ಭಾರತದ ಸಹೋದರ ಸಹೋದರಿಯರು ನಮ್ಮನ್ನು ಕಾಪಾಡಿದರು: ಅಫ್ಘಾನ್ ಮಹಿಳೆ
ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ, ಹಾಗಾಗಿ ನಾನು ನನ್ನ ಮಗಳು ಮತ್ತು ಇಬ್ಬರು ಮೊಮ್ಮಕ್ಕಳೊಂದಿಗೆ ಇಲ್ಲಿಗೆ ಬಂದೆವು. ನಮ್ಮ ಭಾರತೀಯ ಸಹೋದರ ಸಹೋದರಿಯರು ನಮ್ಮ ರಕ್ಷಣೆಗೆ ಬಂದರು. ಅವರು (ತಾಲಿಬಾನ್) ನನ್ನ ಮನೆಯನ್ನು ಸುಟ್ಟುಹಾಕಿದರು.
ದೆಹಲಿ: ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ ಎಂದು ಅಫ್ಘಾನಿಸ್ತಾನದ ನಿರಾಶ್ರಿತ ಮಹಿಳೆಯೊಬ್ಬರು ಹೇಳಿದ್ದಾರೆ. ಕಾಬೂಲ್‌ನಿಂದ ಇಂದು ಬೆಳಿಗ್ಗೆ ವಾಯುಪಡೆಯ ವಿಶೇಷ ವಿಮಾನದಲ್ಲಿ ಭಾರತಕ್ಕೆ ಬಂದ168 ಜನರಲ್ಲಿ ಇವರ ಒಬ್ಬರು. ದೆಹಲಿಗೆ ಬಂದಿಳಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮಹಿಳೆ ತಾಲಿಬಾನಿಗಳು “ನನ್ನ ಮನೆಯನ್ನು ಸುಟ್ಟುಹಾಕಿದ” ನಂತರ ನಾನು ನನ್ನ ಮಗಳು ಮತ್ತು ಇಬ್ಬರು ಮೊಮ್ಮಕ್ಕಳು ಪಲಾಯನ ಮಾಡುವಂತೆ ಒತ್ತಾಯಿಸಲಾಯಿತು. ಅವರನ್ನು ರಕ್ಷಿಸಿದಕ್ಕಾಗಿ ಭಾರತ ಸರ್ಕಾರಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.
“ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ, ಹಾಗಾಗಿ ನಾನು ನನ್ನ ಮಗಳು ಮತ್ತು ಇಬ್ಬರು ಮೊಮ್ಮಕ್ಕಳೊಂದಿಗೆ ಇಲ್ಲಿಗೆ ಬಂದೆವು. ನಮ್ಮ ಭಾರತೀಯ ಸಹೋದರ ಸಹೋದರಿಯರು ನಮ್ಮ ರಕ್ಷಣೆಗೆ ಬಂದರು. ಅವರು (ತಾಲಿಬಾನ್) ನನ್ನ ಮನೆಯನ್ನು ಸುಟ್ಟುಹಾಕಿದರು. ನಮಗೆ ಸಹಾಯ ಮಾಡಿದ್ದಕ್ಕಾಗಿ ನಾನು ಭಾರತಕ್ಕೆ ಧನ್ಯವಾದ ಹೇಳುತ್ತೇನೆ” ಎಂದು ಆ ಮಹಿಳೆ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
107 ಭಾರತೀಯರು, 24 ಅಫ್ಘಾನಿ ಸಿಖ್ಖರು ಮತ್ತು ಇಬ್ಬರು ಅಫ್ಘಾನಿ ಸೆನೆಟರ್‌ಗಳು ಸೇರಿದಂತೆ 168 ಜನರು ವಾಯುಪಡೆಯ ಸಾರಿಗೆ ವಿಮಾನದಲ್ಲಿದ್ದರು, ಅದು ಇಂದು ದೆಹಲಿಯ ಸಮೀಪದ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಯಲ್ಲಿ ಸುರಕ್ಷಿತವಾಗಿ ಇಳಿಯಿತು.
ಕಾಬೂಲ್ ಗುರುದ್ವಾರದಲ್ಲಿ ನಿರಾಶ್ರಿತರಾಗಿದ್ದ ಕೆಲವು ಭಾರತೀಯ ಸಿಖ್ಖರನ್ನು ಸ್ಥಳಾಂತರ ಮಾಡಲಾಗಿದೆ. ಸುರಕ್ಷಿತವಾಗಿ ಸ್ಥಳಾಂತರಿಸಲ್ಪಟ್ಟವರಲ್ಲಿ ಮಗುವೂ ಇದರಲ್ಲಿ ಸೇರಿದೆ. ಎಎನ್ಐ ಸುದ್ದಿ ಸಂಸ್ಥೆ ಪೋಸ್ಟ್ ಮಾಡಲಾದ ವಿಡಿಯೊದಲ್ಲಿ ಮಗು ಅವನ/ಅವಳ ತಾಯಿಯ ಕೈಯಲ್ಲಿದೆ, ಆದರೆ ಚಿಕ್ಕ ಹುಡುಗಿ (ಪ್ರಾಯಶಃ ಅಕ್ಕ) ಸಂತೋಷದಿಂದ ನಗುತ್ತಾ ಮಗುವನ್ನು ಮುದ್ದಾಡುತ್ತಿರುವುದು ಕಾಣುತ್ತದೆ.
