AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡಿಶಾ: ಪತ್ನಿ, ಅತ್ತೆಯನ್ನು ಕೊಂದು ಹೂತುಹಾಕಿ, ಮೇಲೆ ಬಾಳೆ ಗಿಡ ನೆಟ್ಟಿದ್ದ ವ್ಯಕ್ತಿ

ವ್ಯಕ್ತಿಯೊಬ್ಬ ಪತ್ನಿ ಹಾಗೂ ಅತ್ತೆಯನ್ನು ಕೊಂದು ಹೂತುಹಾಕಿ, ಅದರ ಮೇಲೆ ಬಾಳೆ ಗಿಡ ನೆಟ್ಟಿರುವ ಘಟನೆ ಒಡಿಶಾದ ಮಯೂರ್​​ಭಂಜ್​ನಲ್ಲಿ ನಡೆದಿದೆ. ಕೊಲೆ(Murder)ಯ ಹಿಂದಿನ ನಿಖರವಾದ ಉದ್ದೇಶ ಇನ್ನೂ ತಿಳಿದುಬಂದಿಲ್ಲವಾದರೂ, ಆರಂಭಿಕ ಪೊಲೀಸ್ ತನಿಖೆಯಲ್ಲಿ ದಂಪತಿ ಮಧ್ಯೆ ಸಾಕಷ್ಟು ಭಿನ್ನಾಭಿಪ್ರಾಯಗಳಿರುವುದು ತಿಳಿದುಬಂದಿದೆ. 23 ವರ್ಷದ ಸೋನಾಲಿ ದಲಾಲ್ ಅವರ ತಾಯಿ ಸುಮತಿ ದಲಾಲ್ ಅವರು ಜುಲೈ 12 ರಂದು ರಾಜಿ ಪ್ರಯತ್ನದಲ್ಲಿ ತನ್ನ ಮಗಳನ್ನು ಪತಿ ದೇಬಾಶಿಶ್ ಪಾತ್ರ ಅವರ ಮನೆಗೆ ಕರೆತಂದಿದ್ದರು.

ಒಡಿಶಾ: ಪತ್ನಿ, ಅತ್ತೆಯನ್ನು ಕೊಂದು ಹೂತುಹಾಕಿ, ಮೇಲೆ ಬಾಳೆ ಗಿಡ ನೆಟ್ಟಿದ್ದ ವ್ಯಕ್ತಿ
ಆರೋಪಿ
ನಯನಾ ರಾಜೀವ್
|

Updated on: Jul 31, 2025 | 3:04 PM

Share

ಒಡಿಶಾ, ಜುಲೈ 31: ವ್ಯಕ್ತಿಯೊಬ್ಬ ಪತ್ನಿ ಹಾಗೂ ಅತ್ತೆಯನ್ನು ಕೊಂದು ಹೂತುಹಾಕಿ, ಅದರ ಮೇಲೆ ಬಾಳೆ ಗಿಡ ನೆಟ್ಟಿರುವ ಘಟನೆ ಒಡಿಶಾದ ಮಯೂರ್​​ಭಂಜ್​ನಲ್ಲಿ ನಡೆದಿದೆ. ಕೊಲೆ(Murder)ಯ ಹಿಂದಿನ ನಿಖರವಾದ ಉದ್ದೇಶ ಇನ್ನೂ ತಿಳಿದುಬಂದಿಲ್ಲವಾದರೂ, ಆರಂಭಿಕ ಪೊಲೀಸ್ ತನಿಖೆಯಲ್ಲಿ ದಂಪತಿ ಮಧ್ಯೆ ಸಾಕಷ್ಟು ಭಿನ್ನಾಭಿಪ್ರಾಯಗಳಿರುವುದು ತಿಳಿದುಬಂದಿದೆ.

