ಪಾಕ್​ಗೆ ಬೆಂಬಲವಾಗಿ ನಿಂತ ಚೀನಾ ಕಳ್ಳಾಟ ಬಟಾಬಯಲು, ಇಲ್ಲಿವೆ 10 ಪ್ರಮುಖ ಸಾಕ್ಷ್ಯಗಳು

ಭಾರತ ಹಾಗೂ ಪಾಕಿಸ್ತಾನದ ನಡುವಿನ ಯುದ್ಧಕ್ಕೆ ಈಗ ಬ್ರೇಕ್‌ ಬಿದ್ದಿದೆ. ಸುಮಾರು ಮೂರ್ನಾಲ್ಕು ದಿನ ನಡೆದ ಸಮರದಲ್ಲಿ ಪಾಕಿಸ್ತಾನ ಒಂದು ಅಂಡರ್‌ಸ್ಟ್ಯಾಂಡಿಂಗ್‌ಗೆ ಬಂದು ಭಾರತದ ಜೊತೆಗೆ ಕದನ ವಿರಾಮ ಮಾಡಿಕೊಂಡಿದೆ. ಇನ್ನು ಈ ಸಮರದಲ್ಲಿ ಪಾಕಿಸ್ತಾನ ನಲುಗಿ ಹೋಗಿದೆ. ಭಾರತದ ದಾಳಿಗೆ ಪಾಕ್​ನ ವಾಯುನೆಲೆಗಳು, ಉಗ್ರರ ನೆಲೆಗಳು ಧ್ವಂಸಗೊಂಡಿವೆ. ಇನ್ನು ಭಾರತದ ನೆರರಾಷ್ಟ್ರ ಚೀನಾ ಪಾಕ್​ಗೆ ಬೆಂಬಲಿಸಿದ್ದು, ಅದಕ್ಕೆ ಹತ್ತು ಸಾಕ್ಷ್ಯಗಳು ಸಿಕ್ಕಿವೆ. ಅವು ಯಾವುವು ಎನ್ನುವ ವಿವರ ಇಲ್ಲಿದೆ.

ಪಾಕ್​ಗೆ ಬೆಂಬಲವಾಗಿ ನಿಂತ ಚೀನಾ ಕಳ್ಳಾಟ ಬಟಾಬಯಲು, ಇಲ್ಲಿವೆ 10 ಪ್ರಮುಖ ಸಾಕ್ಷ್ಯಗಳು
China And Pakistan
Updated By: ರಮೇಶ್ ಬಿ. ಜವಳಗೇರಾ

Updated on: May 16, 2025 | 8:56 PM

ನದೆಹಲಿ, (ಮೇ 16): ಭಯೋತ್ಪಾದಕರಿಗೆ (terrorists )ಬೆಂಬಲ ನೀಡುವ ಮೂಲಕ ಭಾರತದ (India) ವಿರುದ್ಧ ಕತ್ತಿಮಸೆಯುವ ಪಾಕಿಸ್ತಾನದ (Pakistan) ಕಿತಾಪತಿ ಒಂದೆಡೆಯಾದ್ರೆ ಪಾಕಿಸ್ತಾನಕ್ಕೆ ಒಳಗೊಳಗೆ ಸಾಥ್ ಕೊಡುತ್ತಿರುವ ನೆರೆರಾಷ್ಟ್ರ ಚೀನಾ (China) ಭಾರತಕ್ಕೆ ಮಗ್ಗುಲ ಮುಳ್ಳಾಗಿದೆ. ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನ ವಿರುದ್ಧ ಆಪರೇಷನ್ ಸಿಂಧೂರ್ ಕೈಗೊಂಡಿತ್ತು. ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು. ಅಷ್ಟೇ ಅಲ್ಲ ಪಾಕಿಸ್ತಾನದೊಳಕ್ಕೆ ನುಗ್ಗಿ ವಾಯುನೆಲೆಗಳ ಮೇಲೂ ದಾಳಿ ಮಾಡಿತ್ತು. ಆದ್ರೆ ಪಾಕಿಸ್ತಾನ, ಭಾರತದ ಮೇಲೆ ನಿರಂತರ ಡ್ರೋನ್ ದಾಳಿಗೆ ಯತ್ನಿಸಿತ್ತು. ಅಲ್ದೆ ನಮ್ಮ ಸೇನಾನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿಗೆ ವಿಫಲ ಯತ್ನ ನಡೆಸಿತ್ತು. ಪಾಕಿಸ್ತಾನಕ್ಕೆ ಒಳಗೊಳಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ಮೂಲಕ ಚೀನಾ ಕಳ್ಳಾಟ ಪ್ರದರ್ಶಿಸಿದೆ. ಇದಕ್ಕೆ ಪ್ರಮುಖ 10 ಸಾಕ್ಷ್ಯಗಳು ಈ ಕೆಳಗಿನಂತಿವೆ.

