ಫ್ಲೈಯಿಂಗ್ ಕಿಸ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತೀರಿ, ಆದರೆ ಲೈಂಗಿಕ ಕಿರುಕುಳ ನೀಡಿದ ಸಂಸದರ ಬಗ್ಗೆ ಯಾಕೆ ಮಾತನಾಡಲ್ಲ?: ಮಹುವಾ ಮೊಯಿತ್ರಾ

ಭಾರತವು ನಿಮ್ಮ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದೆ. ಹೊಸ ಸಂಸತ್ತಿನ ಸಭಾಂಗಣದಲ್ಲಿ ಬಹುಮತದ ಧರ್ಮೀಯರಿಗೆ ತಲೆಬಾಗುವ ಮಹಾನ್ ಪ್ರಜಾಪ್ರಭುತ್ವದ ಪ್ರಧಾನಿಯ ನಡೆ ನಾಚಿಕೆಗೇಡು ಪೊಲೀಸ್ ದೌರ್ಜನ್ಯ ಮತ್ತು ಚಾಂಪಿಯನ್ ಕುಸ್ತಿಪಟುಗಳ ವಿರುದ್ಧ ಎಫ್‌ಐಆರ್ ದಾಖಲಿಸುವುದು ನಮಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಬಿಜೆಪಿಯ 3 ಜಿಲ್ಲೆಗಳ 50 ಪಂಚಾಯತ್‌ಗಳು- ಹರ್ಯಾಣದಲ್ಲಿ ಮುಸ್ಲಿಂ ವರ್ತಕರನ್ನು ರಾಜ್ಯಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿ ಪತ್ರಗಳನ್ನು ಹೊರಡಿಸಿರುವುದು ನಮಗೆ ಅವಮಾನ ತಂದಿದೆ

ಫ್ಲೈಯಿಂಗ್ ಕಿಸ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತೀರಿ, ಆದರೆ ಲೈಂಗಿಕ ಕಿರುಕುಳ ನೀಡಿದ ಸಂಸದರ ಬಗ್ಗೆ ಯಾಕೆ ಮಾತನಾಡಲ್ಲ?: ಮಹುವಾ ಮೊಯಿತ್ರಾ
ಮಹುವಾ ಮೊಯಿತ್ರಾ
Follow us
|

Updated on:Aug 10, 2023 | 8:36 PM

ದೆಹಲಿ ಆಗಸ್ಟ್ 10: ಅವಿಶ್ವಾಸ ನಿರ್ಣಯದ(No-confidence motion) ಚರ್ಚೆಯಲ್ಲಿ ಲೋಕಸಭೆಯಲ್ಲಿ ಮಾತನಾಡಿದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ (Mahua Moitra) ಈ ನಿರ್ಣಯವು ಸದನದಲ್ಲಿ ಯಶಸ್ವಿಯಾಗಲು ಉದ್ದೇಶಿಸಿಲ್ಲ, ಆದರೆ ಸರ್ಕಾರದ ಮೇಲೆ ಅವಿಶ್ವಾಸಕ್ಕಿಂತ ಹೆಚ್ಚಾಗಿ, ವಿಪಕ್ಷಗಳ ಇಂಡಿಯಾ (I-N-D-I-A) ಮೈತ್ರಿಕೂಟದ ಮೇಲಿನ ವಿಶ್ವಾಸಕ್ಕೆ ಸಂಬಂಧಿಸಿದೆ ಎಂದು ಹೇಳಿದ್ದಾರೆ. ಮಣಿಪುರದ ಬಗ್ಗೆ ಮಾತನಾಡಿದ ಅವರು ಅಲ್ಲಿನ ಪರಿಸ್ಥಿತಿಯು ಇತರ ರಾಜ್ಯಗಳಿಗಿಂತ ಭಿನ್ನವಾಗಿದೆ. ಮಣಿಪುರದಲ್ಲಿ ‘ದ್ವೇಷ ಅಪರಾಧ, ಆಂತರಿಕ ಕಲಹ’ ನಡೆಯುತ್ತಿದೆ ಎಂದಿದ್ದಾರೆ. ಬಹುಪಾಲು ಅವಿಶ್ವಾಸ ನಿರ್ಣಯಗಳು ಸರ್ಕಾರವನ್ನು ಪತನ ಮಾಡಲು ಬಳಸಲಾಗುತ್ತದೆ. ಇಲ್ಲಿ ಆ ಸಾಧ್ಯತೆ ಇಲ್ಲ ಎಂದು ನಮಗೆ ತಿಳಿದಿದೆ. ನಮ್ಮ ಬಳಿ ಸಂಖ್ಯಾಬಲವಿಲ್ಲ. ಆಡಳಿತಾರೂಢ ಪಕ್ಷದಲ್ಲಿರುವ ನನ್ನ ಅನೇಕ ಸ್ನೇಹಿತರು ಮತ್ತು ವೈಎಸ್‌ಆರ್‌ನಂತಹ ಇತರ ಬಿಜೆಪಿ ಮಿತ್ರರು, ಈ ನಿರ್ಣಯವು ಇಂಡಿಯಾದ ಪತನಕ್ಕಾಗಿರುವುದು ಎಂದ ನಮ್ಮನ್ನು ಲೇವಡಿ ಮಾಡಿದ್ದಾರೆ. ಆದರೆ ನಾವು ಯಾರನ್ನೂ ಕೆಳಗಿಳಿಸುವುದಕ್ಕಾಗಿ ಅಲ್ಲ, ಒಗ್ಗೂಡಿಸುವುದಕ್ಕಾಗಿ ಈ ನಿರ್ಣಯವನ್ನು ತಂದಿದ್ದೇವೆ ಎಂದು ಟಿಎಂಸಿ ಸಂಸದೆ ಹೇಳಿದ್ದಾರೆ.

