ಆಪರೇಷನ್ ಅಜಯ್: ಯುದ್ಧ ಪೀಡಿತ ಇಸ್ರೇಲ್‌ನಿಂದ 286 ಪ್ರಯಾಣಿಕರನ್ನು ಕರೆ ತರಲಿದೆ ಐದನೇ ವಿಮಾನ
Operation Ajay: ಮಂಗಳವಾರ, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು, ಅಗತ್ಯವಿದ್ದರೆ ಮುಂಬರುವ ಪರಿಸ್ಥಿತಿಯ ಆಧಾರದ ಮೇಲೆ ಹೆಚ್ಚಿನ ವಿಮಾನಗಳನ್ನು ನಿರ್ವಹಿಸಲಾಗುವುದು ಎಂದು ಹೇಳಿದರು. ಹೊಸದಾಗಿ, 5 ವಿಮಾನಗಳು ಬಂದಿವೆ. ಅಗತ್ಯವಿದ್ದಲ್ಲಿ ನಾವು ಪರಿಸ್ಥಿತಿಯನ್ನು ನೋಡಿಕೊಂಡು ಹೆಚ್ಚಿನ ವಿಮಾನಗಳನ್ನು ನಿರ್ವಹಿಸುತ್ತೇವೆ ಎಂದಿದ್ದಾರೆ ಅವರು.
ದೆಹಲಿ ಅಕ್ಟೋಬರ್ 17: ಯುದ್ಧಪೀಡಿತ ಇಸ್ರೇಲ್‌ನಿಂದ (Israel) ನೇಪಾಳದ 18 ನಾಗರಿಕರು ಸೇರಿದಂತೆ ಇನ್ನೂ 286 ಪ್ರಯಾಣಿಕರನ್ನು ಭಾರತವು ‘ಆಪರೇಷನ್ ಅಜಯ್’ (Operation Ajay) ಅಡಿಯಲ್ಲಿ ಕರೆತರುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ (S Jaishankar) ಮಂಗಳವಾರ ಹೇಳಿದ್ದಾರೆ.18 ನೇಪಾಳದ ನಾಗರಿಕರಲ್ಲಿ ಕೆಲವರು ಕಷ್ಟಕರ ವಲಯಗಳಲ್ಲಿ ಉಳಿದುಕೊಂಡಿದ್ದಾರೆ ಮತ್ತು ಇತರರು ಹಿಂತಿರುಗಲು ಬಯಸಿದ್ದಾರೆ ಎಂದು ಇಸ್ರೇಲ್‌ಗೆ ನೇಪಾಳದ ರಾಯಭಾರಿ ಕಾಂತಾ ರಿಜಾಲ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ನಾವು ಅಕ್ಟೋಬರ್ 12 ರಂದು ನೇಪಾಳ ಏರ್‌ಲೈನ್ಸ್‌ನಲ್ಲಿ 254 ನೇಪಾಳದ ನಾಗರಿಕರನ್ನು ಕಳುಹಿಸಿದ್ದೇವೆ. ಅವರನ್ನು ಹೊರಗೆ ಕರೆದೊಯ್ಯಲು ಹೆಚ್ಚಿನ ವಿಮಾನಗಳನ್ನು ವ್ಯವಸ್ಥೆ ಮಾಡಲು ನೋಡಬಹುದು ಎಂದು ಅವರು ಹೇಳಿದ್ದಾರೆ.
#OperationAjay update.
286 more passengers are coming back to India.
Also carrying 18 Nepalese citizens. pic.twitter.com/InoQVXQMUZ
— Dr. S. Jaishankar (@DrSJaishankar) October 17, 2023
ಪ್ಯಾಲೆಸ್ತೀನಿಯನ್ ಉಗ್ರಗಾಮಿ ಗುಂಪು ಹಮಾಸ್‌ನೊಂದಿಗಿನ ಯುದ್ಧದ ಮಧ್ಯೆ ಇರುವ ಇಸ್ರೇಲ್‌ನಿಂದ ಭಾರತೀಯ ಪ್ರಜೆಗಳಿಗೆ ಮರಳಲು ಅನುಕೂಲವಾಗುವಂತೆ ಅಕ್ಟೋಬರ್ 11 ರಂದು ಭಾರತವು ‘ಆಪರೇಷನ್ ಅಜಯ್’ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐದನೇ ವಿಮಾನವಾಗಿದೆ ಇದು.
