Navjot Singh Sidhu: ಚಂಡಿಗಢ್ನಲ್ಲಿ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಬಂಧನ
Lakhimpur Kheri Violence: ಲಖಿಂಪುರ ಖೇರಿ ಹಿಂಸಾಚಾರ ಸಂಬಂಧಪಟ್ಟಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು.
ಉತ್ತರಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರ (Lakhimpur Kheri Violence) ವಿರೋಧಿಸಿ ಚಂಡಿಗಢ್ನ ರಾಜ್ಯಪಾಲರ ಭವನದ ಎದುರು ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು (Navjot Singh Sidhu )ಮತ್ತು ಅವರ ಬೆಂಬಲಿಗರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಲಖಿಂಪುರದಲ್ಲಿ ಹಿಂಸಾಚಾರ ನಡೆದು ನಾಲ್ವರು ರೈತರು ಸೇರಿ ಒಟ್ಟು 8 ಮಂದಿ ಮೃತಪಟ್ಟ ಘಟನೆಯನ್ನು ವಿರೋಧಿಸಿ ನವಜೋತ್ ಸಿಂಗ್ ಸಿಧು ಪ್ರತಿಭಟನೆ ನಡೆಸುತ್ತಿದ್ದರು. ಇವರೊಂದಿಗೆ ಕಾಂಗ್ರೆಸ್ ಶಾಸಕರು, ಪಿವೈಸಿ ಅಧ್ಯಕ್ಷ ಬರಿಂದರ್ ದಿಲ್ಲೋನ್ ಇತರರು ಇದ್ದರು. ಇವರೆಲ್ಲರೂ ಕೇಂದ್ರ ಸಚಿವ ಅಜಯ್ ಮಿಶ್ರಾ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಹಾಗೇ, ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆಯೂ ಸಿಧು ಆಗ್ರಹಿಸಿದ್ದಾರೆ.
ನಿನ್ನೆ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಮತ್ತು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಭೇಟಿ ವಿರೋಧಿಸಿ ರೈತರು ಲಖಿಂಪುರದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಎರಡು ಕಾರುಗಳು ಅವರ ಮೇಲೆ ಹರಿದು, ಇಬ್ಬರು ರೈತರು ಮೃತಪಟ್ಟಿದ್ದಾರೆ. ಒಂದು ಕಾರಿನಲ್ಲಿ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ಇದ್ದರು ಎಂಬ ಆರೋಪ ಕೇಳಿಬಂದಿದ್ದು, ಅವರ ವಿರುದ್ಧ ಕೊಲೆ ಕೇಸ್ ಕೂಡ ದಾಖಲಾಗಿದೆ. ಇಬ್ಬರು ರೈತರು ಸಾವನ್ನಪ್ಪುತ್ತಿದ್ದಂತೆ ಲಖಿಂಪುರ ಖೇರಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಹಾಗೇ, ಕಾಂಗ್ರೆಸ್ನ ಪ್ರಿಯಾಂಕಾ ಗಾಂಧಿ, ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಛನ್ನಿ, ಅಖಿಲೇಶ್ ಯಾದವ್, ಛತ್ತೀಸ್ಗಢ್ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಸೇರಿ ಹಲವು ನಾಯಕರು ಲಖಿಂಪುರ ಖೇರಿ ಘಟನೆಯನ್ನು ಖಂಡಿಸಿದ್ದಾರೆ. ಲಖಿಂಪುರಕ್ಕೆ ತೆರಳಲು ಮುಂದಾಗಿರುವ ಪಂಜಾಬ್ ಸಿಎಂ ಉತ್ತರ ಪ್ರದೇಶ ಸರ್ಕಾರದ ಅನುಮತಿ ಕೋರಿದ್ದಾರೆ. ಆದರೆ ಹಿಂಸಾಚಾರ ನಡೆಯುತ್ತಿರುವ ಸ್ಥಳದಲ್ಲೀಗ ಸೆಕ್ಷನ್ 144 ಜಾರಿಯಾಗಿದ್ದೂ, ಯಾರನ್ನೂ ಅಲ್ಲಿಗೆ ಬಿಡಲಾಗುತ್ತಿಲ್ಲ.
ಮಧ್ರಪ್ರವೇಶ ಮಾಡಿದ ಕೇಂದ್ರ ಗೃಹ ಸಚಿವಾಲಯ ಹಿಂಸಾಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹಸಚಿವಾಲಯ ಮಧ್ಯಪ್ರವೇಶ ಮಾಡಿದ್ದು, ಲಖಿಂಪುರ ಖೇರಿಯಲ್ಲಿ ಆರ್ಎಎಫ್ (ಕ್ಷಿಪ್ರ ಕ್ರಿಯಾ ಪಡೆ) ಮತ್ತು ಸಶಸ್ತ್ರ ಸೀಮಾ ಬಲ ಪಡೆಯ ತಲಾ ಎರಡು ತಂಡಗಳನ್ನು ನಿಯೋಜಿಸಿದ್ದು, ಅಕ್ಟೋಬರ್ 6ರವರೆಗೂ ಈ ಭದ್ರತೆ ಮುಂದುವರಿಯಲಿದೆ. ಇನ್ನು ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಮೃತದೇಹಗಳನ್ನು ಪೋಸ್ಟ್ಮಾರ್ಟಮ್ಗೆ ಕಳಿಸಲಾಗಿದೆ.
ಸಿಬಿಐ ತನಿಖೆಯಾಗಲಿ ಕೇಂದ್ರ ಸಚಿವ ಅಜಯ್ ಮಿಶ್ರಾಗೆ ಈ ಪ್ರಕರಣ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಾರಣ ರೈತರ ಮೇಲೆ ಕಾರು ಹರಿಸಿರುವ ಆರೋಪ ಅವರ ಪುತ್ರ ಆಶೀಶ್ ಮಿಶ್ರಾ ಮೇಲೆ ಬಂದಿದ್ದು, ಕೊಲೆ ಕೇಸ್ ಕೂಡ ದಾಖಲಾಗಿದೆ. ಆದರೆ ಈ ಆರೋಪವನ್ನು ಅಜಯ್ ಮಿಶ್ರಾ ಮತ್ತು ಆಶೀಶ್ ಮಿಶ್ರಾ ಇಬ್ಬರೂ ತಳ್ಳಿ ಹಾಕಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ತಾನು ಲಖಿಂಪುರದಲ್ಲಿ ಇರಲೇ ಇಲ್ಲ. ಅಂದು ಬೆಳಗ್ಗೆ 9ಗಂಟೆಯಿಂದಲೂ ಬನ್ಬೀರ್ಪುರದಲ್ಲಿ ಇದ್ದೆ ಎಂದಿದ್ದಾರೆ. ಅಜಯ್ ಮಿಶ್ರಾ ಕೂಡ ಇದನ್ನೇ ಪ್ರತಿಪಾದಿಸಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ರೈತರ ಮೇಲೆ ಕಾರು ಹರಿಸಿದ ಘಟನೆಯ ತನಿಖೆಯನ್ನು ಸಿಬಿಐ ಅಥವಾ ಕಾರ್ಯನಿರತ ನ್ಯಾಯಾಧೀಶರ ತಂಡ ನಡೆಸಬೇಕು. ಅದಾಗದೆ ಇದ್ದರೆ ಎಸ್ಐಟಿ ರಚನೆ ಮಾಡಬೇಕು ಎಂದಿದ್ದಾರೆ.
ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಕೈಯಲ್ಲಿ ಪೊರಕೆ! ರೂಮನ್ನು ಕ್ಲೀನ್ ಮಾಡಿದ ಪರಿ ಹೇಗಿತ್ತು ನೀವೇ ನೋಡಿ
Health Tips: ಪ್ರತಿನಿತ್ಯ ನೀವು ಮಾಡುವ ಈ ಕೆಲವು ತಪ್ಪುಗಳು ನಿಮ್ಮ ಆರೋಗ್ಯವನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ!
Published On - 1:59 pm, Mon, 4 October 21