India AI Mission: ನಾಲ್ಕೂವರೆ ಗಂಟೆಗಳಲ್ಲಿ ನೀವೂ ಎಐ ಎಕ್ಸ್ಪರ್ಟ್ಗಳಾಗಬಹುದು, ‘ಯುವ ಎಐ ಫಾರ್ ಆಲ್’ ತರಬೇತಿ ಆರಂಭಿಸಿದ ಭಾರತ ಸರ್ಕಾರ
YUVA AI for ALL: ಭಾರತ ಸರ್ಕಾರವು ಭಾರತೀಯ ಯುವಕರಿಗಾಗಿ ಯುವ ಎಐ ಫಾರ್ ಆಲ್ ಎನ್ನುವ ಎಐ ಬಗೆಗಿನ ಕೋರ್ಸ್ ಆರಂಭಿಸಿದೆ. ಕೃತಕ ಬುದ್ಧಿಮತ್ತೆಯ ಹೆಚ್ಚುತ್ತಿರುವ ಕ್ರೇಜ್ ಹಾಗೂ ಅಗತ್ಯಗಳನ್ನು ಗುರುತಿಸಿ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಎಲ್ಲರಿಗೂ ‘‘ಯುವ ಎಐ’’ ಎಂಬ ಉಚಿತ ಎಐ ಕೋರ್ಸ್ ಅನ್ನು ಪ್ರಾರಂಭಿಸಿದೆ. ಈ ಉಚಿತ ರಾಷ್ಟ್ರೀಯ ಕೋರ್ಸ್ ಮೂಲಕ ಪ್ರತಿಯೊಬ್ಬ ಭಾರತೀಯನಿಗೂ ಕೃತಕ ಬುದ್ಧಿಮತ್ತೆ ಬ್ಗಗೆ ಶಿಕ್ಷಣ ನೀಡುವ ಗುರಿಯನ್ನು ಹೊಂದಿದೆ.

ನವದೆಹಲಿ, ನವೆಂಬರ್ 19: ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ಎಐ(ಕೃತಕ ಬುದ್ಧಿಮತ್ತೆ)ನದ್ದೇ ಕಾರುಬಾರು. ಹಾಗಾಗಿ ಕೃತಕ ಬುದ್ಧಿಮತ್ತೆಯ ಹೆಚ್ಚುತ್ತಿರುವ ಕ್ರೇಜ್ ಹಾಗೂ ಅಗತ್ಯಗಳನ್ನು ಗುರುತಿಸಿ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಎಲ್ಲರಿಗೂ ‘‘ಯುವ ಎಐ’’ ಎಂಬ ಉಚಿತ ಎಐ ಕೋರ್ಸ್ ಅನ್ನು ಪ್ರಾರಂಭಿಸಿದೆ. ಈ ಉಚಿತ ರಾಷ್ಟ್ರೀಯ ಕೋರ್ಸ್ ಮೂಲಕ ಪ್ರತಿಯೊಬ್ಬ ಭಾರತೀಯನಿಗೂ ಕೃತಕ ಬುದ್ಧಿಮತ್ತೆ ಬ್ಗಗೆ ಶಿಕ್ಷಣ ನೀಡುವ ಗುರಿಯನ್ನು ಹೊಂದಿದೆ.
ಈ ಕೋರ್ಸ್ ಉಚಿತ ಮತ್ತು ಸರಳವಾಗಿದೆ. ಕೋರ್ಸ್ ಅವಧಿ 5 ಗಮಟೆಗಳಿಗಿಂತ ಕಡಿಮೆ ಇದೆ. ಯಾರಾದರೂ ಕೋರ್ಸ್ ಪೂರ್ಣಗೊಳಿಸಬಹುದು. ಈ ಉಪಕ್ರಮದ ಅಡಿಯಲ್ಲಿ ಸರ್ಕಾರವು ಎಐ ಕೌಶಲ್ಯಗಳನ್ನು ಕಲಿಸಲು ಮತ್ತು 10 ಮಿಲಿಯನ್ ಭಾರತೀಯ ನಾಗರಿಕರಿಗೆ ಎಐ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಕೋರ್ಸ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Yuva AI For All ಎಂಬುದು ಕೇವಲ ನಾಲ್ಕೂವರೆ ಗಂಟೆಯ ಕೋರ್ಸ್ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY), ಇಂಡಿಯಾ ಎಐ ಮಿಷನ್ ಅಡಿಯಲ್ಲಿ ‘ Yuva AI For All ’ಎಂಬ ಕೋರ್ಸ್ ಅನ್ನು ಪ್ರಾರಂಭಿಸಿದೆ. ಈ ಕೋರ್ಸ್ ಸಂಪೂರ್ಣವಾಗಿ ಉಚಿತ ಮತ್ತು ಯಾರು ಬೇಕಾದರೂ ಇದನ್ನು ಕಲಿಯಬಹುದು. ಎಲ್ಲಾ ಭಾರತೀಯ ನಾಗರಿಕರಿಗೆ, ವಿಶೇಷವಾಗಿ ಯುವಕರಿಗೆ ಕೃತಕ ಬುದ್ಧಿಮತ್ತೆ (AI) ಬಗ್ಗೆ ಪರಿಚಯಿಸುವುದು ಮತ್ತು ಕಲಿಸುವುದು ಇದರ ಉದ್ದೇಶವಾಗಿದೆ . ಈ ಕೋರ್ಸ್‌ನ ಅವಧಿ ಒಂದು ದಿನವೂ ಅಲ್ಲ. ಹೌದು, ಇದು ಕೇವಲ 4.5 ಗಂಟೆಗಳು. ಇದರರ್ಥ ಯಾರಾದರೂ ತಮ್ಮ ಹೆಚ್ಚಿನ ಸಮಯವನ್ನು ವ್ಯಯಿಸದೆ ಕೋರ್ಸ್ ಅನ್ನು ಪೂರ್ಣಗೊಳಿಸಬಹುದು.
