ಸತ್ತ ಆರ್ಥಿಕತೆ: ಮತ್ತೊಮ್ಮೆ ಪಕ್ಷದ ಲಕ್ಷ್ಮಣರೇಖೆ ದಾಟಿ ಟ್ರಂಪ್, ರಾಹುಲ್ ಹೇಳಿಕೆ ವಿರೋಧಿಸಿದ ಶಶಿ ತರೂರ್
ಭಾರತದ ಆರ್ಥಿಕತೆ ಸತ್ತಿದೆ ಎಂದು ಹೇಳಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಾಹುಲ್ ಗಾಂಧಿ ಹೇಳಿಕೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತೊಮ್ಮೆ ಪಕ್ಷದ ಲಕ್ಷ್ಮಣರೇಖೆ ದಾಟಿ ಅವರು ಮಾತನಾಡಿದ್ದಾರೆ. ಸ್ವಲ್ಪ ದಿನಗಳ ಹಿಂದೆ ಪಾಕಿಸ್ತಾನದೊಂದಿಗಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ನಿಲುವನ್ನು ಸಮರ್ಥವಾಗಿ ಹೇಳಿದ್ದಕ್ಕಾಗಿ ಅವರು ಆಡಳಿತ ಪಕ್ಷದಿಂದ ಪ್ರಶಂಸೆ ಪಡೆದಿದ್ದಾರೆ. ಆದರೆ ಅವರದ್ದೇ ಪಕ್ಷದ ಸಹೋದ್ಯೋಗಿಗಳು ಇದೀಗ ಶಶಿ ತರೂರ್ ಮೇಲೆ ಅಸಮಾಧಾನಗೊಂಡಿದ್ದರು. ಶಶಿ ತರೂರ್ ಹೇಳಿಕೆಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಹೇಳಿ ಅವರು ಲಕ್ಷ್ಮಣರೇಖೆ ದಾಟದಂತೆ ಎಚ್ಚರಿಕೆಯನ್ನು ಕೂಡ ರವಾನಿಸಲಾಗಿತ್ತು.

ನವದೆಹಲಿ, ಆಗಸ್ಟ್ 01: ‘ಭಾರತದ್ದು ಸತ್ತ ಆರ್ಥಿಕತೆ’ ಎಂದು ಹೇಳಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಹಾಗೂ ‘ಹೌದು ಹೌದು’ ಎಂದು ಒಪ್ಪಿಕೊಂಡಿರುವ ರಾಹುಲ್ ಗಾಂಧಿ(Rahul Gandhi) ಹೇಳಿಕೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತೊಮ್ಮೆ ಪಕ್ಷದ ಲಕ್ಷ್ಮಣರೇಖೆ ದಾಟಿ ಅವರು ಮಾತನಾಡಿದ್ದಾರೆ. ಸ್ವಲ್ಪ ದಿನಗಳ ಹಿಂದೆ ಪಾಕಿಸ್ತಾನದೊಂದಿಗಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ನಿಲುವನ್ನು ಸಮರ್ಥವಾಗಿ ಹೇಳಿದ್ದಕ್ಕಾಗಿ ಅವರು ಆಡಳಿತ ಪಕ್ಷದಿಂದ ಪ್ರಶಂಸೆ ಪಡೆದಿದ್ದಾರೆ.
ಆದರೆ ಅವರದ್ದೇ ಪಕ್ಷದ ಸಹೋದ್ಯೋಗಿಗಳು ಇದೀಗ ಶಶಿ ತರೂರ್ ಮೇಲೆ ಅಸಮಾಧಾನಗೊಂಡಿದ್ದರು. ಶಶಿ ತರೂರ್ ಹೇಳಿಕೆಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಹೇಳಿ ಅವರು ಲಕ್ಷ್ಮಣರೇಖೆ ದಾಟದಂತೆ ಎಚ್ಚರಿಕೆಯನ್ನು ಕೂಡ ರವಾನಿಸಲಾಗಿತ್ತು.
