ಮರಾಠ ಮೀಸಲಾತಿ ಹೋರಾಟ: ಎನ್​ಸಿಪಿ ಶಾಸಕನ ಮನೆಗೆ ಬೆಂಕಿ ಇಟ್ಟ ಪ್ರತಿಭಟನಾಕಾರರು

Maratha Reservation Protest: ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ(Maratha Reservation) ವಿಚಾರದಲ್ಲಿ ಮತ್ತೊಮ್ಮೆ ಹಿಂಸಾಚಾರ ಭುಗಿಲೆದ್ದಿದೆ, ಇಲ್ಲಿನ ಬೀಡ್ ಜಿಲ್ಲೆಯಲ್ಲಿ ಪ್ರತಿಭಟನಾಕಾರರು ಎನ್‌ಸಿಪಿ ಶಾಸಕ ಪ್ರಕಾಶ್ ಸೋಲಂಕೆ ಅವರ ಮನೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಎಎನ್​ಐ ಹಂಚಿಕೊಂಡ ವಿಡಿಯೋದಲ್ಲಿ ಸೋಲಂಕೆ ಅವರ ಮನೆಯು ಧಗಧಗನೆ ಹೊತ್ತಿ ಉರಿಯುತ್ತಿರುವುದನ್ನು ಕಾಣಬಹುದು. ಮನೆಯಿಂದ ದಟ್ಟ ಹೊಗೆ ಏರುತ್ತಿತ್ತು.

ಮರಾಠ ಮೀಸಲಾತಿ ಹೋರಾಟ: ಎನ್​ಸಿಪಿ ಶಾಸಕನ ಮನೆಗೆ ಬೆಂಕಿ ಇಟ್ಟ ಪ್ರತಿಭಟನಾಕಾರರು
ಶಾಸಕ ಪ್ರಕಾಶ್​ ಮನೆ
Image Credit source: ABP Live

Updated on: Oct 30, 2023 | 3:18 PM

ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ(Maratha Reservation) ವಿಚಾರದಲ್ಲಿ ಮತ್ತೊಮ್ಮೆ ಹಿಂಸಾಚಾರ ಭುಗಿಲೆದ್ದಿದೆ, ಇಲ್ಲಿನ ಬೀಡ್ ಜಿಲ್ಲೆಯಲ್ಲಿ ಪ್ರತಿಭಟನಾಕಾರರು ಎನ್‌ಸಿಪಿ ಶಾಸಕ ಪ್ರಕಾಶ್ ಸೋಲಂಕೆ ಅವರ ಮನೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಎಎನ್​ಐ ಹಂಚಿಕೊಂಡ ವಿಡಿಯೋದಲ್ಲಿ ಸೋಲಂಕೆ ಅವರ ಮನೆಯು ಧಗಧಗನೆ ಹೊತ್ತಿ ಉರಿಯುತ್ತಿರುವುದನ್ನು ಕಾಣಬಹುದು. ಮನೆಯಿಂದ ದಟ್ಟ ಹೊಗೆ ಏರುತ್ತಿತ್ತು.

ಶಾಸಕ ಸೋಲಂಕೆ ಮಾತನಾಡಿ, ದಾಳಿ ನಡೆದಾಗ ನಾನು ಮನೆಯೊಳಗಿದ್ದೆ, ಅದೃಷ್ಟವಶಾತ್ ನನ್ನ ಕುಟುಂಬಕ್ಕೆ ಹಾಗೂ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ, ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಆದರೆ ಆಸ್ತಿಪಾಸ್ತಿಗಳಿಗೆ ಅಪಾರ ಹಾನಿಯಾಗಿದೆ ಎಂದು ಹೇಳಿದ್ದಾರೆ.

ಎನ್‌ಸಿಪಿ ಶಾಸಕ ಪ್ರಕಾಶ್ ಸೋಲಂಕೆ ನಿವಾಸದ ಮೇಲೆ ಮರಾಠಾ ಮೀಸಲಾತಿ ಪರ ಪ್ರತಿಭಟನಾಕಾರರು ನಡೆಸಿದ ದಾಳಿಗೆ ಸಿಎಂ ಏಕನಾಥ್ ಶಿಂಧೆ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರತಿಭಟನೆ ಯಾವ ತಿರುವು ಪಡೆದುಕೊಳ್ಳುತ್ತಿದೆ ಎಂಬುದರ ಬಗ್ಗೆ ಮನೋಜ ಜಾರಂಗೆ ಪಾಟೀಲ್ (ಮರಾಠಾ ಮೀಸಲಾತಿ ಹೋರಾಟಗಾರ) ಗಮನಹರಿಸಬೇಕು ಎಂದರು.

ಮತ್ತಷ್ಟು ಓದಿ: ಮರಾಠಾ ಮೀಸಲಾತಿ ಪ್ರತಿಭಟನೆ: ಜಲ್ನಾದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿ ಪ್ರಹಾರ

ಮರಾಠ ಸಮುದಾಯಕ್ಕೆ ಶಾಶ್ವತ ಮೀಸಲಾತಿ ಕಲ್ಪಿಸಲು ನಾವು ಬದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಭರವಸೆ ನೀಡಿದರು. ಮರಾಠರ ನಾಡಾಗಿರುವ ಮಹಾರಾಷ್ಟ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಮರಾಠರ ಮೀಸಲಾತಿಯ ವಿಷಯ ಬಿರುಸುಗೊಳ್ಳುತ್ತಿದೆ.

ವಾಸ್ತವವಾಗಿ, ಮರಾಠ ಸಮುದಾಯದ ಜನರು ಹಿಂದುಳಿದ ಜಾತಿಗಳಿಗೆ ಸಿಗುವ ಅದೇ ಮೀಸಲಾತಿಯನ್ನು ಉದ್ಯೋಗ ಮತ್ತು ಶಿಕ್ಷಣದಲ್ಲಿ ಪಡೆಯಬೇಕೆಂದು ಒತ್ತಾಯಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಮರಾಠಾ ಮೀಸಲಾತಿಗೆ ಆಗ್ರಹಿಸಿ ಮರಾಠ ಮೋರ್ಚಾ ಸಂಚಾಲಕ ಮನೋಜ ಜಾರಂಗೆ ಪಾಟೀಲ ನೇತೃತ್ವದಲ್ಲಿ ಚಳವಳಿ ನಡೆಯುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us