ಮಣಿಪುರದಲ್ಲಿ ನಿರ್ದಿಷ್ಟ ಸಮುದಾಯದ ವಿರುದ್ಧ ದ್ವೇಷದ ಅಪರಾಧ

ಮಣಿಪುರದ ಪರಿಸ್ಥಿತಿಯನ್ನು ಇತರ ರಾಜ್ಯಗಳೊಂದಿಗೆ ಹೋಲಿಸಿದ್ದನ್ನು ‘ಸುಳ್ಳು ಹರಡುವಿಕೆ’ ಎಂದ ಸಂಸದೆ, “ಮಣಿಪುರದಲ್ಲಿ ನಡೆಯುತ್ತಿರುವುದು ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ದ್ವೇಷದ ಅಪರಾಧವಾಗಿದೆ, ಅಲ್ಲಿ ಪೊಲೀಸ್ ಸಿಬ್ಬಂದಿ ಒಂದು ಸಮುದಾಯಕ್ಕೆ ಸೇರಿದ್ದಾರೆ. ಅವರು ಮುಖ್ಯಮಂತ್ರಿಯವರ ಅದೇ ಸಮುದಾಯದವರಾಗಿರಬಹುದು. ಅವರು ಒಂದು ಸಮುದಾಯದ ಮಹಿಳೆಯರ ಮೇಲೆ ಅತ್ಯಾಚಾರವೆಸಗುವುದಕ್ಕಾಗಿ ಇನ್ನೊಂದು ಸಮುದಾಯದ ಜನಸಮೂಹಕ್ಕೆ ಅವರನ್ನು ಒಪ್ಪಿಸಿದರು. ನ್ಯಾಯದ ಬೇಡಿಕೆಯನ್ನು ತಡೆಯುವ ಎಲ್ಲಾ ಪ್ರಯತ್ನಗಳು ಇಲ್ಲಿ ನಡೆದವು. ವಿಷಯವೆಂದರೆ ಮಣಿಪುರದಲ್ಲಿ ಎರಡು ಸಮುದಾಯಗಳು ಆಂತರಿಕ ಕಲಹ ವಾತಾವರಣದಲ್ಲಿ ಪರಸ್ಪರ ವಿರುದ್ಧವಾಗಿ ಸ್ಪರ್ಧಿಸಿವೆ. ಕಳೆದ 3 ತಿಂಗಳಲ್ಲಿ 6,500 ಎಫ್‌ಐಆರ್‌ಗಳು ದಾಖಲಾಗಿವೆ ಯಾವ ರಾಜ್ಯದಲ್ಲಿ ಹೀಗಾಗಿದೆ ಎಂದು ಕೇಳಿದ್ದಾರೆ. ಪೊಲೀಸ್ ಪಡೆಯಲ್ಲಿ ಬದಲಾವಣೆ ಆಗಿದೆ, ಸರ್ಕಾರದಲ್ಲಿ ಒಂದು ಬದಲಾವಣೆ ಆಗಿದೆ ಎಂಬುದನ್ನು ನಾವು ಕೇಳಿಲ್ಲ. ಒಬ್ಬ ವ್ಯಕ್ತಿಯು ಅದರ ಜವಾಬ್ದಾರಿಯನ್ನು ತೆಗೆದುಕೊಂಡಿದ್ದನ್ನೂ ಕೇಳಿಲ್. ಇದು ಡಬಲ್ ಇಂಜಿನ್ ಸರ್ಕಾರದ ದೊಡ್ಡ ವೈಫಲ್ಯ. ರಾಜಸ್ಥಾನದ ಬಗ್ಗೆ, ಛತ್ತೀಸ್‌ಗಢದ ಬಗ್ಗೆ ಏನಂತೀರಿ? ಎಂದು ಕೇಳುವ ಮೂಲಕ ಇತರ ರಾಜ್ಯಗಳನ್ನು ಅವಮಾನಿಸಬಾರದು. ಮಣಿಪುರವು ಮೌನವಾಗಿ ಅನುಮೋದಿಸಲಾದ ದ್ವೇಷದ ಅಪರಾಧವಾಗಿದೆ. ಇದು ಅಂತರ್ಯುದ್ಧ ಎಂದರೆ ತಪ್ಪಾಗಲ್ಲ ಎಂದು ಮಹುವಾ ಮೊಯಿತ್ರಾ ಹೇಳಿದರು.

