ನವದೆಹಲಿ, ಮಾರ್ಚ್ 31: ಸಂಕಷ್ಟದ ಪರಿಸ್ಥಿತಿ ಬಂದರೆ ಭಾರತ ಯಾವ ಭೇದವೂ ಇಲ್ಲದೇ ಸಹಾಯ ಮಾಡುತ್ತದೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ ಕಡಲ್ಗಳ್ಳರಿಂದ (Pirates of Somalia) ಇರಾನ್ ಮೀನುಗಾರಿಕಾ ದೋಣಿಯ ರಕ್ಷಣೆಯ ಘಟನೆ. ಕಳೆದ ವಾರ ಕಡಲ್ಗಳ್ಳರ ಆಕ್ರಮಣಕ್ಕೆ ಒಳಗಾಗಿದ್ದ ಇರಾನ್ನ ಮೀನುಗಾರಿಕಾ ದೋಣಿಯನ್ನು ಭಾರತದ ನೌಕಾಪಡೆ ರಕ್ಷಣೆ ಮಾಡಿತ್ತು. ಯೆಮೆನ್ನ ಸೊಕೋತ್ರ ದ್ವೀಪದ (sucotra island) ಸಮುದ್ರದ ಭಾಗದಲ್ಲಿ ಈ ಘಟನೆ ನಡೆದಿತ್ತು. ಭಾರತದ ನೌಕಾಪಡೆಯ ಐಎನ್ಎಸ್ ಸುಮೇಧಾ (INS Sumedha) ಮಾರ್ಚ್ 29ರಂದು ಕ್ಷಿಪ್ರ ಕಾರ್ಯಾಚರಣೆ (rescue operation) ನಡೆಸಿ ಈ ದೋಣಿಯನ್ನು ಕಡಲ್ಗಳ್ಳರಿಂದ ರಕ್ಷಿಸಿತ್ತು. 12 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆದಿತ್ತು. ಈ ಮೀನುಗಾರಿಕಾ ದೋಣಿಯಲ್ಲಿ 23 ಪಾಕಿಸ್ತಾನೀ ಮೀನುಗಾರರು ಇದ್ದರು.
ಭಾರತದ ನೌಕಾಪಡೆಯ ಕಾರ್ಯಾಚರಣೆ ಬಳಿಕ ಈ ಪಾಕಿಸ್ತಾನೀಯರು ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಭಾರತ ಜಿಂದಾಬಾದ್ ಎಂದು ಹೇಳಿ ತಮ್ಮ ಕೃತಜ್ಞತೆ ತೋರ್ಪಡಿಸಿದ್ದಾರೆ. ಈ ದೋಣಿಯ ಮುಖ್ಯಸ್ಥರಾದ ಆಮೀರ್ ಖಾನ್ ವಿಡಿಯೋ ರೆಕಾರ್ಡ್ನಲ್ಲಿ ಮೆಸೇಜ್ ಬಿಡುಗಡೆ ಮಾಡಿದ್ದಾರೆ. ಸೊಮಾಲಿಯಾದ ಕಡಲ್ಗಳ್ಳರಿಂದ ಭಾರತದ ನೌಕೆ ತಮ್ಮನ್ನು ಕಾಪಾಡಿದೆ ಎಂದು ಇವರು ಹೇಳಿದ್ದಾರೆ. ಕೊನೆಯಲ್ಲಿ ಎಲ್ಲಾ 23 ಮಂದಿ ಪಾಕಿಸ್ತಾನೀಯರು ಭಾರತ ಜಿಂದಾಬಾದ್ ಎಂದಿದ್ದಾರೆ.
ಭಾರತೀಯ ನೌಕಾಪಡೆ ಬಿಡುಗಡೆ ಮಾಡಿರುವ ಫೋಟೋ ಮತ್ತು ವಿಡಿಯೋ
Successful Anti-Piracy Operation by the #IndianNavy.
After successfully forcing surrender of the nine armed pirates, #IndianNavy’s specialist teams have completed sanitisation & seaworthiness checks of FV Al-Kambar.
The crew comprising 23 Pakistani nationals were given a thorough… https://t.co/APEyIWmU9e pic.twitter.com/c6TbfL4Jrc— SpokespersonNavy (@indiannavy) March 30, 2024
ಸಮುದ್ರ ಪ್ರದೇಶದಲ್ಲಿ, ಅದರಲ್ಲೂ ಟ್ರೇಡಿಂಗ್ ರೂಟ್ಗಳಲ್ಲಿ ಕಡಲ್ಗಳ್ಳರ ಉಪಟಳ ವಿಪರೀತ ಇದೆ. ಸೊಮಾಲಿಯಾ, ಸಿರಿಯಾ ಮೊದಲಾದ ದೇಶಗಳ ಕಡಲ್ಗಳ್ಳರು ಹಾದು ಹೋಗುವ ಹಡಗುಗಳ ಮೇಲೆ ಆಕ್ರಮಣ ಮಾಡಿ ಅಪಹರಿಸಿರುವ ಹಲವು ಪ್ರಕರಣಗಳು ವರದಿ ಆಗುತ್ತಲೇ ಇರುತ್ತವೆ. ಭಾರತದ್ದೂ ಸೇರಿ ವಿವಿಧ ದೇಶಗಳ ನೌಕಾಪಡೆ ಹಡಗುಗಳು ಗಸ್ತು ತಿರುಗುತ್ತಿರುತ್ತವೆ. ಭಾರತೀಯ ನೌಕಾಪಡೆ ಇತ್ತೀಚೆಗೆ ಸಾಕಷ್ಟು ರಕ್ಷಣಾ ಕಾರ್ಯಾಚರಣೆ ಮಾಡಿದೆ.
ಇದನ್ನೂ ಓದಿ: ಕಡಲ್ಗಳ್ಳರಿಂದ ಇರಾನ್ ಹಡಗು, 23 ಪಾಕಿಸ್ತಾನೀಯರ ರಕ್ಷಿಸಿದ ಭಾರತೀಯ ನೌಕಾಪಡೆ
ಸೊಮಾಲಿಯಾ ಕಡಲ್ಗಳ್ಳರು ವಶಪಡಿಸಿಕೊಂಡಿದ್ದ ಮಾಲ್ಟಾ ದೇಶಕ್ಕೆ ಸೇರಿದ ಸರಕು ಹಡಗನ್ನು ಭಾರತದ ನೌಕಾಪಡೆ ರಕ್ಷಣೆ ಮಾಡಿತ್ತು. ಮೂರು ತಿಂಗಳ ಕಾಲ ಕಡಲ್ಗಳ್ಳರ ವಶದಲ್ಲಿದ್ದ ಈ ಹಡಗನ್ನು ಐಎನ್ಎಸ್ ಕೋಲ್ಕತಾದ ಸಿಬ್ಬಂದಿ ರಕ್ಷಣೆ ಮಾಡಿದ್ದರು. ಕಡಲ್ಗಳ್ಳರನ್ನು ಹಿಡಿದು ಭಾರತಕ್ಕೆ ಕರೆ ತರಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