ಪಾಕ್‌ಗೆ ಚೀನಾ ಬೆಂಬಲ ನೀಡಿರುವ ಸಾಕ್ಷ್ಯ ನಂಬರ್ 1

ಕ್ಷಿಪಣಿ ಮತ್ತು ಡ್ರೋನ್ ತಂತ್ರಜ್ಞಾನ ಪೂರೈಕೆ: ಭಾರತದ ಮೇಲೆ ದಾಳಿ ಮಾಡಲೆಂದು ಚೀನಾ ಪಾಕಿಸ್ತಾನಕ್ಕೆ ವಿಂಗ್ ಲೂಂಗ್ ಡ್ರೋನ್‌ಗಳು, HQ-16 ಕ್ಷಿಪಣಿ ವ್ಯವಸ್ಥೆಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ತಂತ್ರಜ್ಞಾನವನ್ನು ಒದಗಿಸಿದೆ. ಇದು ಭಾರತ ವಶಪಡಿಸಿಕೊಂಡ ಅವಶೇಷಗಳಿಂದ ಪತ್ತೆಯಾಗಿದೆ.

ಇದನ್ನೂ ಓದಿ: ‘ಸಿಂಧೂರ’ ಆಪರೇಷನ್ ಪ್ಲ್ಯಾನ್​​ ಹೇಗಿತ್ತು? ಪಾಕ್​ನ ಬಲಿಷ್ಠ ಡಿಫೆನ್ಸ್ ಸಿಸ್ಟಂನ ದಿಕ್ಕುತಪ್ಪಿಸಿದ್ಹೇಗೆ? ಇಲ್ಲಿದೆ ಡಿಟೇಲ್ಸ್

ಪಾಕ್‌ಗೆ ಚೀನಾ ಬೆಂಬಲ ಸಾಕ್ಷ್ಯ ನಂ.2

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಮಿಲಿಟರಿ ಉಪಸ್ಥಿತಿ: ಸಿಪಿಇಸಿ ಯೋಜನೆಯ ಸೋಗಿನಲ್ಲಿ, ಚೀನಾದ ಪಿಎಲ್‌ಎ ಘಟಕಗಳು ಮತ್ತು ಭದ್ರತಾ ಕಂಪನಿಗಳನ್ನು ಪಿಒಕೆಯಲ್ಲಿ ನಿಯೋಜಿಸಿದೆ.

ಇದನ್ನೂ ಓದಿ
ಟರ್ಕಿಗೆ ಅಡ್ವಾನ್ಸ್ಡ್ ಮಿಸೈಲ್​​ಗಳನ್ನು ಕೊಡಲಿರುವ ಅಮೆರಿಕ
ಟರ್ಕಿಗೆ ಶಾಕ್​: ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್‌ಗೆ ಭದ್ರತಾ ಅನುಮತಿ ರದ್ದು
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ಚೀನಾ ಸೆಳೆಯುವ ಪ್ರಯತ್ನದಲ್ಲಿ ಭಾರತದ ವೈರತ್ವ ಕಟ್ಟಿಕೊಂಡ್ರಾ ಯೂನಸ್?

