Operation Sindoor: ಪಿಕ್ಚರ್ ಅಭಿ ಬಾಕಿ ಹೈ.. ಆಪರೇಷನ್ ಸಿಂಧೂರ್ ಮುಂದುವರೆದಿದೆ ಎಂದ ಐಎಎಫ್

ಆಪರೇಷನ್ ಸಿಂಧೂರ್ ಮುಂದುವರೆದಿದೆ, ಸರಿಯಾದ ಸಮಯದಲ್ಲಿ ಸೂಕ್ತ ಮಾಹಿತಿಗಳನ್ನು ಹಂಚಿಕೊಳ್ಳಲಾಗುವುದು ಎಂದು ಭಾರತೀಯ ವಾಯುಪಡೆ(ಐಎಎಫ್​) ಮಾಹಿತಿ ನೀಡಿದೆ. ಭಾರತೀಯ ವಾಯುಪಡೆ (ಐಎಎಫ್) ಆಪರೇಷನ್ ಸಿಂಧೂರ್ ಅಡಿಯಲ್ಲಿ ನಿಯೋಜಿಸಲಾದ ಕಾರ್ಯಗಳನ್ನು ಅತ್ಯಂತ ನಿಖರತೆ ಮತ್ತು ವೃತ್ತಿಪರತೆಯಿಂದ ಯಶಸ್ವಿಯಾಗಿ ನಿರ್ವಹಿಸಿದೆ. ಈ ಕಾರ್ಯಾಚರಣೆಗಳನ್ನು ರಾಷ್ಟ್ರೀಯ ಉದ್ದೇಶಗಳಿಗೆ ಅನುಗುಣವಾಗಿ ಯೋಜಿತ ಮತ್ತು ರಹಸ್ಯ ರೀತಿಯಲ್ಲಿ ನಡೆಸಲಾಯಿತು.

Operation Sindoor: ಪಿಕ್ಚರ್ ಅಭಿ ಬಾಕಿ ಹೈ.. ಆಪರೇಷನ್ ಸಿಂಧೂರ್ ಮುಂದುವರೆದಿದೆ ಎಂದ ಐಎಎಫ್
ಭಾರತೀಯ ಸೇನೆ
Image Credit source: Business Standard

Updated on: May 11, 2025 | 1:07 PM

ನವದೆಹಲಿ, ಮೇ 11: ಆಪರೇಷನ್ ಸಿಂಧೂರ್(Operation Sindoor) ಮುಂದುವರೆದಿದೆ, ಸರಿಯಾದ ಸಮಯದಲ್ಲಿ ಸೂಕ್ತ ಮಾಹಿತಿಗಳನ್ನು ಹಂಚಿಕೊಳ್ಳಲಾಗುವುದು ಎಂದು ಭಾರತೀಯ ವಾಯುಪಡೆ(ಐಎಎಫ್​) ಮಾಹಿತಿ ನೀಡಿದೆ. ಭಾರತೀಯ ವಾಯುಪಡೆ (ಐಎಎಫ್) ಆಪರೇಷನ್ ಸಿಂಧೂರ್ ಅಡಿಯಲ್ಲಿ ನಿಯೋಜಿಸಲಾದ ಕಾರ್ಯಗಳನ್ನು ಅತ್ಯಂತ ನಿಖರತೆ ಮತ್ತು ವೃತ್ತಿಪರತೆಯಿಂದ ಯಶಸ್ವಿಯಾಗಿ ನಿರ್ವಹಿಸಿದೆ. ಈ ಕಾರ್ಯಾಚರಣೆಗಳನ್ನು ರಾಷ್ಟ್ರೀಯ ಉದ್ದೇಶಗಳಿಗೆ ಅನುಗುಣವಾಗಿ ಯೋಜಿತ ಮತ್ತು ರಹಸ್ಯ ರೀತಿಯಲ್ಲಿ ನಡೆಸಲಾಯಿತು.

ಅಭಿಯಾನ ಇನ್ನೂ ನಡೆಯುತ್ತಿರುವುದರಿಂದ, ವಿವರವಾದ ಮಾಹಿತಿಯನ್ನು ಸೂಕ್ತ ಸಮಯದಲ್ಲಿ ಹಂಚಿಕೊಳ್ಳಲಾಗುವುದು. ಊಹಾಪೋಹಗಳಿಗೆ ಕಿವಿಗೊಡಬೇಡಿ ಮತ್ತು ಅಸ್ಪಷ್ಟ ಮಾಹಿತಿಯನ್ನು ಪ್ರಸಾರ ಮಾಡುವುದನ್ನು ತಪ್ಪಿಸಿ ಎಂದು ವಾಯುಪಡೆ ಎಲ್ಲರಿಗೂ ಮನವಿ ಮಾಡುತ್ತದೆ ಎಂದು ಹೇಳಿದೆ.

