Coronavirus India Update: ಭಾರತದಲ್ಲಿ ಒಂದೇ ದಿನ 1.26 ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ; ಮಹಾರಾಷ್ಟ್ರದಲ್ಲಿ ಗರಿಷ್ಠ
Covid-19 Cases In India: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 1,26,789 ಹೊಸ ಕೊವಿಡ್ ಪ್ರಕರಣಗಳು ವರದಿಯಾಗಿದ್ದು, 59,258 ಮಂದಿ ಚೇತರಿಸಿಕೊಂಡಿದ್ದಾರೆ. 685 ಮಂದಿ ಮೃತ ಪಟ್ಟಿದ್ದು ಮೃತರ ಸಂಖ್ಯೆ 1,66,862ಕ್ಕೇರಿದೆ.
ದೆಹಲಿ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 1,26,789 ಹೊಸ ಕೊವಿಡ್ ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಸೋಂಕಿತರಿದ್ದು, ಛತ್ತೀಸಗಡದಲ್ಲಿ ಇದೇ ಮೊದಲ ಬಾರಿ ಸೋಂಕಿತರ ಸಂಖ್ಯೆ 10,000 ಗಡಿದಾಟಿದೆ. ದೇಶದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತರ ಸಂಖ್ಯೆ 1,29,28,574ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಹೇಳಿವೆ. ಈ ಪೈಕಿ 8,43,473 ಸಕ್ರಿಯ ಪ್ರಕರಣಗಳಿದ್ದು 1,18,51,393 ಮಂದಿ ಚೇತರಿಸಿಕೊಂಡಿದ್ದಾರೆ. ಇಲ್ಲಿಯವರೆಗೆ 1,66,862 ಮಂದಿ ಸಾವಿಗೀಡಾಗಿದ್ದಾರೆ. 9,01,98,673 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ 59,258 ಮಂದಿ ಚೇತರಿಸಿಕೊಂಡಿದ್ದು 685 ಮಂದಿ ಮೃತಪಟ್ಟಿದ್ದಾರೆ.
India reports 1,26,789 new #COVID19 cases, 59,258 discharges, and 685 deaths in the last 24 hours, as per the Union Health Ministry
Total cases: 1,29,28,574 Total recoveries: 1,18,51,393 Active cases: 9,10,319 Death toll: 1,66,862
Total vaccination: 9,01,98,673 pic.twitter.com/EDiGfB5kA3
— ANI (@ANI) April 8, 2021
ನಾಲ್ಕು ದಿನಗಳ ಅವಧಿಯಲ್ಲಿ ಹೊಸ ಕೊವಿಡ್ ಪ್ರಕರಣಗಳ ಸಂಖ್ಯೆ ಮೂರು ಬಾರಿ 1ಲಕ್ಷದ ಗಡಿದಾಟಿದೆ. ಫೆಬ್ರವರಿ 12ರಂದು ಅತೀ ಕಡಿಮೆ ಸಕ್ರಿಯ ಪ್ರಕರಣಗಳು ಅಂದರೆ 1,35,926ಪ್ರಕರಣಗಳು ವರದಿಯಾಗಿತ್ತು.
ಮಹಾರಾಷ್ಟ್ರದಲ್ಲಿ 59,907 ಹೊಸ ಕೊವಿಡ್ ಪ್ರಕರಣ ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 59,907 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿನ ಥಾಣೆ ಜಿಲ್ಲೆಯಲ್ಲಿ 6,290 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 3,56,267ಕ್ಕೇರಿದೆ. 21ಮಂದಿ ಸೋಂಕಿತರು ಮೃತಪಟ್ಟಿದ್ದರು, ಮೃತರ ಸಂಖ್ಯೆ 6,620ಕ್ಕೇರಿದೆ. ಥಾಣೆಯಲ್ಲಿ ಮೃತರ ಸಾವಿನ ಸಂಖ್ಯೆಯ ಪ್ರಮಾಣ ಶೇಕಡಾ1.86ಆಗಿದೆ. ಇಲ್ಲಿಯವರೆಗೆ 3,02,521ಮಂದಿ ಚೇತರಿಸಿಕೊಂಡಿದ್ದು ಚೇತರಿಕೆಯ ಪ್ರಮಾಣ ಶೇಕಡಾ 84.91ಆಗಿದೆ. ಪಲ್ಘಾರ್ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 54,813ಕ್ಕೇರಿದ್ದು 1,247 ಮಂದಿ ಮೃತಪಟ್ಟಿದ್ದಾರೆ.
