ಮುಂದಿನ ವಾರವೂ ಮಳೆಯಿಂದ ರಿಲೀಫ್ ಸಿಗಲ್ಲ; ಮಳೆಗೆ ತಮಿಳುನಾಡು, ಕರ್ನಾಟಕ ಸಜ್ಜಾಗುವುದು ಅನಿವಾರ್ಯ

ತಮಿಳುನಾಡನಲ್ಲಿ ಭಾರಿ ಮಳೆಯಿಂದ ಎಲ್ಲ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ತಮಿಳುನಾಡಿನ ಜಲಾಶಯಗಳ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯವೇ 224 ಟಿಎಂಸಿ. ಸದ್ಯ ತಮಿಳುನಾಡು ಡ್ಯಾಂಗಳಲ್ಲಿ 200 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ತಮಿಳುನಾಡಿನ ಕಾವೇರಿ ಕಣಿವೆಯ ಮೆಟ್ಟೂರು, ಭವಾನಿ ಸಾಗರ, ಅಮರಾವತಿ ಡ್ಯಾಂಗಳು ಸಂಪೂರ್ಣ ಭರ್ತಿಯಾಗಿವೆ.

ಮುಂದಿನ ವಾರವೂ ಮಳೆಯಿಂದ ರಿಲೀಫ್ ಸಿಗಲ್ಲ; ಮಳೆಗೆ ತಮಿಳುನಾಡು, ಕರ್ನಾಟಕ ಸಜ್ಜಾಗುವುದು ಅನಿವಾರ್ಯ
ಮುಂದಿನ ವಾರವೂ ಮಳೆಯಿಂದ ರಿಲೀಫ್ ಸಿಗಲ್ಲ; ಮಳೆ ಎದುರಿಸಲು ತಮಿಳುನಾಡು, ಕರ್ನಾಟಕ ಜನ ಸಿದ್ಧತೆ ಮಾಡಿಕೊಳ್ಳುವುದು ಅನಿವಾರ್ಯ
Follow us
S Chandramohan
| Updated By: ಸಾಧು ಶ್ರೀನಾಥ್​

Updated on:Nov 12, 2021 | 7:52 PM

ನಮ್ಮ ಕರ್ನಾಟಕದ ನೆರೆಯ ತಮಿಳು ಪ್ರದೇಶಗಳು ಜಲಾವೃತ್ತವಾಗಿವೆ. ಮತ್ತೊಂದೆಡೆ ಮುಂದಿನ 5 ದಿನಗಳವರೆಗೂ ತಮಿಳುನಾಡು ಹಾಗೂ ಕರ್ನಾಟಕದ ದಕ್ಷಿಣ ಒಳನಾಡು ಪ್ರದೇಶದಲ್ಲಿ ಅಲ್ಲಲ್ಲಿ ಚದುರಿದಂತೆ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಮಿಳುನಾಡಿನಲ್ಲಿ ಇಂದು ಮಳೆ ಸ್ಪಲ್ಪ ಬಿಡುವು ನೀಡಿದೆ. ತಮಿಳುನಾಡಿನಲ್ಲಿ ಮಳೆ ಅನಾಹುತದಿಂದ ಇದುವರೆಗೂ 14 ಮಂದಿ ಸಾವನ್ನಪ್ಪಿದ್ದು, ರಾಜ್ಯ ಸರ್ಕಾರ ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

ತಮಿಳುನಾಡಿನಲ್ಲಿ ಅಲ್ಲಲ್ಲಿ ಚದುರಿದಂತೆ 5 ದಿನ ಭಾರಿ ಮಳೆ ತಮಿಳುನಾಡು ರಾಜ್ಯ ಅಕ್ಷರಶಃ ಮಳೆಯಿಂದ ತತ್ತರಿಸಿ ಹೋಗಿದೆ. ಕಳೆದ ಭಾನುವಾರ ರಾತ್ರಿಯಿಂದ ಆರಂಭವಾದ ಭಾರಿ ಮಳೆ ಇಂದು ಸ್ಪಲ್ಪ ಬಿಡುವು ನೀಡಿದೆ. ಇಂದು ತಮಿಳುನಾಡಿಗೆ ರೆಡ್ ಆಲರ್ಟ್ ಇರಲಿಲ್ಲ. ಆದರೇ, ಇಂದು ಕೂಡ ಅಲ್ಲಲ್ಲಿ ಮಳೆಯಾಗಿದೆ. ಇಂದು ಕೂಡ ತಮಿಳುನಾಡಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಮಳೆಯಿಂದ ಸಂಪೂರ್ಣ ರಿಲೀಫ್ ಸಿಕ್ತು ಎಂದು ಜನರು ನೆಮ್ಮದಿಯ ನಿಟ್ಟುಸಿರುಬಿಡುವಂತಿಲ್ಲ.

