆ ಎಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮಾತನಾಡಿದ ಎನ್ ಬಿರೇನ್ ಸಿಂಗ್ ಹೇಳಿದ್ದಾರೆ

ನೆಮ್ಚಾ ಕಿಪ್‌ಗೆನ್, ವೈ. ಖೇಮ್‌ಚಂದ್ ಸಿಂಗ್, ಬಿಸ್ವಜಿತ್ ಸಿಂಗ್, ಅವಾಂಗ್‌ಬೌ ನ್ಯೂಮೈ ಮತ್ತು ಗೋವಿಂದಾಸ್ ಕೊಂತೌಜಮ್ ಅವರು ಇಂಫಾಲ್‌ನಲ್ಲಿ ರಾಜ್ಯದ ಕ್ಯಾಬಿನೆಟ್ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇದನ್ನೂ ಓದಿ: ತಮಿಳುನಾಡು: ಸರಿಸುಮಾರು ₹16 ಲಕ್ಷ ತೆರಿಗೆ ಪಾವತಿಸದ್ದಕ್ಕೆ ಬಿಎಸ್​​ಎನ್ಎಲ್ ಕಚೇರಿಯಿಂದ ಪೀಠೋಪಕರಣ ವಶ

Published On - 4:17 pm, Mon, 21 March 22