ಮಂಗಳವಾರ, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ (MoS) ವಿ ಮುರಳೀಧರನ್ ಅವರು, ಅಗತ್ಯವಿದ್ದರೆ ಮುಂಬರುವ ಪರಿಸ್ಥಿತಿಯ ಆಧಾರದ ಮೇಲೆ ಹೆಚ್ಚಿನ ವಿಮಾನಗಳನ್ನು ನಿರ್ವಹಿಸಲಾಗುವುದು ಎಂದು ಹೇಳಿದರು. ಹೊಸದಾಗಿ, 5 ವಿಮಾನಗಳು ಬಂದಿವೆ. ಅಗತ್ಯವಿದ್ದಲ್ಲಿ ನಾವು ಪರಿಸ್ಥಿತಿಯನ್ನು ನೋಡಿಕೊಂಡು ಹೆಚ್ಚಿನ ವಿಮಾನಗಳನ್ನು ನಿರ್ವಹಿಸುತ್ತೇವೆ. ಕಳೆದ, ಸುಮಾರು 4-5 ದಿನಗಳಲ್ಲಿ, ನಾವು ಇಸ್ರೇಲ್‌ನಿಂದ ಭಾರತಕ್ಕೆ ವಿಮಾನದಲ್ಲಿ ಪ್ರಯಾಣಿಕರನ್ನು ಕರೆತಂದಿದ್ದೇವೆ ಎಂದು ಸಚಿವರು ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
ಇಸ್ರೇಲ್‌ನಲ್ಲಿ ಘರ್ಷಣೆ ಭುಗಿಲೆದ್ದಿದೆ, ಭಾರತೀಯ ರಾಯಭಾರ ಕಚೇರಿ ಸಲಹೆಯನ್ನು ನೀಡಿದೆ. ಅಲ್ಲಿನ ಭಾರತೀಯ ನಾಗರಿಕರು ಜಾಗರೂಕರಾಗಿರಲು ಮತ್ತು ಭಾರತೀಯ ರಾಯಭಾರ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು ವಿನಂತಿಸಿದೆ ಎಂದು ಮುರಳೀಧರನ್ ಹೇಳಿದ್ದಾರೆ.
ಇದನ್ನೂ ಓದಿ: ದುಬೆ, ಸುಪ್ರೀಂ ವಕೀಲ ದೇಹದ್ರಾಯ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಮಹುವಾ ಮೊಯಿತ್ರಾ
ಭಾರತೀಯ ರಾಯಭಾರ ಕಚೇರಿಯು ಜನರ ಕೋರಿಕೆಗಳು ಮತ್ತು ಅಲ್ಲಿ ಪರಿಸ್ಥಿತಿಯ ಆಧಾರದ ಮೇಲೆ ಎಲ್ಲರೂ ಭಾರತಕ್ಕೆ ಪ್ರಯಾಣಿಸಬೇಕೆಂದು ವಿನಂತಿಸಿದೆ ಎಂದು ಅವರು ಹೇಳಿದರು.
ಕಳೆದ ವಾರ, ಟೆಲ್ ಅವಿವ್‌ನಿಂದ ನಾಲ್ಕು ಚಾರ್ಟರ್ಡ್ ವಿಮಾನಗಳು ಮಕ್ಕಳು ಸೇರಿದಂತೆ ಒಟ್ಟು 906 ಪ್ರಯಾಣಿಕರನ್ನು ಕರೆತಂದಿದ್ದವು. ಅಲ್ಲಿನ ಆರೋಗ್ಯ ಸಚಿವಾಲಯದ ಪ್ರಕಾರ ಗಾಜಾದಲ್ಲಿ ಕನಿಷ್ಠ 2,778 ಜನರು ಸಾವಿಗೀಡಾಗಿದ್ದು ,9,700 ಮಂದಿ ಗಾಯಗೊಂಡಿದ್ದಾರೆ. ಹಮಾಸ್‌ನ ಅಕ್ಟೋಬರ್ 7 ರ ದಾಳಿಯಲ್ಲಿ 1,400 ಕ್ಕೂ ಹೆಚ್ಚು ಇಸ್ರೇಲಿಗಳು ಸಾವಿಗೀಡಾಗಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:32 pm, Tue, 17 October 23