Parliament Session: ಜನರನ್ನು ಯಾಚಕರನ್ನಾಗಿಯೇ ಉಳಿಸುವುದು ನಮ್ಮ ಉದ್ದೇಶವಲ್ಲ; ನರೇಂದ್ರ ಮೋದಿ

Parliament Live: ನಮ್ಮ ವಿವಿಧತೆಯಿಂದ ತುಂಬಿರುವ ದೇಶ. ಸಾವಿರಾರು ಭಾಷೆ, ಸಂಸ್ಕೃತಿಗಳಿರುವ ದೇಶ ನಮ್ಮದು. ಅವೆಲ್ಲದರ ನಡುವೆಯೂ ಒಂದು ದೇಶ-ಒಂದು ಗುರಿ ಎಂಬುದನ್ನು ಸಾಧಿಸಿ ತೋರಿಸಿದ್ದೇವೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

Parliament Session: ಜನರನ್ನು ಯಾಚಕರನ್ನಾಗಿಯೇ ಉಳಿಸುವುದು ನಮ್ಮ ಉದ್ದೇಶವಲ್ಲ; ನರೇಂದ್ರ ಮೋದಿ
ಲೋಕಸಭೆಯಲ್ಲಿ ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 10, 2021 | 5:58 PM

ನವದೆಹಲಿ: ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣಕ್ಕೆ ಧನ್ಯವಾದಗಳನ್ನು ಅರ್ಪಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ನೂತನ ಕೃಷಿ ಕಾಯ್ದೆಗಳನ್ನು ಬಲವಾಗಿ ಸಮರ್ಥಿಸಿಕೊಂಡರು. ಮೋದಿ ಭಾಷಣದಲ್ಲಿ ಪ್ರಸ್ತಾಪವಾದ ಕೆಲ ಅಂಶಗಳನ್ನು ಪ್ರಶ್ನಿಸಿ, ಘೋಷಣೆಗಳನ್ನು ಕೂಗಿದ ಕಾಂಗ್ರೆಸ್ ಕಾರ್ಯಕರ್ತರು ಸಭಾತ್ಯಾಗ ಮಾಡಿದರು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಕಾಲದಲ್ಲಿಯೇ ಎಪಿಎಂಸಿ ಕಾಯ್ದೆಗಳನ್ನು ಸುಧಾರಿಸಬೇಕೆಂಬ ಧ್ವನಿ ಎದ್ದಿದ್ದ ಬಗ್ಗೆ ನರೇಂದ್ರ ಮೋದಿ ಅಂದಿನ ಕೃಷಿ ಸಚಿವ ಶರದ್​ ಪವಾರ್​ ಅವರ ಹೇಳಿಕೆಗಳನ್ನು ಉಲ್ಲೇಖಿಸಿದರು. ಭಾಷಣದ ಬಹುಪಾಲು ಸಮಯವನ್ನು ಮೋದಿ ಕೃಷಿ ಕಾಯ್ದೆ ಸಮರ್ಥನೆಗೆ ಮೀಸಲಿಟ್ಟಿದ್ದು ವಿಶೇಷ ಎನಿಸಿತು. ಪ್ರಧಾನಿ ಭಾಷಣದ ಮುಖ್ಯ ಅಂಶಗಳು ಇಲ್ಲಿವೆ..

ರೈತರನ್ನು ಏಕೆ ದಾರಿತಪ್ಪಿಸುತ್ತೀರಿ? ಎಪಿಎಂಎಸ್​ ಕಾಯ್ದೆ ಬದಲಾವಣೆ ಬಗ್ಗೆ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಶರದ್​ ಪವಾರ್ ಮಾತನಾಡಿದ್ದರು. ಇದೇ ಕಾರಣಕ್ಕೆ ನನಗೆ ಅನುಮಾನ ಬರುತ್ತಿದೆ. ರೈತರನ್ನು ಏಕೆ ದಿಕ್ಕುತಪ್ಪಿಸುತ್ತಿದ್ದೀರಿ ಎಂದು ಮೋದಿ ಪ್ರಶ್ನಿಸಿದರು.

