ಸಂಸತ್​ನಲ್ಲಿ ಭದ್ರತಾ ಲೋಪ: 8 ಸಿಬ್ಬಂದಿ ಅಮಾನತು

| Updated By: Digi Tech Desk

Updated on: Jan 22, 2024 | 11:39 AM

ಸಂಸತ್ತಿನಲ್ಲಾದ ಭದ್ರತಾ ಲೋಪ(Security Breach)ದ ಹಿನ್ನೆಲೆಯಲ್ಲಿ 8 ಸಿಬ್ಬಂದಿಯನ್ನು ಲೋಕಸಭೆ ಕಾರ್ಯಾಲಯ ಅಮಾನತುಗೊಳಿಸಿದೆ. ಬುಧವಾರ ಸಂಸತ್ತಿನ ಭದ್ರತೆಯಲ್ಲಿ ಭಾರೀ ಲೋಪವಾಗಿತ್ತು, ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ಇಬ್ಬರು ಸಂಸದರಿದ್ದ ಸ್ಥಳಕ್ಕೆ ಆಗಮಿಸಿ ಅಶ್ರುವಾಯು ಸಿಡಿಸಿದ್ದರು.

ಸಂಸತ್​ನಲ್ಲಿ ಭದ್ರತಾ ಲೋಪ: 8 ಸಿಬ್ಬಂದಿ ಅಮಾನತು
ಸಂಸತ್
Follow us on

ಸಂಸತ್ತಿನಲ್ಲಾದ ಭದ್ರತಾ ಲೋಪ(Security Breach)ದ ಹಿನ್ನೆಲೆಯಲ್ಲಿ 8 ಸಿಬ್ಬಂದಿಯನ್ನು ಲೋಕಸಭೆ ಕಾರ್ಯಾಲಯ ಅಮಾನತುಗೊಳಿಸಿದೆ. ಬುಧವಾರ ಸಂಸತ್ತಿನ ಭದ್ರತೆಯಲ್ಲಿ ಭಾರೀ ಲೋಪವಾಗಿತ್ತು, ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ಇಬ್ಬರು ಸಂಸದರಿದ್ದ ಸ್ಥಳಕ್ಕೆ ಆಗಮಿಸಿ ಅಶ್ರುವಾಯು ಸಿಡಿಸಿದ್ದರು.

ಈ ಘಟನೆ ಕುರಿತು ಲೋಕಸಭೆ ಸೆಕ್ರಟರಿಯೇಟ್​ ಮಹತ್ವದ ಕ್ರಮ ಕೈಗೊಂಡಿದೆ. ಭದ್ರತಾ ಉಲ್ಲಂಘಟನೆಗಾಗಿ 8 ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಸಂಸತ್ತಿನ ಭದ್ರತಾ ಲೋಪದ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸಾಗರ್ ಶರ್ಮಾ, ಮನೋರಂಜನ್, ನೀಲಂ ಸೇರಿದಂತೆ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಯೋಜನೆಯನ್ನು 6 ಮಂದಿ ಒಟ್ಟಾಗಿ ಯೋಜಿಸಿದ್ದರು, ನಾಲ್ಕು ಜನರು ಒಂದೇ ಗುಂಪಿನ ಭಾಗವಾಗಿದ್ದಾರೆ.

ಮತ್ತಷ್ಟು ಓದಿ: ಲೋಕಸಭೆಯಲ್ಲಿ ಭದ್ರತಾ ವೈಫಲ್ಯ: CRPF ಡಿಜಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ ಗೃಹ ಇಲಾಖೆ

ಈ ಘಟನೆಗೆ ಸಂಬಂಧಿಸಿದಂತೆ 120 ಬಿ(ಕ್ರಿಮಿನಲ್ ಪಿತೂರಿ), 452(ಅನುಮತಿ ಇಲ್ಲದೆ ಪ್ರವೇಶ), 153(ಗಲಭೆಗೆ ಪ್ರಚೋದನೆ), 186(ಸಾರ್ವಜನಿಕ ಸೇವೆಗೆ ಅಡ್ಡಿಪಡಿಸುವುದು)ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:33 am, Thu, 14 December 23