ನೀವು ನಿಮ್ಮ ರಾಜಕೀಯ ವಿಧಾನವನ್ನು ಬದಲಿಸಿಕೊಳ್ಳಿ: ಸಂಸತ್ ಅಧಿವೇಶನದಲ್ಲಿ ಮಲ್ಲಿಕಾರ್ಜುನ ಖರ್ಗೆ

Parliament session:ನೆಹರೂ ಜೀ ಅವರು ಪ್ರಬಲ ಪ್ರತಿಪಕ್ಷದ ಅನುಪಸ್ಥಿತಿಯು ವ್ಯವಸ್ಥೆಯಲ್ಲಿ ಗಮನಾರ್ಹ ನ್ಯೂನತೆಗಳಿವೆ ಎಂದು ನಂಬುತ್ತಾರೆ, ಯಾವುದೇ ಪ್ರಬಲ ವಿರೋಧವಿಲ್ಲದಿದ್ದರೆ, ಅದು ಸರಿಯಲ್ಲ, ಈಗ, ಪ್ರಬಲ ವಿರೋಧವಿದೆ, ಇಡಿ, ಸಿಬಿಐ ಮೂಲಕ ದುರ್ಬಲಗೊಳಿಸುವುದರ ಮೇಲೆ ಕೇಂದ್ರ ಸರ್ಕಾರ ಗಮನ ಕೇಂದ್ರೀಕರಿಸಿದೆ,ಅವರು ತಮ್ಮ ಪಕ್ಷಕ್ಕೆ ಕರೆದೊಯ್ದು ಅಲ್ಲಿ ವಾಷಿಂಗ್ ಮೆಷಿನ್‌ನಲ್ಲಿ ಕೊಳೆ ತೊಳೆದಂತೆ ಅವರ ಮೇಲಿನ ಅಪರಾಧಗಳನ್ನು ಮನ್ನಿಸಿ ಅವರನ್ನು ತಮ್ಮ ಪಕ್ಷದಲ್ಲಿ ಖಾಯಂ ಮಾಡಿಕೊಳ್ಳುತ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ನೀವು ನಿಮ್ಮ ರಾಜಕೀಯ ವಿಧಾನವನ್ನು ಬದಲಿಸಿಕೊಳ್ಳಿ: ಸಂಸತ್ ಅಧಿವೇಶನದಲ್ಲಿ ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
Follow us
|

Updated on:Sep 18, 2023 | 2:21 PM

ದೆಹಲಿ ಸೆಪ್ಟೆಂಬರ್ 18: ಸಾಕಷ್ಟು ಗದ್ದಲದ ನಡುವೆ, ಸಂಸತ್​​ನ ‘ವಿಶೇಷ’ ಅಧಿವೇಶನ (Parliament session)ಇಂದು ಸೆಪ್ಟೆಂಬರ್ 18 ರಂದು ಪ್ರಾರಂಭವಾಗಿದೆ. ಅಧಿವೇಶನದ ಮೊದಲ ದಿನ ಸಂವಿಧಾನ ರಚನಾ ಸಭೆಯ ರಚನೆಯಿಂದ 75 ವರ್ಷಗಳ ಸಂಸದೀಯ ಪಯಣವನ್ನು ಗುರುತಿಸಿದೆ. ಇಂದಿನಿಂದ ಆರಂಭವಾದ ವಿಶೇಷ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಸೋಮವಾರ ವಿರೋಧ ಪಕ್ಷಗಳಿಗೆ ಮನವಿ ಮಾಡಿದ್ದಾರೆ. ನಿನ್ನೆ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಅಜೆಂಡಾದಲ್ಲಿ ಏನಿರುತ್ತದೆ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ನಾವು ಈಗಾಗಲೇ ನಮ್ಮ ಕಾರ್ಯಸೂಚಿಯನ್ನು ಪ್ರಕಟಿಸಿದ್ದೇವೆ, ಇಂದು ಚರ್ಚಿಸಲಿರುವ 75 ವರ್ಷಗಳ ಸಂಸತ್ತಿನ ಪಯಣಕ್ಕೆ ಹಾಜರಾಗಲು ನಾನು ಅವರನ್ನು ವಿನಂತಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಸಂಸತ್​​ನ ವಿಶೇಷ ಅಧಿವೇಶನ ಸೆಪ್ಟೆಂಬರ್ 18 ರಿಂದ 22 ರವರೆಗೆ ನಡೆಯಲಿದೆ. ಅಧಿವೇಶನದ ಸಮಯದಲ್ಲಿ, ಸೆ. 19ರಂದು ಕಲಾಪ ಹೊಸ ಕಟ್ಟಡದಲ್ಲಿ ನಡೆಯಲಿದೆ. ರಾಷ್ಟ್ರಗೀತೆಯ ನಂತರ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗಿದೆ. ಲೋಕಸಭೆಯಲ್ಲಿ ಕಲಾಪ ಆರಂಭಿಸಲು ಸದಸ್ಯರು ಸಭೆ ಸೇರುತ್ತಿದ್ದಂತೆ, ಪ್ರತಿಪಕ್ಷಗಳು ತಮ್ಮ ಮೈಕ್‌ಗಳನ್ನು ಆಫ್ ಮಾಡಿದ್ದನ್ನು ಪ್ರಶ್ನಿಸಿದ್ದು ಇದು ಕೆಲಕಾಲ ಗದ್ದಲಕ್ಕೆ ಕಾರಣವಾಯಿತು. ಸ್ಪೀಕರ್ ಓಂ ಬಿರ್ಲಾ ಅವರು ತಾಂತ್ರಿಕ ದೋಷ ಎಂದು ಕ್ಷಮೆಯಾಚಿಸಿದ್ದಾರೆ.