ಬದಲಾವಣೆ ತಂದ ಕಿಸಾನ್ ರೈಲು ಕಿಸಾನ್ ರೈಲು ಎನ್ನುವುದು ಸಂಚಾರಿ ಕೋಲ್ಡ್​ ಸ್ಟೋರೇಜ್ ಆಗಿದೆ. ನಾಸಿಕ್​ನಿಂದ 30 ಕೆಜಿ ಕಿತ್ತಳೆ ಹಣ್ಣನ್ನು ಮುಜಾಫರ್​ನಗರದ ವ್ಯಾಪಾರಿ ತಲುಪಿಸಲು ಕೊರಿಯರ್​ಗಿಂತಲೂ ಕಡಿಮೆ ಖರ್ಚಾಗುತ್ತದೆ. ಕೆಲವರು ಮೊಟ್ಟೆಗಳನ್ನೂ ಕಳಿಸ್ತಿದ್ದಾರೆ. ಕಿಸಾನ್ ರೈಲು ಮೇಲ್ನೋಟಕ್ಕೆ ಚಿಕ್ಕ ವಿಷಯ ಅನ್ನಿಸಬಹುದು. ಆದರೆ ಸಾಕಷ್ಟು ಬದಲಾವಣೆಗಳಿಗೆ ಈ ರೈಲು ಕಾರಣವಾಗಿದೆ ಎಂದು ಮೋದಿ ವಿವರಿಸಿದರು.

ಧಾನ್ಯಗಳಿಗೆ ಸಹಕಾರಿ ಮಾರುಕಟ್ಟೆ: ಪ್ರಧಾನಿ ಭರವಸೆ ಡೇರಿ ಮತ್ತು ಸಹಕಾರ ಕ್ಷೇತ್ರಗಳು ಸಶಕ್ತವಾಗಿಯೂ ಇವೆ. ಶಕ್ತಿಶಾಲಿಯೂ ಆಗಿವೆ. ಇದೇ ಮಾದರಿಯಲ್ಲಿ ಧಾನ್ಯಗಳಿಗೆ ಮಾರುಕಟ್ಟೆ ಕಲ್ಪಿಸಲೂ ನಾವು ಶ್ರಮಿಸುತ್ತವೆ. ರಾಷ್ಟ್ರದಲ್ಲಿ 10 ಸಾವಿರ ರೈತ ಉತ್ಪಾದಕ ಸಂಸ್ಥೆಗಳು ಆರಂಭವಾಗಿವೆ. ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಇದರಿಂದ ಮಹತ್ವದ ಬದಲಾವಣೆ ಕಂಡು ಬಂದಿದೆ. ಅವರ ಶಕ್ತಿ ಹೆಚ್ಚಾದರೆ ಸಣ್ಣಸಣ್ಣ ಶೀತಲಗೃಹಗಳನ್ನೂ ನಿರ್ಮಿಸಬಹುದು. ಸ್ವಸಹಾಯ ಸಂಘಗಳ ಮೂಲಕವೂ ರೈತರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ರೈತರನ್ನು ಶ್ಲಾಘಿಸಿದ ಪ್ರಧಾನಿ ಕೊರೊನಾ ಕಾಲದಲ್ಲಿ ಮತ್ತು ಹಲವು ಸಂಕಷ್ಟ ಪರಿಸ್ಥಿತಿಯಲ್ಲಿಯೂ ರೈತರು ದಾಖಲೆ ಮಟ್ಟದ ಬೆಳೆ ತೆಗೆದಿದ್ದಾರೆ. ಅವರ ಸಮಸ್ಯೆಗಳನ್ನು ಕಡಿಮೆ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ. ಕೃಷಿ ಕ್ಷೇತ್ರಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಪರಿಚಯಿಸಲು ಮುಂದಾಗುತ್ತಿದ್ದೇವೆ. ಇದು ರಾಜಕೀಯ ವಿಷಯ ಆಗೋದು ಬೇಡ. ದೇಶದ ಅಭಿವೃದ್ಧಿಗೆ ಇದು ಅತ್ಯಗತ್ಯ ಎಂದು ಮೋದಿ ಹೇಳಿದರು.

