AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹತ್ತನೇ ಬಾರಿಗೆ ಬಿಹಾರ ಸಿಎಂ ಆಗಿ ನಾಳೆ ನಿತೀಶ್​ ಕುಮಾರ್ ಪ್ರಮಾಣವಚನ, ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ

ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ ಬಹುಮತ ಗಳಿಸಿತ್ತು. ಇದೀಗ 10ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ನವೆಂಬರ್ 20ರಂದು ನಿತೀಶ್ ಕುಮಾರ್(Nitish Kumar) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎನ್‌ಡಿಎ ಮೈತ್ರಿಕೂಟದೊಳಗೆ ಸಭೆಗಳು ನಡೆಯುತ್ತಿದ್ದು, ಸಚಿವ ಸಂಪುಟ ಹಂಚಿಕೆ ಕುರಿತು ಚರ್ಚೆಗಳು ನಡೆಯುತ್ತಿವೆ. ಏತನ್ಮಧ್ಯೆ, ಲಾಲು ಪ್ರಸಾದ್ ಯಾದವ್ ಕುಟುಂಬದೊಳಗಿನ ಬಿರುಕು ರಾಜಕೀಯ ವಲಯವನ್ನು ಬಿಸಿ ಮಾಡಿದೆ.

ಹತ್ತನೇ ಬಾರಿಗೆ ಬಿಹಾರ ಸಿಎಂ ಆಗಿ ನಾಳೆ ನಿತೀಶ್​ ಕುಮಾರ್ ಪ್ರಮಾಣವಚನ, ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ನಿತೀಶ್ ಕುಮಾರ್ Image Credit source: PTI
ನಯನಾ ರಾಜೀವ್
|

Updated on: Nov 19, 2025 | 10:47 AM

Share

ಪಾಟ್ನಾ, ನವೆಂಬರ್ 19: ಬಿಹಾರದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ ಬಹುಮತ ಗಳಿಸಿತ್ತು. ಇದೀಗ 10ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ನವೆಂಬರ್ 20ರಂದು ನಿತೀಶ್ ಕುಮಾರ್(Nitish Kumar) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎನ್‌ಡಿಎ ಮೈತ್ರಿಕೂಟದೊಳಗೆ ಸಭೆಗಳು ನಡೆಯುತ್ತಿದ್ದು, ಸಚಿವ ಸಂಪುಟ ಹಂಚಿಕೆ ಕುರಿತು ಚರ್ಚೆಗಳು ನಡೆಯುತ್ತಿವೆ. ಏತನ್ಮಧ್ಯೆ, ಲಾಲು ಪ್ರಸಾದ್ ಯಾದವ್ ಕುಟುಂಬದೊಳಗಿನ ಬಿರುಕು ರಾಜಕೀಯ ವಲಯವನ್ನು ಬಿಸಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವರು ಸೇರಿದಂತೆ ಎನ್​ಡಿಎಯ ಹಲವು ಪ್ರಮುಖ ನಾಯಕರು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದಾಖಲೆಯ 10 ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಒಂದು ದಿನ ಮೊದಲು, ನವೆಂಬರ್ 19 ರಂದು ಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗುವುದು ಎಂದು ಜೆಡಿಯು ಮೂಲಗಳು ತಿಳಿಸಿವೆ.

ನಾಳೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇರುವ ಸಚಿವರು ಬಿಜೆಪಿಯಿಂದ ಸಂಭಾವ್ಯ ಸಚಿವರು ಸಾಮ್ರಾಟ್ ಚೌಧರಿ ವಿಜಯ್ ಕುಮಾರ್ ಸಿನ್ಹಾ ಮಂಗಲ್ ಪಾಂಡೆ ನಿತೀಶ್ ಮಿಶ್ರಾ ನಿತಿನ್ ನವೀನ್ ರೇಣು ದೇವಿ ನೀರಜ್ ಕುಮಾರ್ ಬಬ್ಲು ಸಂಜಯ್ ಸರವಾಗಿ ರಜನೀಶ್ ಕುಮಾರ್

