‘ಕೃಷ್ಣ ಅಚಲ’: ಮಥುರಾ ಕೃಷ್ಣ ಜನ್ಮಭೂಮಿ ಬಗ್ಗೆ ಸುಳಿವು ನೀಡಿದ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಯೋಗಿ ಆದಿತ್ಯನಾಥ್ ಮಾಡಿದ ಭಾಷಣದಲ್ಲಿ "ಕೃಷ್ಣ" ಉಲ್ಲೇಖವು ಕೃಷ್ಣ ಜನ್ಮಭೂಮಿ ಪ್ರಕರಣದ ಸ್ಪಷ್ಟ ಉಲ್ಲೇಖವಾಗಿದೆ. ಮಥುರಾದಲ್ಲಿರುವ 17ನೇ ಶತಮಾನದ ಮಸೀದಿಯಾದ ಶಾಹಿ ಈದ್ಗಾ ಭಗವಾನ್ ಕೃಷ್ಣನ ಜನ್ಮಸ್ಥಳದಲ್ಲಿದೆ ಎಂದು ಹಿಂದೂ ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ಈ ಸ್ಥಳದ ಪುರಾತತ್ವ ಸಮೀಕ್ಷೆಗೆ ಅನುಮತಿ ನೀಡಿದೆ.
ಲಖನೌ ಫೆಬ್ರುವರಿ 07: ಅಯೋಧ್ಯೆಯಲ್ಲಿ ರಾಮ ಮಂದಿರದ(Ram mandir) ಉದ್ಘಾಟನೆ ಕಾರ್ಯವನ್ನು ಸ್ವಾಗತಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath), ಬಿಜೆಪಿಯ ಆದ್ಯತೆಯ ಪಟ್ಟಿಯಲ್ಲಿ ಕೃಷ್ಣ ಜನ್ಮಭೂಮಿ (Krishna Janmabhoomi) ಭೂ ವಿವಾದವು ಮುಂದಿನ ಸ್ಥಾನದಲ್ಲಿದೆ ಎಂದಿದ್ದಾರೆ. “ನಂದಿ ಬಾಬಾ ಅಯೋಧ್ಯೆಯಲ್ಲಿ ಆಚರಣೆಗಳನ್ನು ನೋಡಿದಾಗ ಅದು ಹಠ ಹಿಡಿದು ರಾತ್ರಿಯಲ್ಲಿ ಬ್ಯಾರಿಕೇಡ್‌ಗಳನ್ನು ಮುರಿದಿತ್ತು. ಈಗ ನಮ್ಮ ಕೃಷ್ಣ ಕನ್ಹಯ್ಯಾ ಅಚಲ” ಎಂದು ಆದಿತ್ಯನಾಥ್ ವಿಧಾನಸಭೆಯಲ್ಲಿ ಬುಧವಾರ ಹೇಳಿದ್ದಾರೆ.
ಇಲ್ಲಿ ನಂದಿ ಬಾಬಾ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದು ಶಿವನ ವಾಹನ ನಂದಿಯನ್ನು. ಕಳೆದ ವಾರ, ಜಿಲ್ಲಾ ನ್ಯಾಯಾಲಯದ ಆದೇಶದ ನಂತರ 30 ವರ್ಷಗಳ ನಂತರ ಮಸೀದಿಯ ನೆಲಮಾಳಿಗೆಯೊಂದರಲ್ಲಿ ಹಿಂದೂ ಪ್ರಾರ್ಥನೆಗಳು ಪುನರಾರಂಭಗೊಂಡವು. ನ್ಯಾಯಾಲಯದ ಆದೇಶದ ನಂತರ ಬೆಳಿಗ್ಗೆ 3 ಗಂಟೆಗೆ ಪ್ರಾರ್ಥನೆ ನಡೆಯಿತು. ಪ್ರಾರ್ಥನೆಗಳು ನಡೆದ ನೆಲಮಾಳಿಗೆಯು ಪಕ್ಕದಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿರುವ ನಂದಿ ವಿಗ್ರಹಕ್ಕೆ ಎದುರಾಗಿದೆ. ದೇವಸ್ಥಾನದ ವಿವಿಧ ಭಾಗಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ಕೋರಿ ಹಿಂದೂ ಅರ್ಜಿದಾರರು ನ್ಯಾಯಾಲಯದ ಮೊರೆ ಹೋದ ನಂತರ ವಾರಣಾಸಿ ಮಸೀದಿಯು ಕಾನೂನು ಹೋರಾಟದ ಕೇಂದ್ರವಾಗಿದೆ.
