AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pariksha Pe Charcha 2025: ಪರೀಕ್ಷೆ ಒತ್ತಡದಲ್ಲಿರುವ ವಿದ್ಯಾರ್ಥಿಗಳು ಸಕ್ಕರೆ ಪದಾರ್ಥಗಳನ್ನು ತಿನ್ನದಂತೆ ನಿಯಂತ್ರಿಸುವುದ್ಹೇಗೆ?

ಪರೀಕ್ಷಾ ಪೆ ಚರ್ಚಾದ ನಾಲ್ಕನೇ ಸಂಚಿಕೆಯನ್ನು ಬಿಡುಗಡೆಗೊಂಡಿದೆ. ಇದರಲ್ಲಿ ಪರೀಕ್ಷೆಯ ಒತ್ತಡವೆಂದು ಫ್ರಿಡ್ಜ್​ನಲ್ಲಿರುವ ಐಸ್ಕ್ರೀಂ, ಕೇಕ್​ಗಳನ್ನು ತಿನ್ನುವ ವಿದ್ಯಾರ್ಥಿಗಳಿಗೆ ಪೌಷ್ಟಿಕ ತಜ್ಞರು ಕಿವಿ ಮಾತು ಹೇಳಿದ್ದಾರೆ. ಪರೀಕ್ಷೆಯ ಸಮಯದಲ್ಲಿ ಮಾತ್ರವಲ್ಲದೆ ಒಟ್ಟಿನಲ್ಲಿ ವಿದ್ಯಾರ್ಥಿಗಳ ಆಹಾರ ಪದ್ಧತಿ ಹೇಗಿರಬೇಕು ಎಂಬುದರ ಕುರಿತು ಮಾತನಾಡಿದ್ದಾರೆ. ಪೌಷ್ಟಿಕ ತಜ್ಞೆ ಶೋನಾಲಿ ಹಾಗೂ ರೇವಂತ್ ವಿದ್ಯಾರ್ಥಿಗಳ ಪರೀಕ್ಷಾ ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುವ ಪ್ರಾಯೋಗಿಕ ಸಲಹೆಗಳನ್ನು ಹಂಚಿಕೊಂಡರು.

Pariksha Pe Charcha 2025: ಪರೀಕ್ಷೆ ಒತ್ತಡದಲ್ಲಿರುವ ವಿದ್ಯಾರ್ಥಿಗಳು  ಸಕ್ಕರೆ ಪದಾರ್ಥಗಳನ್ನು ತಿನ್ನದಂತೆ ನಿಯಂತ್ರಿಸುವುದ್ಹೇಗೆ?
ತಜ್ಞರು
ನಯನಾ ರಾಜೀವ್
|

Updated on:Feb 14, 2025 | 12:18 PM

Share

ಪರೀಕ್ಷಾ ಪೆ ಚರ್ಚಾದ ನಾಲ್ಕನೇ ಸಂಚಿಕೆಯನ್ನು ಬಿಡುಗಡೆಗೊಂಡಿದೆ. ಇದರಲ್ಲಿ ಪರೀಕ್ಷೆಯ ಒತ್ತಡವೆಂದು ಫ್ರಿಡ್ಜ್​ನಲ್ಲಿರುವ ಐಸ್ಕ್ರೀಂ, ಕೇಕ್​ಗಳನ್ನು ತಿನ್ನುವ ವಿದ್ಯಾರ್ಥಿಗಳಿಗೆ ಪೌಷ್ಟಿಕ ತಜ್ಞರು ಕಿವಿ ಮಾತು ಹೇಳಿದ್ದಾರೆ. ಪರೀಕ್ಷೆಯ ಸಮಯದಲ್ಲಿ ಮಾತ್ರವಲ್ಲದೆ ಒಟ್ಟಿನಲ್ಲಿ ವಿದ್ಯಾರ್ಥಿಗಳ ಆಹಾರ ಪದ್ಧತಿ ಹೇಗಿರಬೇಕು ಎಂಬುದರ ಕುರಿತು ಮಾತನಾಡಿದ್ದಾರೆ. ಪೌಷ್ಟಿಕ ತಜ್ಞರಾದ ಶೋನಾಲಿ ಹಾಗೂ ರೇವಂತ್ ವಿದ್ಯಾರ್ಥಿಗಳ ಪರೀಕ್ಷಾ ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುವ ಪ್ರಾಯೋಗಿಕ ಸಲಹೆಗಳನ್ನು ಹಂಚಿಕೊಂಡರು.

ಸಮತೋಲಿತ ಆಹಾರದ ಮಹತ್ವದ ಬಗ್ಗೆ ವಿವರಿಸಿದ ರುಜುತಾ ದಿವೇಕರ್ ಊಟವನ್ನು ಶಾಲಾ ಪಠ್ಯಕ್ಕೆ ಹೋಲಿಸಿದ್ದಾರೆ. ಶಾಲೆಯಲ್ಲಿ ನಿಮಗೆ ಹೇಗೆ ವಿಭಿನ್ನ ವಿಷಯಗಳು ಇರುವಂತೆಯೇ ಆಹಾರದಲ್ಲಿ ವೈವಿಧ್ಯತೆ ಇರಬೇಕು. ಕೆಲವು ಆಹಾರಗಳು ನೈಸರ್ಗಿಕ ಒತ್ತಡ ನಿವಾರಕಗಳಾಗಿ ಕಾರ್ಯ ನಿರ್ವಹಿಸುತ್ತವೆ. ಕಡಲೆಕಾಯಿ, ಬಾಳೆಹಣ್ಣು, ಅಕ್ಕಿ ಇವು ಆಹಾರದಲ್ಲಿರಬೇಕು.