ಭಾಷಣದ ವೇಳೆ ಖರ್ಗೆ-ಧನ್ಖರ್ ನಗುವಿನ ಕ್ಷಣ

ರಾಜ್ಯಸಭಾ ಸಂಸದ ಮಲ್ಲಿಕಾರ್ಜುನ ಖರ್ಗೆ ಮತ್ತು ಉಪಾಧ್ಯಕ್ಷ ಜಗದೀಪ್ ಧನ್ಖರ್ ಅವರು ಮೇಲ್ಮನೆಯ ಕಲಾಪದಲ್ಲಿ ತಮಾಷೆಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡುತ್ತಿದ್ದಂತೆ ಸಂಸದರೊಬ್ಬರು ಅಲ್ಲಿಂದ ಎದ್ದು ಹೋದಾಗ, ಖರ್ಗೆ ಅವರ ಕೈ ಅವರಿಗೆ ತಾಗಿದೆ. ನೀವು ಎಲ್ಲಿ ಹೋಗುತ್ತಿದ್ದೀರಿ ಎಂದು ಖರ್ಗೆ ಕೇಳಿದಾಗ ಸದನದಲ್ಲಿ ತುಂಬಾ ನಗು. ಸಭಾಧ್ಯಕ್ಷರಾದ ಜಗದೀಪ್ ಧನ್ಖರ್ ಅವರು ಹಾಗೆ ಮಾಡುವುದು ಸಭೆಯ ಉಲ್ಲಂಘನೆ ಎಂದು ಹೇಳಿದಾಗ, ನೀವು ದೊಡ್ಡ ಮನಸ್ಸಿನವರು. ನೀವು ಸಭೆಯಲ್ಲಿ ಉಲ್ಲಂಘನೆ ಮಾಡಿದವರನ್ನು ಸಂಭಾಳಿಸುತ್ತೀರಿ. ನಾನು ಸಂಜಯ್ ಸಿಂಗ್ ಮತ್ತು ಚಡ್ಡಾ ಅವರನ್ನು ಕರೆಯಲು ಹೇಳಿದ್ದೆ ಎಂದಾಗ ಹಿಂದೆ ಕೂತ ಸಂಸದರು, ನೋಡಿ ಅವರು ಬಂದರು ಎಂದು ಹೇಳುತ್ತಿರುವದು ಕೇಳಿಸುತ್ತದೆ. ಎದ್ದು ಹೋಗಿದ್ದ ಸಂಸದ ವಾಪಸ್ ಬರುತ್ತಿರುವುದನ್ನು ನೋಡಿದ ಖರ್ಗೆ, ಸದ್ಯ ಅವರು ಬಂದರು, ಅವರು ಆ ಕಡೆ ಹೋದಾಗ ಸ್ವಲ್ಪ ಭಯ ಆಗಿ ಬಿಟ್ಟಿತು ಎಂದಾಗ ಸಭಾಪತಿ ಜೋರಾಗಿ ನಕ್ಕಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ 21 ಬಾರಿ, ಮನಮೋಹನ್ ಸಿಂಗ್ 30 ಬಾರಿ ಹೇಳಿಕೆ ನೀಡಿದ್ದಾರೆ . ಆದಾಗ್ಯೂ ಕೆಲವು ‘ಸಾಂಪ್ರದಾಯಿಕ ಕಾಮೆಂಟ್’ಗಳನ್ನು ಹೊರತುಪಡಿಸಿ, ಪ್ರಧಾನಿ ಮೋದಿ ಕೇವಲ ಎರಡು ಬಾರಿ ಮಾತ್ರ ತಮ್ಮ ಹೇಳಿಕೆಯನ್ನು ನೀಡಿದ್ದಾರೆ ಎಂದು ಮಲ್ಲಿಕಾರ್ಜನ ಖರ್ಗೆ ಹೇಳಿದ್ದಾರೆ.