ಮತ್ತಷ್ಟು ಓದಿ: ಟೆಕ್ ಸಮಿಟ್ನಲ್ಲಿ ಕರ್ನಾಟಕದ ಕಿಯೋ ಪಿಸಿ ಆಕರ್ಷಣೆ; ಅಗ್ಗದ ಬೆಲೆಗೆ ಎಐ ಕಂಪ್ಯೂಟರ್
ಈ ಕೋರ್ಸ್ ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಇತರರಿಗೆ ಎಐನ ಮೂಲಭೂತ ಅಂಶಗಳನ್ನು ಕಲಿಸುತ್ತದೆ . ಈ ಕೋರ್ಸ್ ಫ್ಯೂಚರ್‌ಸ್ಕಿಲ್ಸ್ ಪ್ರೈಮ್, ಐಜಿಒಟಿ ಕರ್ಮಯೋಗಿ ಮತ್ತು ಇತರ ಜನಪ್ರಿಯ ಎಡ್-ಟೆಕ್ ಪೋರ್ಟಲ್‌ಗಳಂತಹ ಪ್ರಮುಖ ಕಲಿಕಾ ವೇದಿಕೆಗಳಲ್ಲಿ ಉಚಿತವಾಗಿ ಲಭ್ಯವಿದೆ. ಈ ಕೋರ್ಸ್ ಅನ್ನು ಪೂರ್ಣಗೊಳಿಸಿದವರು ಭಾರತ ಸರ್ಕಾರದಿಂದ ಪ್ರಮಾಣಪತ್ರವನ್ನು ಸಹ ಪಡೆಯುತ್ತಾರೆ. ಈ ಕೋರ್ಸ್ ಅನ್ನು ಪ್ರಖ್ಯಾತ ಎಐ ತಜ್ಞ ಮತ್ತು ಇಂಡಿಯಾಎಐ ಮಿಷನ್‌ಗೆ ಹೆಸರುವಾಸಿಯಾದ ಲೇಖಕ ಹಾಗೂ ಎಐ ಆ್ಯಂಡ್ ಬಿಯಾಂಡ್ ಮತ್ತು ಟೆಕ್ ವಿಸ್ಪರರ್ ಲಿಮಿಟೆಡ್‌ನ ಸಂಸ್ಥಾಪಕ ಜಸ್ಪ್ರೀತ್ ಬಿಂದ್ರಾ ರಚಿಸಿದ್ದಾರೆ.
ಈ ಕೋರ್ಸ್ 6 ಸಣ್ಣ ಮಾಡ್ಯೂಲ್‌ಗಳನ್ನು ಒಳಗೊಂಡಿದೆ ಈ ಕೋರ್ಸ್ ಆರು ಸಣ್ಣ ಮಾಡ್ಯೂಲ್‌ಗಳನ್ನು ಒಳಗೊಂಡಿದೆ. ಈ ಮಾಡ್ಯೂಲ್‌ಗಳು ಎಐ ಎಂದರೇನು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸುತ್ತದೆ. ಎಐ ಶಿಕ್ಷಣ, ಸೃಜನಶೀಲತೆ ಮತ್ತು ಕೆಲಸವನ್ನು ಹೇಗೆ ಪರಿವರ್ತಿಸುತ್ತಿದೆ ಎಂಬುದನ್ನು ಸಹ ಅವು ವಿವರಿಸುತ್ತವೆ. ಎಐ ಪರಿಕರಗಳನ್ನು ಸುರಕ್ಷಿತವಾಗಿ ಮತ್ತು ಜವಾಬ್ದಾರಿಯುತವಾಗಿ ಹೇಗೆ ಬಳಸುವುದು ಎಂಬುದನ್ನು ಸಹ ಅವು ಒಳಗೊಳ್ಳುತ್ತವೆ. ಈ ಕೋರ್ಸ್ ಎಐನ ಭವಿಷ್ಯ ಮತ್ತು ಮುಂದೆ ಇರುವ ಹೊಸ ಅವಕಾಶಗಳ ಬಗ್ಗೆ ಒಂದು ನೋಟವನ್ನು ನೀಡುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




