2029ರಲ್ಲೂ ಎನ್ಡಿಎ ಮತ್ತೆ ಅಧಿಕಾರಿಕ್ಕೆ ಬರುತ್ತೆ, ಮೋದಿಯೇ ಪ್ರಧಾನಿ: ಅಮಿತ್ ಶಾ
ಪ್ರತಿಪಕ್ಷಗಳು ಏನು ಬೇಕಾದರೂ ಮಾಡಲಿ. 2029ರಲ್ಲಿ ದೇಶದಲ್ಲಿ ಮತ್ತೆ ಎನ್ಡಿಎ ಸರ್ಕಾರ ಬರಲಿದೆ. ಮತ್ತೆ ಮೋದಿಯೇ ಬರುತ್ತಾರೆಂದು ಅವರಿಗೆ ಗೊತ್ತಿಲ್ಲ ಎಂದು ಪ್ರತಿಪಕ್ಷಗಳಿಗೆ ಕೇಂದ್ರ ಸಚಿವ ಅಮಿತ್ ಶಾ ತಿರುಗೇಟು ನೀಡಿದ್ದಾರೆ. ವಿಪಕ್ಷದಲ್ಲಿ ಕೂರಲು ಇಂಡಿಯಾ ಬಣ ತಯಾರಾಗಬೇಕು ಎಂದು ವಾಗ್ದಾಳಿ ಮಾಡಿದ್ದಾರೆ.
ಚಂಡೀಗಢ, ಆಗಸ್ಟ್ 04: 2029ರ ಚುನಾವಣೆಯಲ್ಲೂ ಎನ್ಡಿಎ ಗೆಲುವು ಸಾಧಿಸುತ್ತೆ. ನರೇಂದ್ರ ಮೋದಿಯೇ (Narendra Modi) ಪ್ರಧಾನಿ ಆಗುತ್ತಾರೆ ಎಂದು ಪ್ರತಿಪಕ್ಷಗಳಿಗೆ ಕೇಂದ್ರ ಸಚಿವ ಅಮಿತ್ ಶಾ (Amit Shah) ತಿರುಗೇಟು ನೀಡಿದ್ದಾರೆ. ಮಣಿಮಜ್ರಾ ಪ್ರದೇಶದಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಸಿದ್ಧಪಡಿಸಿರುವ 24×7 ನೀರಿನ ಯೋಜನೆಗೆ ಚಾಲನೆ ನೀಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿ ಸರ್ಕಾರದ ಬಲ ಪ್ರಶ್ನಿಸಿದ್ದಕ್ಕೆ 2029ರಲ್ಲಿ ಮತ್ತೆ ಎನ್ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತೆ. ವಿಪಕ್ಷದಲ್ಲಿ ಕೂರಲು ಇಂಡಿಯಾ ಬಣ ತಯಾರಾಗಬೇಕು ಎಂದು ವಾಗ್ದಾಳಿ ಮಾಡಿದ್ದಾರೆ.
ಪ್ರತಿಪಕ್ಷಗಳು ಏನು ಬೇಕಾದರೂ ಮಾಡಲಿ. 2029ರಲ್ಲಿ ದೇಶದಲ್ಲಿ ಮತ್ತೆ ಎನ್ಡಿಎ ಸರ್ಕಾರ ಬರಲಿದೆ. ಮತ್ತೆ ಮೋದಿಯೇ ಬರುತ್ತಾರೆಂದು ಅವರಿಗೆ ಗೊತ್ತಿಲ್ಲ ಎಂದು ಪ್ರತಿಪಕ್ಷಗಳಿಗೆ ಶಾ ತಿರುಗೇಟು ನೀಡಿದ್ದಾರೆ.
ಪಿಟಿಐ ಟ್ವೀಟ್
STORY | NDA will form govt again in 2029: Amit Shah
READ: https://t.co/IkHOhcydSh pic.twitter.com/uwgtDaZsOP
— Press Trust of India (@PTI_News) August 4, 2024
24 ಗಂಟೆಯೂ ನೀರು ಲಭ್ಯ
24×7 ನೀರು ಈ ಯೋಜನೆಯಿಂದ ಇದೀಗ ಮಣಿಮಜ್ರಾ ಜನತೆಗೆ 24 ಗಂಟೆ ನೀರು ಸಿಗಲಿದೆ. ಜನರು ನೀರು ತರಲು ಅಲಾರಂ ಹಾಕುವ ಅಗತ್ಯವಿಲ್ಲ, ಈಗ ನೀವು ನಲ್ಲಿ ತಿರುಗಿಸಿದರೆ ಸಾಕು ನೀರು ಬರುತ್ತದೆ. ಈ ಯೋಜನೆಯಿಂದ ಮಣಿಮಜ್ರಾದ 1 ಲಕ್ಷ ಜನರಿಗೆ ಅವರ ಮನೆಗಳಲ್ಲಿ 24 ಗಂಟೆ ನೀರು ದೊರೆಯಲಿದೆ. ಈ ಯೋಜನೆಯನ್ನು ಮೋದಿ ಸರ್ಕಾರವು 13 ನವೆಂಬರ್ 2021 ರಂದು ಪ್ರಾರಂಭಿಸಿತು ಎಂದು ತಿಳಿಸಿದ್ದಾರೆ.
ಯೋಜನೆಯ ಉದ್ದೇಶವೇನು?
ಈ ಯೋಜನೆಯ ಉದ್ದೇಶವು ನೀರಿನ ವ್ಯರ್ಥವನ್ನು ತಡೆಗಟ್ಟುವುದು. ಇದು ಸ್ಮಾರ್ಟ್ ಮೀಟರಿಂಗ್, ಸೋರಿಕೆಯನ್ನು ತಡೆಗಟ್ಟುವಿಕೆಯನ್ನು ಒಳಗೊಂಡಿದೆ. ಹಂತ ಹಂತವಾಗಿ ಈ ಯೋಜನೆ ಆರಂಭವಾಗುತ್ತಿದ್ದು, ಇದರಲ್ಲಿ ಮಣಿಮಜ್ರಾನ ಜನತೆಗೆ ಮೊದಲು ನೀರು ಸಿಗಲಿದೆ. 2028ರ ವೇಳೆಗೆ ಇಡೀ ರಾಜ್ಯಕ್ಕೆ 24 ಗಂಟೆ ನೀರು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.