ಪೌಷ್ಟಿಕ ತಜ್ಞ ರೇವಂತ್ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಾ ತಾವು ಕೂಡ ಪರೀಕ್ಷೆಯ ಒತ್ತಡದಲ್ಲಿರುವಾಗ ಫ್ರಿಡ್ಜ್​ನಲ್ಲಿ ಇಟ್ಟಿರುವ ಐಸ್​ಕ್ರೀಂ ತಿನ್ನುತ್ತಿದ್ದೆ ಎಂದು ಹೇಳಿದ್ದಾರೆ.

ನಾವು ಏನು ತಿನ್ನುತ್ತಿದ್ದೇವೆ ಎಂದು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಪ್ರತಿಯೊಬ್ಬರೂ ತಾವು ತಿನ್ನುವ ಆಹಾರ ಪದಾರ್ಥಗಳ ಪ್ಯಾಕೆಟ್ ಮೇಲೆ ಇರುವ ಲೇಬಲ್​ ಅನ್ನು ತಪ್ಪದೇ ಓದಬೇಕು. ಮುಂದಿನ ಐದು ವರ್ಷಗಳಲ್ಲಿ ಶಾಲಾ ಪಠ್ಯಕ್ರಮದಲ್ಲಿ ಆರೋಗ್ಯ ಶಿಕ್ಷಣವನ್ನು ಸೇರಿಸುವುದು ನನ್ನ ಗುರಿಯಾಗಿದೆ ಎಂದು ರೇವಂತ್ ಹೇಳಿದ್ದಾರೆ.

ಮತ್ತಷ್ಟು ಓದಿ: Pariksha Pe Charcha 2025: ಪರೀಕ್ಷಾ ಪೆ ಚರ್ಚಾ: ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ, ವೀಕ್ಷಿಸುವುದ್ಹೇಗೆ?

ಶೋನಾಲಿ ಮಾತನಾಡಿ, ಜಂಕ್ ಫುಡ್ ಹಂಬಲವನ್ನು ತಪ್ಪಿಸಲು ಹಸಿರು ತರಕಾರಿಗಳೊಂದಿಗೆ ದಿನವನ್ನು ಪ್ರಾರಂಭಿಸಲು ಸಲಹೆ ನೀಡಿದರು. ಜಂಕ್​ಫುಡ್​ಗಳನ್ನು ತಿನ್ನಬೇಕೆನಿಸಿದರೆ ಹಸಿರು ತರಕಾರಿಗಳನ್ನು ಬೆಳಗ್ಗೆ ತಿನ್ನಿ. ಒತ್ತಡವನ್ನು ನಿರ್ವಹಿಸಲು ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮನೆಯಲ್ಲಿ ತಯಾರಿಸಿದ ಊಟವನ್ನು ಮಾಡಿ ಎಂದು ಸಲಹೆ ನೀಡಿದರು. ನೀವು ಒತ್ತಡಕ್ಕೊಳಗಾಗಿದ್ದರೆ, ಕಾಫಿಯ ಬದಲಿಗೆ ಬೀಟ್ರೂಟ್ ರಸವನ್ನು ಪ್ರಯತ್ನಿಸಿ, ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಮತ್ತು ಒತ್ತಡರಹಿತವಾಗಿರಲು ಹೀಗೆ ಮಾಡಿ

ನೀರಿನಂಶವನ್ನು ಕಾಪಾಡಿಕೊಳ್ಳಲು ತಂಪು ಪಾನೀಯಗಳ ಬದಲಿಗೆ ಮಜ್ಜಿಗೆ ಕುಡಿಯಲು ಶಿಫಾರಸು ಮಾಡಿದರು. ಒತ್ತಡವು ಮಲಬದ್ಧತೆಗೆ ಕಾರಣವಾಗಿದ್ದರೆ, ಬಾಳೆಹಣ್ಣು ಅಥವಾ ಮೊಸರನ್ನು ಸಕ್ಕರೆಯೊಂದಿಗೆ ಸೇವಿಸಿ. ಅರ್ಧ ಗಂಟೆ ಆಟವಾಡುವುದರಿಂದಲೂ ಜೀರ್ಣಕ್ರಿಯೆ ಸುಧಾರಿಸಬಹುದು. ಪ್ಯಾಕ್ ಮಾಡಿದವುಗಳನ್ನು ಆಯ್ಕೆ ಮಾಡುವ ಬದಲು ಮನೆಯಲ್ಲಿಯೇ ಸಿಹಿ ಗೆಣಸು ಚಿಪ್ಸ್ ತಯಾರಿಸಿ ತಿನ್ನಿ ಎಂದು ಸಲಹೆ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:16 pm, Fri, 14 February 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