ಭೀಮಾ ಕೋರೆಗಾಂವ್​ ಪ್ರಕರಣ: ಬಂಧಿತ ಆರೋಪಿ ರೋನಾ ವಿಲ್ಸನ್​ ಲ್ಯಾಪ್​ಟಾಪ್​ ಹ್ಯಾಕ್​​ ಮಾಡಿಲ್ಲ ಎಂದ ಎನ್​ಐಎ

|

Updated on: May 01, 2021 | 2:26 PM

USA Arsenal Report ಪ್ರಕಾರ ಆರೋಪಿ ರೋನಾ ವಿಲ್ಸನ್ ಬಂಧನಕ್ಕೂ ಮುನ್ನ ಅಂದ್ರೆ 2018ರ ಜೂನ್​ 6 ಕ್ಕೂ ಎರಡು ವರ್ಷಗಳ ಮುನ್ನ ಅಂದ್ರೆ 2016ರ ಜೂನ್​ 13ರಂದು ಈ-ಮೇಲ್​ ಮೂಲಕ ಅವರ ಲ್ಯಾಪ್​ಟಾಟ್ ಹ್ಯಾಕ್​ ಮಾಡಿ, ಈ ಫೈಲ್​ಗಳನ್ನು ತುಂಬಲಾಗಿದೆಯಂತೆ.

ಭೀಮಾ ಕೋರೆಗಾಂವ್​ ಪ್ರಕರಣ: ಬಂಧಿತ ಆರೋಪಿ ರೋನಾ ವಿಲ್ಸನ್​ ಲ್ಯಾಪ್​ಟಾಪ್​ ಹ್ಯಾಕ್​​ ಮಾಡಿಲ್ಲ ಎಂದ ಎನ್​ಐಎ
ಭೀಮಾ ಕೋರೆಗಾಂವ್​ ಪ್ರಕರಣ: ಬಂಧಿತ ಆರೋಪಿ ರೋನಾ ವಿಲ್ಸನ್​ ಲ್ಯಾಪ್​ಟಾಪ್​ ಹ್ಯಾಕ್​​ ಮಾಡಿಲ್ಲ ಎಂದ ಎನ್​ಐಎ
Follow us on

ಮಹಾರಾಷ್ಟ್ರದಲ್ಲಿ 2018ರ ಜನವರಿಯಲ್ಲಿ ಭೀಮಾ ಕೋರೆಗಾಂವ್ 200ನೇ​ ವಾರ್ಷಿಕಾಚರಣೆ ವೇಳೆ ನಡೆದಿದ್ದ ಹಿಂಸಾಚಾರ ಪ್ರಕರಣದಲ್ಲಿ ಬಂಧನದಲ್ಲಿರುವ ರೋನಾ ವಿಲ್ಸನ್ ಲ್ಯಾಪ್​ಟಾಪ್ ಅನ್ನು​ ಹ್ಯಾಕ್​ ಮಾಡಿ 22 ಫೈಲ್​ಗಳನ್ನು ಅದರಲ್ಲಿ ಸೇರಿಸಲಾಗಿದೆ ಎಂದು ಅಮೆರಿಕಾದ ಡಿಜಿಟಲ್​ ವಿಧಿವಿಜ್ಞಾನ ಪ್ರಯೋಗಾಲಯವೊಂದು ವರದಿಯಲ್ಲಿ ಹೇಳಿತ್ತು. ಆದರೆ ಅಂತಹ ಯಾವುದೇ ಪ್ರಮೇಯ ಉದ್ಭವವಾಗದು. ಆರೋಪಿ ರೋನಾ ವಿಲ್ಸನ್​ ಲ್ಯಾಪ್​ಟಾಪ್​ ಹ್ಯಾಕ್​​ ಮಾಡಿಲ್ಲ ಎಂದು ರಾಷ್ಟ್ರೀಯ ತನಿಖಾ ದಳ (National Investigation Agency-NIA) ಕೋರ್ಟ್​ಗೆ ತಿಳಿಸಿದೆ. ಭೀಮಾ ಕೋರೆಗಾಂವ್​ ಪ್ರಕರಣದಲ್ಲಿ ಈ ಫೈಲ್​ಗಳೇ ಪ್ರಮುಖ ಸಾಕ್ಷ್ಯಗಳು ಎಂದು ಪುಣೆ ಪೊಲೀಸರು ಆರಂಭದಿಂದಲೂ ಹೇಳುತ್ತಿದ್ದಾರೆ. ಅದನ್ನು ಎನ್​ಐಎ ಸಹ ಬಲವಾಗಿ ಸಮರ್ಥಿಸಿಕೊಂಡಿದ್ದು, ಆ ಫೈಲ್​ಗಳು ರೋನಾ ವಿಲ್ಸನ್​ ಲ್ಯಾಪ್​ಟಾಟ್​ನಲ್ಲಿಯೇ ಇದ್ದವು. ಅದನ್ನು ಯಾರೂ ಹ್ಯಾಕ್​ ಮಾಡಿ, ಕಂಪ್ಯೂಟರ್ ಒಳಗೆ ಸೇರಿಸಿಲ್ಲ ಎಂದು ಹೇಳಿದೆ.

ಪ್ರಧಾನ ಮಂತ್ರಿಯನ್ನು ಹತ್ಯೆ ಮಾಡುವ ಪಿತೂರಿ ಮತ್ತು ಸರ್ಕಾರವನ್ನು ಉರುಳಿಸುವ ಪ್ರಯತ್ನವಾಗಿ ನಿಷೇಧಿತ ಮಾವೋವಾದಿ​ ಸಂಘಟನೆಯ ಸದಸ್ಯರ ನಡುವಣ ಪತ್ರ ವ್ಯವಹಾರ, ಹಣ ವರ್ಗಾವಣೆ, ಸಂಘಟನೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಳ, ಸದಸ್ಯರ ನಡುವಣ ಸಂವಹನಕ್ಕೆ ಇರುವ ಕಷ್ಟಗಳು, ಸರಕಾರ ಸಂಘಟನೆಯ ಬಲ ಕುಗ್ಗಿಸಲು ಕೈಗೋಂಡಿರುವ ಕ್ರಮಗಳ ಬಗೆಗಿನ ಚರ್ಚೆಗಳ ಮಾಹಿತಿ ಈ ಕಡತಗಳಲ್ಲಿ ಅಡಕವಾಗಿವೆ. ಆದರೆ ಇದನ್ನೆಲ್ಲಾ ಹ್ಯಾಕ್​​ ಮಾಡಿ, ಆರೋಪಿ ರೋನಾ ವಿಲ್ಸನ್​ ಲ್ಯಾಪ್​ಟಾಟ್​ನಲ್ಲಿ ತುಂಬಲಾಗಿದೆ ಎಂದು ಅಮೆರಿಕ ಪ್ರಯೋಗಾಲಯ (USA Arsenal Report ) ಹೇಳಿರುವುದು ಸರಿಯಲ್ಲ. ನ್ಯಾಯಾಲಯದಲ್ಲಿ ಇರುವ ಪ್ರಕರಣದಲ್ಲಿ ಅಮೆರಿಕದ ಸಂಸ್ಥೆಯೊಂದು ಮೂಗುತೂರಿಸುವ ಹಾಗಿಲ್ಲ ಎಂದು ವರದಿಯನ್ನು NIA ಅಲ್ಲಗಳೆದಿದೆ.

ಆರೋಪಿ ರೋನಾ ವಿಲ್ಸನ್ ಬಾಂಬೆ ಹೈಕೋರ್ಟ್​​ನಲ್ಲಿ ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿಯನ್ನು ವಿರೋಧಿಸಿ ಸಲ್ಲಿಸಿದ ಅಫಿಡವಿತ್​ನಲ್ಲಿ, NIA ಸ್ಪೆಷಲ್​ ಪ್ರಾಸಿಕ್ಯೂಟರ್ ವಿಕ್ರಮ್ ಖಳಾಟೆ ಕೋರ್ಟ್ ಗಮನಕ್ಕೆ ಈ ಮಾಹಿತಿಯನ್ನು ತಂದಿದ್ದಾರೆ.

ಅಸಲಿಗೆ ಹ್ಯಾಕಿಂಗ್​ ಆಗಿದೆ ಎನ್ನುವ ಸಮಯದಲ್ಲಿ NIA ಇನ್ನೂ ತನಿಖೆಯನ್ನೇ ಕೈಗೊಂಡಿರಲಿಲ್ಲ. ಅಷ್ಟಕ್ಕೂ ರೋನಾ ವಿಲ್ಸನ್​ ಲ್ಯಾಪ್​ಟಾಪ್ ಅವರ ಬಳಿಯೇ ಇತ್ತು. ಹಾಗಾಗಿ​ ಹ್ಯಾಕ್ ಮಾಡುವ ಪ್ರಶ್ನೆಯೇ ಉದ್ಭವಿಸದು ಎಂದು​​ ಎಸ್​ಪಿ ವಿಕ್ರಮ್ ಖಳಾಟೆ ಕೋರ್ಟ್​ ಗಮನಕ್ಕೆ ತಂದಿದ್ದಾರೆ. ಮಧ್ಯಂತರ ಜಾಮೀನು ಅರ್ಜಿ ವಿಚಾರಣೆಯನ್ನು ಜಸ್ಟೀಸ್​ ಎಸ್​ ಎಸ್​ ಶಿಂಧೆ ಮತ್ತು ಮನೀಶ್ ಪಿಟಾಲೆ ಅವರ ನ್ಯಾಯಪೀಠ ಮೇ 4ರಂದು ಆಲಿಸಲಿದೆ.

USA Arsenal Report ಪ್ರಕಾರ ಆರೋಪಿ ರೋನಾ ವಿಲ್ಸನ್ ಬಂಧನಕ್ಕೂ ಮುನ್ನ ಅಂದ್ರೆ 2018ರ ಜೂನ್​ 6 ಕ್ಕೂ ಎರಡು ವರ್ಷಗಳ ಮುನ್ನ ಅಂದ್ರೆ 2016ರ ಜೂನ್​ 13ರಂದು ಈ-ಮೇಲ್​ ಮೂಲಕ ಅವರ ಲ್ಯಾಪ್​ಟಾಟ್ ಹ್ಯಾಕ್​ ಮಾಡಿ, ಈ ಫೈಲ್​ಗಳನ್ನು ತುಂಬಲಾಗಿದೆಯಂತೆ.

(NIA Denies usa Arsenal Consulting report and Arsenal Consulting Hacking Rona Wilson Laptop In Bhima Koregaon Case)

Also Read
ಭೀಮಾ-ಕೋರೆಗಾಂವ್ ಕದನಕ್ಕೆ 203 ವರ್ಷ; ಭಾರತದ ದಲಿತ ಕಥನದಲ್ಲಿ ಈ ಯುದ್ಧಕ್ಕೆ ಏಕಿಷ್ಟು ಪ್ರಾಮುಖ್ಯ?