ಪಾಕ್‌ಗೆ ಚೀನಾ ಬೆಂಬಲ ಸಾಕ್ಷ್ಯ ನಂ.3

ಭಯೋತ್ಪಾದಕ ಸಂಘಟನೆಗಳಿಗೆ ಪರೋಕ್ಷ ಬೆಂಬಲ: ಇನ್ನು ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್ ನಂತಹ ಸಂಘಟನೆಗಳ ಭಯೋತ್ಪಾದಕರು, ಉದಾಹರಣೆಗೆ ಮಸೂದ್ ಅಜರ್ ನಂತಹ ಉಗ್ರರನ್ನು ವಿಶ್ವಸಂಸ್ಥೆಯಲ್ಲಿ ಜಾಗತಿಕ ಭಯೋತ್ಪಾದಕರೆಂದು ಘೋಷಿಸಲು ಭಾರತ ಒತ್ತಾಯಿಸಿತ್ತು. ಆದ್ರೆ ಇದಕ್ಕೆ ಚೀನಾ ಹಲವಾರು ಬಾರಿ ತಡೆದಿದೆ. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಚೀನಾ ಈಗಲು ಬೆಂಬಲವಾಗಿ ನಿಂತಿದೆ.

ಪಾಕ್‌ಗೆ ಚೀನಾ ಬೆಂಬಲ ಸಾಕ್ಷ್ಯ ನಂ.4

ಚೀನಾ-ಪಾಕಿಸ್ತಾನ ಕಾರ್ಯತಂತ್ರದ ಮೈತ್ರಿ: ಭಾರತದ ವಿರುದ್ಧ ಯಾವುದೇ ಪ್ರಕರಣವಾಗಲಿ ಚೀನಾ ಎಂದಿಗೂ ಸಾಥ್ ಕೊಟ್ಟಿಲ್ಲ. ಆದ್ರೆ ಪಾಕಿಸ್ತಾನದ ಯಾವುದೇ ವಿಚಾರವಾಗ್ಲಿ ಚೀನಾ ಅಧಿಕೃತವಾಗಿ ಬೆಂಬಲಕ್ಕೆ ನಿಂತಿದೆ.

ಪಾಕ್‌ಗೆ ಚೀನಾ ಬೆಂಬಲ ಸಾಕ್ಷ್ಯ ನಂ.5

ಭಾರತ ವಿರೋಧಿ ಜಂಟಿ ಮಿಲಿಟರಿ ನಿಯೋಜನೆ: ಚೀನಾ ಮತ್ತು ಪಾಕಿಸ್ತಾನಗಳು ಭಾರತದ ಗಡಿಯ ಬಳಿ ಹಲವಾರು ಬಾರಿ ಜಂಟಿ ಮಿಲಿಟರಿ ಕಾರ್ಯಾಚರಣೆ ನಡೆಸಿವೆ. ಈ ಮೂಲಕ ಭಾರತಕ್ಕೆ ನೇರ ಸಂದೇಶ ರವಾನಿಸುವ ಪ್ರಯತ್ನ ಮಾಡಿವೆ.

ಪಾಕ್‌ಗೆ ಚೀನಾ ಬೆಂಬಲ ಸಾಕ್ಷ್ಯ ನಂ.6

ಗಾಲ್ವಾನ್ ಸಂಘರ್ಷದ ವೇಳೆ ಚೀನಾಗೆ ಪಾಕ್‌ ಬೆಂಬಲ: ಚೀನಾ ಜೊತೆಗೆ ಭಾರತದ ಗಾಲ್ವಾನ್ ಸಂಘರ್ಷದ ನಂತರ ಪಾಕಿಸ್ತಾನ ನಮ್ಮ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿತು. ಅಷ್ಟೇ ಅಲ್ಲ 2020 ರಲ್ಲಿ, ಭಾರತ ಲಡಾಖ್‌ನಲ್ಲಿ ಚೀನಾದೊಂದಿಗೆ ಹೋರಾಡುತ್ತಿದ್ದಾಗ, ಎಲ್‌ಒಸಿಯಲ್ಲಿ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ ಹೆಚ್ಚಾಯಿತು.

