ಕೋಟಾ: ನೀಟ್ ಆಕಾಂಕ್ಷಿ ಸಾವು, 17 ದಿನಗಳಲ್ಲಿ ಇದು 3ನೇ ಪ್ರಕರಣ
ಕೋಟಾದಲ್ಲಿ 18 ವರ್ಷದ ನೀಟ್ ಅಭ್ಯರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದು 17 ದಿನಗಳಲ್ಲಿ ನಡೆದ ಮೂರನೇ ಪ್ರಕರಣವಾಗಿದೆ. ಪಿಜಿ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ಒಡಿಶಾದ ನಿವಾಸಿಯಾಗಿರುವ ವಿದ್ಯಾರ್ಥಿ, ರಾಷ್ಟ್ರೀಯ ಅರ್ಹತಾ ಕಮ್ ಪ್ರವೇಶ ಪರೀಕ್ಷೆಗೆ (ನೀಟ್) ತಯಾರಿ ನಡೆಸಲು ಕೋಟಾಕ್ಕೆ ಬಂದಿದ್ದು, ವಿಜ್ಞಾನ ನಗರದಲ್ಲಿ ವಾಸಿಸುತ್ತಿದ್ದರು.
ಕೋಟಾದಲ್ಲಿ ನೀಟ್ ಆಕಾಂಕ್ಷಿಗಳ ಸಾವು ಈ ವರ್ಷವೂ ಮುಂದುವರೆದಿದೆ. ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಮಾಡಿ ಕೀರ್ತಿ ತರಲಿ ಎನ್ನುವ ಕಾರಣಕ್ಕೆ ದೂರದ್ಯಾವುದೋ ಊರಿಗೆ ಮಕ್ಕಳನ್ನು ಕಳುಹಿಸುತ್ತಾರೆ. ಆದರೆ ಅವರಿಗಲ್ಲಾಗುವ ಭಯವೋ ಅಥವಾ ಓದಿನಲ್ಲಿ ಹಿಂದುಳಿದಿದ್ದಾರೋ ಕಾರಣಗಳು ತಿಳಿದಿಲ್ಲವಾದರೂ ಆತ್ಮಹತ್ಯೆಯ ಹಾದಿ ಹಿಡಿಯುತ್ತಿರುವುದು ಆತಂಕದ ಸಂಗತಿ.
ಕೋಟಾದಲ್ಲಿ 18 ವರ್ಷದ ನೀಟ್ ಆಕಾಂಕ್ಷಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇದು 17 ದಿನಗಳಲ್ಲಿ ನಡೆದ ಮೂರನೇ ಪ್ರಕರಣವಾಗಿದೆ. ಪಿಜಿ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ಒಡಿಶಾದ ನಿವಾಸಿಯಾಗಿರುವ ವಿದ್ಯಾರ್ಥಿ, ರಾಷ್ಟ್ರೀಯ ಅರ್ಹತಾ ಕಮ್ ಪ್ರವೇಶ ಪರೀಕ್ಷೆಗೆ (ನೀಟ್) ತಯಾರಿ ನಡೆಸಲು ಕೋಟಾಕ್ಕೆ ಬಂದಿದ್ದು, ವಿಜ್ಞಾನ ನಗರದಲ್ಲಿ ವಾಸಿಸುತ್ತಿದ್ದರು.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತನ ಕುಟುಂಬದವರಿಗೆ ಮಾಹಿತಿ ನೀಡಲಾಗಿದ್ದು, ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಕುಟುಂಬ ಕೋಟಾಕ್ಕೆ ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ಓದಿ:ಕೋಟಾದಲ್ಲಿ ಮತ್ತೋರ್ವ ನೀಟ್ ಆಕಾಂಕ್ಷಿ ಸಾವಿಗೆ ಶರಣು, ವರ್ಷದಲ್ಲಿ 7ನೇ ಘಟನೆ
ಕೋಟಾದಲ್ಲಿ ಕೇವಲ 17 ದಿನಗಳಲ್ಲಿ ಇದು ಮೂರನೇ ಪ್ರಕರಣವಾಗಿದೆ. ಕಳೆದ ವಾರ, ಎರಡು ಪ್ರತ್ಯೇಕ ಘಟನೆಗಳಲ್ಲಿ ಜಂಟಿ ಪ್ರವೇಶ ಪರೀಕ್ಷೆಗೆ (ಜೆಇಇ) ತಯಾರಿ ನಡೆಸುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ತಮ್ಮ ಪಿಜಿ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಒಬ್ಬರು ಹರಿಯಾಣದವರಾಗಿದ್ದರೆ, ಇನ್ನೊಬ್ಬರು ಮಧ್ಯಪ್ರದೇಶಕ್ಕೆ ಸೇರಿದವರು.
ಜನವರಿ 8 ರಂದು, 20 ವರ್ಷದ ಜೆಇಇ ಆಕಾಂಕ್ಷಿ ಅಭಿಷೇಕ್ ಕೋಟಾದಲ್ಲಿರುವ ತನ್ನ ಪಿಜಿ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಮಧ್ಯಪ್ರದೇಶದ ಗುನಾ ನಿವಾಸಿಯಾಗಿದ್ದು, ಮೇ, 2023 ರಿಂದ ಕೋಟಾದ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಜೆಇಇಗೆ ತಯಾರಿ ನಡೆಸುತ್ತಿದ್ದ.
ಜನವರಿ 7 ರಂದು, ಹರಿಯಾಣದ ಇನ್ನೊಬ್ಬ ಜೆಇಇ ಆಕಾಂಕ್ಷಿ ನೀರಜ್ (19) ಎಂದು ಗುರುತಿಸಲಾಗಿದ್ದು, ತನ್ನ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
2023 ರಲ್ಲಿ 29 ಪ್ರಕರಣಗಳಿಗೆ ಹೋಲಿಸಿದರೆ 2024 ರಲ್ಲಿ ಕೋಟಾ 19 ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳನ್ನು ವರದಿ ಮಾಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2024 ರಲ್ಲಿ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಶೇಕಡಾ 50 ರಷ್ಟು ಕಡಿಮೆಯಾಗಿದೆ ಎಂದು ಕೋಟಾ ಜಿಲ್ಲಾಡಳಿತ ಹೇಳಿಕೊಂಡಿದೆ.
ಜಿಲ್ಲಾಡಳಿತದ ಸಕ್ರಿಯ ನಿಗಾದಲ್ಲಿರುವ ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗಳು ಮತ್ತು ಹಾಸ್ಟೆಲ್‌ಗಳ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರುವುದು ಆತ್ಮಹತ್ಯೆ ಪ್ರಕರಣಗಳ ಇಳಿಕೆಗೆ ಕಾರಣವಾಗಿದೆ ಎಂದು ಅಧಿಕಾರಿ ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:26 pm, Fri, 17 January 25