ನಿಮ್ಮ ರಾಜಕೀಯ ಮಾಡುವ ವಿಧಾನವನ್ನು ಬದಲಿಸಿ, ಹೊಸ ಸಂಸತ್ ಗೆ ನಾವು ಹೋದರೆ ಹೊಸದೇನೂ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Parliament Special Session: ನಾವು ಹೊಸ ಸಂಸತ್ ​ಭವನಕ್ಕೆ ಹೋಗುತ್ತಿರುವುದು ನಿಜ ಆದರೆ ಹಳೆಯ ಭವನವು ಮುಂದಿನ ಪೀಳಿಗೆಗೆ ಪ್ರೇರಣೆ ನೀಡುತ್ತಿರುತ್ತದೆ: ನರೇಂದ್ರ ಮೋದಿ

ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹಲವು ವಿಷಯಗಳ ಕುರಿತು ಭಾಷಣ ಮಾಡುವಾಗ, ಸಭಾಪತಿ ಜಗದೀಪ್ ಧನ್ಖರ್ ಆಕ್ಷೇಪಿಸಿ ಖರ್ಗೆ ವಿಷಯಾಂತರ ಮಾಡುತ್ತಿದ್ದಾರೆ ಎಂದು ಹೇಳಿದರು. ಇದಕ್ಕೆ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಅವರು ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡುವಂತೆ ಸಭಾಪತಿಯನ್ನು ಕೋರಿದರು.

ರಾಜ್ಯಸಭೆಯಲ್ಲಿ ವಿವಿಧ ಅಧಿವೇಶನಗಳಲ್ಲಿ ನಡೆದಿರುವ ಅಡೆತಡೆಗಳ ಬಗ್ಗೆ ಪ್ರತಿಕ್ರಿಯಿಸಿದ ಧನ್ಖರ್, ಪ್ರತಿಪಕ್ಷಗಳು ಸಭಾಪತಿಯ ನಿರ್ಧಾರವನ್ನು ಅಗೌರವಗೊಳಿಸಿರುವುದನ್ನು ಆಕ್ಷೇಪಿಸಿದರು.

ಜವಾಹರಲಾಲ್ ನೆಹರು ಬಗ್ಗೆ ಖರ್ಗೆ ಹೇಳಿದ್ದೇನು?

ನೆಹರೂ ಜೀ ಅವರು ಪ್ರಬಲ ಪ್ರತಿಪಕ್ಷದ ಅನುಪಸ್ಥಿತಿಯು ವ್ಯವಸ್ಥೆಯಲ್ಲಿ ಗಮನಾರ್ಹ ನ್ಯೂನತೆಗಳಿವೆ ಎಂದು ನಂಬುತ್ತಾರೆ, ಯಾವುದೇ ಪ್ರಬಲ ವಿರೋಧವಿಲ್ಲದಿದ್ದರೆ, ಅದು ಸರಿಯಲ್ಲ, ಈಗ, ಪ್ರಬಲ ವಿರೋಧವಿದೆ, ಇಡಿ, ಸಿಬಿಐ ಮೂಲಕ ದುರ್ಬಲಗೊಳಿಸುವುದರ ಮೇಲೆ ಕೇಂದ್ರ ಸರ್ಕಾರ ಗಮನ ಕೇಂದ್ರೀಕರಿಸಿದೆ,ಅವರು ತಮ್ಮ ಪಕ್ಷಕ್ಕೆ ಕರೆದೊಯ್ದು ಅಲ್ಲಿ ವಾಷಿಂಗ್ ಮೆಷಿನ್‌ನಲ್ಲಿ ಕೊಳೆ ತೊಳೆದಂತೆ ಅವರ ಮೇಲಿನ ಅಪರಾಧಗಳನ್ನು ಮನ್ನಿಸಿ ಅವರನ್ನು ತಮ್ಮ ಪಕ್ಷದಲ್ಲಿ ಖಾಯಂ ಮಾಡಿಕೊಳ್ಳುತ್ತಾರೆ. ಇವತ್ತು ಏನಾಗುತ್ತಿದೆ ಎಂಬುದನ್ನು ನೀವು ನೋಡಬಹುದು, ಸಂಸತ್​​ಗೆ ಪ್ರಧಾನಿ ಅಪರೂಪಕ್ಕೆ ಬರುತ್ತಾರೆ. ಅವರು ಅವರ ಕಾರ್ಯಕ್ರಮ ಮಗಿಸಿ ನಂತರ ಹೊರಟು ಹೋಗುತ್ತಾರೆ ಎಂದು ಖರ್ಗೆ ಹೇಳಿದ್ದಾರೆ.

 ನೆಹರೂ ಅವರ ಕೊಡುಗೆಗೆ ಶ್ಲಾಘನೆ

ಚಂದ್ರಯಾನದ ಬಗ್ಗೆ ಚರ್ಚೆಗಳು ನಡೆಯುತ್ತಿವೆ, 1946 ರಲ್ಲಿ ಜವಾಹರಲಾಲ್ ನೆಹರು ಅವರ ನೇತೃತ್ವದಲ್ಲಿ ಪರಮಾಣು ಸಂಶೋಧನಾ ಸಮಿತಿಯನ್ನು ರಚಿಸಲಾಯಿತು ಎಂದು ನಾನು ಹೇಳಲು ಬಯಸುತ್ತೇನೆ. ಅಲ್ಲಿಂದ ಮುಂದೆ ಸಾಗಿ 1964ರಲ್ಲಿ ಇಸ್ರೋವನ್ನು ಅಭಿವೃದ್ಧಿಪಡಿಸಿದೆವು ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಲೋಕಸಭೆಯಲ್ಲಿ ಹೇಳಿದ್ದಾರೆ. ‘ಭಾರತ-ಇಂಡಿಯಾ’ದ ವಿಚಾರವಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೇಶದ ಹೆಸರನ್ನು ಅಧಿಕೃತವಾಗಿ ‘ಭಾರತ್’ ಎಂದು ಬದಲಾಯಿಸಿದರೆ ಇಸ್ರೋವನ್ನು ಈಗ ಏನೆಂದು ಕರೆಯುತ್ತಾರೆ “ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಲ್ಲದಿದ್ದರೆ ಏನು? ಈ ಭಾರತ, ಇಂಡಿಯಾ ಸಮಸ್ಯೆಯನ್ನು ಎಲ್ಲಿಂದ ತರಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.

‘ಇದು ಪ್ರಜಾಪ್ರಭುತ್ವದ ತಾಯಿಯ ಮೇಲಿನ ದಾಳಿ’

“ಸಂಸತ್ತಿನ ಮೇಲೆ ಭಯೋತ್ಪಾದಕ ದಾಳಿ ನಡೆದಿದೆ. ಇದು ಕಟ್ಟಡದ ಮೇಲಿನ ದಾಳಿಯಲ್ಲ. ಒಂದು ರೀತಿಯಲ್ಲಿ ಇದು ಪ್ರಜಾಪ್ರಭುತ್ವದ ತಾಯಿಯ ಮೇಲೆ ನಡೆದ ದಾಳಿ. ಆ ಘಟನೆಯನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ಭಯೋತ್ಪಾದಕರ ವಿರುದ್ಧ ಹೋರಾಡುವಾಗ ಸಂಸತ್ ಮತ್ತು ಅದರ ಎಲ್ಲಾ ಸದಸ್ಯರನ್ನು ರಕ್ಷಿಸಲು ಗುಂಡಿಗೆ ಎದೆಯೊಡ್ಡಿದವರನ್ನು ದೆ ನಾನು ನಮಸ್ಕರಿಸುತ್ತೇನೆ, ”ಎಂದು ಪ್ರಧಾನಿ ಮೋದಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂಸತ್​​ನಲ್ಲಿ ಮಾಡಿದ ಭಾಷಣಗಳನ್ನು ನೆನಪಿಸಿಕೊಂಡರು. ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಅದ್ಭುತ ಉಪಕ್ರಮಗಳು ಸಂಸತ್ತಿನಲ್ಲಿ ಹೇಗೆ ಸಾಕ್ಷಿಯಾಯಿತು ಎಂಬುದನ್ನು ಅವರು ಹೇಳಿದ್ದಾರೆ.

