AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Narendra Modi: ದಣಿವರಿಯದ ಪ್ರಧಾನಿ ಮೋದಿ, 36 ಗಂಟೆಗಳಲ್ಲಿ, 7 ಕಾರ್ಯಕ್ರಮ, 8 ನಗರ, 5,300 ಕಿ.ಮೀ. ಪ್ರಯಾಣ

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರದಿಂದ (ಏ.24) 36 ಗಂಟೆಗಳಲ್ಲಿ 7 ನಗರಗಳ ಮೂಲಕ 5,300 ಕಿ.ಮೀ.ಗೂ ಹೆಚ್ಚು ಪ್ರಯಾಣಿಸಲಿದ್ದಾರೆ ಮತ್ತು ಎಂಟು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

Narendra Modi: ದಣಿವರಿಯದ ಪ್ರಧಾನಿ ಮೋದಿ, 36 ಗಂಟೆಗಳಲ್ಲಿ, 7 ಕಾರ್ಯಕ್ರಮ, 8 ನಗರ, 5,300 ಕಿ.ಮೀ. ಪ್ರಯಾಣ
ಸಾಂದರ್ಭಿಕ ಚಿತ್ರ : ನರೇಂದ್ರ ಮೋದಿ
ಅಕ್ಷಯ್​ ಪಲ್ಲಮಜಲು​​
|

Updated on:Apr 22, 2023 | 4:04 PM

Share

ದೆಹಲಿ: ಪ್ರಧಾನಿ ಎಂದ ಮೇಲೆ ಎಲ್ಲ ಕಡೆ ಹೋಗಬೇಕು, ಕಾರ್ಯಕ್ರಮಗಳಲ್ಲಿ ಭಾಗಿಯಾಗಲೇಬೇಕು. ಚುನಾವಣೆ ಅಂತೂ ಬಂದರೆ ಬಿಡುವಿಲ್ಲದ ಕೆಲಸ, ಇದರ ಜತೆಗೆ ಸಾರ್ವಜನಿಕ ಭೇಟಿ, ಮನೆ, ಕುಟುಂಬ ಎಲ್ಲವನ್ನು ಸುಧಾರಿಸಿಕೊಂಡು ಹೋಗುವ ಹೊಣೆ, ದೇಶದ ಭದ್ರತೆ, ದೇಶದ ಆರ್ಥಿಕತೆ, ಅಬ್ಬಬ್ಬಾ ಎಲ್ಲವನ್ನು ಎಷ್ಟು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗಬೇಕು. ಸ್ವಲ್ಪ ವ್ಯಾತ್ಯಾಸವಾದರೂ ಪ್ರಧಾನಿಯೇ ಹೊಣೆ. ಭಾರತದಲ್ಲಿ ಇಂತಹ ಜವಾಬ್ದಾರಿಯನ್ನು ಹೊತ್ತ ಪ್ರಧಾನಿಗಳ ಪೈಕಿ ನರೇಂದ್ರ ಮೋದಿ (Narendra Modi) ಅವರು ಕೂಡ ಒಬ್ಬರು, ತಮ್ಮ 72ರ ವಯಸ್ಸಿನಲ್ಲಿ ದಣಿವಿಲ್ಲದೆ ದುಡಿಯುತ್ತಿದ್ದಾರೆ. ಹೌದು ಪ್ರಧಾನಿ ಮೋದಿ ಅವರು ಎರಡು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಸಮುದ್ರ ಅಲೆಯಂತೆ ಪ್ರವಾಸ ಮಾಡುತ್ತಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರದಿಂದ (ಏ.24) 36 ಗಂಟೆಗಳಲ್ಲಿ 7 ನಗರಗಳ ಮೂಲಕ 5,300 ಕಿ.ಮೀ.ಗೂ ಹೆಚ್ಚು ಪ್ರಯಾಣಿಸಲಿದ್ದಾರೆ ಮತ್ತು ಎಂಟು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಮಂಗಳವಾರ ರಾಷ್ಟ್ರ ರಾಜಧಾನಿಗೆ ಹಿಂದಿರುಗುವ ಮುನ್ನ ಮೋದಿ ಮಧ್ಯಪ್ರದೇಶಕ್ಕೆ, ನಂತರ ದಕ್ಷಿಣದ ಕೇರಳಕ್ಕೆ, ನಂತರ ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿ ಮತ್ತು ಪಶ್ಚಿಮದಲ್ಲಿ ದಮನ್ ಮತ್ತು ದಿಯುಗೆ ಪ್ರಯಾಣಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಮಂತ್ರಿಯವರು ದೆಹಲಿಯಿಂದ ಖಜುರಾಹೊಗೆ ಸುಮಾರು 500 ಕಿ.ಮೀ ದೂರದವರೆಗೆ ಪ್ರಯಾಣಿಸಲಿದ್ದಾರೆ, ನಂತರ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಲು ರೇವಾಗೆ ಪ್ರಯಾಣಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರ ನಂತರ, ಅವರು ಮತ್ತೆ ಖಜುರಾಹೊಗೆ ಬರುತ್ತಾರೆ, ಅಲ್ಲಿಂದ ಕೊಚ್ಚಿಗೆ ಪ್ರಯಾಣ ಬೆಳಸಲಿದ್ದಾರೆ, ಸುಮಾರು 1,700 ಕಿಮೀ ವಿಮಾನಯಾನದ ಮೂಲಕ ಯುವಂ ಕಾನ್ಕ್ಲೇವ್​​ನಲ್ಲಿ ಅನೇಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಂಗಳವಾರ ಬೆಳಗ್ಗೆ ಪ್ರಧಾನಿ ಮೋದಿಯವರು ಕೊಚ್ಚಿಯಿಂದ ತಿರುವನಂತಪುರಕ್ಕೆ ಸುಮಾರು 190 ಕಿ.ಮೀ ಪ್ರಯಾಣ ಬೆಳಸಲಿದ್ದಾರೆ, ಅಲ್ಲಿ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ. ಜತೆಗೆ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಇದನ್ನೂ ಓದಿ:Karnataka Assembly Polls: ವೋಟಿಂಗ್​ಗೆ ಮೊದಲ ಬಾರಿ ಅರ್ಹರಾಗಿರುವ ಯುವಜನತೆಯ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅಪಾರ ಜನಪ್ರಿಯ!