ಏಕೆಂದರೆ, ತಮಿಳುನಾಡಿನಲ್ಲಿ ಮುಂದಿನ 5 ದಿನಗಳ ಕಾಲ ಅಲ್ಲಲ್ಲಿ ಚದುರಿದಂತೆ ಭಾರಿ ಮಳೆಯಾಗಲಿದೆ ಎಂದು ಇಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಮಿಳುನಾಡು ಮಾತ್ರವಲ್ಲ, ಪುದುಚೇರಿ ಹಾಗೂ ಕರ್ನಾಟಕದ ದಕ್ಷಿಣ ಒಳನಾಡು ಪ್ರದೇಶದಲ್ಲೂ ಮುಂದಿನ 5 ದಿನ ಅಲ್ಲಲ್ಲಿ ಚದುರಿದಂತೆ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದಾಗಿ ಮುಂದಿನ ವಾರವೂ ಜನರಿಗೆ ಮಳೆಯಿಂದ ಸಂಪೂರ್ಣ ರಿಲೀಫ್ ಸಿಗಲ್ಲ. ಮಳೆಯನ್ನು ಎದುರಿಸಲು ತಮಿಳುನಾಡು ಹಾಗೂ ಕರ್ನಾಟಕದ ಜನರು ಈಗ ಸಿದ್ಧತೆ ಮಾಡಿಕೊಳ್ಳುವುದು ಅನಿವಾರ್ಯ.

ಇನ್ನು ಇಂದು ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಮಳೆ ಸ್ಪಲ್ಪ ಬಿಡುವು ನೀಡಿತ್ತು. ಇದರಿಂದ ರಸ್ತೆ, ಜನ ವಸತಿ ಪ್ರದೇಶಗಳಲ್ಲಿ ನಿಂತಿದ್ದ ನೀರನ್ನು ಹೊರಹಾಕಲು ರಕ್ಷಣಾ ಸಿಬ್ಬಂದಿಗೆ ಸಾಧ್ಯವಾಯಿತು. ಚೆನ್ನೈನ ಟಿ. ನಗರ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ನೀರನ್ನು ಹೊರಹಾಕುವ ಕಾರ್ಯದಲ್ಲಿ ರಕ್ಷಣಾ ಸಿಬ್ಬಂದಿ ತೊಡಗಿದ್ದರು.

ಚೆನ್ನೈ ನಗರಕ್ಕೆ ಕರಾವಳಿ ಕಾವಲು ಪಡೆಯ ಐದು ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಚೆನ್ನೈನಲ್ಲಿ ಜಲಾವೃತ್ತ ಪ್ರದೇಶಗಳಿಂದ ನೀರುನ್ನು ಹೊರಹಾಕಲು 620 ಪಂಪ್ ಗಳನ್ನು ಬಳಸಲಾಗುತ್ತಿದೆ ಎಂದು ಚೆನ್ನೈನ ಪಾಲಿಕೆ ಆಯುಕ್ತ ಗಗನ್ ದೀಪ್ ಸಿಂಗ್ ಹೇಳಿದ್ದಾರೆ. ನಾಳೆ ಮತ್ತು ನಾಡಿದ್ದು ಕನ್ಯಾಕುಮಾರಿ ಹಾಗೂ ದಕ್ಷಿಣ ಕೇರಳದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಖಾಸಗಿ ಹವಾಮಾನ ತಜ್ಞರು ನೀಡಿದ್ದಾರೆ.

ತಮಿಳುನಾಡನಲ್ಲಿ ಭಾರಿ ಮಳೆಯಿಂದ ಎಲ್ಲ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ತಮಿಳುನಾಡಿನ ಜಲಾಶಯಗಳ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯವೇ 224 ಟಿಎಂಸಿ. ಸದ್ಯ ತಮಿಳುನಾಡು ಡ್ಯಾಂಗಳಲ್ಲಿ 200 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ತಮಿಳುನಾಡಿನ ಕಾವೇರಿ ಕಣಿವೆಯ ಮೆಟ್ಟೂರು, ಭವಾನಿ ಸಾಗರ, ಅಮರಾವತಿ ಡ್ಯಾಂಗಳು ಸಂಪೂರ್ಣ ಭರ್ತಿಯಾಗಿವೆ.