ಇದೀಗ ಮತ್ತೆ ಕಾಂಗ್ರೆಸ್ ನಾಯಕರಲ್ಲಿ ಟ್ರಂಪ್ ವಿಚಾರವಾಗಿ ಭಿನ್ನಾಭಿಪ್ರಾಯ ಮೂಡಿದೆ. ರಾಹುಲ್ ಗಾಂಧಿ ಟ್ರಂಪ್ ಹೇಳಿಕೆಯನ್ನು ಒಪ್ಪಿದರೆ, ಶಶಿ ತರೂರ್ ಅದನ್ನು ವಿರೋಧಿಸಿದ್ದಾರೆ. ಭಾರತದ ಆರ್ಥಿಕತೆ ಸತ್ತಿದೆ ಎಂಬುದು ಸುಳ್ಳು, ಅಂಥಹದ್ದೇನೂ ಆಗಿಲ್ಲ, ಅದು ಎಲ್ಲರಿಗೂ ತಿಳಿದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಮತ್ತಷ್ಟು ಓದಿ: Dead Economy: ಭಾರತದ ಸತ್ತ ಆರ್ಥಿಕತೆ ನೆಲಕಚ್ಚಬೇಕು: ಡೊನಾಲ್ಡ್ ಟ್ರಂಪ್ ಹಿಡಿಶಾಪ
ತರೂರ್‌ಗಿಂತ ಮೊದಲು, ಹಿರಿಯ ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಕೂಡ ಟ್ರಂಪ್ ಹೇಳಿಕೆಯನ್ನು ವಿರೋಧಿಸಿದ್ದರು. ಭಾರತದ ಮೇಲೆ ಅಮೆರಿಕ ಶೇ. 25 ರಷ್ಟು ಸುಂಕ ಮತ್ತು ದಂಡ ವಿಧಿಸುವುದು ಕೇವಲ ಚೌಕಾಸಿ ತಂತ್ರವಾಗಿದ್ದು, ಎರಡೂ ದೇಶಗಳ ನಡುವೆ ವ್ಯಾಪಾರ ಮಾತುಕತೆ ನಡೆಯುತ್ತಿದೆ ಎಂದು ಶಶಿ ತರೂರ್ ಹೇಳಿದ್ದಾರೆ.
ಭಾರತೀಯ ಉತ್ಪನ್ನಗಳ ಮೇಲೆ ಅಮೆರಿಕ ವಿಧಿಸಿರುವ ಶೇಕಡಾ 25 ರಷ್ಟು ಸುಂಕದ ರಾಜಕೀಯ ಲಾಭ ಮತ್ತು ನಷ್ಟಗಳನ್ನು ಸಹ ನಿರ್ಣಯಿಸಲಾಗುತ್ತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಆರ್ಥಿಕತೆ ಸತ್ತಿದೆ ಎಂದು ಕರೆದಾಗ, ರಾಹುಲ್ ಗಾಂಧಿ ತಕ್ಷಣ ಅವರನ್ನು ಬೆಂಬಲಿಸಿದರು. ಟ್ರಂಪ್ ಹೀಗೆ ಹೇಳಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದರು. ಶಿವಸೇನೆ ಯುಬಿಟಿಯ ಪ್ರಿಯಾಂಕಾ ಚತುರ್ವೇದಿ ಸೇರಿದಂತೆ ಅವರ ಸ್ವಂತ ಪಕ್ಷದ ಶಶಿ ತರೂರ್ ಮತ್ತು ರಾಜೀವ್ ಶುಕ್ಲಾ ಅದನ್ನು ತಿರಸ್ಕರಿಸಿದರು.
ನಮ್ಮ ಆರ್ಥಿಕ ಸ್ಥಿತಿ ದುರ್ಬಲವಾಗಿಲ್ಲ ಎಂದು ರಾಜೀವ್ ಶುಕ್ಲಾ ಹೇಳಿದರು. ಯಾರಾದರೂ ನಮ್ಮನ್ನು ಆರ್ಥಿಕವಾಗಿ ನಾಶಮಾಡಬಹುದು ಎಂದುಕೊಂಡರೆ ಅದು ತಪ್ಪು ತಿಳಿವಳಿಕೆಯಾಗಿರುತ್ತದೆ. ಟ್ರಂಪ್ ಭ್ರಮೆಯಲ್ಲಿ ಬದುಕುತ್ತಿದ್ದಾರೆ ಎಂದರು.
ಭಾರತದ ಆರ್ಥಿಕತೆಯು ವಿಶ್ವದ ಅಗ್ರ ಐದು ಆರ್ಥಿಕತೆಗಳಲ್ಲಿ ಒಂದಾಗಿದೆ ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಪ್ರಿಯಾಂಕಾ ಚತುರ್ವೇದಿ ಹೇಳಿದರು. ಇದನ್ನು ಸತ್ತ ಆರ್ಥಿಕತೆ ಎಂದು ಕರೆಯುವುದು ದುರಹಂಕಾರ ಅಥವಾ ಅಜ್ಞಾನದ ಪರಮಾವಧಿ.
