AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯಪ್ರದೇಶದ ಸೋಂಕಿತನೊಬ್ಬನಲ್ಲಿ ಕೊರೋನಾ ವೈರಸ್​ನ ಹೊಸ ರೂಪಾಂತರಿ ಪತ್ತೆ, ಸಂಪರ್ಕಿತರನ್ನು ಪತ್ತೆ ಮಾಡುವ ಕೆಲಸ ಆರಂಭ

ಸಿಡಿಸಿ ಮತ್ತು ಸಾರ್ಸ್-ಕೊವ್-2 ಇಂಟರ್ ಏಜಿನ್ಸಿ ಗುಂಪು ಕೊರೋನಾ ವೈರಸ್​ ರೂಪಾಂತರಿಗಳ ಬಗ್ಗೆ ಲಭ್ಯವಿರುವ ಎಲ್ಲ ವೈಜ್ಞಾನಿಕ ಸಾಕ್ಷ್ಯಗಳ ದತ್ತಾಂಶವನ್ನು ಅವುಗಳ ವರ್ಗೀಕರಣಕ್ಕಾಗಿ ಸತತವಾಗಿ ಅಭ್ಯಾಸ ಮಾಡುತ್ತಿದೆ, ಎಂದು ಸಿಡಿಸಿ ಹೇಳಿರುವುದನ್ನು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಮಧ್ಯಪ್ರದೇಶದ ಸೋಂಕಿತನೊಬ್ಬನಲ್ಲಿ ಕೊರೋನಾ ವೈರಸ್​ನ ಹೊಸ ರೂಪಾಂತರಿ ಪತ್ತೆ, ಸಂಪರ್ಕಿತರನ್ನು ಪತ್ತೆ ಮಾಡುವ ಕೆಲಸ ಆರಂಭ
ಪ್ರಾತಿನಿಧಿಕ ಚಿತ್ರ
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jun 18, 2021 | 12:27 AM

Share

ಭೋಪಾಲ್: ಮಧ್ಯಪ್ರದೇಶದ ಕೋವಿಡ್-19 ಸೋಂಕಿತ ವ್ಯಕ್ತಿಯೊಬ್ಬನಲ್ಲಿ ಕೊರೊನಾ ವೈರಸ್​ನ ಒಂದು ಹೊಸ ರೂಪಾಂತರಿ ಪತ್ತೆಯಾಗಿರುವ ಬಗ್ಗೆ ವರದಿಯಾಗಿದ್ದು ಅಲ್ಲಿನ ವೈದ್ಯಕೀಯ ವಲಯಗಳಲ್ಲಿ ಆತಂಕ ಮೂಡಿಸಿದೆ. ರೋಗ ತಡೆಯ ರಾಷ್ಟ್ರೀಯ ಕೇಂದ್ರವು (ಎನ್​ಸಿಡಿಸಿ) ಗುರುವಾರದಂದು ತನ್ನ ವರದಿಯಲ್ಲಿ ಭೋಪಾಲ ನಗರದ ಒಂದು ಪಾಸಿಟಿವ್ ಪ್ರಕರಣದಲ್ಲಿ ಕೊರೊನಾ ವೈರಸ್​ನ ಹೊಸ ರೂಪಾಂತರಿ ಪತ್ತೆಯಾಗಿರುವುದನ್ನು ತಿಳಿಸಿದೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ ಸಾರಂಗ್ ಹೇಳಿದರು. ಗುರುವಾರದಂದು ಭೋಪಾಲ್​ನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಸಾರಂಗ್, ‘ಸೋಂಕಿನ ಹರಡುವಿಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮತ್ತು ಸೋಂಕಿಗೊಳಗಾಗಿರಬಹುದಾದ ಸಂಪರ್ಕಿತರನ್ನುಪತ್ತೆ ಮಾಡುವ ಕೆಲಸ ಆರಂಭಿಸಲಾಗಿದೆ,’ ಎಂದು ಹೇಳಿದರು.

ಅಮೇರಿಕಾದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರವು (ಸಿಡಿಸಿ) ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಪತ್ತೆಯಾದ ಮತ್ತು ಸೋಂಕು ತ್ವರಿತ ಗತಿಯಲ್ಲಿ ಹರಡುವ ಆಧಾರದಲ್ಲಿ ಕೊರೋನಾ ವೈರಸ್​ನ ಡೆಲ್ಟಾ ರೂಪಾಂತರಿಯನ್ನು ಈಗಾಗಲೇ ಪುನರ್​ವರ್ಗೀಕರಿಸಿದೆ ಮತ್ತು ಎರಡನೇ ಅಲೆಗೆ ಇದೇ ಬಹತೇಕವಾಗಿ ಕಾರಣವಾಗಿದೆ ಎಂದು ಹೇಳಿದೆ.