हमने तो केवल तीन जगह मांगी…
श्री अयोध्या धाम का उत्सव लोगों ने देखा…
नंदी बाबा ने भी कहा कि हम काहे इंतजार करें…
हमारे कृष्ण कन्हैया कहां मानने वाले हैं… pic.twitter.com/yzqFAcicuP
— Yogi Adityanath (@myogiadityanath) February 7, 2024
ಆದಿತ್ಯನಾಥ್ ಅವರ “ಕೃಷ್ಣ” ಉಲ್ಲೇಖವು ಕೃಷ್ಣ ಜನ್ಮಭೂಮಿ ಪ್ರಕರಣದ ಸ್ಪಷ್ಟ ಉಲ್ಲೇಖವಾಗಿದೆ. ಮಥುರಾದಲ್ಲಿರುವ 17ನೇ ಶತಮಾನದ ಮಸೀದಿಯಾದ ಶಾಹಿ ಈದ್ಗಾ ಭಗವಾನ್ ಕೃಷ್ಣನ ಜನ್ಮಸ್ಥಳದಲ್ಲಿದೆ ಎಂದು ಹಿಂದೂ ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ಈ ಸ್ಥಳದ ಪುರಾತತ್ವ ಸಮೀಕ್ಷೆಗೆ ಅನುಮತಿ ನೀಡಿದೆ.
ಅಯೋಧ್ಯೆಯ ನಂತರ ಕಾಶಿ (ವಾರಣಾಸಿ) ಮತ್ತು ಮಥುರಾ ವಿಷಯಗಳು ಅವರ ಅಜೆಂಡಾದಲ್ಲಿ ಪ್ರಮುಖವಾಗಿವೆ ಎಂಬುದಕ್ಕೆ ಇಲ್ಲಿ ಆದಿತ್ಯನಾಥ್ ಹೇಳಿಕೆಗಳು ಸ್ಪಷ್ಟ ಸೂಚನೆಯಾಗಿದೆ. ಏತನ್ಮಧ್ಯೆ, ಅಯೋಧ್ಯೆ ದೇವಸ್ಥಾನದ ಖಜಾಂಚಿ ಗೋವಿಂದ್ ದೇವ್ ಗಿರಿ ಮಹಾರಾಜ್ ಅವರು “ಕಾಶಿ ಮತ್ತು ಮಥುರಾವನ್ನು ಮುಕ್ತಗೊಳಿಸಿದ ನಂತರ ಹಿಂದೂಗಳು ದೇವಾಲಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಮರೆತುಬಿಡುತ್ತಾರೆ” ಎಂದು ಹೇಳಿದ ಕೆಲವೇ ದಿನಗಳಲ್ಲಿ ಈ ಹೇಳಿಕೆಗಳು ಬಂದಿವೆ.
ಆದಿತ್ಯನಾಥ್ ಅವರು ಅಯೋಧ್ಯೆಯು 5,000 ವರ್ಷಗಳಿಂದ “ಅನ್ಯಾಯ” ಅನುಭವಿಸಿದೆ ಎಂದು ಹೇಳಿದರು. ರಾಮನ ಜನ್ಮಸ್ಥಳವನ್ನು ಗುರುತಿಸುವ ದೇವಾಲಯದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ ಎಂದು ನಂಬಿದ ಬಲಪಂಥೀಯ ಕಾರ್ಯಕರ್ತರು 1992 ರಲ್ಲಿ ಅದನ್ನು ಕೆಡವುವ ಮೊದಲು 16 ನೇ ಶತಮಾನದ ಮಸೀದಿಯಾದ ಬಾಬರಿ ಮಸೀದಿ ಇದ್ದ ಸ್ಥಳದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರವು ಬರುತ್ತಿದೆ. 2019 ರಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ವಿವಾದಿತ ಭೂಮಿಯನ್ನು ದೇವಾಲಯ ನಿರ್ಮಾಣಕ್ಕಾಗಿ ಟ್ರಸ್ಟ್‌ಗೆ ಹಸ್ತಾಂತರಿಸಲಾಯಿತು.
ದೇಗುಲ ಉದ್ಘಾಟನಾ ದಿನದಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ ಆದಿತ್ಯನಾಥ್, “ದೇವಸ್ಥಾನದಲ್ಲಿ ನಮ್ಮ ಶ್ರೀಗಳು ತಮ್ಮ ಸ್ಥಾನವನ್ನು ಪಡೆದಿದ್ದಾರೆಂದು ನನಗೆ ಸಂತೋಷವಾಯಿತು. ನಾನು ಸಂತೋಷಪಟ್ಟಿದ್ದೇನೆ. ನಾವು ನಮ್ಮ ಭರವಸೆಯನ್ನು ಪೂರೈಸಿದ್ದೇವೆ, ‘ಮಂದಿರ’ ವಹೀ ಬನಾಯಾ’ (ಅಲ್ಲೇ ದ ದೇವಾಲಯವನ್ನು ನಿರ್ಮಿಸಲಾಗಿದೆ),” ಅವರು ಹೇಳಿದರು.