ಕೃಷಿ ಕಾಯ್ದೆ ಸಮರ್ಥಿಸಿಕೊಂಡ ಪ್ರಧಾನಿ ಧರಣಿ ನಿರತ ರೈತರ ಜೊತೆಗೆ ಚರ್ಚೆಗೆ ನಾವು ಸಿದ್ಧ. ‘ಕೃಷಿ ಕಾಯ್ದೆಯಿಂದ ತೊಂದರೆ ಇದ್ದರೆ ಬದಲಾವಣೆಗೆ ಸಿದ್ಧ’ ಎಂದು ಮೋದಿ ಸ್ಪಷ್ಟವಾಗಿ ಹೇಳಿದರು. ಕೃಷಿ ಕಾಯ್ದೆ ಜಾರಿಯಾದ ಬಳಿಕ ಮಂಡಿ ಬಂದ್ ಆಗಿಲ್ಲ. ಕನಿಷ್ಠ ಬೆಂಬಲ ಬೆಲೆಯೂ ರದ್ದಾಗಿಲ್ಲ. ಕೃಷಿ ಕಾಯ್ದೆಗಳು ಜಾರಿ ಬಳಿಕ ಬೆಂಬಲ ಬೆಲೆ ಹೆಚ್ಚಾಗಿದೆ. ಮೊದಲು ಪಂಜಾಬ್​ನಲ್ಲಿ ಪ್ರತಿಭಟನೆ ಆರಂಭವಾಗಿತ್ತು. ನಿಮಗೆ ಕಾಯ್ದೆ ಬಗ್ಗೆ ತಕರಾರು ಏನಿದೆ ಎಂಬುದನ್ನು ಹೇಳಿದರೆ ನಾವು ತಿದ್ದುಪಡಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಪ್ರತಿಪಕ್ಷಗಳಿಂದ ಗದ್ದಲ ಕೃಷಿ ಕಾಯ್ದೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದಾಗ ಪ್ರತಿಪಕ್ಷಗಳು ತೀವ್ರ ಗದ್ದಲ ಮಾಡಿದವು. ಮೋದಿ ನಗುನಗುತ್ತಲೇ, ನಾನು ನಿಮಗೆಷ್ಟು ಅನುಕೂಲ ಮಾಡಿಕೊಟ್ಟೆ ನೋಡಿ. ನೀವು ಹೇಳಬೇಕಾದ್ದು ಹೇಳಲು ಅನುಕೂಲವಾಯ್ತು ಎಂದು ಹೇಳಿದರು.

ಪ್ರತಿಪಕ್ಷಗಳಿಗೆ ಮಾತನಾಡಲು ಸ್ಪೀಕರ್ ಓಂಬಿರ್ಲಾ ಅವಕಾಶ ನಿರಾಕರಿಸಿದರು. ‘ನೀವು ಹೇಳಬೇಕಾದ್ದು ಹೇಳಿಯಾಗಿದೆ, ಈಗೇಕೆ ಗದ್ದಲ ಮಾಡ್ತೀರಿ’ ಎಂದು ಪ್ರಶ್ನಿಸಿದರು. ಟಿ.ಆರ್.ಬಾಲು ಅವರಿಗೆ ಮತ್ತೆ ಮಾತನಾಡಲು ಅವಕಾಶ ನೀಡುವುದಾಗಿ ಭರವಸೆ ನೀಡಿದರು.

‘ಆಂದೋಲನ್ ಜೀವಿ’ ಪದ ಬಳಸಿದ ಪ್ರಧಾನಿ ಎಲ್ಲಿ ಲಾಭವಿರುತ್ತೋ ಅಲ್ಲೇ ಕೃಷಿ ಉತ್ಪನ್ನ ಮಾರಾಟ ಮಾಡಿ. ಈ ವಿಚಾರದಲ್ಲಿ ರೈತರಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇದೇ ಸಂದರ್ಭ ಮತ್ತೊಮ್ಮೆ ‘ಆಂದೋಲನ್ ಜೀವಿ’ ಪದ ಬಳಸಿದರು. ‘ಆಂದೋಲನದ ಹೊಸ ರೂಪ ಶುರುವಾಗಿದೆ ಧರಣಿ ನಿರತರು ಆಂದೋಲನ ಜೀವಿಗಳಾಗಿದ್ದಾರೆ’ ಎಂದು ಮೋದಿ ವ್ಯಂಗ್ಯವಾಡಿದರು.