ಸಿಡಿಸಿ ಮತ್ತು ಸಾರ್ಸ್-ಕೊವ್-2 ಇಂಟರ್ ಏಜಿನ್ಸಿ ಗುಂಪು ಕೊರೋನಾ ವೈರಸ್​ ರೂಪಾಂತರಿಗಳ ಬಗ್ಗೆ ಲಭ್ಯವಿರುವ ಎಲ್ಲ ವೈಜ್ಞಾನಿಕ ಸಾಕ್ಷ್ಯಗಳ ದತ್ತಾಂಶವನ್ನು ಅವುಗಳ ವರ್ಗೀಕರಣಕ್ಕಾಗಿ ಸತತವಾಗಿ ಅಭ್ಯಾಸ ಮಾಡುತ್ತಿದೆ, ಎಂದು ಸಿಡಿಸಿ ಹೇಳಿರುವುದನ್ನು ಫಾಕ್ಸ್ ನ್ಯೂಸ್ ವರದಿ ಮಾಡಿದೆ. ಸಿಡಿಸಿ ಮಂಗಳವಾರದಂದು ನೀಡಿರುವ ಹೇಳಿಕೆಯಲ್ಲಿ ಕೊರೊನಾ ವೈರಸ್​ನ ರೂಪಾಂತರಿಗಳು ಅಮೇರಿಕವೂ ಸೇರಿದಂತೆ ಕನಿಷ್ಟ 66 ದೇಶಗಳಲ್ಲಿ ಹಬ್ಬಿವೆ.

ಈ ವಾರದ ಆರಂಭದಲ್ಲಿ, ಬಯೋಎನ್​ಟೆಕ್/ಫೈಜರ್ ಲಸಿಕೆಯು ಡೆಲ್ಟಾ ರೂಪಾಂತರಿ ವಿರುದ್ದ ಶೇಕಡಾ 96 ರಷ್ಟು ಪರಿಣಾಮಕಾರಿಯಾಗಿದೆ ಎಂದು ಯುನೈಟೆಡ್​ ಕಿಂಗ್​ಡಮ್​ನ ಆರೋಗ್ಯ ಅಧಿಕಾರಿಗಳು ಹೇಳಿದ್ದರು. ಸ್ಪುಟ್ನಿಕ್ ವಿ ಲಸಿಕೆ ತಯಾರಿಸುವ ರಷ್ಯಾದ ಗೆಮಾಲಿಯಾ ಫಾರ್ಮಾಸ್ಯೂಟಿಕಲ್ಸ್ ಕಂಪನಿ ಸಹ ಭಾರತದಲ್ಲಿ ಮೊದಲ ಮೊದಲ ಬಾರಿಗೆ ಪತ್ತೆಯಾಗಿರುವ ಡೆಲ್ಟಾ ರೂಪಾಂತರಿ ವಿರುದ್ದ ತನ್ನ ಲಸಿಕೆಯು ಬೇರೆ ಎಲ್ಲ ಲಸಿಕೆಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಹೇಳಿದೆ.

ನೀತಿ (ಎನ್ಐಟಿಐ) ಆಯೋಗದ (ಆರೋಗ್ಯ) ಸದಸ್ಯ ವಿಕೆ ಪೌಲ್ ಅವರು ಮತ್ತೊಂದು ಡೆಲ್ಟಾ ಪ್ಲಸ್ ರೂಪಾಂತರಿಯು ಆತಂಕಪಡುವಂಥ ವೈರಸ್​ನ ರೂಪಾಂತರಿ ಎಂದು ವರ್ಗೀಕೃತಗೊಂಡಿಲ್ಲ ಎಂದು ಹೇಳಿದ್ದಾರೆ

ಏತನ್ಮಧ್ಯೆ, ಲಾಂಬ್ಡಾ ಎಂದು ಹೆಸರಿಸಲಾಗಿರುವ ಕೊರೋನಾ ವೈರಸ್​ನ ಮತ್ತೊಂದ ರೂಪಾಂತರಿಯು ಅದು ಮೊಟ್ಟ ಮೊದಲ ಬಾರಿಗೆ ಪತ್ತೆಯಾದ ಪೆರು ಸೇರಿದಂತೆ ಬೇರೆ 29 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರದಂದು ಹೇಳಿದೆ. ದಕ್ಷಿಣ ಅಮೇರಿಕಾದಲ್ಲಿ ಜಾಸ್ತಿ ಕಾಣಿಸಿಕೊಂಡಿರುವ ಲಾಂಬ್ಡಾ ರೂಪಾಂತರಿಯ ಸಂತತಿಯನ್ನು ಜಾಗತಿಕ ವೇರಿಯಂಟ್ ಆಫ್ ಇಂಟರೆಸ್ಟ್​ ಎಂದು ಸೋಮವಾರ ವರ್ಗೀಕರಿಸಲಾಗಿದೆ

ಇದನ್ನೂ ಓದಿ: Delta plus b1 617.2: ಭಾರತದಲ್ಲಿ ಪತ್ತೆಯಾಗಿದೆ ಡೆಲ್ಟಾ ಪ್ಲಸ್ ರೂಪಾಂತರಿ; ಸದ್ಯ ಕಳವಳದ ಅಗತ್ಯ ಇಲ್ಲ ಎಂದರು ವಿಜ್ಞಾನಿಗಳು