ಭಾರತದಲ್ಲಿ ಪತ್ತೆಯಾಗಿದೆಯಾ ಒಮಿಕ್ರಾನ್​ ಸೋಂಕು?- ಸದ್ಯ ಎರಡು ರಾಜ್ಯಗಳ ಮೇಲೆ ಹೆಚ್ಚಿನ ನಿಗಾ !

TV9 Digital Desk

| Edited By: Lakshmi Hegde

Updated on: Nov 29, 2021 | 3:24 PM

Omicron variant: ಒಮಿಕ್ರಾನ್​ ಮೊದಲು ಕಾಣಿಸಿಕೊಂಡಿದ್ದು ದಕ್ಷಿಣ ಆಫ್ರಿಕಾದಲ್ಲಿ. ನವೆಂಬರ್​ 24ರಂದು ಆಫ್ರಿಕಾದ ಕೇಪ್​ ಟೌನ್​​ನಿಂದ ಮಹಾರಾಷ್ಟ್ರದ ಡೊಂಬಿವ್ಲಿಗೆ ಬಂದವನೊಬ್ಬನಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು.

ಭಾರತದಲ್ಲಿ ಪತ್ತೆಯಾಗಿದೆಯಾ ಒಮಿಕ್ರಾನ್​ ಸೋಂಕು?- ಸದ್ಯ ಎರಡು ರಾಜ್ಯಗಳ ಮೇಲೆ ಹೆಚ್ಚಿನ ನಿಗಾ !
ಸಾಂಕೇತಿಕ ಚಿತ್ರ

ವಿಶ್ವದ ಹಲವು ದೇಶಗಳಲ್ಲಿ ಕೊರೊನಾದ ಹೊಸ ತಳಿ ಒಮಿಕ್ರಾನ್ (Omicron variant)​ ಕಾಣಿಸಿಕೊಂಡಿದೆ. ಈ ಮಧ್ಯೆ ಭಾರತದಲ್ಲೂ ಆತಂಕ ಶುರುವಾಗಿದ್ದು, ಕೇಂದ್ರ ಸರ್ಕಾರ ವಿದೇಶಿ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ. ಆದರೆ ಸದ್ಯದ ಮಟ್ಟಿಗೆ ಭಾರತದಲ್ಲಿ ಇದುವರೆಗೂ ಈ ಒಮಿಕ್ರಾನ್​ ಸೋಂಕು ಕಾಣಿಸಿಕೊಂಡಿಲ್ಲ ಎಂದು ಕೇಂದ್ರ ಸರ್ಕಾರ ಉನ್ನತಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಹಾಗಿದ್ದಾಗ್ಯೂ ಮಹಾರಾಷ್ಟ್ರ ಮತ್ತು ಕರ್ನಾಟದಲ್ಲಿ ಎರಡು ಗುಂಪುಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ಹೇಳಿದ್ದಾರೆ.

ಒಮಿಕ್ರಾನ್​ ಮೊದಲು ಕಾಣಿಸಿಕೊಂಡಿದ್ದು ದಕ್ಷಿಣ ಆಫ್ರಿಕಾದಲ್ಲಿ. ನವೆಂಬರ್​ 24ರಂದು ಆಫ್ರಿಕಾದ ಕೇಪ್​ ಟೌನ್​​ನಿಂದ ಮಹಾರಾಷ್ಟ್ರದ ಡೊಂಬಿವ್ಲಿಗೆ ಬಂದವನೊಬ್ಬನಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಆತ ದಕ್ಷಿಣಾಫ್ರಿಕಾದಿಂದ ಬಂದಿರುವುದರಿಂದ, ಅವರಿಗೆ ತಗುಲಿದ್ದು ಒಮಿಕ್ರಾನ್​ ಇರಬಹುದಾ ಎಂದು ಪತ್ತೆ ಹಚ್ಚಲು ಆ ವ್ಯಕ್ತಿಯ ಮಾದರಿಗಳನ್ನು ಜಿನೋಮ್​ ಟೆಸ್ಟ್​​ಗೆ ಕೂಡ ಕಳಿಸಲಾಗಿದೆ. ಇನ್ನು ಕರ್ನಾಟಕದಲ್ಲೂ ಕೂಡ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಅದರಲ್ಲೂ ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡ, ಮಡಿಕೇರಿ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಮತ್ತಷ್ಟು ಕಟ್ಟೆಚ್ಚರ ವಹಿಸಲಾಗಿದೆ.  ಕೇರಳದಿಂದ ಕರ್ನಾಟಕಕ್ಕೆ ಬರುತ್ತಿರುವವರಲ್ಲೇ ಹೆಚ್ಚು ಕೊರೊನಾ ಕಾಣಿಸಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಕೂಡ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದಾರೆ. ಚಳಿಗಾಲದ ಅಧಿವೇಶನ ಶುರುವಾಗುವುದಕ್ಕೂ ಮೊದಲು ಮಾತನಾಡಿದ ಅವರು, ಕೊರೊನಾದ ಹೊಸ ರೂಪಾಂತರ ಹರಡುತ್ತಿದೆ. ಹೀಗಾಗಿ ಆದಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದಿದ್ದಾರೆ.  ಜಪಾನ್,  ಆಸ್ಟ್ರಿಯಾ, ಕೆನಡಾ, ಫ್ರಾನ್ಸ್​, ಜರ್ಮನಿ, ಇಟಲಿ ಮತ್ತು ನೆದರ್​ಲ್ಯಾಂಡ್​ಗಳು ಈಗಾಗಲೇ ದಕ್ಷಿಣ ಆಫ್ರಿಕಾದ ವಿಮಾನಗಳಿಗೆ ನಿಷೇಧ ಹೇರಿವೆ.

ಇದನ್ನೂ ಓದಿ: IPL 2022: ಲಕ್ನೋ ವಿರುದ್ಧ ಬಿಸಿಸಿಐಗೆ ದೂರು ನೀಡಿದ ಪಂಜಾಬ್-ಹೈದರಾಬಾದ್; ಐಪಿಎಲ್​ನಿಂದ ರಾಹುಲ್- ರಶೀದ್ ಔಟ್?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada