Hyderabad: 14 ದಿನಗಳ ಹಸುಗೂಸನ್ನು ಕೊಂದು, ದೇಹವನ್ನು ಕಸದ ತೊಟ್ಟಿಯಲ್ಲಿ ಎಸೆದ ನೇಪಾಳದ ವ್ಯಕ್ತಿ

ನೇಪಾಳ ಮೂಲದ ವ್ಯಕ್ತಿಯೊಬ್ಬ ತನ್ನ 14 ದಿನಗಳ ಹೆಣ್ಣುಮಗುವನ್ನು ಕೊಂದು ಕಸದ ತೊಟ್ಟಿಯಲ್ಲಿ ಎಸೆದಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಗೋಲ್ಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ 14 ದಿನಗಳ ಹೆಣ್ಣು ಮಗುವನ್ನು ಇರಿದು ಕೊಂದು, ಆಕೆಯ ಶವವನ್ನು ಕಸದ ಬುಟ್ಟಿಗೆ ಎಸೆದಿದ್ದಾನೆ.

Hyderabad: 14 ದಿನಗಳ ಹಸುಗೂಸನ್ನು ಕೊಂದು, ದೇಹವನ್ನು ಕಸದ ತೊಟ್ಟಿಯಲ್ಲಿ ಎಸೆದ ನೇಪಾಳದ ವ್ಯಕ್ತಿ
ಸಾಂದರ್ಭಿಕ ಚಿತ್ರ

Updated on: May 16, 2025 | 3:06 PM

ಹೈದರಾಬಾದ್, ಮೇ 16: ನೇಪಾಳ(Nepal) ಮೂಲದ ವ್ಯಕ್ತಿಯೊಬ್ಬ ತನ್ನ 14 ದಿನಗಳ ಹೆಣ್ಣುಮಗುವನ್ನು ಕೊಂದು ಕಸದ ತೊಟ್ಟಿಯಲ್ಲಿ ಎಸೆದಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಗೋಲ್ಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ 14 ದಿನಗಳ ಹೆಣ್ಣು ಮಗುವನ್ನು ಇರಿದು ಕೊಂದು, ಆಕೆಯ ಶವವನ್ನು ಕಸದ ಬುಟ್ಟಿಗೆ ಎಸೆದಿದ್ದಾನೆ.

ಆರೋಪಿಯನ್ನು ಜಗತ್ ಎಂದು ಗುರುತಿಸಲಾಗಿದ್ದು, ಮೂಲತಃ ನೇಪಾಳದವನು. ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಜಗತ್​​ನನ್ನು ಆತನ ಪತ್ನಿ ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ. ಆತ ತನ್ನ ಮಗುವಿಗೆ ಇರಿದು ನಂತರ ಶವವನ್ನು ಕಸದ ತೊಟ್ಟಿಯಲ್ಲಿ ಎಸೆದಿದ್ದಾನೆ ಎಂದು ವರದಿಯಾಗಿದೆ.

ಘಟನೆಯ ಕುರಿತು ಮಾತನಾಡಿದ ಗೋಲ್ಕೊಂಡ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್, ಗುರುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ, ಒಂದು ವರ್ಷದಿಂದ ಅಪಾರ್ಟ್‌ಮೆಂಟ್‌ನಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಜಗತ್ ಎಂಬ ವ್ಯಕ್ತಿ ಮಗುವನ್ನು ಕೊಂದಿದ್ದಾನೆ ಆತ ನೇಪಾಳದ ಪ್ರಜೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ
ದೇವನಹಳ್ಳಿ: ತಂದೆಯ ಗನ್​​ನಿಂದ ಫೈರಿಂಗ್ ಮಾಡಿಕೊಂಡು ಮಗ ಆತ್ಮಹತ್ಯೆ
ತಾಯಿಯ ಪ್ರಿಯಕರನಿಂದ ಬಾಲಕನ ಹತ್ಯೆ, ಸೂಟ್​ಕೇಸ್​ನಲ್ಲಿ ಶವ ಪತ್ತೆ
20 ಕಿ.ಮೀ ಅಟ್ಟಾಡಿಸಿಕೊಂಡು ಹೋಗಿ ಸ್ನೇಹಿತರಿಗೆ ಗುಂಡು ಹಾರಿಸಿದ ವ್ಯಕ್ತಿ
ಬೆಂಗಳೂರು: ಪಕ್ಕದ ಮನೆಯವರ ಮೇಲಿನ ದ್ವೇಷಕ್ಕೆ ಬಾಲಕನನ್ನ ಅಪಹರಿಸಿ ಹತ್ಯೆ

ನಂತರ ಆ ವ್ಯಕ್ತಿ ಶವವನ್ನು ಅಪಾರ್ಟ್ಮೆಂಟ್ ಹೊರಗೆ ತೆಗೆದುಕೊಂಡು ಹೋಗಿ ಕುತ್ತಿಗೆಗೆ ಇರಿದು ಕಸದ ಬುಟ್ಟಿಗೆ ಎಸೆದಿದ್ದಾನೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಘಟನೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಮಗುವಿನ ಶವವನ್ನು ಟೋಲಿಚೌಕಿಯಲ್ಲಿರುವ ಕಸದ ತೊಟ್ಟಿಯ ಬಳಿ ಎಸೆದಿದ್ದಾನೆ. ಅವನ ಪತ್ನಿ ದೂರು ದಾಖಲಿಸಿದ್ದು, ನಾವು ಆರೋಪಿಯನ್ನು ವಶಕ್ಕೆ ಪಡೆದಿದ್ದೇವೆ.

ಮತ್ತಷ್ಟು ಓದಿ: ಕಸದ ವಿಚಾರಕ್ಕೆ ಜಗಳ, ಪಕ್ಕದ ಮನೆ ಮಹಿಳೆಯ ತಲೆ ಕತ್ತರಿಸಿದ ವ್ಯಕ್ತಿ

ಅಪರಾಧದ ಹಿಂದಿನ ಉದ್ದೇಶಗಳನ್ನು ಆರೋಪಿ ಬಹಿರಂಗಪಡಿಸಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ. ಮಹಾರಾಷ್ಟ್ರದ ಉಲ್ಲಾಸ್‌ನಗರದಲ್ಲಿ ನಡೆದ ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ಮಗಳನ್ನು ಕೊಂದು, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅಧಿಕಾರಿಗಳ ಪ್ರಕಾರ, ಆಭರಣ ವ್ಯಾಪಾರಿಯಾಗಿರುವ ಈ ವ್ಯಕ್ತಿ ಆರ್ಥಿಕ ಸಂಕಷ್ಟದಿಂದಾಗಿ ತನ್ನ ಹೆಂಡತಿ ಮತ್ತು ಮಗಳನ್ನು ಕತ್ತು ಹಿಸುಕಿ ನಂತರ ನೇಣು ಬಿಗಿದುಕೊಂಡು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮೃತರನ್ನು ಆಭರಣ ವ್ಯಾಪಾರಿ ಪವನ್ ಪೊಹುಜಾ, ಅವರ ಪತ್ನಿ ನೇಹಾ ಮತ್ತು ಅವರ ಪುತ್ರಿ ರೋಶ್ನಿ ಎಂದು ಗುರುತಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