ಎನ್​ಸಿಪಿ ನಾಯಕ ಶರದ್ ಪವಾರ್​ಗೆ ಕೊರೊನಾ ಸೋಂಕು; ಆತಂಕ ಪಡುವ ಅಗತ್ಯವಿಲ್ಲ ಎಂದು ಟ್ವೀಟ್​

ಎನ್​ಸಿಪಿ ನಾಯಕ ಶರದ್ ಪವಾರ್​ಗೆ ಕೊರೊನಾ ಸೋಂಕು; ಆತಂಕ ಪಡುವ ಅಗತ್ಯವಿಲ್ಲ ಎಂದು ಟ್ವೀಟ್​
ಶರದ್​ ಪವಾರ್​

ಈಗಾಗಲೇ ಹಲವು ರಾಜಕಾರಣಿಗಳಲ್ಲಿ ಕೊರೊನಾ ದೃಢಪಟ್ಟಿದೆ. ಜ.31ರಂದು ಸಂಸತ್ತಿನ ಬಜೆಟ್​ ಅಧಿವೇಶನ ಪ್ರಾರಂಭವಾಗಲಿದ್ದು, ಅದಕ್ಕೂ ಮೊದಲು ಅಲ್ಲಿನ ಸುಮಾರು 875 ಸಿಬ್ಬಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. 

TV9kannada Web Team

| Edited By: Lakshmi Hegde

Jan 24, 2022 | 4:36 PM

ದೆಹಲಿ: ಎನ್​ಸಿಪಿ ಅಧ್ಯಕ್ಷ ಶರದ್​ ಪವಾರ್ (Sharad Pawar)​ ಅವರಲ್ಲಿ ಕೊರೊನಾ ಸೋಂಕು (Corona Virus) ದೃಢಪಟ್ಟಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನನಗೆ ಕೊರೊನಾ ಸೋಂಕು ತಗುಲಿದೆ. ಆದರೆ ಆತಂಕ ಪಡುವ ಅಗತ್ಯವಿಲ್ಲ. ನಾನು ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಆದರೆ ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ಕೊವಿಡ್ 19 ತಪಾಸಣೆಗೆ ಒಳಗಾಗಲು ಮನವಿ ಮಾಡುತ್ತೇನೆ ಮತ್ತು ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ. ತಮಗೆ ಕೊರೊನಾ ಸೋಂಕು ದೃಢಪಟ್ಟಿದ್ದನ್ನು ಶರದ್​ ಪವಾರ್ ತಿಳಿಸಿದ ಬೆನ್ನಲ್ಲೇ, ಮಹಾರಾಷ್ಟ್ರ ಕಾಂಗ್ರೆಸ್​ ನಾಯಕ, ಸಚಿವ ಬಾಳಾಸಾಹೇಬ್​ ಥೋರಟ್​ ಟ್ವೀಟ್ ಮಾಡಿ, ಬೇಗ ಗುಣಮುಖರಾಗಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಹಾರೈಸಿದ್ದಾರೆ. 

ಈಗಾಗಲೇ ಹಲವು ರಾಜಕಾರಣಿಗಳಲ್ಲಿ ಕೊರೊನಾ ದೃಢಪಟ್ಟಿದೆ. ಜ.31ರಂದು ಸಂಸತ್ತಿನ ಬಜೆಟ್​ ಅಧಿವೇಶನ ಪ್ರಾರಂಭವಾಗಲಿದ್ದು, ಅದಕ್ಕೂ ಮೊದಲು ಅಲ್ಲಿನ ಸುಮಾರು 875 ಸಿಬ್ಬಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ.  ಭಾನುವಾರ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ತಮಗೆ ಕೊರೊನಾ ಸೋಂಕು ತಗುಲಿದ್ದಾಗಿ ಹೇಳಿಕೊಂಡಿದ್ದರು. ವೆಂಕಯ್ಯ ನಾಯ್ಡು ಅವರು ಹೈದರಾಬಾದ್​ನಲ್ಲಿದ್ದು, ಅವರಲ್ಲಿ ಕೊರೊನಾ ದೃಢಪಟ್ಟಿದೆ. ಸದ್ಯ ಐಸೋಲೇಶನ್​​ಗೆ ಒಳಗಾಗಿದ್ದಾರೆ. ತಮ್ಮ ಸಂಪರ್ಕಕ್ಕೆ ಬಂದವರೆಲ್ಲ ತಪಾಸಣೆಗೆ ಒಳಗಾಗುವಂತೆ ಹೇಳಿದ್ದಾರೆ. ಇವರು 2021ರಲ್ಲೂ ಒಮ್ಮೆ ಕೊರೊನಾಕ್ಕೆ ಒಳಗಾಗಿದ್ದರು. ಇದು ಎರಡನೇ ಬಾರಿಗೆ ಅವರಿಗೆ ಸೋಂಕು ತಗುಲಿದೆ. ಸೌಮ್ಯ ಲಕ್ಷಣಗಳನ್ನು ಹೊಂದಿದ್ದಾಗಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹನಿಮೂನ್​ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್​; ಮಾಲ್ಡೀವ್ಸ್​ ನನ್ನ ಹ್ಯಾಪಿ ಪ್ಲೇಸ್ ಎಂದ ನಟಿ  

Follow us on

Related Stories

Most Read Stories

Click on your DTH Provider to Add TV9 Kannada