“ಪ್ರಧಾನಿ ಮೋದಿಯವರೇ ನೀವು ಇದನ್ನು ಕೇಳುತ್ತಿದ್ದರೆ … ನಾನು ಮಣಿಪುರದ ಜನರ ಪರವಾಗಿ ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಆಡಳಿತವನ್ನು ಬದಲಿಸಿ, ಎಲ್ಲಾ ಪಕ್ಷಗಳು ಕದನ ವಿರಾಮಕ್ಕಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ. ಇಲ್ಲದಿದ್ದರೆ, ನಿಮ್ಮ ಅವಧಿ ಮುಗಿದ ನಂತರವೂ, ಮಣಿಪುರದಲ್ಲಿ ಏನು ತಪ್ಪಾಗಿದೆ ಎಂದು ಭಾರತ ಒಂದೇ ಧ್ವನಿಯಲ್ಲಿ ಪ್ರತಿಧ್ವನಿಸುತ್ತದೆ ಎಂದು ಮಹುವಾ ಮೊಯಿತ್ರಾ ಹೇಳಿದರು.

‘ಸಬ್ಜಿಯಾ ಹಿಂದೂ ಹುಯಿ ಔರ್ ಬಕ್ರಾ ಮುಸಲ್ಮಾನ್ ಹೋ ಗಯಾ’