ಪಾಕ್‌ಗೆ ಚೀನಾ ಬೆಂಬಲ ಸಾಕ್ಷ್ಯ ನಂ.7

ಪಾಕಿಸ್ತಾನ ಬಳಸಿದ ಡ್ರೋನ್‌ಗಳು ಚೀನಾ ನಿರ್ಮಿತ: ರಾತ್ರಿ ವೇಳೆ ಪಾಕಿಸ್ತಾನದ ಸೇನೆ, ಭಾರತದ ಮೇಲೆ ಡ್ರೋನ್‌ಗಳಿಂದ ದಾಳಿಗೆ ಯತ್ನಿಸಿತ್ತು. ಈ ಡ್ರೋನ್‌ಗಳನ್ನು ಭಾರತ ಹೊಡೆದುರುಳಿಸಿತ್ತು. ಧ್ವಂಸವಾದ ಡ್ರೋನ್‌ಗಳ ಅವಶೇಷಗಳನ್ನು ಪರಿಶೀಲಿಸಿದಾಗ ಇವು ಚೀನಾ ನಿರ್ಮಿತ ಡ್ರೋನ್‌ಗಳೆಂಬುದು ಪತ್ತೆಯಾಗಿತ್ತು.

ಪಾಕ್‌ಗೆ ಚೀನಾ ಬೆಂಬಲ ಸಾಕ್ಷ್ಯ ನಂ.8

ಕಾಶ್ಮೀರದ ಕುರಿತು ಚೀನಾದ ಹಸ್ತಕ್ಷೇಪ: ಜಮ್ಮುಕಾಶ್ಮೀರದಲ್ಲಿ 370 ನೇ ವಿಧಿಯನ್ನು ತೆಗೆದುಹಾಕಿದಾಗ ಭಾರತದ ನಿರ್ಧಾರವನ್ನು ಚೀನಾ ವಿರೋಧಿಸಿತು. ಪಾಕಿಸ್ತಾನದೊಂದಿಗೆ ಸೇರಿ ವಿಶ್ವಸಂಸ್ಥೆಯಲ್ಲಿ ಈ ವಿಚಾರ ಪ್ರಸ್ತಾಪಕ್ಕೆ ಪ್ರಯತ್ನಿಸಿತು. ಇನ್ನು ಹಲವು ಬಾರಿ ಕಾಶ್ಮೀರದ ಕುರಿತು ಚೀನಾದ ಹೇಳಿಕೆ ಮತ್ತು ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡ್ತಿರುವುದು ಭಾರತದ ವಿರುದ್ಧ ಚೀನಾದ ಷಡ್ಯಂತ್ರಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ಪಾಕಿಸ್ತಾನದೊಂದಿಗೆ ಉದ್ವಿಗ್ನತೆ ಇರುವಾಗ, ಚೀನಾ ಉದ್ದೇಶಪೂರ್ವಕವಾಗಿ ಅರುಣಾಚಲ ಪ್ರದೇಶದ ವಿಷಯವನ್ನು ಚೀನಾ ಎತ್ತುತ್ತಿದೆ.

ಪಾಕ್‌ಗೆ ಚೀನಾ ಬೆಂಬಲ ಸಾಕ್ಷ್ಯ ನಂ.9

ಸೈಬರ್ ದಾಳಿ.. ಯುದ್ಧದಲ್ಲಿ ಸಹಕಾರ: ಚೀನಾ ಮತ್ತು ಪಾಕಿಸ್ತಾನದ ಜೊತೆಗೂಡಿ ಭಾರತದ ಮೇಲೆ ಪದೇ ಪದೆ ಸೈಬಲ್ ದಾಳಿ ನಡೆಸುತ್ತಲೇ ಇದೆ. ವಿಶೇಷವಾಗಿ ರಕ್ಷಣಾ, ರೈಲ್ವೆ ಮತ್ತು ವಿದ್ಯುತ್ ಗ್ರಿಡ್‌ಗಳ ಮೇಲೆ ಸೈಬರ್ ದಾಳಿಗೆ ಯತ್ನಿಸಿದೆ ಎನ್ನಲಾಗಿದೆ.

