20 ಲಕ್ಷ ರೂ. ಕದ್ದು ಹಸುವಿನ ಸಗಣಿಯಲ್ಲಿ ಬಚ್ಚಿಟ್ಟಿದ್ದ ವ್ಯಕ್ತಿ

ಕಳ್ಳ ಚಾಪೆ ಕೆಳಗೆ ನುಸುಳಿದರೆ ಪೊಲೀಸರು ರಂಗೋಲಿ ಕೆಳಗೆ ನುಸುಳುತ್ತಾರೆ ಎಂಬುದು ಅಕ್ಷರಶಃ ಸತ್ಯ. ವ್ಯಕ್ತಿಯೊಬ್ಬ 20 ಲಕ್ಷ ರೂ. ಕಳವು ಮಾಡಿದ್ದ ಬೇರೆಲ್ಲಾದರೂ ಇಟ್ಟರೆ ಸಿಕ್ಕಿಬೀಳಬಹುದು ಎನ್ನುವ ಭಯದಲ್ಲಿ ಹಸುವಿನ ಸಗಣಿಯೊಳಗೆ ಮುಚ್ಚಿಟ್ಟಿದ್ದ, ಆದರೂ ಪೊಲೀಸರ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.

ಸಗಣಿ
Follow us
ನಯನಾ ರಾಜೀವ್
|

Updated on: Nov 17, 2024 | 9:53 AM

ಕಳ್ಳ ಚಾಪೆ ಕೆಳಗೆ ನುಸುಳಿದರೆ ಪೊಲೀಸರು ರಂಗೋಲಿ ಕೆಳಗೆ ನುಸುಳುತ್ತಾರೆ ಎಂಬುದು ಅಕ್ಷರಶಃ ಸತ್ಯ. ವ್ಯಕ್ತಿಯೊಬ್ಬ 20 ಲಕ್ಷ ರೂ. ಕಳವು ಮಾಡಿದ್ದ ಬೇರೆಲ್ಲಾದರೂ ಇಟ್ಟರೆ ಸಿಕ್ಕಿಬೀಳಬಹುದು ಎನ್ನುವ ಭಯದಲ್ಲಿ ಹಸುವಿನ ಸಗಣಿಯೊಳಗೆ ಮುಚ್ಚಿಟ್ಟಿದ್ದ, ಆದರೂ ಪೊಲೀಸರ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.

ಹಸುವಿನ ಸಗಣಿಯ ರಾಶಿಯಲ್ಲಿ ಭಾರಿ ಮೊತ್ತದ ಹಣ ಪತ್ತೆಯಾಗಿದೆ ಒಡಿಶಾದ ಬಾಲಾಸೋರ್​ನಲ್ಲಿ ಘಟನೆ ನಡೆದಿದೆ. ಕಮರ್ದ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಬಡಮಂಡರುಣಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೈದರಾಬಾದ್ ಮತ್ತು ಒಡಿಶಾದ ಪೊಲೀಸ್ ಅಧಿಕಾರಿಗಳ ತಂಡ ಗ್ರಾಮಕ್ಕೆ ತಲುಪಿ ಆರೋಪಿ ಗೋಪಾಲ್ ಬೆಹೆರಾ ಅವರ ಅತ್ತೆಯ ಮನೆಯ ಮೇಲೆ ದಾಳಿ ನಡೆಸಿದರು.

ಆರೋಪಿ ಗೋಪಾಲ್ ಸದ್ಯ ತಪ್ಪಿಸಿಕೊಂಡಿದ್ದು, ಹೈದರಾಬಾದ್‌ನ ಕೃಷಿ ಆಧಾರಿತ ಕಂಪನಿಯ ಮಾಲೀಕನಿಂದ 20 ಲಕ್ಷಕ್ಕೂ ಹೆಚ್ಚು ಕಳ್ಳತನ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ.

ಆರೋಪಿ ಕದ್ದ ಹಣವನ್ನು ಮಾವನ ಕೈಗೆ ಕೊಟ್ಟಿದ್ದ ಗೋಪಾಲ್ ತನ್ನ ಸೋದರ ಮಾವ ರವೀಂದ್ರ ಬೆಹೆರಾ ಮೂಲಕ ಕದ್ದ ಹಣವನ್ನು ತನ್ನ ಗ್ರಾಮಕ್ಕೆ ವರ್ಗಾಯಿಸಲು ಯೋಜಿಸಿದ್ದ. ಕಮರ್ದಾ ಪೊಲೀಸರೊಂದಿಗೆ ರವೀಂದ್ರ ಅವರ ನಿವಾಸದಲ್ಲಿ ಶೋಧ ನಡೆಸಿದರು, ಹಸುವಿನ ಸಗಣಿಯಲ್ಲಿ ಬಚ್ಚಿಟ್ಟಿದ್ದ ಹಣವನ್ನು ಕೊನೆಗೂ ಪತ್ತೆ ಹಚ್ಚಿದ್ದಾರೆ.

ಗೋಪಾಲ್ ಮತ್ತು ರವೀಂದ್ರ ಇಬ್ಬರೂ ತಲೆಮರೆಸಿಕೊಂಡಿದ್ದಾರೆ ಎಂದು ಕಮರ್ದಾ ಪೊಲೀಸ್ ಠಾಣೆಯ ಐಐಸಿ ಪ್ರೇಮದ ನಾಯಕ್ ಹೇಳಿದ್ದಾರೆ. ಆರೋಪಿಯ ಕುಟುಂಬದ ಸದಸ್ಯರನ್ನು ಗ್ರಾಮದಿಂದ ಬಂಧಿಸಲಾಗಿದ್ದು, ಸಕ್ರಿಯ ತನಿಖೆ ಮುಂದುವರೆದಿದ್ದು, ಗೋಪಾಲ್‌ಗಾಗಿ ಹುಡುಕಾಟ ಮುಂದುವರೆದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