ಭಾರತ-ಪಾಕಿಸ್ತಾನವು ಅಘೋಷಿತ ಯುದ್ಧಕ್ಕೆ ಶನಿವಾರ ಸಂಜೆಯಿಂದ ಕದನ ವಿರಾಮವನ್ನು ಘೋಷಿಸಿದ್ದವು. ಅದಾದ ಬಳಿಕವೂ ಪಾಕಿಸ್ತಾನ ಭಾರತದ ಹಲವೆಡೆ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸುತ್ತಲೇ ಇತ್ತು. ಇದೀಗ ಐಎಎಫ್​ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದು, ಆಪರೇಷನ್ ಸಿಂಧೂರ್​ ಇನ್ನೂ ಮುಗಿದಿಲ್ಲ ಮುಂದುವರೆದಿದೆ ಎಂದು ಹೇಳಿದ್ದು ಪಾಕಿಸ್ತಾನದವರ ತಲೆಯಲ್ಲಿ ಹುಳ ಬಿಟ್ಟಂತಾಗಿದೆ.

ಭಾರತ ಹಾಗೂ ಪಾಕಿಸ್ತಾನ ಪರಸ್ಪರ ಒಪ್ಪಿಗೆ ಮೇರೆಗೆ ಶನಿವಾರ ಮಧ್ಯಾಹ್ನ 5 ರಿಂದ ಎಲ್ಲಾ ರೀತಿಯ ದಾಳಿಗಳನ್ನು ಸ್ಥಗಿತಗೊಳಿಸುತ್ತಿದ್ದೇವೆ. ಈ ಸಂಬಂಧ ಎರಡು ದೇಶಗಳ ನಡುವೆ ಮೇ 12 (ಸೋಮವಾರ) ಮಾತುಕತೆ ಇದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ ಮಿಸ್ರಿ ತಿಳಿಸಿದ್ದರು.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಅನಂತ್​ನಾಗ್​ನಲ್ಲಿರುವ ಪಹಲ್ಗಾಮ್​ನಲ್ಲಿ ಉಗ್ರರು ದಾಳಿ ನಡೆಸಿದ್ದರು, ನಿನ್ನ ಧರ್ಮ ಯಾವುದು ಎಂದು ಕೇಳಿ ಹಿಂದೂಗಳ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಹತ್ಯೆ ಮಾಡಿದ್ದರು.

ಮತ್ತಷ್ಟು ಓದಿ: ಯುದ್ಧ ಭಾರತದ ಆಯ್ಕೆಯಲ್ಲ: ಶಾಂತಿ ಕಾಪಾಡಿ ಎಂದ ಚೀನಾ ವಿದೇಶಾಂಗ ಸಚಿವಗೆ ಅಜಿತ್ ದೋವಲ್ ಹೇಳಿದ್ದೇನು?

ಇದಕ್ಕೆ ಪ್ರತಿಯಾಗಿ ಭಾರತವು ಕೂಡ ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನದ 9 ಕಡೆಗಳಲ್ಲಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ 100 ಉಗ್ರರನ್ನು ಹತ್ಯೆಗೈದಿದ್ದರು. ಇದಕ್ಕೆ ಸುಮ್ಮನಿರದ ಪಾಕ್ ಕೂಡ ಭಾರತದ ಮೇಲೆ ದಾಳಿ ನಡೆಸಿತ್ತು. ಹೀಗೆ ದಾಳಿ ಪ್ರತಿದಾಳಿ ನಡೆಯುತ್ತಲೇ ಇದೆ. ಪಾಕಿಸ್ತಾನವು ಮಧ್ಯಸ್ಥಿಕೆವಹಿಸಿ, ಎರಡೂ ದೇಶದ ಜನರಲ್ಲಿ ಶಾಂತಿ ಸ್ಥಾಪಿಸುವ ಪ್ರಯತ್ನ ಮಾಡಿದೆ. ಅದರ ಫಲವಾಗಿ ಎರಡೂ ದೇಶಗಳು ಶನಿವಾರದಿಂದ ಕದನ ವಿರಾಮಕ್ಕೆ ಒಪ್ಪಿಗೆ ನೀಡಿವೆ. ಆದರೆ ಪಾಕಿಸ್ತಾನ ತನ್ನ ಬುದ್ಧಿಯನ್ನು ಬಿಡದೆ ಗಡಿಯಲ್ಲಿ ದಾಳಿ ನಡೆಸುತ್ತಲೇ ಇದೆ. ಇದೀಗ ಐಎಎಫ್​ ನೀಡಿರುವ ಹೇಳಿಕೆ ತುಂಬಾ ಮಹತ್ವದ್ದಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:53 pm, Sun, 11 May 25