ತಮಿಳುನಾಡು: ಸರಿಸುಮಾರು ₹16 ಲಕ್ಷ ತೆರಿಗೆ ಪಾವತಿಸದ್ದಕ್ಕೆ ಬಿಎಸ್​​ಎನ್ಎಲ್ ಕಚೇರಿಯಿಂದ ಪೀಠೋಪಕರಣ ವಶ

ತಮಿಳುನಾಡು: ಸರಿಸುಮಾರು ₹16 ಲಕ್ಷ ತೆರಿಗೆ ಪಾವತಿಸದ್ದಕ್ಕೆ ಬಿಎಸ್​​ಎನ್ಎಲ್ ಕಚೇರಿಯಿಂದ ಪೀಠೋಪಕರಣ ವಶ
ಬಿಎಸ್‌ಎನ್‌ಎಲ್

ತಿಂಡಿವನಂ ಪುರಸಭೆಯ ಅಧಿಕೃತ ಮೂಲಗಳ ಪ್ರಕಾರ ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಕಾರ್ಯನಿರ್ವಹಿಸುತ್ತಿರುವ ಬಿಎಸ್‌ಎನ್‌ಎಲ್ ಕಚೇರಿಯು ಪುರಸಭೆಗೆ ₹8,70,090 ತೆರಿಗೆ ಮತ್ತು ಚೆನ್ನೈ ರಸ್ತೆಯಲ್ಲಿ ನಿಗದಿಪಡಿಸಲಾದ ಮೊಬೈಲ್ ಫೋನ್ ಸಿಗ್ನಲ್ ಟವರ್‌ಗೆ ₹7,24,446 ತೆರಿಗೆ ಪಾವತಿಸಬೇಕು.

TV9kannada Web Team

| Edited By: Rashmi Kallakatta

Mar 21, 2022 | 3:47 PM

ವಿಲ್ಲುಪುರಂ: ತಿಂಡಿವನಂ (Tindivanam) ಪುರಸಭೆ ಅಧಿಕಾರಿಗಳು ಶನಿವಾರ ಸಂಜೆ ಬಿಎಸ್‌ಎನ್‌ಎಲ್ (BSNL) ಕಚೇರಿಯಲ್ಲಿ ಪೀಠೋಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಹಲವಾರು ಸೂಚನೆಗಳ ನಂತರವೂ ಬಾಕಿ ಇರುವ ತೆರಿಗೆಗಳನ್ನು ಪಾವತಿಸಲು ಆಡಳಿತ ಮಂಡಳಿ ವಿಫಲವಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್​​​ಪ್ರೆಸ್ ವರದಿ ಮಾಡಿದೆ. ತಿಂಡಿವನಂ ಪುರಸಭೆಯ ಅಧಿಕೃತ ಮೂಲಗಳ ಪ್ರಕಾರ ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಕಾರ್ಯನಿರ್ವಹಿಸುತ್ತಿರುವ ಬಿಎಸ್‌ಎನ್‌ಎಲ್ ಕಚೇರಿಯು ಪುರಸಭೆಗೆ ₹8,70,090 ತೆರಿಗೆ ಮತ್ತು ಚೆನ್ನೈ ರಸ್ತೆಯಲ್ಲಿ ನಿಗದಿಪಡಿಸಲಾದ ಮೊಬೈಲ್ ಫೋನ್ ಸಿಗ್ನಲ್ ಟವರ್‌ಗೆ ₹7,24,446 ತೆರಿಗೆ ಪಾವತಿಸಬೇಕು. ಹಲವು ಬಾರಿ ನೋಟಿಸ್ ನೀಡಿದರೂ ಬಿಎಸ್‌ಎನ್‌ಎಲ್ ಆಡಳಿತ ಮಂಡಳಿ ಬಾಕಿ ಪಾವತಿ ಮಾಡದಿರುವುದು ಪೀಠೋಪಕರಣಗಳನ್ನು ವಶಪಡಿಸಿಕೊಳ್ಳಲು ಕಾರಣವಾಗಿದೆ. ಶನಿವಾರ ಸಂಜೆ ಆಯುಕ್ತ ಸೌಂದರರಾಜನ್ ನೇತೃತ್ವದಲ್ಲಿ ಪಾಲಿಕೆಯ ಅಧಿಕಾರಿಗಳು ಮತ್ತು ಕಾರ್ಮಿಕರ ತಂಡ ಬಿಎಸ್‌ಎನ್‌ಎಲ್ ಕಚೇರಿಗೆ ಆಗಮಿಸಿ ಡೋಲು ಬಾರಿಸುವ ಮೂಲಕ ಬಾಕಿ ತೆರಿಗೆಗೆ ಬದಲಾಗಿ ಜಪ್ತಿ ಮಾಡುವುದಾಗಿ ಘೋಷಣೆ ಮಾಡಿದರು. ಸಿಬ್ಬಂದಿ ಇದನ್ನು ವಿರೋಧಿಸಿ ವಾದಿಸಿದರೂ ಪೊಲೀಸರು ಪಾಲಿಕೆ ಅಧಿಕಾರಿಗಳಿಗೆ ರಕ್ಷಣೆ ನೀಡಿ ವಶಪಡಿಸಿಕೊಳ್ಳಲು ಸಹಕರಿಸಿದರು. ಬಾಕಿ ಇರುವ ತೆರಿಗೆ ಮೊತ್ತವನ್ನು ಪಾವತಿಸದಿದ್ದರೆ ಒಂದು ದಿನ ಅಥವಾ ಎರಡು ದಿನಗಳಲ್ಲಿ ಬಿಎಸ್‌ಎನ್‌ಎಲ್ ಕಚೇರಿಯನ್ನು ಸೀಲ್ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಮತ್ತೊಂದು ಘಟನೆಯಲ್ಲಿ, ಉದ್ಯಮಿಯೊಬ್ಬರಿಗೆ ಡೋಲು ಬಾರಿಸಿ ಘೋಷಣೆ ಮಾಡಲಾಗಿದ್ದು, ಅವರು ₹12 ಲಕ್ಷ ಬಾಕಿ ತೆರಿಗೆ ಪಾವತಿಸಬೇಕಿದೆ.

ಮಾಧ್ಯಮದವರೊಂದಿಗೆ ಮಾತನಾಡಿದ ತಿಂಡಿವನಂ ನಗರಸಭೆ ಆಯುಕ್ತ ಸೌಂದರರಾಜನ್, ‘ಬಹುಶಃ ಬಾಕಿ ಇರುವ ತೆರಿಗೆ ಪಾವತಿಸದೇ ಇರುವುದರಿಂದ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ಆಮೆ ಗತಿಯಲ್ಲಿ ಸಾಗಿದೆ. ವಶಪಡಿಸಿಕೊಳ್ಳುವುದನ್ನು ತಪ್ಪಿಸಲು ಸಾರ್ವಜನಿಕರು ಸಕಾಲದಲ್ಲಿ ತೆರಿಗೆ ಪಾವತಿಸಬೇಕು. ದೀರ್ಘಾವಧಿ ಮತ್ತು ಅತ್ಯಧಿಕ ತೆರಿಗೆ ಬಾಕಿ ಇರಿಸುವ ಜನರು ಮತ್ತು ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: Ind-Aus Bilateral Summit ನಮ್ಮ ಸಹಯೋಗವು ಉಚಿತ, ಮುಕ್ತ, ಅಂತರ್ಗತ ಇಂಡೋ-ಪೆಸಿಫಿಕ್‌ಗೆ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ: ಮೋದಿ

Follow us on

Related Stories

Most Read Stories

Click on your DTH Provider to Add TV9 Kannada