ಭಾರತವು ನಿಮ್ಮ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದೆ. ಹೊಸ ಸಂಸತ್ತಿನ ಸಭಾಂಗಣದಲ್ಲಿ ಬಹುಮತದ ಧರ್ಮೀಯರಿಗೆ ತಲೆಬಾಗುವ ಮಹಾನ್ ಪ್ರಜಾಪ್ರಭುತ್ವದ ಪ್ರಧಾನಿಯ ನಡೆ ನಾಚಿಕೆಗೇಡು ಪೊಲೀಸ್ ದೌರ್ಜನ್ಯ ಮತ್ತು ಚಾಂಪಿಯನ್ ಕುಸ್ತಿಪಟುಗಳ ವಿರುದ್ಧ ಎಫ್‌ಐಆರ್ ದಾಖಲಿಸುವುದು ನಮಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಬಿಜೆಪಿಯ 3 ಜಿಲ್ಲೆಗಳ 50 ಪಂಚಾಯತ್‌ಗಳು- ಹರ್ಯಾಣದಲ್ಲಿ ಮುಸ್ಲಿಂ ವರ್ತಕರನ್ನು ರಾಜ್ಯಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿ ಪತ್ರಗಳನ್ನು ಹೊರಡಿಸಿರುವುದು ನಮಗೆ ಅವಮಾನ ತಂದಿದೆ. ‘ನಫ್ರತೋ ಕಿ ಜಂಗ್ ಮೇ ಅಬ್ ದೇಖೋ ಕ್ಯಾ ಕ್ಯಾ ಹೋ ಗಯಾ, ಸಬ್ಜಿಯಾ ಹಿಂದೂ ಹುಯಿ ಔರ್ ಬಖ್ರಾ ಮುಸಲ್ಮಾನ್ ಹೋ ಗಯಾ’. (ದ್ವೇಷದ ಯುದ್ಧದಲ್ಲಿ ಏನೇನಾಯ್ತು ನೋಡಿ, ತರಕಾರಿಗಳು ಹಿಂದೂ ಆದವು, ಆಡು ಮುಸ್ಲಿಂ ಆಯ್ತು) ನಾವು ಹಿಂಸೆಗೆ ಒಳಗಾಗುವುದಿಲ್ಲ. ಮಮತಾ ದೀದಿ ಹೆದರಿಲ್ಲ, ಸ್ಟಾಲಿನ್ ಹೆದರಿಲ್ಲ, ಅಖಿಲೇಶ್ ಜಿ ಹೆದರಿಲ್ಲ, ರಾಹುಲ್ ಗಾಂಧಿ ಹೆದರಿಲ್ಲ. ಒಬ್ಬ ಕ್ರೋನಿ ಕ್ಯಾಪಿಟಲಿಸ್ಟ್ ನಾವು ನೋಡುತ್ತಿರುವಾಗಲೇ ಭಾರತದ ನಿಯಂತ್ರಕರು ಮತ್ತು ಇಕ್ವಿಟಿ ಮಾರುಕಟ್ಟೆಗಳಿಂದ ಹಣ ಮಾಡಲು ಹೋಗುವುದಿಲ್ಲ. ಎಲ್ಲರೂ ಕೇಳುತ್ತಾರೆ ಮೋದಿಜಿ ಇಲ್ಲದಿದ್ದರೆ ಯಾರು? ಮಣಿಪುರದ ಬಗ್ಗೆ ಈ ಮೌನದ ನಂತರ ಮೋದಿ ಅಲ್ಲದೆ ಬೇರೆ ಯಾರೂ ಅಲ್ಲ ಎಂದು ಭಾರತ ಹೇಳಬಹುದು ಎಂದಿದ್ದಾರೆ ಮಹುವಾ ಮೊಯಿತ್ರಾ.

ಇದನ್ನೂ ಓದಿಸಂಸತ್​​ನಲ್ಲಿ ರಾಹುಲ್ ಗಾಂಧಿಯಿಂದ ಫ್ಲೈಯಿಂಗ್ ಕಿಸ್: ಆಕ್ಷೇಪ ವ್ಯಕ್ತಪಡಿಸಿದ ಸ್ಮೃತಿ ಇರಾನಿ, ಸ್ಪೀಕರ್​​ಗೆ ದೂರು

ರಾಹುಲ್ ಮೇಲೆ ಆರೋಪಿಸಿರುವ ‘ಫ್ಲೈಯಿಂಗ್ ಕಿಸ್” ಪ್ರಕರಣ ಬಗ್ಗೆ ಮಾತನಾಡಿದ ಮಹುವಾ, ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ನಡೆದಿದೆ ಎಂದು ಬಿಜೆಪಿ ಸಂಸದರ ಮೇಲೆ ಆರೋಪ ಬಂದಾಗ ನೀವೇನೂ ಮಾತಾಡಿಲ್ಲ ಯಾಕೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಪ್ರಶ್ನಿಸಿದ್ದಾರೆ. ನಿನ್ನೆ ನಡೆದ ಅವಿಶ್ವಾಸ ನಿರ್ಣಯದ ವೇಳೆ ರಾಹುಲ್ ಗಾಂಧಿ ಅವರು ತಮ್ಮ ಭಾಷಣದ ನಂತರ ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎಂದು ಕೇಂದ್ರ ಸಚಿವ ಆಕ್ರೋಶ ವ್ಯಕ್ತಡಿಸಿದ್ದು, ಬಿಜೆಪಿ ಸಂಸದೆಯರು ಕೂಡ ಕ್ರಮಕ್ಕೆ ಒತ್ತಾಯಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:34 pm, Thu, 10 August 23