23 ವರ್ಷದ ಸೋನಾಲಿ ದಲಾಲ್ ಅವರ ತಾಯಿ ಸುಮತಿ ದಲಾಲ್ ಅವರು ಜುಲೈ 12 ರಂದು ರಾಜಿ ಪ್ರಯತ್ನದಲ್ಲಿ ತನ್ನ ಮಗಳನ್ನು ಪತಿ ದೇಬಾಶಿಶ್ ಪಾತ್ರ ಅವರ ಮನೆಗೆ ಕರೆತಂದಿದ್ದರು. ಜುಲೈ 19ರಂದು ಆಕೆಯ ಪತಿ ಪತ್ನಿ ಹಾಗೂ ಅತ್ತೆ ಇಬ್ಬರೂ ಮಲಗಿರುವಾಗ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾನೆ. ಪಾತ್ರಾ ಎರಡೂ ಶವಗಳನ್ನು ತನ್ನ ಮನೆಯ ಹಿಂದಿನ ನಿಂಬೆ ತೋಟಕ್ಕೆ ತೆಗೆದುಕೊಂಡು ಹೋಗಿ ಹೂತುಹಾಕಿದ್ದಾನೆ. ನಂತರ ಅನುಮಾನ ಬರದಂತೆ ಆ ಸ್ಥಳದಲ್ಲಿ ಬಾಳೆ ಗಿಡಗಳನ್ನು ನೆಟ್ಟಿದ್ದ.

ನಂತರ ಯಾರಿಗೂ ಅನುಮಾನ ಬರವಾರದೆಂದು ಪತ್ನಿ ಹಾಗೂ ಅತ್ತೆ ಕಾಣೆಯಾಗಿದ್ದಾರೆಂದು ಪೊಲೀಸ್​ ಠಾಣೆಗೆ ಹೋಗಿ ದೂರು ದಾಖಲಿಸಿದ್ದ.ಅತ್ತೆ ಮತ್ತು ಹೆಂಡತಿ ಮಗನನ್ನು ಬಿಟ್ಟು ಹೋಗಿದ್ದಾರೆ ಎಂದು ಹೇಳಿದ್ದ. ಆದರೆ ಯಾವುದೇ ನೋವು ಆತನ ಮುಖದಲ್ಲಿ ಕಂಡಿರಲಿಲ್ಲ. ಅದಾದ ಬಳಿಕ ಪಾತ್ರಾ ಹಾಗೂ ಅವರ ಮಗ ಯಾವುದೇ ಚಿಂತೆ ಇಲ್ಲದೆ ದಿನವನ್ನು ಕಳೆಯುತ್ತಿದ್ದರು.

ಮತ್ತಷ್ಟು ಓದಿ: ಉತ್ತರ ಪ್ರದೇಶ: ಪೋಷಕರು ಹಾಗೂ ಸಹೋದರಿಯನ್ನು ಕೊಡಲಿಯಿಂದ ಕಡಿದು ಹತ್ಯೆ ಮಾಡಿದ ವ್ಯಕ್ತಿ

ಇದು ಗ್ರಾಮಸ್ಥರು ಹಾಗೂ ಪೊಲೀಸರಲ್ಲಿ ಅನುಮಾನ ಹುಟ್ಟು ಹಾಕಿತ್ತು.ನಂತರ ಅವರ ನಿಂಬೆ ತೋಟದಲ್ಲಿನ ಮಣ್ಣು ಸಡಿಲವಾಗಿರುವುದನ್ನು ಮತ್ತು ಅಲ್ಲಿ ಹೊಸ ಬಾಳೆ ಮರಗಳನ್ನು ನೆಡಲಾಗಿರುವುದನ್ನು ಊರಿನ ಜನರು ಗಮನಿಸಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಪತ್ರಾ ಅವರನ್ನು ಪ್ರಶ್ನಿಸಿದಾಗ, ಅವರು ಅಪರಾಧವನ್ನು ಒಪ್ಪಿಕೊಂಡರು ಮತ್ತು ಪೊಲೀಸರನ್ನು ಸಮಾಧಿ ಸ್ಥಳಕ್ಕೆ ಕರೆದೊಯ್ದರು. ಕೊಳೆತ ಶವಗಳು ತೋಟದಲ್ಲಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