AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ram Nath Kovind ಮುಂದಿನ ಜನಾಂಗಕ್ಕಾಗಿ ನಾವು ಪರಿಸರ ಸಂರಕ್ಷಿಸಬೇಕು: ನಿರ್ಗಮಿತ ರಾಷ್ಟ್ರಪತಿ ರಾಮನಾಥ ಕೋವಿಂದ್

ದೇಶದ ಅಭಿವೃದ್ಧಿ ಬಗ್ಗೆ ಮಕ್ಕಳು ಮಾತನಾಡುವಂತಾಗಬೇಕು ಎಂದು ನಿರ್ಗಮಿತ ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಷಣದಲ್ಲಿ ಹೇಳಿದ್ದಾರೆ

Ram Nath Kovind ಮುಂದಿನ ಜನಾಂಗಕ್ಕಾಗಿ ನಾವು ಪರಿಸರ ಸಂರಕ್ಷಿಸಬೇಕು: ನಿರ್ಗಮಿತ ರಾಷ್ಟ್ರಪತಿ ರಾಮನಾಥ ಕೋವಿಂದ್
ರಾಮನಾಥ್ ಕೋವಿಂದ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jul 24, 2022 | 8:02 PM

Share

ಭಾರತದ ರಾಷ್ಟ್ರಪತಿ ರಾಮನಾಥ ಕೋವಿಂದ್ (Ram Nath Kovind) ಅವರು ಅಧಿಕಾರವಧಿ ನಾಳೆ ಮುಗಿಯಲಿದ್ದು ಇಂದು (ಭಾನುವಾರ) ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ. 5 ವರ್ಷಗಳ ಹಿಂದೆ ನಿಮ್ಮ ಚುನಾಯಿತ ಜನಪ್ರತಿನಿಧಿಗಳ ಮೂಲಕ ನಾನು ರಾಷ್ಟ್ರಪತಿಯಾಗಿ  ಆಯ್ಕೆಯಾಗಿದ್ದೆ. ರಾಷ್ಟ್ರಪತಿಯಾಗಿ ನನ್ನ ಅವಧಿ ಇಂದಿಗೆ ಮುಕ್ತಾಯವಾಗುತ್ತಿದೆ. ನಿಮ್ಮೆಲ್ಲರಿಗೂ ಮತ್ತು ನಿಮ್ಮ ಸಾರ್ವಜನಿಕ ಪ್ರತಿನಿಧಿಗಳಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ ಎಂದು ಕೋವಿಂದ್ ಹೇಳಿದ್ದಾರೆ.  ಕಾನ್ಪುರ ದೇಹತ್ ಜಿಲ್ಲೆಯ ಪರೌಂಖ್ ಗ್ರಾಮದಲ್ಲಿ ಅತ್ಯಂತ ಸಾಮಾನ್ಯ ಕುಟುಂಬದಲ್ಲಿ ಬೆಳೆದ ರಾಮನಾಥ್ ಕೋವಿಂದ್ ಇಂದು ದೇಶದ ಜನರನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ.  ಇದಕ್ಕಾಗಿ ನಾನು ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಶಕ್ತಿಗೆ ವಂದಿಸುತ್ತೇನೆ. ರಾಷ್ಟ್ರಪತಿಗಳ ಅವಧಿಯಲ್ಲಿ ನನ್ನ ಹುಟ್ಟೂರಿಗೆ ಭೇಟಿ ನೀಡಿದ್ದು ಮತ್ತು ನನ್ನ ಕಾನ್ಪುರ ಶಾಲೆಯ ಹಿರಿಯ ಶಿಕ್ಷಕರ ಪಾದಗಳನ್ನು ಸ್ಪರ್ಶಿಸಿ ಅವರ ಆಶೀರ್ವಾದ ಪಡೆಯುವುದು ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳಾಗಿವೆ ಎಂದು ನಿರ್ಗಮಿತ ರಾಷ್ಟ್ರಪತಿ ಹೇಳಿದ್ದಾರೆ.ನಮ್ಮ ಬೇರುಗಳೊಂದಿಗೆ ಸಂಪರ್ಕದಲ್ಲಿರುವುದು ಭಾರತೀಯ ಸಂಸ್ಕೃತಿಯ ವಿಶೇಷತೆ. ಯುವ ಪೀಳಿಗೆ ತಮ್ಮ ಗ್ರಾಮ ಅಥವಾ ಪಟ್ಟಣ ಮತ್ತು ಅವರ ಶಾಲೆಗಳು ಮತ್ತು ಶಿಕ್ಷಕರೊಂದಿಗೆ ಸಂಬಂಧ ಹೊಂದುವ ಈ ಸಂಪ್ರದಾಯವನ್ನು ಮುಂದುವರಿಸಲು ನಾನು ವಿನಂತಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಭಾಷಣದ ಮುಖ್ಯಾಂಶಗಳು