ಇನ್ನೊಂದು ಮಗು ಕೂಡಾ ವಿಮಾನದಲ್ಲಿತ್ತು ಎಂದು ಮತ್ತೊಂದು ಫೋಟೊ ತೋರಿಸಿದೆ. ಮಗು ಕೂಡ ಅವನ/ಅವಳ ತಾಯಿಯ ತೋಳುಗಳಲ್ಲಿ ಸುರಕ್ಷಿತವಾಗಿತ್ತು. ತಂದೆ ಅವರ ಪಕ್ಕದಲ್ಲಿ ನಿಂತಿದ್ದರು ವಾಯುಪಡೆಯ ವಿಮಾನ ಇಳಿಯುವುದಕ್ಕೆ ಕೆಲವು ಗಂಟೆಗಳ ಮೊದಲು ಇತರ ಮೂರು – ಏರ್ ಇಂಡಿಯಾ, ಇಂಡಿಗೋ ಮತ್ತು ವಿಸ್ತಾರದೃ ಜನರನ್ನು ಸ್ಥಳಾಂತರಿಸುವ ಕಾರ್ಯ ಮಾಡಿದೆ.
#WATCH | An infant was among the 168 people evacuated from Afghanistan’s Kabul to Ghaziabad on an Indian Air Force’s C-17 aircraft pic.twitter.com/DoR6ppHi4h
— ANI (@ANI) August 22, 2021
ಈ ವಾರದ ಆರಂಭದಲ್ಲಿ ಕಾಬೂಲ್‌ನಿಂದ ಸ್ಥಳಾಂತರಿಸಲ್ಪಟ್ಟ ಜನರನ್ನು ವಾಪಸ್ ಕರೆತರುತ್ತಿತ್ತು ಮತ್ತು ಅಫ್ಘಾನಿಸ್ತಾನದಿಂದ ಹೊರಹೋಗುವ ವಿಮಾನ ಮಾರ್ಗಗಳ ಸುರಕ್ಷತೆಯ ಕಾರಣದಿಂದಾಗಿ ಮೊದಲು ತಜಕಿಸ್ತಾನದ ದುಶಾನ್‌ಬೆ ಮತ್ತು ಕತಾರ್‌ನ ದೋಹಾಕ್ಕೆ ಕಳುಹಿಸಲಾಗಿದೆ.
ಕೊವಿಡ್ ಸಾಂಕ್ರಾಮಿಕದ ದೃಷ್ಟಿಯಿಂದ ಎಲ್ಲಾ ಸ್ಥಳಾಂತರಿಸಿದವರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಮಾಡಲಾಗುವುದು. ಮತ್ತು ಅಫ್ಘಾನ್ ಪ್ರಜೆಗಳಿಗೂ ಪೋಲಿಯೊ ಲಸಿಕೆ ಹಾಕಲಾಗುವುದು ಎಂದು ಸರ್ಕಾರ ಹೇಳಿದೆ.
“Situation was deteriorating in Afghanistan, so I came here with my daughter & two grandchildren. Our Indian brothers & sisters came to our rescue. They (Taliban) burnt down my house. I thank India for helping us,” says an Afghan national at Hindon Air Force Station, Ghaziabad pic.twitter.com/Pmh1zqZZCB
— ANI (@ANI) August 22, 2021
ಭಾರತವು ತನ್ನ ನಾಗರಿಕರನ್ನು ಮತ್ತು ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಇತರ ದೇಶಗಳ ಜನರನ್ನು ಸ್ಥಳಾಂತರಿಸಲು ಕಾಬೂಲ್‌ನಿಂದ ದಿನಕ್ಕೆ ಎರಡು ವಿಮಾನಗಳನ್ನು ನಡೆಸಲು ಅನುಮತಿ ನೀಡಲಾಗಿದೆ ಎಂದು ಸರ್ಕಾರ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
ಕಾಬೂಲ್ ಮತ್ತು ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಯನ್ನು ಸರ್ಕಾರವು ಬಹಳ ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತಿದೆ. ಆದರೆ ತಕ್ಷಣದ ಗಮನವು ಎಲ್ಲಾ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವತ್ತ ಗಮನಹರಿಸಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಬಂದವರಿಗೆ ಭಾರತದಲ್ಲಿ ಉಚಿತ ಪೋಲಿಯೊ ಲಸಿಕೆ: ಕೇಂದ್ರ ಆರೋಗ್ಯ ಸಚಿವ
ಇದನ್ನೂ ಓದಿ: ಅಲ್ಲಿ ಎಲ್ಲವೂ ಮುಗಿದು ಹೋಯ್ತು ಕಣ್ಣೀರಾದ ಅಫ್ಘಾನಿಸ್ತಾನದ ಸಂಸದ ನರೀಂದರ್ ಸಿಂಗ್ ಖಾಲ್ಸಾ
(Our Indian brothers and sisters came to our rescue says Afghan Woman)