ನೋ ಕಾಮೆಂಟ್ಸ್; ಪಾಕಿಸ್ತಾನ ಭಾರತಕ್ಕೆ ತೈಲ ಮಾರಲಿದೆ ಎಂಬ ಟ್ರಂಪ್ ಹೇಳಿಕೆಗೆ ರಣಧೀರ್ ಜೈಸ್ವಾಲ್ ಪ್ರತಿಕ್ರಿಯೆ

ಡೊನಾಲ್ಡ್ ಟ್ರಂಪ್ ಶೀಘ್ರದಲ್ಲೇ ಭಾರತಕ್ಕೆ ಪಾಕಿಸ್ತಾನ ತೈಲ ಮಾರಾಟ ಮಾಡಬಹುದು ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ವಿಷಯದಲ್ಲಿ ನಾನು ಯಾವುದೇ ಕಾಮೆಂಟ್‌ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಪಾಕಿಸ್ತಾನದ ಪರವಾಗಿ ಹೇಳಿಕೆ ನೀಡುವ ಮೂಲಕ ಟ್ರಂಪ್ ಮತ್ತೊಮ್ಮೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು.

ನೋ ಕಾಮೆಂಟ್ಸ್; ಪಾಕಿಸ್ತಾನ ಭಾರತಕ್ಕೆ ತೈಲ ಮಾರಲಿದೆ ಎಂಬ ಟ್ರಂಪ್ ಹೇಳಿಕೆಗೆ ರಣಧೀರ್ ಜೈಸ್ವಾಲ್ ಪ್ರತಿಕ್ರಿಯೆ
Trump Asim Munir

Updated on: Aug 01, 2025 | 9:17 PM

ನವದೆಹಲಿ, ಆಗಸ್ಟ್ 1: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಭಾರತೀಯ ಸರಕುಗಳ ಮೇಲೆ ಶೇ. 25ರಷ್ಟು ಸುಂಕ ವಿಧಿಸುವ ಘೋಷಣೆಯನ್ನು ಭಾರತ ಒಪ್ಪಿಕೊಂಡಿದೆ. ಈ ನಿರ್ಧಾರವನ್ನು ನಮ್ಮ ಸರ್ಕಾರ ಪರಿಶೀಲಿಸುತ್ತಿದೆ ಎಂದು ಭಾರತ ಹೇಳಿದೆ. ಆದರೆ, ಪಾಕಿಸ್ತಾನವು (Pakistan) ಭವಿಷ್ಯದಲ್ಲಿ ಭಾರತಕ್ಕೆ ತೈಲವನ್ನು ಮಾರಾಟ ಮಾಡಬಹುದು ಎಂಬ ಡೊನಾಲ್ಡ್ ಟ್ರಂಪ್ ಅವರ ಪ್ರಚೋದನಕಾರಿ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಸರಕುಗಳ ಮೇಲೆ 25% ಸುಂಕವನ್ನು ಘೋಷಿಸಿರುವುದನ್ನು ಗಮನಿಸಿರುವುದಾಗಿ ಭಾರತ ಹೇಳಿದೆ, ಪಾಕಿಸ್ತಾನ ಭಾರತಕ್ಕೆ ತೈಲ ಮಾರಾಟ ಮಾಡುವ ಸಾಧ್ಯತೆ ಇದೆ ಎಂಬ ಅಮೆರಿಕದ ಅಧ್ಯಕ್ಷರ ಟೀಕೆಗೆ ಪ್ರತಿಕ್ರಿಯಿಸದಿರಲು ಭಾರತ ನಿರ್ಧರಿಸಿದೆ. “ನಮಗೆ ಹೇಳಲು ಏನೂ ಇಲ್ಲ, ಈ ಬಗ್ಗೆ ನಾನು ಯಾವುದೇ ಕಾಮೆಂಟ್ ನೀಡುವುದಿಲ್ಲ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ: Trump vs Pak- ಪಾಕಿಸ್ತಾನದಿಂದ ಭಾರತಕ್ಕೆ ತೈಲ ಮಾರುವ ದಿನ ಬರುತ್ತೆ: ಟ್ರಂಪ್ ಹೊಸ ವರಸೆ