ಕಾಂಗ್ರೆಸ್ ವಿರುದ್ಧ ನೇರ ವಾಗ್ದಾಳಿಗೆ ಇಳಿದ ಪ್ರಧಾನಿ ನರೇಂದ್ರ ಮೋದಿ ಇದು ಗೊಂದಲದಲ್ಲಿ ಮುಳುಗಿದೆ. ಯಾವುದನ್ನೂ ಒಂದು ನಿರ್ಣಯಕ್ಕೆ ಬರಲು ಬಿಡುವುದಿಲ್ಲ ಎಂದು ವ್ಯಂಗ್ಯವಾಡಿದರು. ಪ್ರತಿಪಕ್ಷಗಳ ಸದಸ್ಯರು ‘ಕೃಷಿ ಕಾಯ್ದೆ ಹಿಂಪಡೆಯಿರಿ’ ಎಂದು ಘೋಷಣೆಗಳನ್ನು ಕೂಗಿದರು.

ಕಾಂಗ್ರೆಸ್ ಸಭಾತ್ಯಾಗ ದೇಶದ ಅಭಿವೃದ್ಧಿಗಾಗಿ ನಾವು ಕೃಷಿ ಕಾಯ್ದೆಗಳನ್ನು ಜಾರಿ ಮಾಡಿದ್ದೇವೆ. ಕಾಂಗ್ರೆಸ್ ಗೊಂದಲದಲ್ಲಿರುವ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷವು ರಾಜ್ಯಸಭೆಯಲ್ಲಿ ಒಂದು ರೀತಿ, ಲೋಕಸಭೆಯಲ್ಲಿ ಮತ್ತೊಂದು ರೀತಿ ವರ್ತಿಸುತ್ತದೆ ಎಂದು ಟೀಕಿಸಿದರು. ಮೋದಿ ಮಾತಿನ ವೇಳೆ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.

ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಕ್ರಮ 10 ಕೋಟಿ ಮನೆಗಳಲ್ಲಿ ಶೌಚಾಲಯ ನಿರ್ಮಿಸಿದ್ದೇವೆ. ಇದು ಪ್ರಜಾಪ್ರಭುತ್ವ, ಸಾಮಂತಶಾಹಿ ಅಲ್ಲ. ನಾಗರಿಕರನ್ನು ಯಾಚರನ್ನಾಗಿ ಮಾಡುತ್ತಿಲ್ಲ. ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ.

ನಿಮಗೆ ಹೊಸ ವ್ಯವಸ್ಥೆ ಇಷ್ಟವಾಗದಿದ್ದರೆ ಹಳೆಯ ವ್ಯವಸ್ಥೆ ಇದೆ ಎಂದು ತಮ್ಮ ಭಾಷಣಕ್ಕೆ ಅಕ್ಷೇಪ ವ್ಯಕ್ತಪಡಿಸಿದವರಿಗೆ ಮೋದಿ ಉತ್ತರಿಸಿದರು.

ಬದಲಾವಣೆ ಅತ್ಯಗತ್ಯ ತಮಿಳುನಾಡಿನಲ್ಲಿ 1940ರ ದಶಕಗಳಿಂದಲೂ ಚರ್ಚಿಲ್ಸ್​ ಸಿಗಾರ್ ಅಸಿಸ್ಟೆಂಟ್ (ಸಿಸಿಎ) ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬರು ಇದ್ದರು. ದೇಶ ಸ್ವಾತಂತ್ರ್ಯ ಬಂದ ನಂತರವೂ ಈ ಹುದ್ದೆ ಮತ್ತು ಕೆಲಸ ಮುಂದುವರಿದಿತ್ತು.  ಮುಖ್ಯಮಂತ್ರಿಯಾದಾಗ ಬಲೂನು ಹಾರಲಿಲ್ಲ, ಹವಾಮಾನ ವರದಿ ಇಲ್ಲ ಎಂಬ ಸಂದೇಶ ಬರುತ್ತಿತ್ತು. ನಾವು ವ್ಯವಸ್ಥೆಯನ್ನು ಗಮನಿಸಿ, ಬದಲಿಸಿದ್ದರೆ ಹೇಗೆ? ನಾವು ಬದಲಾವಣೆ ಮತ್ತು ಸುಧಾರಣೆಗಳಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂದು ನರೇಂದ್ರ ಮೋದಿ ಹೇಳಿದರು.

ಕೃಷಿ ನಮ್ಮ ಸಂಸ್ಕೃತಿ ಕೃಷಿ ನಮ್ಮ ಸಂಸ್ಕೃತಿಯ ಜೊತೆಗೆ ಜೋಡಣೆಯಾಗಿದೆ. ನಮ್ಮ ಋಷಿಮುನಿಗಳು ಸಾಕಷ್ಟು ಬರೆದಿಟ್ಟಿದ್ದಾರೆ. ಜನಕ ರಾಜ, ಕೃಷ್ಣ-ಬಲರಾಮರು ಕೃಷಿಯ ಮೇಲೆ ಒಲವು ಇದ್ದವರು. ಕೃಷಿ ನಮ್ಮ ಪರಂಪರೆ. ಹಲವು ಜನಾಂಗಗಳು ಕೃಷಿಯ ಮೇಲೆ ಅವಲಂಬಿತವಾಗಿವೆ. ಕೃಷಿಯ ಬಗ್ಗೆ ಮಾತನಾಡುವಾಗ ಧನಧಾನ್ಯ ಎನ್ನುವ ಪದ ಬಳಸುತ್ತೇವೆ. ಸಣ್ಣ ರೈತರ ಮೇಲೆ ಕೃಷಿಯ ಹೆಸರಿನಲ್ಲಿ ಹಲವು ತೊಂದರೆಗಳು ಆಗಿವೆ. ಜಮೀನಿನ ಹಿಡುವಳಿ ಗಾತ್ರ ಕಡಿಮೆಯಾಗಿದೆ ಎಂದು ಮೋದಿ ಹೇಳಿದರು.

ನಮ್ಮ ರೈತರು ಆತ್ಮನಿರ್ಭರ್ ಆಗಬೇಕು. ಅದಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಅವರು ಕೇವಲ ಭತ್ತ-ಗೋಧಿ ಬೆಳೆಯಲು ಸೀಮಿತರಾಗಬಾರದು. ಅವರಿಗೆ ದೇಶ, ವಿಶ್ವದ ಬೇರೆಬೇರೆ ಕಡೆ ಏನಾಗುತ್ತಿದೆ ಎಂಬ ಮಾಹಿತಿ ಸಿಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಮೋದಿ ಭಾಷಣದ ಇತರ ಪ್ರಮುಖ ಅಂಶಗಳು

ಸದನದಲ್ಲಿ 15 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆದಿದೆ. ಅನೇಕ ದಿನ ರಾತ್ರಿ 12 ಗಂಟೆಯವರೆಗೂ ಚರ್ಚೆ ಮುಂದುವರಿದೆ. ಮಹಿಳಾ ಸದಸ್ಯರೂ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಅವರಿಗೂ ಅಭಿನಂದನೆಗಳು. ಸಂಶೋಧನೆ ಮಾಡಿ ಮಾತನಾಡಲು ಯತ್ನಿಸಿದರು. ಅವರು ಚರ್ಚೆಯನ್ನು ಸಮೃದ್ಧಿ ಮಾಡಿದರು. ಹೀಗಾಗಿ ಅವರ ತಯಾರಿ, ತರ್ಕಕ್ಕೆ ಅಭಾರಿ.