ಪಾಕ್‌ಗೆ ಚೀನಾ ಬೆಂಬಲ ಸಾಕ್ಷ್ಯ ನಂ.10

ಜಗತ್ತಿನ ಮುಂದೆ ಪಾಕಿಸ್ತಾನವನ್ನು ರಕ್ಷಿಸುವುದು: ಭಾರತವು ಭಯೋತ್ಪಾದನೆಯ ವಿಷಯದಲ್ಲಿ ಪಾಕಿಸ್ತಾನವನ್ನು ಮೂಲೆಗುಂಪು ಮಾಡಿದೆ. ಆದ್ರೆ ಈ ವಿಚಾರದಲ್ಲಿ ಚೀನಾ ವಿಶ್ವಸಂಸ್ಥೆ, SCO ಮತ್ತು BRICS ನಂತಹ ವೇದಿಕೆಗಳಲ್ಲಿ ಪಾಕಿಸ್ತಾನದ ವರ್ಚಸ್ಸನ್ನು ಉಳಿಸಲು ಪ್ರಯತ್ನಿಸಿದೆ. ಇದೆಲ್ಲವೂ ಭಾರತದ ವಿರುದ್ಧ ಚೀನಾದ ದ್ವಿಮುಖ ನೀತಿಗೆ ಸಾಕ್ಷಿಯಾಗಿವೆ.

ಪಾಕ್​ ಬೆನ್ನಿಗೆ ನಿಂತ ಕುತಂತ್ರಿ ಚೀನಾಗೆ ಶಾಕ್

ಪಾಕಿಸ್ತಾನಕ್ಕೆ ಬೆಂಬಲ ನೀಡುವ ಚೀನಾ ಕುತಂತ್ರ ಬುದ್ಧಿ ಬಯಲಾಗುತ್ತಿದ್ದಂತೆ ಭಾರತ ಡ್ರ್ಯಾಗನ್ ರಾಷ್ಟ್ರಕ್ಕೆ ಟಕ್ಕರ್ ಕೊಟ್ಟಿದೆ. ಅದಾನಿ ಒಡೆತನದ ಮುಂಬೈ, ಅಹಮದಾಬಾದ್, ಮಂಗಳೂರು, ಲಖನೌ, ಜೈಪುರ, ತಿರುವನಂತಪುರ, ಗುವಾಹಟಿ ಸೇರಿ ಹಲವು ಏರ್‌ಪೋರ್ಟ್‌ಗಳಲ್ಲಿ ಚೀನಾದ ಕಂಪನಿ ಲಾಂಚ್ ಸೇವೆ ಒದಗಿಸುತ್ತಿತ್ತು. ಇದೀಗ ಈ ಒಪ್ಪಂದಕ್ಕೆ ಅದಾನಿ ಕಂಪನಿಗೆ ಬ್ರೇಕ್ ಹಾಕಿದೆ.

ಟರ್ಕಿ ಮೂಲದ ಸೆಲೆಬಿ ಏರ್​​​​ಪೋರ್ಟ್ ಸರ್ವಿಸಸ್​​​​ಗೂ ಬ್ರೇಕ್

ಮತ್ತೊಂದೆಡೆ ಟರ್ಕಿ ಮೂಲದ ಸೆಲೆಬಿ ಕಂಪನಿ ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಬ್ರೇಕ್ ಹಾಕಲಾಗಿದೆ. ಕಾರ್ಗೋ ವಿಮಾನಗಳ ನಿರ್ವಹಣೆ ಮಾಡ್ತಿದ್ದ ಸೆಲೆಬಿ ಕಂಪನಿ ಜೊತೆಗಿನ ಒಪ್ಪಂದ ಕ್ಯಾನ್ಸಲ್ ಮಾಡಿದ್ದು,. ಭದ್ರತಾ ಅನುಮತಿ ರದ್ದು ಮಾಡಲಾಗಿದೆ. ಕೇಂದ್ರ ಸರ್ಕಾರದ ಆದೇಶದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ.