AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗಳಿಗೆ ಬಾಯ್​​ಫ್ರೆಂಡ್​ ಇದ್ದಾನೆಂಬ ಅನುಮಾನ, ಗೂಢಚಾರಿ ಹೇಳಿದ ಸತ್ಯ ಕೇಳಿ ಬೆಚ್ಚಿಬಿದ್ದ ಪೋಷಕರು

ಮಗಳ ಹಾವ-ಭಾವವು ಆಕೆಗೆ ಬಾಯ್​​ಫ್ರೆಂಡ್​ ಇರಬಹುದು ಎನ್ನುವ ಅನುಮಾನವನ್ನು ಪೋಷಕರಲ್ಲಿ ಹುಟ್ಟುಹಾಕಿತ್ತು.ಹಾಗೆಯೇ ಅವರು ಗೂಢಚಾರಿಯೊಬ್ಬರನ್ನು ನೇಮಿಸಿಕೊಂಡು ಮಗಳ ಮೇಲೆ ಕಣ್ಣಿರಿಸಲು ಕೇಳಿಕೊಂಡಿದ್ದರು. ಆದರೆ ಅವರು ತಿಳಿಸಿದ ವಿಚಾರವು ಪೋಷಕನ್ನು ಬೆಚ್ಚಿಬೀಳಿಸಿತ್ತು. ಈ ಕುರಿತು ಸ್ಪೈ ತಾನ್ಯಾ ಪುರಿ ವಿಡಿಯೋವೊಂದನ್ನು ಮಾಡಿದ್ದು ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ.

ಮಗಳಿಗೆ ಬಾಯ್​​ಫ್ರೆಂಡ್​ ಇದ್ದಾನೆಂಬ ಅನುಮಾನ, ಗೂಢಚಾರಿ ಹೇಳಿದ ಸತ್ಯ ಕೇಳಿ ಬೆಚ್ಚಿಬಿದ್ದ ಪೋಷಕರು
ಸಾಂದರ್ಭಿಕ ಚಿತ್ರImage Credit source: Mint
ನಯನಾ ರಾಜೀವ್
|

Updated on: Aug 10, 2025 | 11:26 AM

Share

ನವದೆಹಲಿ, ಆಗಸ್ಟ್ 10: ಮಗಳ ಹಾವ-ಭಾವವು ಆಕೆಗೆ ಬಾಯ್​​ಫ್ರೆಂಡ್(Boyfriend)​ ಇರಬಹುದು ಎನ್ನುವ ಅನುಮಾನವನ್ನು ಪೋಷಕರಲ್ಲಿ ಹುಟ್ಟುಹಾಕಿತ್ತು.ಹಾಗೆಯೇ ಅವರು ಗೂಢಚಾರಿಯೊಬ್ಬರನ್ನು ನೇಮಿಸಿಕೊಂಡು ಮಗಳ ಮೇಲೆ ಕಣ್ಣಿರಿಸಲು ಕೇಳಿಕೊಂಡಿದ್ದರು. ಆದರೆ ಅವರು ತಿಳಿಸಿದ ವಿಚಾರವು ಪೋಷಕನ್ನು ಬೆಚ್ಚಿಬೀಳಿಸಿತ್ತು.

ಈ ಕುರಿತು ಸ್ಪೈ ತಾನ್ಯಾ ಪುರಿ ವಿಡಿಯೋವೊಂದನ್ನು ಮಾಡಿದ್ದು ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ, ದೆಹಲಿಯ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಹುಡುಗಿಯೊಬ್ಬಳಿಗೆ ಗೆಳೆಯನಿದ್ದಾನೆ ಎಂದು ಆಕೆಯ ಹೆತ್ತವರು ಪದೇ ಪದೆ ಅನುಮಾನಿಸುತ್ತಿದ್ದರು. ಆದರೆ ಆಕೆ ಏನೂ ಹೇಳುತ್ತಿರಲಿಲ್ಲ.ಹಾಗಾಗಿ ಅವರು ತನ್ನನ್ನು ಗೂಢಚಾರರಾಗಿ ನೇಮಿಸಿಕೊಂಡಿದ್ದರು.

ನೀವು ಆಕೆಯ ಮೇಲೆ ನಿಗಾ ಇರಿಸಿ ಆ ಹುಡುಗಿಯ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಪ್ರಾರಂಭಿಸಿ ಎಂದು ಕೇಳಿಕೊಂಡಿದ್ದರು. ನಾಲ್ಕನೇ ದಿನ, ಅವಳು ಜಿಟಿಬಿ ನಗರಕ್ಕೆ ಹೋಗಿದ್ದಳು, ಅಂತಿಮವಾಗಿ, ಅವಳು ಅಲ್ಲಿಗೆ ತಲುಪಿದಾಗ, ಅವಳು ವೇಶ್ಯಾಗೃಹಗಳು ಅಥವಾ ವೇಶ್ಯೆಯರಿರುವ ಪ್ರದೇಶವನ್ನು ತಲುಪಿದ್ದಾಳೆಂದು ನಮಗೆ ಅರಿವಾಯಿತು.

