ಆಕ್ಷೇಪಾರ್ಹ ವಿಡಿಯೊ ಪ್ರಕರಣ: ರೋಸ್ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ರಾಷ್ಟ್ರೀಯ ಮಹಿಳಾ ಆಯೋಗ ಒತ್ತಾಯ
ರಾಷ್ಟ್ರೀಯ ಮಹಿಳಾ ಆಯೋಗವು ಶುಕ್ರವಾರ ತನ್ನ ಹೇಳಿಕೆಯಲ್ಲಿ ರೋಸ್ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶರ "ಆಕ್ಷೇಪಾರ್ಹ ವಿಡಿಯೊ" ವರದಿ ಮಾಡಿರುವ ಮಾಧ್ಯಮದ ಪೋಸ್ಟ್ ಅನ್ನು ನೋಡಿದೆ ಎಂದು ಹೇಳಿದೆ
ತನ್ನ ಕಚೇರಿಯೊಳಗೆ ಮಹಿಳೆಯೊಂದಿಗೆ “ಲೈಂಗಿಕವಾಗಿ ಅಶ್ಲೀಲ” ಕೃತ್ಯದಲ್ಲಿ ತೊಡಗಿರುವ ರೋಸ್ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗ (National Commission for Women) ಶುಕ್ರವಾರ ಒತ್ತಾಯಿಸಿದೆ. ಈ ವಾರದ ಆರಂಭದಲ್ಲಿ ನ್ಯಾಯಾಧೀಶರ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿತ್ತು. ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ತೋರಿಸಲಾದ ವಿಡಿಯೊ ಹಂಚಿಕೊಳ್ಳುವುದಕ್ಕೆ ದೆಹಲಿ ಹೈಕೋರ್ಟ್ ನಿರ್ಬಂಧಿಸಿದೆ. ಹಾಗೆ ಮಾಡುವುದರಿಂದ ಫಿರ್ಯಾದಿಯ ಗೌಪ್ಯತೆ ಹಕ್ಕುಗಳಿಗೆ ಹಾನಿಯುಂಟಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.ರಾಷ್ಟ್ರೀಯ ಮಹಿಳಾ ಆಯೋಗವು ಶುಕ್ರವಾರ ತನ್ನ ಹೇಳಿಕೆಯಲ್ಲಿ ರೋಸ್ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶರ “ಆಕ್ಷೇಪಾರ್ಹ ವಿಡಿಯೊ” ವರದಿ ಮಾಡಿರುವ ಮಾಧ್ಯಮದ ಪೋಸ್ಟ್ ಅನ್ನು ನೋಡಿದೆ ಎಂದು ಹೇಳಿದೆ. ಆಯೋಗವು ವಿಷಯ ಅರಿತುಕೊಂಡಿದೆ. ಅಧ್ಯಕ್ಷೆ ರೇಖಾ ಶರ್ಮಾ ಅವರು ಕ್ರಮ ಕೈಗೊಂಡ ವರದಿಯನ್ನು ಕೋರಿ ದೆಹಲಿ ಹೈಕೋರ್ಟ್(Delhi High Court) ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದಿದ್ದಾರೆ. ಆರೋಪಗಳು ನಿಜವೆಂದು ಕಂಡುಬಂದರೆ ನ್ಯಾಯಾಧೀಶರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ NCW ಹೇಳಿದೆ.
POSH ಕಾಯಿದೆ, 2013 ರಲ್ಲಿ ನಿಗದಿಪಡಿಸಿದ ನಿಯಮಗಳ ಪ್ರಕಾರ ರೋಸ್ ಅವೆನ್ಯೂ ನ್ಯಾಯಾಲಯವು ಆಂತರಿಕ ಸಮಿತಿಯನ್ನು ಹೊಂದಿದೆಯೇ ಎಂದು ತಿಳಿಸಲು ಆಯೋಗವು ಕೇಳಿದೆ. ಆಯೋಗವು ಏಳು ದಿನಗಳಲ್ಲಿ ಕ್ರಮ ಕೈಗೊಂಡ ವರದಿಯನ್ನು ಕೇಳಿದೆ.
National Commission for Women (NCW) has come across a media post reporting an objectionable video of a Rouse Avenue court judge allegedly sexually abusing a woman in his room. The Commission has taken cognizance of the matter: NCW pic.twitter.com/FXM20tOetP
— ANI (@ANI) December 2, 2022
ಬುಧವಾರ ತಡರಾತ್ರಿ ಹೊರಡಿಸಿದ ಆದೇಶದಲ್ಲಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಘಟನೆಯ ಬಗ್ಗೆ ಹೈಕೋರ್ಟ್ ಗಮನಕ್ಕೆ ತಂದಿದ್ದಾರೆ. ಅದರ ರಿಜಿಸ್ಟ್ರಾರ್ ಜನರಲ್ ಅವರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವಿಡಿಯೊವನ್ನು ನಿರ್ಬಂಧಿಸುವ ಅಗತ್ಯವನ್ನು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಆ ವಿಡಿಯೊದ ವಿಷಯಗಳ ಅಶ್ಲೀಲ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ಮತ್ತು ಫಿರ್ಯಾದಿಯ ಗೌಪ್ಯತೆ ಹಕ್ಕುಗಳಿಗೆ ಉಂಟಾಗಬಹುದಾದ ಗಂಭೀರ ಹಾನಿಯನ್ನು ಪರಿಗಣಿಸಿ ತಡೆಯಾಜ್ಞೆಯನ್ನು ಸ್ಪಷ್ಟವಾಗಿ ಸಮರ್ಥಿಸಲಾಗುತ್ತದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:52 pm, Fri, 2 December 22