Omicron Variant: ಭಾರತದಲ್ಲಿ ಒಮಿಕ್ರಾನ್ ಹೊಸ ರೂಪಾಂತರಿ BA.4, BA.5 ಪತ್ತೆ; ಇದು ಕೊವಿಡ್ 4ನೇ ಅಲೆಯ ಮುನ್ಸೂಚನೆಯಾ?

| Updated By: ಸುಷ್ಮಾ ಚಕ್ರೆ

Updated on: May 24, 2022 | 1:08 PM

ತಮಿಳುನಾಡು ಮತ್ತು ತೆಲಂಗಾಣದಲ್ಲಿ ಒಮಿಕ್ರಾನ್​ ಬಿಎ.4, ಬಿಎ.5ನ ಪ್ರಕರಣ ದಾಖಲಾಗಿದೆ. ತಮಿಳುನಾಡು ಮತ್ತು ತೆಲಂಗಾಣದಲ್ಲಿ ಎರಡು ಬಿಎ.4 ಪ್ರಕರಣಗಳು ಪತ್ತೆಯಾಗಿದ್ದರೆ, ತೆಲಂಗಾಣದಲ್ಲೂ ಬಿಎ.5 ಪತ್ತೆಯಾಗಿದೆ.

Omicron Variant: ಭಾರತದಲ್ಲಿ ಒಮಿಕ್ರಾನ್ ಹೊಸ ರೂಪಾಂತರಿ BA.4, BA.5 ಪತ್ತೆ; ಇದು ಕೊವಿಡ್ 4ನೇ ಅಲೆಯ ಮುನ್ಸೂಚನೆಯಾ?
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಒಂದೆಡೆ ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಕೇಸುಗಳು (Coronavirus Cases) ಮತ್ತೆ ಏರಿಕೆಯಾಗುತ್ತಿದೆ. ಇದರ ಜೊತೆಗೆ ಇನ್ನೊಂದು ಆತಂಕಕಾರಿ ವಿಷಯ ಹೊರಬಿದ್ದಿದ್ದು, ಭಾರತದಲ್ಲಿ ಒಮಿಕ್ರಾನ್ (Omicron Variant) ಹೊಸ ರೂಪಾಂತರಿಯಾದ BA.4 ಮತ್ತು BA.5 ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಭಾರತದಲ್ಲಿ ಕೊವಿಡ್ 4ನೇ ಅಲೆ (Covid-19 4th Wave) ಶುರುವಾಗಲಿದೆಯಾ? ಎಂಬ ಅನುಮಾನ, ಆತಂಕ ಮತ್ತೆ ಹೆಚ್ಚಾಗಿದೆ. ತಮಿಳುನಾಡು ಮತ್ತು ತೆಲಂಗಾಣದಲ್ಲಿ ಒಮಿಕ್ರಾನ್​ ಬಿಎ.4, ಬಿಎ.5ನ ಪ್ರಕರಣ ದಾಖಲಾಗಿದೆ. ತಮಿಳುನಾಡು ಮತ್ತು ತೆಲಂಗಾಣದಲ್ಲಿ ಎರಡು ಬಿಎ.4 ಪ್ರಕರಣಗಳು ಪತ್ತೆಯಾಗಿದ್ದರೆ, ತೆಲಂಗಾಣದಲ್ಲೂ ಬಿಎ.5 ಪತ್ತೆಯಾಗಿದೆ.

ಚೆನ್ನೈನಲ್ಲಿ ಮೇ ತಿಂಗಳ ಆರಂಭದಲ್ಲಿ ಮತ್ತು ಅಂತಾರಾಷ್ಟ್ರೀಯ ಪ್ರಯಾಣದ ಇತಿಹಾಸವಿಲ್ಲದ 19 ವರ್ಷದ ಮಹಿಳೆಗೆ BA.4 ಸೋಂಕು ತಗುಲಿರುವುದು ದೃಢಪಟ್ಟಿದೆ. ಆಕೆಗೆ ಎರಡೂ ಡೋಸ್‌ಗಳೊಂದಿಗೆ ಸಂಪೂರ್ಣವಾಗಿ ಲಸಿಕೆಯನ್ನು ನೀಡಲಾಗಿತ್ತು. ಆದರೂ ಹೊಸ ರೂಪಾಂತರಿ ತಗುಲಿದೆ. ಹಾಗೇ, ಹೈದರಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾದ ಪ್ರಯಾಣಿಕರಿಂದ ವಿಮಾನ ನಿಲ್ದಾಣದಲ್ಲಿ ಪರಿಶೀಲಿಸಿದಾಗ ವ್ಯಕ್ತಿಯೊಬ್ಬರಿಗೆ BA.4 ಸೋಂಕು ದೃಢಪಟ್ಟಿದೆ. ಹಾಗೇ, ಹೈದರಾಬಾದ್‌ನ 80 ವರ್ಷದ ವ್ಯಕ್ತಿಯಲ್ಲಿ BA.5 ಸೋಂಕು ಪತ್ತೆಯಾಗಿದೆ. ಅವರು ಕೂಡ 2 ಡೋಸ್ ಕೊವಿಡ್ ಲಸಿಕೆ ಪಡೆದಿದ್ದರು.