1990 ರ ದಶಕದಲ್ಲಿ ರಾಮ ಜನ್ಮಭೂಮಿ ಆಂದೋಲನವು ತೀವ್ರಗೊಂಡಾಗ ಬಲಪಂಥೀಯ ಕಾರ್ಯಕರ್ತರು ‘ಮಂದಿರ್ ವಹಿನ್ ಬನಾಯೇಂಗೆ’ ಘೋಷಣೆ ಕೂಗಿದ್ದರು.
ಆದಿತ್ಯನಾಥ್ ಅವರು ರಾಮಧಾರಿ ಸಿಂಗ್ ದಿನಕರ್ ಅವರ ಮಹಾಕಾವ್ಯವಾದ ರಶ್ಮಿರಥಿಯ ಕೆಲವು ಸಾಲುಗಳನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದು , ಇದರಲ್ಲಿ ಅವರು ಮಹಾಭಾರತದ ಪ್ರಮುಖ ಪಾತ್ರವಾದ ಕರ್ಣನ ಕಥೆಯನ್ನು ವಿವರಿಸುತ್ತಾರೆ.
ಕೃಷ್ಣ ಕಿ ಚೇತವಾಣಿ (ಕೃಷ್ಣನ ಎಚ್ಚರಿಕೆ) ಎಂಬ ಶೀರ್ಷಿಕೆಯ ರಶ್ಮಿರತಿಯಲ್ಲಿನ ಒಂದು ವಿಭಾಗವು ಕೌರವರು ಮತ್ತು ಪಾಂಡವರ ನಡುವಿನ ಯುದ್ಧವನ್ನು ತಪ್ಪಿಸಲು ಶ್ರೀಕೃಷ್ಣನ ಕೊನೆಯ ಪ್ರಯತ್ನವನ್ನು ವಿವರಿಸುತ್ತದೆ.
ಇದನ್ನೂ ಓದಿ: 100 ರಾಮ ಮಂದಿರಗಳ ಜೀರ್ಣೋದ್ಧಾರಕ್ಕೆ ಬಜೆಟ್ ನಲ್ಲಿ ಹಣಕ್ಕೆ ಪ್ರಸ್ತಾವನೆ ಸಲ್ಲಿಸಿದ ಧಾರ್ಮಿಕ ದತ್ತಿ ಇಲಾಖೆ
ಕೃಷ್ಣನು ಕೌರವರ ಬಳಿಗೆ ಹೋಗಿ ಸಂಧಾನದ ಒಪ್ಪಂದವನ್ನು ನೀಡಿದ್ದನು. ಆದರೆ ದುರ್ಯೋಧನ ನಿರಾಕರಿಸಿದ. ಅಯೋಧ್ಯೆ, ಕಾಶಿ ಮತ್ತು ಮಥುರಾದಲ್ಲಿ ನಡೆದಿರುವುದು ಇದೇ. ಕೃಷ್ಣ ಐದು ಗ್ರಾಮಗಳನ್ನು ಕೇಳಿದ್ದರು, ನಾವು ನಮ್ಮ ನಂಬಿಕೆಯ ಮೂರು ಕೇಂದ್ರಗಳನ್ನು ಕೇಳುತ್ತಿದ್ದೇವೆ. ಹಿಂದೂ ಬಹುಸಂಖ್ಯಾತರು ತಮ್ಮ ನಂಬಿಕೆಗಳಿಗಾಗಿ ವರ್ಷಗಳಿಂದ “ಮನವಿ” ಮಾಡಿದ್ದಾರೆ ಎಂದಿದ್ದಾರೆ ಆದಿತ್ಯನಾಥ್
ಈ ಪರಿಸ್ಥಿತಿಗೆ ಮತಬ್ಯಾಂಕ್ ರಾಜಕಾರಣವೇ ಕಾರಣ ಎಂದು ಆದಿತ್ಯನಾಥ್ ಆರೋಪಿಸಿದ್ದು, “ರಾಜಕೀಯ ಪ್ರಾರಂಭವಾದಾಗ ಮತ್ತು ಮತಗಳನ್ನು ನೋಡಿದಾಗ, ವಿವಾದ ಪ್ರಾರಂಭವಾಗುತ್ತದೆ” ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