ಸಂಸತ್ತಿನಲ್ಲಿ ಭದ್ರತಾ ಲೋಪ: ಆರೋಪಿಗಳ ಮೇಲೆ ಭಯೋತ್ಪಾದನಾ-ವಿರೋಧಿ ಕಾನೂನಿನಡಿ ಪ್ರಕರಣ ದಾಖಲು

Parliament security breach: ಸಂಸತ್ತಿನಲ್ಲಿ ಭದ್ರತಾ ಲೋಪ ಉಂಟಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಆರೋಪಿಗಳ ಮೇಲೆ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ), ಜೊತೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಂಸತ್ತಿನಲ್ಲಿ ಭದ್ರತಾ ಲೋಪ: ಆರೋಪಿಗಳ ಮೇಲೆ ಭಯೋತ್ಪಾದನಾ-ವಿರೋಧಿ ಕಾನೂನಿನಡಿ ಪ್ರಕರಣ ದಾಖಲು
Follow us
ಅಕ್ಷಯ್​ ಪಲ್ಲಮಜಲು​​
|

Updated on: Dec 14, 2023 | 11:51 AM

ಸಂಸತ್​​​​ ಅಧಿವೇಶಕ್ಕೆ ನುಗ್ಗಿ ಅಶ್ರುವಾಯು ಸಿಡಿಸಿದ ನಾಲ್ವರ ಮೇಲೆ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ), ಜೊತೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಂದು ಅವರನ್ನು ಕೋರ್ಟ್​​​​ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಸಂಸತ್ತಿನಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿರುವ ಸಮಯದಲ್ಲಿ ವೀಕ್ಷಕರ ಗ್ಯಾಲರಿಯಿಂದ ಜಿಗಿದು, ಅಶ್ರುವಾಯು ಸಿಡಿಸಿರುವ ಘಟನೆ ಇಡಿ ದೇಶವನ್ನೇ ಬೆಚ್ಚಿ ಬೀಳಿಸಿದೆ. 2001 ಸಂಸತ್​​ ದಾಳಿ ನಡೆದ ದಿನವೇ ಈ ಘಟನೆ ನಡೆದಿರುವುದು ಭಾರತ ಇತಿಹಾಸದಲ್ಲಿ ವಿಷಾದನೀಯ. ಜತೆಗೆ ಇಲ್ಲಿ ಭದ್ರತಾ ಲೋಪ ಉಂಟಾಗಿದೆ ಎಂಬುದನ್ನು ಸದನ ಒಪ್ಪಿಕೊಂಡಿದೆ.

ಮೈಸೂರು ಸಂಸದ ಪ್ರತಾಪ್​​​ ಸಿಂಹ ಅವರ ಪಿಎ ಈ ನಾಲ್ಕು ಜನರಿಗೆ ವೀಕ್ಷಕರ ಗ್ಯಾಲರಿಯ ಪಾಸ್​​ ನೀಡಿದ್ದಾರೆ. ಇದೀಗ ಈ ಪ್ರಕರಣ ಭಾರೀ ದೊಡ್ಡ ಚರ್ಚೆಗ ಕಾರಣವಾಗಿದೆ. ಈಗಾಗಲೇ ಆ ನಾಲ್ವರನ್ನು ಬಂಧಿಸಿ ಪೊಲೀಸರು ತನಿಖೆ ನಡೆಸಿದ್ದಾರೆ. ತನಿಖೆಯ ಮೊದಲ ವರದಿಯನ್ನು ಇಂದು ಆರೋಪಿಗಳ ಜತೆಗೆ ಕೋರ್ಟ್​​​ಗೆ ಹಾಜರುಪಡಿಸಲಿದ್ದಾರೆ.

ತನಿಖೆಯಲ್ಲಿ ಹೊರಬಿದ್ದ ಹತ್ತು ಸಂಗತಿಗಳು

  1. ಮಧ್ಯಾಹ್ನ ಸರಿಸುಮಾರು 1.30ರ ವೇಳೆಗೆ ಸಂಸತ್​​​​ ವೀಕ್ಷಕರ ಗ್ಯಾಲರಿಯಿಂದ ಸಾಗರ್​​​​ ಶರ್ಮ ಮತ್ತು ಮೈಸೂರಿನ ಮನೋರಂಜನ್​​​ ಅಧಿವೇಶದ ಬಾವಿಗೆ ಜಿಗಿದಿದ್ದಾರೆ. ಈ ವೇಳೆ ಹಳದಿ ಬಣ್ಣದ ಅಶ್ರುವಾಯುವನ್ನು ಸಿಡಿಸಿದ್ದಾರೆ.
  2. ಮತ್ತಿಬ್ಬರು ನೀಲಂ ಮತ್ತು ಅಮೋಲ್ ಎಂಬುವವರು ಸಂಸತ್​​​ ಹೊರಗೆ ಅಶ್ರುವಾಯುವನ್ನು ಸಿಡಿಸಿ ಪ್ರತಿಭಟಿಸಿದ್ದಾರೆ. ವಿಕ್ಕಿ ಶರ್ಮಾ ಎಂಬುವವರು ತಮ್ಮ ದೆಹಲಿಯಲ್ಲಿರುವ ಮನೆಯಲ್ಲಿ ಲಲಿತ್ ಝಾ, ಸಾಗರ್​​​​​ ಶರ್ಮ, ಮನೋರಂಜನ್​​​ ಅವರಿಗೆ ಆಶ್ರಯ ನೀಡಿದ್ದಾರೆ.
  3. ದೆಹಲಿ ಪೊಲೀಸರು ಇವರನ್ನು ಬಂಧಿಸಿದ ನಂತರ ತನಿಖೆಯನ್ನು ನಡೆಸಿದ್ದಾರೆ. ಈ ವೇಳೆ ಈ ನಾಲ್ವರು ಗತ್ ಸಿಂಗ್ ಫ್ಯಾನ್ ಕ್ಲಬ್ ಸಾಮಾಜಿಕ ಮಾಧ್ಯಮದಲ್ಲಿ ಸಂಪರ್ಕ ಹೊಂದಿದ್ದರು ಎಂದು ತನಿಖೆಯಲ್ಲಿ ತಿಳಿಸಲಾಗಿದೆ.
  4. ಈ ನಾಲ್ವರು ಆರೋಪಿಗಳು ಒಂದು ವರ್ಷದ ಹಿಂದೆ ಮೈಸೂರಿನಲ್ಲಿ ಒಟ್ಟಿಗೆ ಭೇಟಿ ಮಾಡಿದ್ದರು. ಸುಮಾರು ಒಂಬತ್ತು ತಿಂಗಳ ಹಿಂದೆ ಚಂಡೀಗಢ ವಿಮಾನ ನಿಲ್ದಾಣದ ಬಳಿ ರೈತರ ಪ್ರತಿಭಟನೆಯಲ್ಲೂ ಕೂಡ ಭಾಗಿಯಾಗಿದ್ದರು.
  5. ಸಾಗರ್ ಶರ್ಮಾ, 2023 ಜುಲೈನಲ್ಲಿ ಲಕ್ನೋದಿಂದ ದೆಹಲಿಗೆ ಬಂದಿದ್ದಾರೆ. ಈ ಸಮಯದಲ್ಲಿ ಸಂಸತ್​​​​ ಒಳಗೆ ಪ್ರವೇಶ ನಡೆಸಲು ಸಾಧ್ಯವಾಗಿಲ್ಲ. ಏಕೆಂದರೆ ಸಂಸತ್​​​ನಲ್ಲಿ ಭದ್ರತೆ ಹೆಚ್ಚಾಗಿತ್ತು. ಜತೆಗೆ ಈ ಭದ್ರತಾ ಚಕ್ರವ್ಯೂಹವನ್ನು ದಾಟುವ ಬಗ್ಗೆ ಅಲ್ಲಿಂದಲೇ ಪ್ಲಾನ್​​​ ಮಾಡಿಕೊಂಡಿದ್ದರು. ಈ ಭದ್ರತೆಯನ್ನು ದೂರದಿಂದಲೇ ಗಮನಿಸಿ ಹಿಂದೆಕ್ಕೆ ಬಂದಿದ್ದಾರೆ.
  6. ಈ ಅಶ್ರುವಾಯುಗಳನ್ನು ಅಮೋಲ್ ಶಿಂಧೆ, ಮಹಾರಾಷ್ಟ್ರದಿಂದ ತರಿಸಿಕೊಂಡಿದ್ದಾರೆ ಎಂದು ತನಿಖೆಯಲ್ಲಿ ಹೇಳಲಾಗಿದೆ. ನಿನ್ನೆ ಇಂಡಿಯಾ ಗೇಟ್‌ನಲ್ಲಿ ನಡೆದ ಸಭೆಯಲ್ಲಿ ಇವುಗಳನ್ನು ಹಂಚಿಕೆ ಮಾಡಲಾಗಿದೆ.
  7. ಈ 6 ಆರೋಪಿಗಳು ಸಂಸತ್​​​ ಒಳಗೆ ಹೋಗಲು ಪ್ರಯತ್ನ ಮಾಡಿದ್ದಾರೆ. ಆದರೆ ಮೈಸೂರಿನ ಮನೋರಂಜನ್​​​​ಗೆ ಮಾತ್ರ ಸಂಸತ್​​ ಪ್ರವೇಶಕ್ಕೆ ಪಾಸ್​​ ಸಿಕ್ಕಿತ್ತು. ಒಂದೇ ಪಾಸ್​​​ನಲ್ಲಿ ಮನೋರಂಜನ್​​​ ಹಾಗೂ ಆತನ ಜತೆ ಸಾಗರ್​​​​​ ಶರ್ಮ ಸಂಸತ್​​​ ಒಳಗೆ ಹೋಗಿದ್ದಾರೆ.
  8. ನಂತರ ಸಾಗರ್​​​ ಸಂದರ್ಶಕರ ಗ್ಯಾಲರಿಯಿಂದ ಹಳದಿ ಬಣ್ಣದ ಅಶ್ರುವಾಯುಗಳನ್ನು ಹಿಡಿದುಕೊಂಡು ಅಧಿವೇಶನದ ಬಾವಿಯತ್ತ ಜಿಗಿದಿದ್ದಾನೆ. ಈ ವೇಳೆ ಸದನದಲ್ಲಿ ಗೊಂದಲ ಉಂಟಾಗಿದೆ. ಈ ಸಮಯದಲ್ಲಿ ಸದನದಲ್ಲಿದ್ದ ಸದಸ್ಯರು ಸಾಗರ್​​ನ್ನು ಹಿಡಿದಿದ್ದಾರೆ. ಸಂಸತ್ತಿನ ಹೊರಗೆ ನೀಲಂ ಮತ್ತು ಅಮೋಲ್ ಅಶ್ರುವಾಯು ಸಿಡಿಸಿ ಪ್ರತಿಭಟಿಸಿದ್ದಾರೆ.
  9. ದೆಹಲಿ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ ಆರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದೆ. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸಂಸದರಿಗೆ ಅವರ ಸುರಕ್ಷತೆಯ ಬಗ್ಗೆ ಭರವಸೆ ನೀಡಿದ್ದು, ಸಮಗ್ರ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
  10. ಇನ್ನು ಆರೋಪಿಗಳ ಮೇಲೆ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ), ಜೊತೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