ಆಪರೇಷನ್ ಸಿಂಧೂರ್ ಅನ್ನು ನಿಲ್ಲಿಸಲು ಟ್ರಂಪ್ ಮಾತನಾಡಿದ್ದು, ಈ ಸುಂಕವು ಸಾಬೀತುಪಡಿಸಿತು, ಏಕೆಂದರೆ ಅನೇಕ ನೆರೆಯ ರಾಷ್ಟ್ರಗಳಿಗಿಂತ ಭಾರತದ ಮೇಲೆ ಹೆಚ್ಚಿನ ಸುಂಕವನ್ನು ವಿಧಿಸಲಾಗುತ್ತಿದೆ, ಆದರೆ ಪಾಕಿಸ್ತಾನದ ಬಗ್ಗೆ ಪ್ರೀತಿಯನ್ನು ತೋರಿಸುವ ಮೂಲಕ ಭಾರತದ ಮೇಲೆ ಒತ್ತಡ ಹೇರಲು ಇನ್ನೂ ಪ್ರಯತ್ನಗಳು ನಡೆಯುತ್ತಿವೆ.
ಆದಾಗ್ಯೂ, ಭಾರತ ಯಾವುದೇ ಒತ್ತಡವನ್ನು ಸಹಿಸುವುದಿಲ್ಲ ಎಂಬುದು ಭಾರತದ ನಿಲುವಿನಿಂದ ಸ್ಪಷ್ಟವಾಗಿದೆ. ವ್ಯಾಪಾರ ಒಪ್ಪಂದದಲ್ಲೂ ಸಹ ಭಾರತ ಸರ್ಕಾರ ಅಮೆರಿಕದ ಒತ್ತಡಕ್ಕೆ ಮಣಿಯಲಿಲ್ಲ, ತನ್ನ ರೈತರು ಮತ್ತು ಉದ್ಯಮಿಗಳ ಹಿತಾಸಕ್ತಿಗಳಿಗೆ ಆದ್ಯತೆ ನೀಡಿತು ಎಂಬುದಕ್ಕೆ ಇದು ಸಕಾರಾತ್ಮಕ ಸಂದೇಶವಾಗಿದೆ. ವಿರೋಧ ಪಕ್ಷವು ಬಯಸಲಿ ಅಥವಾ ಬಯಸದಿದ್ದರೂ ಭಾರತದ ಈ ನಿಲುವನ್ನು ಬೆಂಬಲಿಸಬೇಕಾಗುತ್ತದೆ.
#WATCH | Delhi: On the arrest of two Malayali nuns in Chhattisgarh, Congress MP from Thiruvananthapuram, Shashi Tharoor says, “The arrest of nuns is grave injustice. They have not done anything against the law. They were just taking some tribal girls to the city for employment.… pic.twitter.com/EV02otczWG
— ANI (@ANI) August 1, 2025
ರಾಹುಲ್ ಗಾಂಧಿ ನೀಡಿದ ಹೇಳಿಕೆ ಏನು? ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊರತುಪಡಿಸಿ ಎಲ್ಲರಿಗೂ ಭಾರತವು ‘ಸತ್ತ ಆರ್ಥಿಕತೆ’ ಎಂದು ತಿಳಿದಿದೆ ಮತ್ತು ಪ್ರಧಾನಿ ಆರ್ಥಿಕತೆಯನ್ನು ಹಾಳು ಮಾಡಿದ್ದಾರೆ ಎಂದು ಗುರುವಾರ ಹೇಳಿದ್ದಾರೆ. ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದವು ಡೊನಾಲ್ಡ್ ಟ್ರಂಪ್ ಅವರ ಷರತ್ತುಗಳ ಮೇಲೆ ಇರುತ್ತದೆ ಮತ್ತು ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷರು ಏನು ಹೇಳುತ್ತಾರೋ ಅದನ್ನು ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.
ಟ್ರಂಪ್ ಹೇಳಿದ್ದೇನು?
ರಷ್ಯಾ ಜೊತೆ ಭಾರತ ಏನು ಮಾಡುತ್ತೆ ಎಂದು ನನಗೇನೂ ಆಗಬೇಕಾದ್ದಿಲ್ಲ. ಅವೆರಡೂ ಸತ್ತ ಆರ್ಥಿಕತೆಗಳು ಒಟ್ಟಿಗೆ ನೆಲಕಚ್ಚುವಂತಾಗಬೇಕು ಎಂದು ಟ್ರಂಪ್ ಹಿಡಿಶಾಪ ಹಾಕಿದ್ದಾರೆ. ಆಗಸ್ಟ್ 1ರಿಂದ ಭಾರತದ ಸರಕುಗಳ ಮೇಲೆ ಶೇ. 25ರಷ್ಟು ಸುಂಕಗಳನ್ನು ಹಾಕುವುದಾಗಿ ಪ್ರಕಟಿಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷರು ಈ ವಾತಿನ ವರಸೆ ಮತ್ತಷ್ಟು ಹರಿತಗೊಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