ಮತ್ತಷ್ಟು ಓದಿ: Nitish Kumar Resigns: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ

ಜೆಡಿ-ಯು ನಿಂದ ಸಂಭಾವ್ಯ ಸಚಿವರು ವಿಜಯ್ ಕುಮಾರ್ ಚೌಧರಿ ವಿಜೇಂದ್ರ ಯಾದವ್ ಶ್ರವಣ್ ಕುಮಾರ್ ಅಶೋಕ್ ಚೌಧರಿ ರತ್ನೇಶ್ ಸದಾ ಸುನೀಲ್ ಕುಮಾರ್ ಶ್ಯಾಮ್ ರಜಕ್ ಜಮಾ ಖಾನ್ ಲೇಸಿ ಸಿಂಗ್ ದಾಮೋದರ್ ರಾವತ್

ಎಲ್​ಜೆಪಿ (RV), ಎಚ್​ಎಎಂ ಮತ್ತು ಆರ್​ಎಲ್​ಎಂನಿಂದ ಸಂಭಾವ್ಯ ಮಂತ್ರಿಗಳು ರಾಜು ತಿವಾರಿ (ಲೋಕ ಜನಶಕ್ತಿ ಪಕ್ಷ-ರಾಮ್ ವಿಲಾಸ್)

ಸಂತೋಷ್ ಕುಮಾರ್ ಸುಮನ್ (ಹಿಂದೂಸ್ತಾನಿ ಅವಾಮ್ ಮೋರ್ಚಾ)

ಸ್ನೇಹಲತಾ ಕುಶ್ವಾಹ (ರಾಷ್ಟ್ರೀಯ ಲೋಕ ಮೋರ್ಚಾ)

ನವೆಂಬರ್ 20 ರಂದು ರಾಜ್ಯದಲ್ಲಿ ತಮ್ಮ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಲಿದ್ದು, ಅದಕ್ಕೂ ಮುನ್ನ ಬುಧವಾರ ನಿತೀಶ್ ಕುಮಾರ್ ಅವರನ್ನು ಎನ್‌ಡಿಎ ನಾಯಕರನ್ನಾಗಿ ಆಯ್ಕೆ ಮಾಡಲಾಗುವುದು. ದಾಖಲೆಯ 10 ನೇ ಬಾರಿಗೆ ಬಿಹಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿರುವ ಕುಮಾರ್, ಬುಧವಾರ ಬೆಳಗ್ಗೆ 11 ಗಂಟೆಗೆ ಜೆಡಿಯು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಲಿದ್ದಾರೆ ಮತ್ತು ನಂತರ ಮಧ್ಯಾಹ್ನ 3.30 ಕ್ಕೆ ಎನ್‌ಡಿಎ ನಾಯಕರಾಗಿ ಆಯ್ಕೆಯಾಗಲಿದ್ದಾರೆ.

ಹೊಸ ಸರ್ಕಾರ ರಚನೆಗಾಗಿ ಅವರು ಎನ್‌ಡಿಎಯ ಎಲ್ಲಾ ಮೈತ್ರಿಕೂಟದ ಪಾಲುದಾರರ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಲಿದ್ದಾರೆ. ಪ್ರಸ್ತುತ ವಿಧಾನಸಭೆ ಬುಧವಾರ ವಿಸರ್ಜಿಸಲ್ಪಡಲಿದೆ.

ಬಿಹಾರ ಚುನಾವಣಾ ಫಲಿತಾಂಶ ಬಿಹಾರದ 243 ಸದಸ್ಯ ಬಲದ ವಿಧಾನಸಭೆಯಲ್ಲಿ 202 ಸ್ಥಾನಗಳನ್ನು ಗೆದ್ದು ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಂದಿತು, ಬಿಜೆಪಿ 89, ಜೆಡಿ(ಯು) 85, ಎಲ್‌ಜೆಪಿ(ಆರ್‌ವಿ) 19, ಎಚ್‌ಎಎಂ 5 ಮತ್ತು ಆರ್‌ಎಲ್‌ಎಂ 4 ಸ್ಥಾನಗಳನ್ನು ಗಳಿಸಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