ನಾವೆಲ್ಲರೂ ಸೇರಿ ಸ್ವಾತಂತ್ರ್ಯದ ಈ ಪರ್ವವನ್ನು 2047ರ ಹೊತ್ತಿಗೆ ನಾವು ದೇಶವನ್ನು ಎಲ್ಲಿಗೆ ಕೊಂಡೊಯ್ಯಬೇಕು ಎಂಬ ಬಗ್ಗೆ ಯೋಚಿಸಬೇಕು. ಈ ಸಂಕಲ್ಪವನ್ನು ದೇಶವಾಸಿಗಳ ಮನಸ್ಸಿನಲ್ಲಿದೆ. ಇದು ಈ ಪವಿತ್ರ ನೆಲದ ಕೆಲಸ. ಭಾರತದಲ್ಲಿದ್ದ ಬ್ರಿಟಿಷ್ ಕಮಾಂಡರ್​ಗಳು ಭಾರತವೆಂದರೆ ಹಲವು ದೇಶಗಳ ಮಹಾದ್ವೀಪ ಎಂದು ಹೇಳುತ್ತಿದ್ದರು. ಯಾರೂ ಇದನ್ನು ಒಂದು ದೇಶವಾಗಿ ಎಂದಿಗೂ ರೂಪಿಸಲಾರರು ಎನ್ನುತ್ತಿದ್ದರು. ಭಾರತದ ಜನರು ಈ ಆತಂಕವನ್ನು ದೂರ ಮಾಡಿದರು. ನಾವು ನಮ್ಮ ಪರಂಪರೆ, ಸಾಂಸ್ಕೃತಿಕ ಏಕತೆಯಿಂದ ವಿಶ್ವದ ಎದುರು ಒಂದು ದೇಶವಾಗಿ ಆಶಾಕಿರಣವಾಗಿದ್ದೇವೆ.ಕೆಲವರು ಭಾರತ ಎಂದರೆ ಅಚಾನಕ್ ಪ್ರಜಾಪ್ರಭುತ್ವ ಎಂದು ಹೀಗಳೆದಿದ್ದರು. ಅದನ್ನೂ ನಾವು ದೂರ ಮಾಡಿದ್ದೇವೆ. ನಾವು ಪ್ರತಿಹಂತದಲ್ಲಿಯೂ ಪ್ರಜಾಪ್ರಭುತ್ವದ ನೆಲೆಯಲ್ಲಿ ಒಂದಾಗಿದ್ದೇವೆ.

ನಮ್ಮದು ವಿವಿಧತೆಯಿಂದ ತುಂಬಿರುವ ದೇಶ. ಸಾವಿರಾರು ಭಾಷೆ, ಸಂಸ್ಕೃತಿಗಳಿರುವ ದೇಶ ನಮ್ಮದು. ಅವೆಲ್ಲದರ ನಡುವೆಯೂ ಒಂದು ದೇಶ-ಒಂದು ಗುರಿ ಎಂಬುದನ್ನು ಸಾಧಿಸಿ ತೋರಿಸಿದ್ದೇವೆ. ಸ್ವಾಮಿ ವಿವೇಕಾನಂದರು ಹೇಳಿದ್ದರು, every nation has a message to deliver. Our mission is to fulfill it. Has a destiny to reach. ಕೊರೊನಾ ವೇಳೆ ಭಾರತ ತನ್ನನ್ನು ತಾನು ಸಂಭಾಳಿಸಿಕೊಂಡಿದ್ದರ ಜೊತೆಗೆ ವಿಶ್ವಕ್ಕೂ ನೆರವಾಯಿತು. ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯ ಎನ್ನುವುದನ್ನು ಕೊರೊನಾ ಕಾಲದಲ್ಲಿ ಭಾರತ ನಿರೂಪಿಸಿ ತೋರಿಸಿದೆ.

ನಾವು ಆ ದಿನಗಳ ಬಗ್ಗೆ ಯೋಚಿಸಿ ನೋಡೋಣ. 2 ವಿಶ್ವಯುದ್ಧಗಳು ಪ್ರಪಂಚವನ್ನು ಹಾಳು ಮಾಡಿದ್ದವು. ಮಾನವೀಯತೆ ಸಂಕಟದಲ್ಲಿತ್ತು. 2ನೇ ಮಹಾಯುದ್ಧದ ನಂತರ ವಿಶ್ವದಲ್ಲಿ ಹೊಸ ಅಧಿಕಾರ ಕೇಂದ್ರಗಳನ್ನು ಹುಟ್ಟುಹಾಕಿದೆ.

ಕೊರೊನಾ ವೇಳೆ ಭಾರತ ತನ್ನನ್ನು ತಾನು ಸಂಭಾಳಿಸಿಕೊಂಡಿದ್ದರ ಜೊತೆಗೆ ವಿಶ್ವಕ್ಕೂ ನೆರವಾಯಿತು. ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯ ಎನ್ನುವುದನ್ನು ಕೊರೊನಾ ಕಾಲದಲ್ಲಿ ಭಾರತ ನಿರೂಪಿಸಿ ತೋರಿಸಿದೆ.

