
ನವದೆಹಲಿ, (ಮೇ 07): ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terror Attack) ಏಪ್ರಿಲ್ 22 ರಂದು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ಭೀಕರ ದಾಳಿ ನಡೆಸಿದ್ದು, ಈ ದಾಳಿಯಲ್ಲಿ 26 ಅಮಾಯಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದರು. ಇನ್ನು ತಮ್ಮ ಗಂಡಂದಿರನ್ನು ಕೊಂದ ಉಗ್ರರಿಗೆ ನಮ್ಮನ್ನೂ ಕೊಂದು ಬಿಡಿ ಎಂದು ಮಹಿಳೆಯೊಬ್ಬರು ಕಣ್ಣೀರುತ್ತಲೇ ಹೇಳಿದ್ದಳು. ಇದಕ್ಕೆ ಉಗ್ರ ನಿನ್ನನ್ನು ಕೊಲ್ಲಲ್ಲ ಮೋದಿಗೆ ಹೋಗಿ ಹೇಳು ಎಂದಿದ್ದ. ಇದೀಗ ಭಾರತ ಸೇನೆ (Indian Army) ಆಪರೇಷನ್ ಸಿಂಧೂರ್ (Operation Sindoor) ಹೆಸರಿನಲ್ಲಿ ಪಾಪಿಸ್ತಾನದ ಕ್ರಿಮಿಗಳ ನೆಲೆ ಧ್ವಂಸ ಮಾಡಿದೆ. ಇದರ ಬೆನ್ನಲ್ಲೇ ಆ ದಿನ ಪತಿಯೊಂದಿಗೆ ನನ್ನನ್ನು ಕೊಲ್ಲಿ ಎಂದಿದ್ದ ಅನೇಕ ಮಹಿಳೆಯರು ಭಾರತೀಯ ಸೇನೆಯ ಪ್ರತೀಕಾರಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ. ಇದರ ಬೆನ್ನಲ್ಲೇ ʻಮೋದಿಗೆ ಹೇಳುʼ ಎಂದಿರುವುದು ಮತ್ತು ನಾನು ʻಮೋದಿಗೆ ಹೇಳಿದ್ದೆʼ ಎನ್ನುವ ಕಾರ್ಟೂನ್ ಭಾರತೀಯರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಹಲ್ಗಾಮ್‌ನಲ್ಲಿ ದಾಳಿಯ ಸಂದರ್ಭದಲ್ಲಿ ಭಾರತೀಯ ಮಹುಳೆಯ ಸಿಂಧೂರ ಅಳಿಸಿ, ಮೋದಿಗೆ ಹೋಗಿ ಹೇಳು ಎಂಬ ಸಂದೇಶ ನೀಡಿದವರಿಗೆ ಇದೀಗ ಪ್ರಧಾನಿ ನರೇಂದ್ರ ಮೋದಿ ಪ್ರತ್ಯುತ್ತರ ನೀಡಿದ್ದಾರೆ. ಮಂಗಳವಾರ ತಡರಾತ್ರಿ ಭಾರತೀಯ ಸೇನೆ ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ ಎಲ್ಲಾ ಉಡೀಸ್ ಮಾಡುವಲ್ಲಿ ಯಶಸ್ವಿಯಾಗಿದೆ. ಪಾಕ್ನಲ್ಲಿ ಒಟ್ಟು 9 ಕಡೆಗಳಲ್ಲಿದ್ದ ಉಗ್ರ ತಾಣಗಳನ್ನೇ ಏರ್ಸ್ಟ್ರೈಕ್ ಮೂಲಕ ಧ್ವಂಸ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಆಪರೇಷನ್ ಸಿಂಧೂರ್‌ಗೆ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. ಆಪರೇಷನ್ ಸಿಂಧೂರದ ಬಳಿಕ #justiceserved #Itoldmodi ಪೋಸ್ಟ್ ಹಾಗೂ ಟ್ಯಾಗ್‌ಗಳು ಎಲ್ಲೆಡೆ ವೈರಲ್ ಆಗುತ್ತಿದೆ.
