ಮೂರು ಯುರೋಪಿಯನ್ ರಾಷ್ಟ್ರಗಳ ಭೇಟಿಯ ಮೊದಲ ಹಂತದಲ್ಲಿ ಸೋಮವಾರ ಜರ್ಮನಿಗೆ (Germany)
ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ (German Chancellor Olaf Scholz) ಅವರನ್ನು ಭೇಟಿಯಾದರು. ಈ ಭೇಟಿಯಲ್ಲಿ ಉಭಯ ನಾಯಕರು ಪ್ರ ಭಾರತ ಮತ್ತು ಜರ್ಮನಿ ನಡುವಿನ ಹಲವಾರು ಸಾಮಾನ್ಯ ಮೌಲ್ಯಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಉಕ್ರೇನ್‌ನಲ್ಲಿನ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ಮೋದಿ “ಉಕ್ರೇನ್ ಸಂಘರ್ಷದಲ್ಲಿ ಯಾವುದೇ ದೇಶವು ವಿಜಯಶಾಲಿಯಾಗಲು ಸಾಧ್ಯವಿಲ್ಲ. ನಾವು ಶಾಂತಿಗಾಗಿ ಇದ್ದೇವೆ, ಯುದ್ಧವನ್ನು ಕೊನೆಗೊಳಿಸಿ ಎಂದು ಮನವಿ ಮಾಡಿದ್ದಾರೆ. ಭಾರತ ಮತ್ತು ಜರ್ಮನಿ ನಡುವಿನ ಪಾಲುದಾರಿಕೆಯು ಸಂಕೀರ್ಣ ಜಗತ್ತಿನಲ್ಲಿ ಯಶಸ್ಸಿನ ಉದಾಹರಣೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸುಸ್ಥಿರ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದ ಹಲವಾರು ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಸಹಿ ಹಾಕಿವೆ. ಈ ಒಪ್ಪಂದದ ಅಡಿಯಲ್ಲಿ ಭಾರತವು 2030 ರ ವೇಳೆಗೆ ಶುದ್ಧ ಶಕ್ತಿಯ ಬಳಕೆಗೆ 10.5 ಶತಕೋಟಿ ಯುಎಸ್ಡಿ ನೆರವು ಪಡೆಯುತ್ತದೆ. ಭಾರತ ಮತ್ತು ಜರ್ಮನಿ ಸೋಮವಾರ ಕೃಷಿ-ಪರಿಸರಶಾಸ್ತ್ರ ಮತ್ತು ಕೃಷಿ ವಲಯದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗೆ ಸಹಕರಿಸಲು ಒಪ್ಪಿಕೊಂಡಿವೆ. ಅಂತಹ ಉಪಕ್ರಮಗಳಿಗಾಗಿ ಜರ್ಮನಿ 2025 ರ ವೇಳೆಗೆ 300 ಮಿಲಿಯನ್ ಯುರೋಗಳವರೆಗೆ ರಿಯಾಯಿತಿ ಸಾಲವನ್ನು ನೀಡಲು ಉದ್ದೇಶಿಸಿದೆ. ಒಪ್ಪಂದದ ಪ್ರಕಾರ, ಶೈಕ್ಷಣಿಕ ಸಂಸ್ಥೆಗಳು ಮತ್ತು ರೈತರು ಸೇರಿದಂತೆ ವೃತ್ತಿಗಾರರ ನಡುವೆ ಜಂಟಿ ಸಂಶೋಧನೆ, ಜ್ಞಾನ ಹಂಚಿಕೆ ಮತ್ತು ನಾವೀನ್ಯತೆಯ ಉತ್ತೇಜನಕ್ಕೆ ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ.
I had wide-ranging discussions with Chancellor Scholz. Today’s talks covered trade, commerce, innovation, culture and people-to-people linkages. India and Germany are working together on several subjects. This partnership will benefit our entire planet. @Bundeskanzler pic.twitter.com/bNQWtESzmv
— Narendra Modi (@narendramodi) May 2, 2022
ರಷ್ಯಾದ ಪುಟಿನ್ ಅವರನ್ನು ಮೂಲೆಗುಂಪು ಮಾಡಲು ಜರ್ಮನಿಯು ಭಾರತವನ್ನು G-7 ಗೆ ಆಹ್ವಾನಿಸಿದೆ.
ಅಂತರ್ ಸರ್ಕಾರಿ ಸಮಾಲೋಚನೆಗಳ (ಐಜಿಸಿ) ಆರನೇ ಸಮಗ್ರ ಅಧಿವೇಶನದಲ್ಲಿ ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ಸಹ-ಅಧ್ಯಕ್ಷತೆ ವಹಿಸಿದ ಪ್ರಧಾನಿ ಮೋದಿ ಅವರು ಭಾರತದ ‘ಆತ್ಮನಿರ್ಭರ್ ಭಾರತ್’ (ಸ್ವಾವಲಂಬಿ ಭಾರತ) ಅಭಿಯಾನದಲ್ಲಿ ಜರ್ಮನ್ ಭಾಗವಹಿಸುವಿಕೆಯನ್ನು ಆಹ್ವಾನಿಸಿದರು.
ಜಾಗತಿಕ ಸವಾಲುಗಳ ಬಗ್ಗೆ ಚರ್ಚಿಸಿದ ಪ್ರಧಾನಿ ಮೋದಿ ಅವರು ಜರ್ಮನಿಯ ಚಾನ್ಸೆಲರ್ ಸ್ಕೋಲ್ಜ್
ಕಳೆದ ವರ್ಷ ಡಿಸೆಂಬರ್‌ನಲ್ಲಿ ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅಧಿಕಾರ ವಹಿಸಿಕೊಂಡ ನಂತರ ಬರ್ಲಿನ್‌ನಲ್ಲಿ ನಡೆದ ಮೊದಲ ಸಭೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಜರ್ಮನ್ ನಾಯಕರೊಂದಿಗೆ ಒಟ್ಟಾರೆ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಅಡಿಯಲ್ಲಿ ದ್ವಿಪಕ್ಷೀಯ ಸಹಕಾರದ ಪ್ರಮುಖ ಕ್ಷೇತ್ರಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ ಅವರೊಂದಿಗೆ ರಷ್ಯಾ-ಉಕ್ರೇನ್ ಸಂಘರ್ಷದ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಿದರು. ಅವರು ಜರ್ಮನಿಯ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಚಿವ ಸ್ವೆಂಜಾ ಶುಲ್ಜೆ ಅವರನ್ನು ಭೇಟಿ ಮಾಡಿದ್ದು ತ್ರಿಕೋನ ಅಭಿವೃದ್ಧಿ ಸಹಕಾರ ಮತ್ತು ನವೀಕರಿಸಬಹುದಾದ ಇಂಧನ ಪಾಲುದಾರಿಕೆಯ ಒಪ್ಪಂದಗಳಿಗೆ ಸಹಿ ಹಾಕಿದರು.
ಭಾರತ ಮತ್ತು ಜರ್ಮನಿ ನಡುವಿನ ದ್ವೈವಾರ್ಷಿಕ ಅಂತರ-ಸರ್ಕಾರಿ ಸಮಾಲೋಚನೆಯ ಆರನೇ ಸುತ್ತಿನ ಮೊದಲು ಮೋದಿ ಮತ್ತು ಸ್ಕೋಲ್ಜ್ ದ್ವಿಪಕ್ಷೀಯ ಸಭೆ ನಡೆಸಿದರು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 9:25 pm, Mon, 2 May 22