ಮತ್ತಷ್ಟು ಓದಿ:ಮೂರ್ಛೆ ತಪ್ಪಿ ಬಿದ್ದ ಪ್ರೇಯಸಿ, ಸತ್ತಳೆಂದು ಆಕೆಯ ಮನೆಯಲ್ಲೇ ಪ್ರಿಯಕರ ನೇಣಿಗೆ ಶರಣು

ನನಗೆ ನನ್ನ ಕಣ್ಣನ್ನೇ ನಂಬಲು ಸಾಧ್ಯವಾಗಲಿಲ್ಲ.ಆಕೆ ಹೆಚ್ಚು ಪಾಕೆಟ್ ಮನಿ, ಹಣವನ್ನು ಬಯಸಿದ್ದರಿಂದ ಈ ವೃತ್ತಿ ಆರಿಸಿಕೊಂಡಿದ್ದಾಳೆ ಎಂಬ ಅರಿವಾಯಿತು. ಆಕೆಯ ಸ್ನೇಹಿತರು ಐಷಾರಾಮಿ ಪಾರ್ಟಿ ಮಾಡುತ್ತಿದ್ದರು, ಶಾಪಿಂಗ್​​ಗೆ ಹೋಗುತ್ತಿದ್ದರು, ಈಕೆ ಹೆತ್ತವರ ಜತೆ ಮಾಲ್​​ಗೆ ಹೋಗುತ್ತಿರಲಿಲ್ಲ, ರೆಸ್ಟೋರೆಂಟ್​ಗೆ ಊಟಕ್ಕೆ ಹೋಗುತ್ತಿರಲಿಲ್ಲ.ಆಕೆಗೆ ಹಣ ಬೇಕಿತ್ತು ಹೀಗಾಗಿ ಈ ತಪ್ಪು ವೃತ್ತಿಯನ್ನು ಆರಿಸಿಕೊಂಡಿದ್ದಾಳೆ.

ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಪ್ರತಿಕ್ರಿಯೆಗಳು ಬಂದಿವೆ. ಪೋಷಕರಿಗೆ ಗೂಢಚಾರಿಗಳನ್ನು ನೇಮಿಸಿಕೊಳ್ಳಲು ಹಣವಿರುತ್ತದೆ ಎಂದರೆ ಆಕೆಗೆ ಆ ಹಣವನ್ನು ಕೊಟ್ಟಿದ್ದರೆ ಆಕೆ ಈ ದಾರಿಗೆ ಇಳಿಯುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಈ ಜಗತ್ತಿನಲ್ಲಿರುವ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಕೇಳುವ ಅತ್ಯುತ್ತಮವಾದದ್ದನ್ನು ಮತ್ತು ಎಲ್ಲವನ್ನೂ ನೀಡಲು ಬಯಸುತ್ತಾರೆ, ಆದರೆ ಕೆಲವರು ಆರ್ಥಿಕ ಸಮಸ್ಯೆಗಳಿಂದ ಅಥವಾ ಇತರ ಕಾರಣಗಳಿಂದ ಎಲ್ಲವನ್ನೂ ಒದಗಿಸಲು ಸಾಧ್ಯವಾಗುವುದಿಲ್ಲ.

ಆದ್ದರಿಂದ ಮಕ್ಕಳು ತಮ್ಮ ಹೆತ್ತವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅವರು ಹೊಂದಿರುವದರಲ್ಲಿ ಸಂತೋಷಪಡಬೇಕು ಏಕೆಂದರೆ, ಅವರು ಈಗಾಗಲೇ ವಿಶ್ವದ ಅತ್ಯಂತ ಅಮೂಲ್ಯ ಮತ್ತು ಅಮೂಲ್ಯವಾದ ವಸ್ತು ಅಮ್ಮ ಮತ್ತು ಅಪ್ಪ ಅವರನ್ನು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ, ಮತ್ತು ಹಣದಿಂದ ಖರೀದಿಸಲು ಸಾಧ್ಯವಾಗದ ಈ ಪ್ರೀತಿ ಮಾತ್ರ ಇದೆ ಎಂದು ಪಪ್ಪು ಅನ್ಸಾರಿ ಎಂಬುವವರು ಕಮೆಂಟ್ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್