“ಯಾರಿಗೆ ಗೊತ್ತು, ಬಹುಶಃ ಅವರು ಒಂದು ದಿನ ಪಾಕಿಸ್ತಾನ ಭಾರತಕ್ಕೆ ಕೂಡ ತೈಲ ಮಾರಾಟ ಮಾಡಬಹುದು!” ಎಂದು ಟ್ರಂಪ್ ಗುರುವಾರ ಪಾಕಿಸ್ತಾನದೊಂದಿಗೆ ವ್ಯಾಪಾರ ಒಪ್ಪಂದವನ್ನು ಘೋಷಿಸುವ ವೇಳೆ ಹೇಳಿದ್ದರು.


ರಷ್ಯಾದಿಂದ ತೈಲ ಖರೀದಿಸುವ ಬಗ್ಗೆ ತನ್ನ ನಿಲುವನ್ನು ಪುನರುಚ್ಚರಿಸುತ್ತಾ, ತನ್ನ ನಿರ್ಧಾರಗಳು ಚಾಲ್ತಿಯಲ್ಲಿರುವ ಜಾಗತಿಕ ಪರಿಸ್ಥಿತಿಗಳು ಮತ್ತು ತನ್ನ ಇಂಧನ ಬೇಡಿಕೆಗಳನ್ನು ಪೂರೈಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಒಪ್ಪಂದಗಳಿಂದ ರೂಪುಗೊಂಡಿವೆ ಎಂದು ಭಾರತ ಹೇಳಿದೆ. “ಯಾವುದೇ ದೇಶದೊಂದಿಗಿನ ನಮ್ಮ ಸಂಬಂಧಗಳು ಅವರ ಅರ್ಹತೆಯ ಮೇಲೆ ನಿಂತಿವೆ. ಮೂರನೇ ದೇಶದ ಪ್ರಿಸ್ಮ್‌ನಿಂದ ಅದನ್ನು ನೋಡಬಾರದು. ಭಾರತ-ರಷ್ಯಾ ಸಂಬಂಧಗಳಿಗೆ ಸಂಬಂಧಿಸಿದಂತೆ ನಾವು ಸ್ಥಿರ ಪಾಲುದಾರಿಕೆಯನ್ನು ಹೊಂದಿದ್ದೇವೆ” ಎಂದು ಜೈಸ್ವಾಲ್ ಹೇಳಿದ್ದಾರೆ. ಭಾರತೀಯ ರಾಜ್ಯ ಸಂಸ್ಕರಣಾಗಾರರು ಕಳೆದ ವಾರ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಿದ್ದಾರೆ ಎಂಬ ರಾಯಿಟರ್ಸ್ ವರದಿಯ ಬಗ್ಗೆ ಕೇಳಿದಾಗ ಜೈಸ್ವಾಲ್, “ನಮಗೆ ಇದರ ಬಗ್ಗೆ ಏನೂ ತಿಳಿದಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Video: ಪಾಕಿಸ್ತಾನದ ರೈಲುಗಳ ಸ್ಥಿತಿ ಹೇಗಿದೆ ನೋಡಿ, ಭಯದಲ್ಲೇ ಪ್ರಯಾಣಿಸಬೇಕು

ಭಾರತ-ಯುಎಸ್ ಪಾಲುದಾರಿಕೆಯು ಹಿಂದೆ ಕೂಡ ಅನೇಕ ಬಿರುಗಾಳಿಗಳನ್ನು ಎದುರಿಸಿದೆ ಎಂದು ಹೇಳಿದ ವಿದೇಶಾಂಗ ಸಚಿವಾಲಯದ ವಕ್ತಾರ ಜೈಸ್ವಾಲ್, ಎರಡೂ ಕಡೆಯವರು ಸಂಬಂಧ ಮುಂದುವರಿಯುತ್ತದೆ ಎಂಬ ವಿಶ್ವಾಸ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