ಇನ್ನು ತಮಿಳುನಾಡಿನಲ್ಲಿ ಮಳೆಯಿಂದ ಇದುವರೆಗೂ 14 ಮಂದಿ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಮುಂದಿನ ಒಂದು ವಾರದಲ್ಲಿ ಪರಿಹಾರದ ಚೆಕ್ ನೀಡುವುದಾಗಿ ಕಂದಾಯ ಸಚಿವ ರಾಮಚಂದ್ರನ್ ಹೇಳಿದ್ದಾರೆ. ಬಾರಿ ಮಳೆಯಿಂದ ತಮಿಳುನಾಡಿನಲ್ಲಿ ಬೆಳೆದು ನಿಂತ ಬೆಳೆ ಹಾಳಾಗಿದೆ. 1.45 ಲಕ್ಷ ಎಕರೆ ಬೆಳೆ ಹಾಳಾಗಿದೆ. 6 ಸಾವಿರ ಎಕರೆ ತೋಟಗಾರಿಕೆ ಬೆಳೆ ಹಾಳಾಗಿದೆ. 157ಜಾನುವಾರಗಳು ಸಾವನ್ನಪ್ಪಿವೆ, 1,146 ಗುಡಿಸಲು ಹಾಗೂ 237 ಮನೆಗಳು ಕುಸಿದುಬಿದ್ದಿವೆ. ಚೆನ್ನೆೈ ಪಾಲಿಕೆಯು ಇದುವರೆಗೂ 6 ಲಕ್ಷ ಆಹಾರ ಪಾಕೆಟ್ ಗಳನ್ನು ಜನರಿಗೆ ವಿತರಿಸಿದೆ. 65 ಸಾವಿರ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.

ಸಿಎಂ ಎಂ.ಕೆ.ಸ್ಟಾಲಿನ್ ಪ್ರತಿನಿತ್ಯ ತಾವೇ ಫೀಲ್ಡಿಗಿಳಿದು ರಕ್ಷಣಾ ಕಾರ್ಯಾಚರಣೆ ಎಲ್ಲವನ್ನೂ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಇಂದು ಕೂಡ ಜನರಿಗೆ ಬಟ್ಟೆ, ಆಹಾರಧಾನ್ಯ, ಫುಡ್ ಪಾಕೆಟ್ ವಿತರಿಸಿದ್ದಾರೆ. ನೆನ್ನೆ ರಸ್ತೆ ಬದಿ ಪ್ರಜ್ಞಾಹೀನಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರನ್ನು ರಾಜೇಶ್ವರಿ ಎಂಬ ಪೊಲೀಸ್ ಇನ್ಸ್ ಪೆಕ್ಟರ್ ತಮ್ಮ ಭುಜದ ಮೇಲೆ ಹೊತ್ತಿಕೊಂಡು ಹೋಗಿ ವಾಹನದಲ್ಲಿ ಆಸ್ಪತ್ರೆಗೆ ಕಳಿಸಿದ್ದರು. ಇನ್ಸ್ ಪೆಕ್ಟರ್ ರಾಜೇಶ್ವರಿ ಅವರನ್ನು ಇಂದು ಭೇಟಿಯಾದ ಸಿಎಂ ಎಂ.ಕೆ.ಸ್ಟಾಲಿನ್ ಪ್ರಶಂಸಾ ಪತ್ರ ನೀಡಿ ಗೌರವಿಸಿದ್ದಾರೆ.

-ಇನ್ನೂ ಆಂಧ್ರದ ಚಿತ್ತೂರು, ನೆಲ್ಲೂರು ಹಾಗೂ ಕಡಪ ಜಿಲ್ಲೆಗಳಲ್ಲೂ ನಿನ್ನೆ ಭಾರಿ ಮಳೆಯಾಗಿದೆ. ನಿನ್ನೆ ತಿರುಪತಿಯಲ್ಲಿ ಭಾರಿ ಮಳೆಯಾಗಿದೆ. ಆದರೇ, ಇಂದು ಆಂಧ್ರಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಿಲ್ಲ. ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವೇ ಇಂದು ಕೂಡ ಮುಂದುವರಿದಿದೆ. ಬೆಂಗಳೂರಿನಲ್ಲಿ ಉಷ್ಣಾಂಶ 20 ಡಿಗ್ರಿಗೆ ಕುಸಿದಿದ್ದು, ಜನರಿಗೆ ಹಗಲು ವೇಳೆಯೇ ಚಳಿಯ ಅನುಭವವಾಗುತ್ತಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಜಿಟಿಜಿಟಿ ಮಳೆಯಾಗುತ್ತಿದೆ.

(no relief from rains in the next week also karnataka tamilnadu people to be prepared for the rains)

Published On - 7:49 pm, Fri, 12 November 21

ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು