ನಿರೂಪಕ ರೋಹಿತ್ ರಂಜನ್ ಅವರನ್ನು ಬಂಧಿಸುವಂತಿಲ್ಲ : ಸುಪ್ರೀಂ
ರಾಹುಲ್ ಗಾಂಧಿ ಸುಳ್ಳು ಸುದ್ದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಝೀ ನ್ಯೂಸ್ ನಿರೂಪಕ ರೋಹಿತ್ ರಂಜನ್ ಅವರನ್ನು ರಾಜಸ್ಥಾನ ಅಥವಾ ಛತ್ತೀಸ್‌ಗಢ ಪೊಲೀಸರು ಬಂಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ರಾಹುಲ್ ಗಾಂಧಿ (Rahul Gandhi) ಸುಳ್ಳು ಸುದ್ದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಝೀ ನ್ಯೂಸ್ (Zee news) ನಿರೂಪಕ ರೋಹಿತ್ ರಂಜನ್ (Rohit Ranjan) ಅವರನ್ನು ಬಂಧಿಸಿಬೇಕು ಎಂದು ತಿಳಿಸಲಾಗಿತ್ತು ಆದರೆ ಇದೀಗ ಅವರನ್ನು ರಾಜಸ್ಥಾನ ಅಥವಾ ಛತ್ತೀಸ್‌ಗಢ ಪೊಲೀಸರು ಬಂಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.ರೋಹಿತ್ ರಾಜನ್ ಅವರ ಮೇಲೆ ಯಾವುದೇ ಬಲವಂತದ ಕ್ರಮ ಅಥವಾ ಅವರನ್ನು ವಶಕ್ಕೆ ತೆಗೆದುಕೊಳ್ಳುವಂತಿಲ್ಲ ಎಂದು ನ್ಯಾಯಾಲಯ ಆದೇಶ ನೀಡಿದೆ. ನಿರೂಪಕನನ್ನು ಬಂಧಿಸಲು ಮಂಗಳವಾರ ಛತ್ತೀಸ್ಗಡ ಪೊಲೀಸ್ ತಂಡ ಉತ್ತರ ಪ್ರದೇಶದ ಗಾಜಿಯಾಬಾದ್ ನಗರಕ್ಕೆ ಬಂದಿದ್ದರು. ಆದರೆ ನಿರೂಪಕನನ್ನು ನೋಯ್ಡಾ ಪೊಲೀಸ್ ಬಂಧಿಸಿದ್ದು ಮಂಗಳವಾರ ರಾತ್ರಿ ಜಾಮೀನು ಮೂಲಕ ಬಿಡುಗಡೆ ಮಾಡಿತ್ತು. ನಿರೂಪಕ ರೋಹಿತ್ ರಂಜನ್ ವಿರುದ್ಧ ಐಪಿಸಿ ಸೆಕ್ಷನ್ 153 ಎ(ವಿವಿಧ ಗುಂಪುಗಳ ನಡುವೆ ದ್ವೇಷಕ್ಕೆ ಪ್ರಚೋದನೆ), ), 295A (ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಿತ ಅಥವಾ ದುರುದ್ದೇಶಿತ ಕೃತ್ಯ), 467 (ಸುಳ್ಳು ಮಾಹಿತಿ), 469 (ಮಾನಹಾನಿ), 504 (ಉದ್ದೇಶಪೂರ್ವಕ ಅಮಮಾನ) ಅಡಿಯಲ್ಲಿ ರಾಯ್ಪುರ್ನಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಬಲವಂತದ ಕ್ರಮದಿಂದ ರಕ್ಷಣೆ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್ ಸಮೀಪಿಸಿದ ರಾಜನ್ ತುರ್ತಾಗಿ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದರು. ತಪ್ಪಾದ ಮಾಹಿತಿಯೊಂದಿಗೆ ವಿಡಿಯೊ ಪ್ರಸರವಾಗಿದ್ದರ ಬಗ್ಗೆ ಝೀ ನ್ಯೂಸ್ ನಿರೂಪಕ ರೋಹಿತ್ ರಂಜನ್ ಕ್ಷಮೆ ಕೇಳಿದ್ದರು.
Multiple FIR’s against Zee news anchor Rohit Ranjan in connection with news on Rahul Gandhi in a TV show on July 1: SC issues notice to centre through AG office on Ranjan plea, directs authorities not to take coercive steps against him or take him into custody @IndianExpress
— Ananthakrishnan G (@axidentaljourno) July 8, 2022
ಝೀ ನ್ಯೂಸ್ ಪ್ರಸಾರ ಮಾಡಿದ ವಿಡಿಯೊದಲ್ಲೇನಿತ್ತು? ಉದಯಪುರ್ ಟೇಲರ್ ಕನ್ಹಯ್ಯಾ ಲಾಲ್ ಅವರನ್ನು ಹತ್ಯೆ ಮಾಡಿದ ಹಂತಕರನ್ನು ರಾಹುಲ್ ಗಾಂಧಿ ಅವರು ಮಕ್ಕಳು ಎಂದು ಹೇಳಿದ್ದಾರೆ ಎಂದು ಝೀನ್ಯೂಸ್ ವರದಿ ಮಾಡಿತ್ತು. ಕೇರಳದ ವಯನಾಡ್ ಗೆ ರಾಹುಲ್ ಗಾಂಧಿ ಭೇಟಿ ನೀಡಿದಾಗ ಮಾಧ್ಯಮದರಲ್ಲಿ ಮಾತನಾಡುತ್ತಿರುವ ವಿಡಿಯೊದ ಒಂದು ತುಣುಕನ್ನು ಸುದ್ದಿಯಲ್ಲಿ ಪ್ರಸಾರ ಮಾಡಲಾಗಿತ್ತು.
ವಯನಾಡ್ನಲ್ಲಿರುವ ತಮ್ಮ ಕಚೇರಿ ಮೇಲೆ ಎಸ್ಎಫ್ಐ ವಿದ್ಯಾರ್ಥಿ ಸಂಘಟನೆ ನಡೆಸಿದ ದಾಳಿ ಬಗ್ಗೆ ಪ್ರತಿಕ್ರಿಯಿಸುವಾಗ ರಾಹುಲ್ ಗಾಂಧಿಯವರು ಅವರು ಮಕ್ಕಳು, ಬೇಜವಾಬ್ದಾರಿಯಿಂದ ಈ ಕೃತ್ಯ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ಜುಲೈ 1ರಂದು ಝೀ ನ್ಯೂಸ್, ರಾಹುಲ್, ಉದಯಪುರ ಹಂತಕರನ್ನು ಮಕ್ಕಳು ಎಂದು ಹೇಳಿದ್ದಾರೆ ಎಂದು ಸುದ್ದಿ ಪ್ರಸಾರ ಮಾಡಿತ್ತು.
Published On - 1:00 pm, Fri, 8 July 22