ಅಲ್ಲಿಂದ ಸೂರತ್ ಮೂಲಕ ಸಿಲ್ವಾಸ್ಸಾಗೆ ಪ್ರಧಾನಿ ಪ್ರಯಾಣಿಸಲಿದ್ದಾರೆ. ಸಿಲ್ವಾಸ್ಸಾನಲ್ಲಿ ಪ್ರಧಾನಿ ಮೋದಿ ಅವರು NAMO ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಲಿದ್ದಾರೆ ಮತ್ತು ವಿವಿಧ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ಇದರ ನಂತರ, ಅವರು ದೇವ್ಕಾ ಸಮುದ್ರ ತೀರದ ಉದ್ಘಾಟನೆಗೆ ದಮನ್‌ಗೆ ಪ್ರಯಾಣಿಸುತ್ತಾರೆ, ಅಲ್ಲಿಂದ ಮತ್ತೆ ಸುಮಾರು 110 ಕಿ.ಮೀ. ಸೂರತ್‌ಗೆ ಪ್ರಯಾಣ ಬೆಳಸಲಿದ್ದಾರೆ.

ಈಗಾಗಲೇ ಅಧಿಕಾರಿಗಳು ತಿಳಿಸಿರುವಂತೆ ಪ್ರಧಾನಿ ಮೋದಿ ಸುಮಾರು 5,300 ಕಿಮೀಗಳಲ್ಲಿ ವಿಮಾನಯಾನವು ಕೂಡ ಮಾಡಲಿದ್ದಾರೆ. ಈ ಅಂಕಿ ಅಂಶಗಳ ಪ್ರಕಾರ ಪ್ರಧಾನಿ ಮೋದಿ ಉತ್ತರದಿಂದ ದಕ್ಷಿಣಕ್ಕೆ ಭಾರತದ ಉದ್ದಕ್ಕೂ ಪ್ರಯಾಣ ಬೆಳಸಲಿದ್ದಾರೆ, ಪ್ರಧಾನಿಯವರ ಸಂಪೂರ್ಣ ಪ್ರಯಾಣ ಮತ್ತು ಇತರ ಕಾರ್ಯಕ್ರಮಗಳು ಕೇವಲ 36 ಗಂಟೆಗಳ ಕಾಲ ಇರಲಿದೆ.

ಪ್ರಧಾನಿ ಮೋದಿಯವರು ತಮ್ಮ ಪ್ರಯಾಣದ ಸಮಯದ ಜತೆಗೆ, ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರಯಾಣಕ್ಕೂ ಕೂಡ ವೇಳಾಪಟ್ಟಿಯನ್ನು ಹೊಂದಿರುತ್ತಾರೆ. ಪ್ರಧಾನಿ ಮೋದಿ ಅವರು ತಮ್ಮ ಪ್ರತಿ ಪ್ರವಾಸ ಮತ್ತು ಸಭೆಗಳಲ್ಲಿ ಅಷ್ಟೊಂದು ದಣಿಯುವುದಿಲ್ಲ ಎಂದು ಅವರು ಅಧಿಕಾರಿಗಳು ಹೇಳುತ್ತಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:57 pm, Sat, 22 April 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