ಕೊವಿಡ್ 4ನೇ ಅಲೆ ಜುಲೈ ಮತ್ತು ಸೆಪ್ಟೆಂಬರ್ ನಡುವೆ ಮುಂಬೈಗೆ ಅಪ್ಪಳಿಸಬಹುದು ಎಂದು ಈ ಹಿಂದೆ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಕಮಿಷನರ್ ಇಕ್ಬಾಲ್ ಚಹಾಲ್ ಭವಿಷ್ಯ ನುಡಿದಿದ್ದಾರೆ. ಆದರೂ ಇದು ಸಾಮಾನ್ಯ ಜೀವನದ ಮೇಲೆ ಪರಿಣಾಮ ಬೀರುವುದಿಲ್ಲ. ಕೊರೋನಾವೈರಸ್‌ನ ಮುಂದಿನ ಅಲೆಯು ಮೂರನೇ ಅಲೆಗಿಂತಲೂ ಸೌಮ್ಯವಾಗಿರುತ್ತದೆ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕೊವಿಡ್ 4ನೇ ಅಲೆಯಿಂದ ಲಾಕ್‌ಡೌನ್‌ಗಳ ಅಗತ್ಯವಿರುವುದಿಲ್ಲ ಎಂದು ಚಹಾಲ್ ಹೇಳಿದ್ದಾರೆ.

ಇದನ್ನೂ ಓದಿ
ಪಿಎಫ್​ಐ ರ್‍ಯಾಲಿಯಲ್ಲಿ ಹಿಂದೂ-ಕ್ರಿಶ್ಚಿಯನ್ನರ ವಿರುದ್ಧ ಘೋಷಣೆ: ಒಬ್ಬನ ಬಂಧನ, ನಾಯಕರ ವಿರುದ್ಧ ದೂರು ದಾಖಲು
ಮದರಸಾಗಳು ಆರ್​ಎಸ್​ಎಸ್​ ಶಾಖೆಗಳಂತೆ ಅಲ್ಲ: ಅಸ್ಸಾಂ ಸಿಎಂಗೆ ತಿರುಗೇಟು ಕೊಟ್ಟ ಅಸಾದುದ್ದೀನ್ ಓವೈಸಿ
Petrol Price Today: ಇಂಧನ ದರ ಸ್ಥಿರ; ಬೆಂಗಳೂರಿನಲ್ಲಿ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ

ಇದನ್ನೂ ಓದಿ: ಹೊಸ ಒಮಿಕ್ರಾನ್ ರೂಪಾಂತರಿ ರೋಗನಿರೋಧಕ ಶಕ್ತಿಯನ್ನು ಕಡಿಮೆಗೊಳಿಸಿ, ಕೊರೊನಾ ಅಲೆಯನ್ನು ಪ್ರಚೋದಿಸಬಹುದು

ಮೊದಲು ತೆಲಂಗಾಣದಲ್ಲಿ ಒಮಿಕ್ರಾನ್​ ಬಿಎ.4 ರೂಪಾಂತರಿ​ ಪತ್ತೆಯಾಗಿತ್ತು. ಅದರ ಮರುದಿನವೇ ತಮಿಳುನಾಡಿನಲ್ಲಿ ಒಮಿಕ್ರಾನ್‌ನ ಬಿಎ.4 ಉಪ ರೂಪಾಂತರಿ ಪ್ರಕರಣ ವರದಿಯಾಗಿದೆ. ಒಮಿಕ್ರಾನ್‌ನ ರೂಪಾಂತರಿ BA.4 ಪ್ರಕರಣವು ಚೆನ್ನೈ ಬಳಿಯ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ದಾಖಲಾಗಿದೆ. ಈ ಕುಟುಂಬದಲ್ಲಿ ಎರಡು ಕೋವಿಡ್-19 ಪಾಸಿಟಿವ್ ಪ್ರಕರಣಗಳಿದ್ದವು. ಮೇ 4ರಂದು ತಾಯಿ ಮತ್ತು ಅವರ ಮಗಳು ಕೋವಿಡ್​ ಟೆಸ್ಟ್​ ಮಾಡಿಸಿಕೊಂಡಿದ್ದರು. ಈ ವೇಳೆ, ಅವರಿಗೆ ಒಮಿಕ್ರಾನ್​ BA.4 ರೂಪಾಂತರಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಬ್ಬರಿಗೂ ಎರಡು ಡೋಸ್ ಕೊರೊನಾ ಲಸಿಕೆ​ ಹಾಕಲಾಗಿದೆ. ಆದರೂ ಒಬ್ಬರಲ್ಲಿ ಒಮಿಕ್ರಾನ್​ನ ರೂಪಾಂತರಿ ವೈರಸ್ ಪತ್ತೆಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್​ ಹಬ್ಬಲು ಕಾರಣವಾಗಿರುವ ಓಮಿಕ್ರಾನ್ ಉಪ ತಳಿಗಳ ಪೈಕಿ BA.4 ಕೂಡ ಒಂದಾಗಿದೆ. ಭಾರತದಲ್ಲಿ ಕೋವಿಡ್​ ಲಸಿಕೆ ಹೆಚ್ಚಿನ ಸಂಖ್ಯೆಯಲ್ಲಿ ಹಾಕಿರುವ ಕಾರಣ ಈ ರೂಪಾಂತರಿ ಹರಡುವ ಸಾಧ್ಯತೆ ತೀರಾ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದರಿಂದ ಕೊಂಚ ನಿಟ್ಟುಸಿರು ಬಿಡುವಂತಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:05 pm, Tue, 24 May 22