ಕಳೆದ 24 ಗಂಟೆಗಳಲ್ಲಿ 12 ಲಕ್ಷ ಮಂದಿಗೆ ಕೊವಿಡ್ ಪರೀಕ್ಷೆ ಏಪ್ರಿಲ್ 7ರವರೆಗೆ 25,26,77,379 ಮಾದರಿಗಳನ್ನು ಕೊವಿಡ್ ಪರೀಕ್ಷೆಗೊಳಪಡಿಸಲಾಗಿದೆ. ಈ ಪೈಕಿ ಬುಧವಾರ 12,37,781 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಹೇಳಿದೆ.
25,26,77,379 samples tested for #COVID19, up to 7th April. Of these, 12,37,781 samples were tested yesterday: Indian Council of Medical Research (ICMR) pic.twitter.com/iTwadJGsUD
— ANI (@ANI) April 8, 2021
More than 9 crore COVID19 vaccine doses administered, till now: Ministry of Health pic.twitter.com/sR7PtMhbBu
— ANI (@ANI) April 8, 2021
9 ಕೋಟಿಗಿಂತಲೂ ಹೆಚ್ಚು ಮಂದಿಗೆ ಲಸಿಕೆ ಇಲ್ಲಿಯವರೆಗೆ 9 ಕೋಟಿಗಿಂತಲೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
IMA has called for universal vaccination. Several CMs have demanded universal vaccination. Yet the central government says there is no need for universal vaccination
The need of the hour is walk-in vaccination to all age groups without any pre-registration
— P. Chidambaram (@PChidambaram_IN) April 7, 2021
ಎಲ್ಲರಿಗೂ ಲಸಿಕೆ ನೀಡಿ: ಪಿ.ಚಿದಂಬರಂ ಟ್ವೀಟ್ ಭಾರತೀಯ ವೈದ್ಯಕೀಯ ಸಂಘಟನೆ (IMA) ಸಾರ್ವತ್ರಿಕ ಲಸಿಕೆ ವಿತರಣೆಗೆ ಕರೆ ನೀಡಿದೆ. ಹಲವಾರು ಮುಖ್ಯಮಂತ್ರಿಗಳು ಸಾರ್ವತ್ರಿಕ ಲಸಿಕೆ ನೀಡುವಂತೆ ಒತ್ತಾಯಿಸಿದ್ದಾರೆ. ಇನ್ನೂ ಸಾರ್ವತ್ರಿಕ ವ್ಯಾಕ್ಸಿನೇಷನ್ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಯಾವುದೇ ಪೂರ್ವ-ನೋಂದಣಿ ಇಲ್ಲದೆ ಎಲ್ಲಾ ವಯಸ್ಸಿನವರಿಗೆ ವಾಕ್-ಇನ್ ಲಸಿಕೆ ನೀಡುವುದು ಈ ಸಮಯದ ತುರ್ತು ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಕೊವಿಡ್ ಲಸಿಕೆಯ 2ನೇ ಡೋಸ್ ಪಡೆದ ಪ್ರಧಾನಿ ನರೇಂದ್ರ ಮೋದಿ
(One day High India records 126789 New cases of the Coronavirus 685 deaths in the last 24 hours)
Published On - 10:50 am, Thu, 8 April 21