ಇದನ್ನೂ ಓದಿParliament Special Session: ರೈಲ್ವೆ ಪ್ಲಾಟ್​ಫಾರ್ಮ್​ನಲ್ಲಿ ಮಲಗುವ ಮಗು ಸಂಸತ್ ತಲುಪುತ್ತೆ ಎಂದರೆ ಇದೇ ಭಾರತದ ಪ್ರಜಾಪ್ರಭುತ್ವದ ಶಕ್ತಿ: ಮೋದಿ

ಸಂಸದರಾಗಿ ಬಿಜೆಪಿ ನಾಯಕ ಪ್ರಮಾಣ ವಚನ ಸ್ವೀಕಾರ

ಬಿಜೆಪಿ ನಾಯಕ ದಿನೇಶ್ ಶರ್ಮಾ ಅವರು ರಾಜ್ಯಸಭೆಯಲ್ಲಿ ಸಂಸತ್ ಸದಸ್ಯರಾಗಿ (MP) ಪ್ರಮಾಣ ವಚನ ಸ್ವೀಕರಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:18 pm, Mon, 18 September 23

ತಾಜಾ ಸುದ್ದಿ
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್
ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್
ರೇಣುಕಾ ಸ್ವಾಮಿ ಪ್ರಕರಣ: ಕಾರು ಚಾಲಕನ ಕುಟುಂಬದ ಗೋಳು ಕೇಳೋರ್ಯಾರು?
ರೇಣುಕಾ ಸ್ವಾಮಿ ಪ್ರಕರಣ: ಕಾರು ಚಾಲಕನ ಕುಟುಂಬದ ಗೋಳು ಕೇಳೋರ್ಯಾರು?
ಪೆಟ್ರೋಲ್ -ಡೀಸೆಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿ
ಪೆಟ್ರೋಲ್ -ಡೀಸೆಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿ
ರೇಣುಕಾ ಸ್ವಾಮಿ ಅಪಹರಣಕ್ಕೆ ಬಳಕೆ ಆಗಿದ್ದ ಕಾರು ಜಪ್ತಿ; ಇಲ್ಲಿದೆ ವಿಡಿಯೋ..
ರೇಣುಕಾ ಸ್ವಾಮಿ ಅಪಹರಣಕ್ಕೆ ಬಳಕೆ ಆಗಿದ್ದ ಕಾರು ಜಪ್ತಿ; ಇಲ್ಲಿದೆ ವಿಡಿಯೋ..
ಬಳ್ಳಾರಿ: ನೋಬಲ್ ಬುಕ್ ಆಫ್ ರೆಕಾರ್ಡ್ಸ್​​​ಗೆ ಸೇರಿದ 4 ತಿಂಗಳ ಮಗು ಸಾಯಿರಾ
ಬಳ್ಳಾರಿ: ನೋಬಲ್ ಬುಕ್ ಆಫ್ ರೆಕಾರ್ಡ್ಸ್​​​ಗೆ ಸೇರಿದ 4 ತಿಂಗಳ ಮಗು ಸಾಯಿರಾ
ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಆಸನ ಅರ್ಧ ಚಕ್ರಾಸನ
ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಆಸನ ಅರ್ಧ ಚಕ್ರಾಸನ
ಪವಿತ್ರಾ ಗೌಡ ಮನೆಯಲ್ಲಿ ಮಹಜರು; ಹೇಗಿದೆ ಕೊಲೆ ಆರೋಪಿಯ ಬಂಗಲೆ?
ಪವಿತ್ರಾ ಗೌಡ ಮನೆಯಲ್ಲಿ ಮಹಜರು; ಹೇಗಿದೆ ಕೊಲೆ ಆರೋಪಿಯ ಬಂಗಲೆ?
ವಿಡಿಯೋ: ಆದಿಚುಂಚನಗಿರಿಗೆ ಸೆಂಟ್ರಲ್ ಮಿನಿಸ್ಟರ್ ಕುಮಾರಣ್ಣ ಖಡಕ್​ ಎಂಟ್ರಿ
ವಿಡಿಯೋ: ಆದಿಚುಂಚನಗಿರಿಗೆ ಸೆಂಟ್ರಲ್ ಮಿನಿಸ್ಟರ್ ಕುಮಾರಣ್ಣ ಖಡಕ್​ ಎಂಟ್ರಿ