ಕೊರೊನಾ ವೇಳೆ ಭಾರತ ತನ್ನನ್ನು ತಾನು ಸಂಭಾಳಿಸಿಕೊಂಡಿದ್ದರ ಜೊತೆಗೆ ವಿಶ್ವಕ್ಕೂ ನೆರವಾಯಿತು. ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯ ಎನ್ನುವುದನ್ನು ಕೊರೊನಾ ಕಾಲದಲ್ಲಿ ಭಾರತ ನಿರೂಪಿಸಿ ತೋರಿಸಿದೆ.

ನಾವು ಆ ದಿನಗಳ ಬಗ್ಗೆ ಯೋಚಿಸಿ ನೋಡೋಣ. 2 ವಿಶ್ವಯುದ್ಧಗಳು ಪ್ರಪಂಚನವನು ಹಾಳು ಮಾಡಿದ್ದವು. ಮಾನವೀಯತೆ ಸಂಕಟದಲ್ಲಿತ್ತು. 2ನೇ ಮಹಾಯುದ್ಧದ ನಂತರ ವಿಶ್ವದಲ್ಲಿ ಹೊಸ ಅಧಿಕಾರ ಕೇಂದ್ರಗಳನ್ನು ಹುಟ್ಟುಹಾಕಿದೆ.

ಸೈನ್ಯ ಅಲ್ಲ, ಸಹಯೋಗ ಬೇಕು ಎಂಬುದು ಎಲ್ಲರಿಗೂ ಮನವರಿಕೆಯಾಯಿತು. ವಿಶ್ವಸಂಸ್ಥೆಯಂಥ ಮಹತ್ವದ ಸಂಸ್ಥೆ ಆರಂಭವಾಯಿತು

ವಿಶ್ವದಲ್ಲಿ ಶಾಂತಿ ಮಾತುಕತೆ ಸಾಕಷ್ಟು ನಡೆಯಿತು. ಶಾಂತಿ ಮಾತುಕತೆಗಳ ನಡುವೆಯೂ ಶಕ್ತಿಯಿದ್ದವರು ತಮ್ಮ ಸೈನಿಕ ಸಾಮರ್ಥ್ಯ ಹೆಚ್ಚಿಸಿಕೊಂಡರು.

ವಿಶ್ವಯುದ್ಧದ ನಂತರ ಶಾಂತಿಯ ಮಾತುಕತೆ ನಡುವೆಯೂ ಸೈನಿಕ ಶಕ್ತಿ ವಿಪರೀತ ಹೆಚ್ಚಾಯಿತು. ಸಣ್ಣಪುಟ್ಟ ದೇಶಗಳು ಶಸ್ತ್ರಾಸ್ತ್ರ ಹೊಂದಲು ಹಾತೊರೆದವು.

ಕೊರೊನಾ ನಂತರದ ಕಾಲದಲ್ಲಿಯೂ ಇಂಥದ್ದೇ ವಾತಾವರಣ ನಿರ್ಮಾಣವಾಗುತ್ತಿದೆ. ಹೊಸ ವರ್ಲ್ಡ್​ ಆರ್ಡರ್​ ತಯಾರಾಗುತ್ತಿದೆ. ಇದನ್ನು ಯಾರು ರೂಪಿಸ್ತಾರೆ? ಯಾರು ಚಾಲನೆ ನೀಡ್ತಾರೆ ಎನ್ನುವುದು ಯೋಚಿಸಬೇಕಾದ ವಿಷಯ.

ನಾವು ಈಗ ವಿಶ್ವದಿಂದ ಹೊರತಾಗಿ ಉಳಿಯುವುದು ಸಾಧ್ಯವಿಲ್ಲ. ವಿಶ್ವದ ಒಂದು ಮೂಲೆಯಲ್ಲಿ ನಮ್ಮ ಪಾಡಿಗೆ ನಾವು ಇರಲು ಆಗಲು

ಹೊಸ ವರ್ಲ್ಡ್​ ಆರ್ಡರ್​ನಲ್ಲಿ ನಮ್ಮ ಸ್ಥಾನ ಗಟ್ಟಿಯಾಗಬೇಕು. ಅದಕ್ಕೆ ದಾರಿಯೇ ಆತ್ಮನಿರ್ಭರ್ ಭಾರತ್. ಭಾರತವು ಔಷಧಿ ಉದ್ಯಮದಲ್ಲಿ ಆತ್ಮನಿರ್ಭರ್ ಆಗಿದೆ. ಇದು ವಿಶ್ವಕಲ್ಯಾಣದ ದೃಷ್ಟಿಯಿಂದ ಅತ್ಯಂತ ಅಗತ್ಯ.

