ಮದುವೆಯಾದ ಒಂದು ತಿಂಗಳಲ್ಲೇ ಅತ್ತೆಗೆ ವಿಷ ಹಾಕಿ ಹಣ, ಒಡವೆಯೊಂದಿಗೆ ವಧು ಪರಾರಿ

ರಾಜಸ್ಥಾನದ ಆಲ್ವಾರ್​ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮದುವೆಯಾದ 1 ತಿಂಗಳಲ್ಲೇ ಅತ್ತೆಗೆ ವಿಷ ಹಾಕಿದ ನವವಧು ಮನೆಯಲ್ಲಿರುವ ಹಣ, ಆಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾಳೆ. ಆ ಯುವತಿ ಮನೆಯಿಂದ ಬೆಲೆಬಾಳುವ ವಸ್ತುಗಳೊಂದಿಗೆ ಹೊರಡುವ ಮೊದಲು ಕುಟುಂಬದ ಸದಸ್ಯರಿಗೆ ಫಿನಾಯಿಲ್ ಮಿಶ್ರಿತ ಆಹಾರವನ್ನು ನೀಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಆಕೆಯ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಮದುವೆಯಾದ ಒಂದು ತಿಂಗಳಲ್ಲೇ ಅತ್ತೆಗೆ ವಿಷ ಹಾಕಿ ಹಣ, ಒಡವೆಯೊಂದಿಗೆ ವಧು ಪರಾರಿ
Rekha And Vikramjeet
Image Credit source: x

Updated on: Apr 01, 2026 | 9:16 PM

ಲಕ್ನೋ, ಏಪ್ರಿಲ್ 1: ಅಲ್ವಾರ್‌ನಲ್ಲಿ ನವವಧುವೊಬ್ಬಳು ಅತ್ತೆಗೆ ವಿಷ ಹಾಕಿ, ಹಣ ಮತ್ತು ಆಭರಣಗಳೊಂದಿಗೆ ಪರಾರಿಯಾಗಿದ್ದಾಳೆ. ಆರೋಪಿ ವಧು ಚಿನ್ನ ಮತ್ತು ಬೆಳ್ಳಿ ಆಭರಣಗಳ ಜೊತೆಗೆ ಸುಮಾರು 30,000 ರೂ. ಹಣ ತೆಗೆದುಕೊಂಡು ಪರಾರಿಯಾಗಿದ್ದಾಳೆ. ನವವಿವಾಹಿತ ವಧು ರೇಖಾ ಕೌರ್ ತನ್ನ ಅತ್ತೆಗೆ ವಿಷ ಹಾಕಿ ಆಭರಣ ಮತ್ತು ನಗದು ದೋಚಿ ಪರಾರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯು ಅವರ ಪತಿ ವಿಕ್ರಮ್‌ಜೀತ್ ಸಿಂಗ್ ಮತ್ತು ಅವರ ಕುಟುಂಬವನ್ನು ತೀವ್ರ ಆಘಾತಕ್ಕೆ ದೂಡಿದೆ.

ಮೇ 26, 2025ರಂದು ಗುರುದ್ವಾರದಲ್ಲಿ ನಡೆದ ಸಮಾರಂಭದಲ್ಲಿ ರೇಖಾಳನ್ನು ವಿವಾಹವಾದ ವಿಕ್ರಮ್‌ಜೀತ್ ಮದುವೆಗೆ 5 ಲಕ್ಷ ರೂ.ಗಳಿಗೂ ಹೆಚ್ಚು ಖರ್ಚು ಮಾಡಿದ್ದರು. ರೇಖಾಗೆ ಈ ಮೊದಲೇ ಮದುವೆಯಾಗಿ ವಿಚ್ಛೇದನವಾಗಿತ್ತು. ಆಕೆಗೆ ಇಬ್ಬರು ಮಕ್ಕಳಿದ್ದರು. ಮದುವೆಯ ನಂತರ ಅವಳ ನಡವಳಿಕೆ ಬದಲಾಯಿತು. ಜೂನ್ 23, 2025ರಂದು ಆಕೆ ತನ್ನ ಅತ್ತೆಗೆ ಬಡಿಸಿದ ಊಟದಲ್ಲಿ ಫಿನಾಯಿಲ್ ಬೆರೆಸಿದ್ದಳು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ರೇಖಾ ಚಿನ್ನ ಮತ್ತು ಬೆಳ್ಳಿಯ ಹಾರಗಳು, ಬಳೆಗಳು ಮತ್ತು ಉಂಗುರಗಳು ಸೇರಿದಂತೆ ಹಲವಾರು ಲಕ್ಷ ರೂ. ಮೌಲ್ಯದ ಆಭರಣಗಳನ್ನು ಮತ್ತು 30,000 ರೂ.ಗಳನ್ನು ತೆಗೆದುಕೊಂಡು ಮನೆಯಿಂದ ಪರಾರಿಯಾಗಿದ್ದಾಳೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ತೆಲಂಗಾಣ ಟೆಕ್ಕಿ ದಂಪತಿಯ ಜೀವವನ್ನೇ ತೆಗೆಯಿತು ಎಐ! ಆಗಿದ್ದೇನು ಗೊತ್ತಾ?

ಹರಿಯಾಣದ ಸಿರ್ಸಾದ ತನ್ನ ಚಿಕ್ಕಮ್ಮ ಪಿಂಕಿ ಕೌರ್ ಸಹಾಯದಿಂದ ರೇಖಾ ಇದೇ ರೀತಿಯ ಪ್ಲಾನ್ ಮಾಡಿ ಹಲವಾರು ಯುವಕರನ್ನು ಸಿಲುಕಿಸಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ. ವಿಕ್ರಮ್‌ಜೀತ್ ಜುಲೈ 14, 2025ರಂದು ಅರಾವಳಿ ವಿಹಾರ್ ಪೊಲೀಸ್ ಠಾಣೆಗೆ ದೂರು ನೀಡಿದರು. ಆದರೆ ಅವರು ತಕ್ಷಣ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬಳಿಕ ಅವರು ರೇಖಾ ಮತ್ತು ಪಿಂಕಿ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.

ಇದಾದ ಬಳಿಕ ತನಿಖೆ ನಡೆಸಿದ ಪೊಲೀಸರು ರೇಖಾ ಮತ್ತು ಆಕೆಯ ಚಿಕ್ಕಮ್ಮ ಹರಿಯಾಣ ಮತ್ತು ರಾಜಸ್ಥಾನದಲ್ಲಿ ಹಲವಾರು ಪುರುಷರನ್ನು ಗುರಿಯಾಗಿಸಿಕೊಂಡು ವಂಚನೆ ನಡೆಸಿದ್ದಾರೆ ಎಂದು ದೃಢಪಡಿಸಿದ್ದಾರೆ. ತನಿಖೆ ಮುಂದುವರೆದಿದ್ದು, ನ್ಯಾಯಾಲಯದ ಪ್ರಕ್ರಿಯೆಯ ನಂತರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಸೂಚಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us