  1. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆದರ್ಶಗಳು ಅಮೂರ್ತತೆಗಳಲ್ಲ, ಆದರೆ ಅತ್ಯುತ್ನತ, ಉದಾತ್ತ ಮತ್ತು ಉನ್ನತಿಗೇರಿಸುವಂತಿವೆ.
  2. ರಾಷ್ಟ್ರವು ‘ಆಜಾದಿ ಕಾ ಅಮೃತ್ ಮಹೋತ್ಸವ’ವನ್ನು ಆಚರಿಸುತ್ತಿದೆ. ಮುಂದಿನ ತಿಂಗಳು, ನಾವು ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತೇವೆ. ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ ಕಾರಣವಾಗುವ 25 ವರ್ಷಗಳ ಅವಧಿಯ ‘ಅಮೃತ ಕಾಲ’ವನ್ನು ನಾವು ಪ್ರವೇಶಿಸುತ್ತೇವೆ.
  3. ಸಶಸ್ತ್ರ ಪಡೆಗಳು, ಅರೆ ಮಿಲಿಟರಿ ಪಡೆಗಳು ಮತ್ತು ಪೋಲಿಸ್‌ನ ನಮ್ಮ ವೀರ ಯೋಧರನ್ನು ಭೇಟಿ ಮಾಡಲು ನನಗೆ ಅವಕಾಶ ಸಿಕ್ಕ ಸಂದರ್ಭಗಳನ್ನು ನಾನು ವಿಶೇಷವಾಗಿ ಗೌರವಿಸುತ್ತೇನೆ. ಅವರ ದೇಶಭಕ್ತಿಯ ಉತ್ಸಾಹ ಅದ್ಭುತ, ಸ್ಪೂರ್ತಿದಾಯಕವಾಗಿದೆ.
  4. ಇಪ್ಪತ್ತನೇ ಶತಮಾನದ ಆರಂಭದ ಕೆಲವು ದಶಕಗಳ ಅವಧಿಯಲ್ಲಿ ನಾಯಕರ  ಗುಚ್ಛವನ್ನೇ ಹೊಂದಿರುವ ಭಾರತದಷ್ಟು ಅದೃಷ್ಟ ಬೇರೆ ಯಾವುದೇ ದೇಶಕ್ಕಿಲ್ಲ ಎಂದು ನಾನು ಯಾವಾಗಲೂ ಬಲವಾಗಿ ನಂಬಿದ್ದೇನೆ. ಇಪ್ಪತ್ತನೇ ಶತಮಾನದ ಆರಂಭದಲ್ಲಿ ಕೆಲವು ದಶಕಗಳ ಅವಧಿಯಲ್ಲಿ ಅವರಲ್ಲಿ ಪ್ರತಿಯೊಬ್ಬರೂ ಅಸಾಧಾರಣ ವ್ಯಕ್ತಿತ್ವದವರಾಗಿದ್ದರು.
  5. ಯುವ ಭಾರತೀಯರು ತಮ್ಮ ಪರಂಪರೆಯೊಂದಿಗೆ ಸಂಪರ್ಕ ಸಾಧಿಸಲು ರಾಷ್ಟ್ರೀಯ ಶಿಕ್ಷಣ ನೀತಿಯು ಸಾಕಷ್ಟು ಸಹಾಯ ಮಾಡುತ್ತದೆ ಎಂದು ನಾನು ನಂಬುತ್ತೇನೆ. ನಮ್ಮ ದೇಶವು 21 ನೇ ಶತಮಾನವನ್ನು ಭಾರತದ ಶತಮಾನವನ್ನಾಗಿ ಮಾಡಲು ಸಜ್ಜಾಗುತ್ತಿದೆ.
  6. ಪ್ರಕೃತಿ ಮಾತೆ ತೀವ್ರ ಸಂಕಟದಲ್ಲಿದೆ, ಹವಾಮಾನ ಬಿಕ್ಕಟ್ಟು ಈ ಗ್ರಹದ ಭವಿಷ್ಯಕ್ಕೆ ಅಪಾಯ ತಂದೊಡ್ಡಬಹುದು. ನಮ್ಮ ಮಕ್ಕಳಿಗಾಗಿ ನಮ್ಮ ಪರಿಸರ, ನಮ್ಮ ನೆಲ, ಗಾಳಿ ಮತ್ತು ನೀರಿನ ಬಗ್ಗೆ ಕಾಳಜಿ ವಹಿಸಬೇಕು.

Published On - 7:11 pm, Sun, 24 July 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