ದೇವರ ಕೃಪೆಯಿಂದ ನಾವು ಕೊರೊನಾದಿಂದ ಬಚಾವಾಗಿದ್ದೇವೆ. ವೈದ್ಯರು, ನರ್ಸ್‌ಗಳು ದೇವರ ರೂಪವಾಗಿದ್ದಾರೆ. ದೇವರು ಸಫಾಯಿ ಕರ್ಮಚಾರಿಗಳ ರೂಪದಲ್ಲಿ ಬಂದಿದ್ದರು. ಆ್ಯಂಬುಲೆನ್ಸ್ ಚಾಲಕರು ಕೂಡ ದೇವರ ರೂಪದಲ್ಲಿ ಬಂದಿದ್ದರು. ದೇವರು ಬೇರೆಬೇರೆ ರೂಪದಲ್ಲಿ ಬಂದಿದ್ದರು.

ಕೊರೊನಾ ಲಾಕ್​ಡೌನ್ ಅವಧಿಯಲ್ಲಿ ಇದೇ ಭಾರತ ಬಡವರಿಗೆ ನೆರವಾಯಿತು. 8 ತಿಂಗಳು ಪಡಿತರ ನೀಡಿತು, ಜನಧನ್ ಅಕೌಂಟ್​ಗಳ  ಮೂಲಕ ಆರ್ಥಿಕ ನೆರವು ವಿಸ್ತರಿಸಿತು. ಆಧಾರ್, ಜನಧನ್ ಎಲ್ಲವೂ ಈ ಸಂಕಷ್ಟ ಸಂದರ್ಭದಲ್ಲಿ ನೆರವಿಗೆ ಬಂತು. ಕೆಲವರು ಆಧಾರ್, ಜನಧನ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು.

ನಮ್ಮ ಅರ್ಥ ವ್ಯವಸ್ಥೆಯಲ್ಲಿ ನಾವು ಸಾಕಷ್ಟು ಸುಧಾರಣೆಗಳನ್ನು ಮಾಡಿದ್ದೆವು. ಅದಕ್ಕಾಗಿ ಮಹತ್ತರ ಹೆಜ್ಜೆಗಳನ್ನು ಇಟ್ಟೆವು. ಈಗ ವಾಹನಗಳ ದಾಖಲೆ ಮಾರಾಟವಾಗುತ್ತಿದೆ. ನಮ್ಮ ಆರ್ಥಿಕ ವ್ಯವಸ್ಥೆ ಚೇತರಿಸಿಕೊಳ್ಳುತ್ತಿದೆ.

ಕೊರೊನಾ ಕಾಲದಲ್ಲಿಯೂ ನಾವು ಮೂರು ಮಹತ್ವದ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದೆವು. ಇದು ಅತ್ಯಗತ್ಯವಾಗಿತ್ತು. ನಾವು ಭವಿಷ್ಯದಲ್ಲಿ ಎದುರಿಸಬಹುದಾದ ಕೃಷಿ ಕ್ಷೇತ್ರದ ಸವಾಲುಗಳನ್ನು ಮನಗಂಡಿದ್ದೇವೆ. ಕೊರೊನಾ ಕಾಲದಲ್ಲಿಯೂ ನಮ್ಮ ವಿತ್ತೀಯ ಸುಧಾರಣೆ ಜಾರಿಯಲ್ಲಿತ್ತು. ಕೃಷಿ ಕಾಯ್ದೆ ದೇಶದ ರೈತರಿಗೆ ಸಹಕಾರಿಯಾಗಿದೆ. ದೆಹಲಿಯ ಗಡಿಭಾಗದಲ್ಲಿ ನಮ್ಮ ರೈತ ಸಹೋದರರು ಪ್ರತಿಭಟನೆ ಮಾಡುತ್ತಿದ್ದಾರೆ.

Published On - 4:33 pm, Wed, 10 February 21

ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು