AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ವಿಟರ್ ಖಾತೆಯಲ್ಲಿ ಪಕ್ಷದ ಹೆಸರು ತೆಗೆದುಹಾಕಿದ ಗುಜರಾತ್ ಕಾಂಗ್ರೆಸ್ ಘಟಕದ ನಾಯಕ ಹಾರ್ದಿಕ್‌ ಪಟೇಲ್

ಇತ್ತೀಚೆಗೆ ಕಾಂಗ್ರೆಸ್  ವಿರುದ್ಧ ಮಾಡಿದ ವಾಗ್ದಾಳಿಯಲ್ಲಿ ಹಾರ್ದಿಕ್ ಪಟೇಲ್ , ನಾನು ಪ್ರಸ್ತುತ ಕಾಂಗ್ರೆಸ್‌ನಲ್ಲಿದ್ದೇನೆ. ನಾನು ಮತ್ತೆ ಕಾಂಗ್ರೆಸ್‌ನಲ್ಲಿ ಮುಂದುವರಿಯಲು ಕೇಂದ್ರ ನಾಯಕರು ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ.

ಟ್ವಿಟರ್ ಖಾತೆಯಲ್ಲಿ ಪಕ್ಷದ ಹೆಸರು ತೆಗೆದುಹಾಕಿದ ಗುಜರಾತ್ ಕಾಂಗ್ರೆಸ್ ಘಟಕದ ನಾಯಕ ಹಾರ್ದಿಕ್‌ ಪಟೇಲ್
ಹಾರ್ದಿಕ್ ಪಟೇಲ್
TV9 Web
| Edited By: |

Updated on:May 02, 2022 | 8:05 PM

Share

ದೆಹಲಿ: ಇತ್ತೀಚೆಗೆ ಕಾಂಗ್ರೆಸ್ (Congress) ಪಕ್ಷದ ಕಾರ್ಯವೈಖರಿ ವಿರುದ್ಧ ಟೀಕಾಪ್ರಹಾರ ಮಾಡಿದ್ದ ಗುಜರಾತ್ ಕಾಂಗ್ರೆಸ್ ಘಟಕದ ನಾಯಕ ಹಾರ್ದಿಕ್ ಪಟೇಲ್ (Hardik Patel) ಇದೀಗ ತಮ್ಮ ಟ್ವಿಟರ್‌ ಖಾತೆಯ ವೈಯಕ್ತಿಕ ಮಾಹಿತಿ ವಿಭಾಗದಲ್ಲಿ ಪಕ್ಷದ ಹೆಸರನ್ನು ತೆಗೆದು ಹಾಕಿದ್ದಾರೆ. ಪಕ್ಷವು ತಮ್ಮನ್ನು ಗಣನೆಗೆ  ತೆಗೆದುಕೊಳ್ಳುತ್ತಿಲ್ಲ ಎಂದು ಈ ಹಿಂದೆ ಹೇಳಿದ್ದ ಪಟೇಲ್, ಟ್ವಿಟರ್ (Twitter) ಬಯೋದಿಂದ ‘ಕಾಂಗ್ರೆಸ್’ ಅಳಿಸಿ ಹಾಕುವ ಮೂಲಕ ಮುಂದಿನ ನಡೆ ಬಗ್ಗೆ ಕುತೂಹಲ ಸೃಷ್ಟಿಸಿದ್ದಾರೆ. ಏಪ್ರಿಲ್ 13 ರಂದು ಗುಜರಾತ್ ಕಾಂಗ್ರೆಸ್ ಕಾರ್ಯಾಧ್ಯಕ್ಷರು ತಮ್ಮ ಸ್ವಂತ ಪಕ್ಷವನ್ನು ಟೀಕಿಸುತ್ತಾ, ನನ್ನನ್ನು  ದೂರವಿಡಲಾಗುತ್ತಿದೆ. ಪಕ್ಷದ ನಾಯಕತ್ವವು ನನ್ನ ಕೌಶಲ್ಯವನ್ನು ಬಳಸಿಕೊಳ್ಳಲು ಸಿದ್ಧವಾಗಿಲ್ಲ ಎಂದು ಹೇಳಿದ್ದರು. “ನನ್ನನ್ನು ಪಿಸಿಸಿಯ ಯಾವುದೇ ಸಭೆಗಳಿಗೆ ಆಹ್ವಾನಿಸಲಾಗಿಲ್ಲ, ಅವರು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ನನ್ನನ್ನು ಸಂಪರ್ಕಿಸುವುದಿಲ್ಲ. ಹಾಗಾದರೆ ಈ ಹುದ್ದೆಯ ಅರ್ಥವೇನು” ಎಂದು ಅವರು ಕೇಳಿದ್ದರು. ಅಂದಹಾಗೆ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಠಾಕೂರ್ ಈ ಹತಾಶೆಯನ್ನು ಅರ್ಥಮಾಡಿಕೊಳ್ಳಲು ಪಟೇಲ್ ಅವರೊಂದಿಗೆ ಸಭೆ ನಡೆಸಲಾಗುವುದು ಎಂದು ಹೇಳಿದ್ದರು. ಈ ವರ್ಷ ಡಿಸೆಂಬರ್‌ನಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಮುನ್ನ ರಾಜಕೀಯ ಪ್ರಕ್ಷುಬ್ಧತೆ ಎದುರಾಗಿದೆ. 2015 ರಲ್ಲಿ ಪಟೇಲ್ ಗುಜರಾತ್‌ನಲ್ಲಿ ಪಾಟಿದಾರ್ ಸಮುದಾಯದ ಅಭಿಯಾನವನ್ನು ಮುನ್ನಡೆಸಿದರು. ಅವರು ಇತರೆ ಹಿಂದುಳಿದ ವರ್ಗ (ಒಬಿಸಿ) ವರ್ಗದ ಅಡಿಯಲ್ಲಿ ಮೀಸಲಾತಿ ಕೋರಿದ್ದರು.

ಇತ್ತೀಚೆಗೆ ಕಾಂಗ್ರೆಸ್  ವಿರುದ್ಧ ಮಾಡಿದ ವಾಗ್ದಾಳಿಯಲ್ಲಿ ಹಾರ್ದಿಕ್ ಪಟೇಲ್ , ನಾನು ಪ್ರಸ್ತುತ ಕಾಂಗ್ರೆಸ್‌ನಲ್ಲಿದ್ದೇನೆ. ನಾನು ಮತ್ತೆ ಕಾಂಗ್ರೆಸ್‌ನಲ್ಲಿ ಮುಂದುವರಿಯಲು ಕೇಂದ್ರ ನಾಯಕರು ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಹಾರ್ದಿಕ್ ಕಾಂಗ್ರೆಸ್ ತೊರೆಯಬೇಕು ಮತ್ತು ನೈತಿಕತೆಯನ್ನು ಮುರಿಯಬೇಕೆಂದು ಕೆಲವರು ಬಯಸುತ್ತಾರೆ” ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದ ಕ್ಲಿಪ್ಪಿಂಗ್ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ. ಮೀಸಲಾತಿಗಾಗಿ ಪಾಟಿದಾರ್ ಸಮುದಾಯದ ಆಂದೋಲನದ ಮುಖವಾಗಿದ್ದ ಯುವ ನಾಯಕ ಕಾಂಗ್ರೆಸ್ ಸೇರಿದ ಸ್ವಲ್ಪ ಸಮಯದ ನಂತರ ಪಕ್ಷದ ನಾಯಕತ್ವವನ್ನು ಚಿಂತೆಗೀಡು  ಮಾಡುವ ಸೂಚನೆಗಳನ್ನು ರವಾನಿಸಿದ್ದಾರೆ.

ಬಿಜೆಪಿಯ ಭದ್ರಕೋಟೆ ಮತ್ತು ಪ್ರಧಾನಿ ನರೇಂದ್ರ ಮೋದಿಯ ತವರು ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆಗೆ ತಿಂಗಳುಗಳು ಬಾಕಿ ಇರುವಾಗ ಪಟೇಲ್ ಅವರ ಅಸಮಾಧಾನವು ಕಾಂಗ್ರೆಸ್‌ಗೆ ತೊಂದರೆ ಉಂಟುಮಾಡಬಹುದು. ಈ ತಿಂಗಳ ಆರಂಭದಲ್ಲಿ 2017 ರ ರಾಜ್ಯ ಚುನಾವಣೆಗೆ ಸ್ವಲ್ಪ ಮೊದಲು ರಾಹುಲ್ ಗಾಂಧಿಯಿಂದ ಪಕ್ಷಕ್ಕೆ ಸೇರ್ಪಡೆಗೊಂಡ ಪಟೇಲ್, ನಾಯಕತ್ವವು ಅವರನ್ನು ಬದಿಗೆ ಸರಿಸಿದೆ ಎಂದು ಆರೋಪಿಸಿದರು.

ರಾಜ್ಯ ಕಾಂಗ್ರೆಸ್ ಘಟಕದ ಯಾವುದೇ ಸಭೆಗೆ ತಮ್ಮನ್ನು ಆಹ್ವಾನಿಸುವುದಿಲ್ಲ ಮತ್ತು ನಿರ್ಧಾರಗಳ ಮೊದಲು ಅವರ ಜತೆ ಎಂದಿಗೂ ಸಮಾಲೋಚಿಸುವುದಿಲ್ಲ ಎಂದು ಅವರು ಹೇಳಿದರು. “ಪಕ್ಷದಲ್ಲಿ ನನ್ನ ಸ್ಥಾನವು ಸಂತಾನಹರಣ ಶಸ್ತ್ರಚಿಕಿತ್ಸೆ ಒಳಗಾಗಿರುವ ಹೊಸ ವರನಂತೆ ಇದೆ” ಎಂದು ಅವರು ಹೇಳಿದ್ದರು. ಪಾಟಿದಾರ್ ಆಂದೋಲನವು 2015 ರ ಸ್ಥಳೀಯ ಸಂಸ್ಥೆಗಳಿಗೆ ಮತ್ತು 2017 ರ ಗುಜರಾತ್ ಚುನಾವಣೆಯಲ್ಲಿ 182 ಸದಸ್ಯರ ವಿಧಾನಸಭೆಯಲ್ಲಿ 77 ಸ್ಥಾನಗಳನ್ನು ಗೆದ್ದಾಗ ಕಾಂಗ್ರೆಸ್ ಗಮನಾರ್ಹ ಸಂಖ್ಯೆಯ ಸ್ಥಾನಗಳನ್ನು ಗೆಲ್ಲಲು ಸಹಾಯ ಮಾಡಿತು ಎಂದು ಪಟೇಲ್ ಹೇಳಿದರು.

“ಆದರೆ ಅದರ ನಂತರ ಏನಾಯಿತು? 2017 ರ ನಂತರ ಹಾರ್ದಿಕ್ ಪಟೇಲ್ ಅವರನ್ನು ಪಕ್ಷವು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ಕಾಂಗ್ರೆಸ್‌ನ ಅನೇಕರು ಭಾವಿಸುತ್ತಾರೆ. ಇವತ್ತು ನನಗೆ ಪ್ರಾಮುಖ್ಯತೆ ಕೊಟ್ಟರೆ ಐದು ಅಥವಾ 10 ವರ್ಷಗಳ ನಂತರ ನಾನು ಅವರ ದಾರಿಗೆ ಬರುತ್ತೇನೆ ಎಂದು ಪಕ್ಷದ ಕೆಲವರು ಭಾವಿಸಿದ್ದಿರಬಹುದು ಎಂದು ಅವರು ಹೇಳಿದರು. ಒಂದು ವಾರದ ನಂತರ ಅವರು ಕಾಂಗ್ರೆಸ್‌ನ ಮುಖ್ಯ ಪ್ರತಿಸ್ಪರ್ಧಿ ಮತ್ತು ಗುಜರಾತ್‌ನ ಆಡಳಿತ ಪಕ್ಷ ಬಿಜೆಪಿಯನ್ನು ಹೊಗಳುತ್ತಿರುವಂತೆ ಕಂಡುಬರುವ ಟೀಕೆಗಳ ಮೂಲಕ ರಾಜಕೀಯ ವಲಯಗಳಲ್ಲಿ ಸಂಚಲನ ಮೂಡಿಸಿದರು.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 7:31 pm, Mon, 2 May 22

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?