ಹಿಂದೂಗಳನ್ನು ಗುರಿಯಾಗಿಸಿಕೊಂಡು ಕಾಶ್ಮೀರದ ಪೆಹಲ್ಗಾಮ್ನಲ್ಲಿ ನಡೆದ 26 ಮಂದಿಯ ಬರ್ಬರ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಇದಾಗಲೇ ಆಪರೇಷನ್ ಸಿಂದೂರ ರೆಡಿಯಾಗಿದ್ದು, ಉಗ್ರರ ನಿರ್ನಾಮ ಕಾರ್ಯ ನಡೆಯುತ್ತಿದೆ. ಉಗ್ರರ ಗುಂಡೇಟಿಗೆ ಬಲಿಯಾಗಿರುವ, ಹಾಗೂ ದಾಳಿ ನಡೆದ ತಕ್ಷಣ ಮೊದಲಿಗೆ ಆ ಬಗ್ಗೆ ಮಾಹಿತಿ ನೀಡಿದ್ದು ಶಿವಮೊಗ್ಗದ ಪಲ್ಲವಿ ಅವರು. ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ ಅವರ ಪತ್ನಿ ಪಲ್ಲವಿ, ತಮ್ಮ ಪತಿಯ ಸಾವನ್ನು ಕಣ್ಣಾರೆ ಕಂಡವರು. ಮಗನ ಎದುರೇ ಪತಿಯನ್ನು ಉಗ್ರರು ಹತ್ಯೆ ಮಾಡಿದ್ದರು. ಪಹಲ್ಗಾಮ್ ಬಳಿ ರಸ್ತೆಯಲ್ಲಿ ಬೇಲ್‌ಪುರಿ ತಿನ್ನುತ್ತಿರುವಾಗ ಸೇನಾ ಸಮವಸ್ತ್ರದಲ್ಲಿ ಬಂದಿದ್ದ ಉಗ್ರರು ಹೆಚ್ಚಿನವರಿಗೆ ಹೆಸರು ಹಾಗೂ ಧರ್ಮದ ಬಗ್ಗೆ ಕೇಳಿದ್ದಾರೆ. ಮುಸ್ಲಿಮರು ಅಲ್ಲ ಎಂದು ಗೊತ್ತಾದ ಬಳಿಕ ಗುಂಡು ಹಾರಿಸಿದ್ದಾರೆ ಎಂದು ಪಲ್ಲವಿ ಅವರು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದರು. ಈ ವೇಳೆ ನನ್ನ ಹಾಗೂ ನನ್ನ ಮಗನನ್ನೂ ಕೊಲ್ಲಿ ಎಂದು ಉಗ್ರರ ಎದುರು ನಾನು ಕಣ್ಣೀರಿಟ್ಟೆ. ಆದರೆ, ನೀನು ಹೆಂಗಸು ನಿನ್ನನ್ನು ಕೊಲ್ಲೋದಿಲ್ಲ. ಇದನ್ನ ನೀನು ಮೋದಿಗೆ ಹೋಗಿ ತಿಳಿಸು ಎಂದು ಆತ ಹೇಳಿದ್ದ ಎಂದಿದ್ದರು.
ಇದೀಗ ಇದಕ್ಕೆ ಸಂಬಂಧಿಸಿದ ಕಾರ್ಟೂನ್ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೊಲೆ ಮಾಡಿದ್ದನ್ನು ಮೋದಿಗೆ ತಿಳಿದು ಅಂದಿದ್ನಲ್ಲ, ತಿಳಿಸಿದೆ ಅಷ್ಟೇ… ಎನ್ನುವ ಶೀರ್ಷಿಕೆಯ ಜೊತೆ ಈ ಕಾರ್ಟೂನ್ ವೈರಲ್ ಆಗುತ್ತಿದ್ದು, ಅರ್ಥಗರ್ಭಿತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿದ್ದರಿಂದ ಇಂದು ಏನಾಯಿತು ಎನ್ನುವುದರ ಹಿನ್ನೆಲೆಯಲ್ಲಿ ಈ ಕಾರ್ಟೂನ್ ರಚಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲು ಫುಲ್ ವೈರಲ್ ಆಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:43 pm, Wed, 7 May 25