Viral Video: ಇಲಾಖೆಯ ಕಾರು, ಸಮವಸ್ತ್ರ ಬಳಸಿಕೊಂಡು ಡಿಫರೆಂಟ್ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡ ಪೊಲೀಸ್ ದಂಪತಿ
ಒಂದೇ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಈ ದಂಪತಿಗಳು ತಮ್ಮ ಪ್ರಿ ವೆಡ್ಡಿಂಗ್ ಶೂಟ್ನಲ್ಲಿ ಇಲಾಖೆಯ ಸಮವಸ್ತ್ರವನ್ನು ಬಳಸಿಕೊಂಡಿದಲ್ಲದೆ. ಇಲಾಖೆ ಕಾರುಗಳನ್ನು ಕೂಡ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದೀಗ ಈ ಪ್ರಿ ವೆಡ್ಡಿಂಗ್ ಶೂಟ್ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮಿಶ್ರ ಪ್ರಕ್ರಿಯೆಗಳು ಬಂದಿದೆ. ಕೆಲವರು ಈ ಇಬ್ಬರು ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಹೇಳಿದರೆ, ಇನ್ನು ಕೆಲವರು ತುಂಬಾ ಚೆನ್ನಾಗಿದೆ ಎಂದು ಹೇಳಿದ್ದಾರೆ.
ಹೈದರಾಬಾದ್‌ನ ಪೊಲೀಸ್ ದಂಪತಿ ಮದುವೆ ಪ್ರಿ ವೆಡ್ಡಿಂಗ್ ಶೂಟ್ (pre-wedding shoot) ಇದೀಗ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಒಂದೇ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಈ ದಂಪತಿಗಳು ತಮ್ಮ ಪ್ರಿ ವೆಡ್ಡಿಂಗ್ ಶೂಟ್ನಲ್ಲಿ ಇಲಾಖೆಯ ಸಮವಸ್ತ್ರವನ್ನು ಬಳಸಿಕೊಂಡಿದಲ್ಲದೆ. ಇಲಾಖೆ ಕಾರುಗಳನ್ನು ಕೂಡ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದೀಗ ಈ ಪ್ರಿ ವೆಡ್ಡಿಂಗ್ ಶೂಟ್ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮಿಶ್ರ ಪ್ರಕ್ರಿಯೆಗಳು ಬಂದಿದೆ. ಕೆಲವರು ಈ ಇಬ್ಬರು ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಹೇಳಿದರೆ, ಇನ್ನು ಕೆಲವರು ತುಂಬಾ ಚೆನ್ನಾಗಿದೆ ಎಂದು ಹೇಳಿದ್ದಾರೆ.
ವಿಡಿಯೋದಲ್ಲಿ ಪೊಲೀಸ್ ಅಧಿಕಾರಿಗಳಿಬ್ಬರು ಪ್ರತ್ಯೇಕ ಪ್ರತ್ಯೇಕ ಪೊಲೀಸ್ ಕಾರಿನಲ್ಲಿ ಬಂದು ಠಾಣೆಯ ಮುಂದೆ ಇಳಿಯುತ್ತಾರೆ, ನಂತರ ಸ್ವಲ್ಪ ಸಮಯದವರೆಗೆ ಸಂಭಾಷಣೆ ನಡೆಯುತ್ತದ . ಇದಕ್ಕೆ ಎರಡು ನಿಮಿಷಗಳ ಬ್ಯಾಗ್ರೌಂಡ್ ಮ್ಯೂಸಿಕ್ ಹಾಕಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ. ಇನ್ನು ವಿಡಿಯೋವನ್ನು ನೋಡಿ ಹಿರಿಯ ಅಧಿಕಾರಿಗಳು ಅಸಮಾಧನಗೊಂಡಿದ್ದಾರೆ. ಐಪಿಎಸ್ ಅಧಿಕಾರಿ ಸಿವಿ ಆನಂದ್ ಅವರು ಇದು ಅಧಿಕಾರವನ್ನು ದುರುಪಯೋಗ ಮಾಡಿದಂತೆ ಎಂದು ದಂಪತಿಗಳಿಗೆ ಮತ್ತು ಸಾರ್ವಜನಿಕರಿಗೆ ತಿಳಿಸಿದ್ದಾರೆ. ಈ ದಂಪತಿಗಳಿಗೆ ಕರ್ತವ್ಯದ ಮೇಲಿರುವ ಪ್ರೀತಿ ಮತ್ತು ಸಮಸ್ತ್ರದ ಬಗ್ಗೆ ಇರುವ ಗೌರವವನ್ನು ಶಾಘ್ಲಿಸಿದರು.
ವೈರಲ್ ವಿಡಿಯೋ ಇಲ್ಲಿದೆ
#Watch | Pre-wedding shoot of two #Hyderabad cops goes viral. pic.twitter.com/Lk0tiKiLnQ
— Deccan Chronicle (@DeccanChronicle) September 16, 2023
ಈ ದಂಪತಿಗಳು ಮದುವೆಯ ಬಗ್ಗೆ ತುಂಬಾ ಜೋಶ್ನಲ್ಲಿದ್ದಾರೆ. ಆದರೆ ಇದು ಸ್ವಲ್ಪ ಇಲಾಖೆಗೆ ಮುಜುಗಾರ ಉಂಟು ಮಾಡಿದೆ. ನಾನು ಈ ಮದುವೆಗೆ ಹೋಗಿ ಅವರಿಗೆ ಶುಭಾಶಯ ತಿಳಿಸುವೇ ಎಂದು ಹೇಳಿದ್ದಾರೆ. X (ಹಿಂದೆ ಟ್ವಿಟ್ಟರ್)ನಲ್ಲಿ ಈ ಬಗ್ಗೆ ಐಪಿಎಸ್ ಅಧಿಕಾರಿ ಸಿವಿ ಆನಂದ್ ಬರೆದುಕೊಂಡಿದ್ದಾರೆ. ಈ ವಿಡಿಯೋದ ಬಗ್ಗೆ X (ಹಿಂದೆ ಟ್ವಿಟ್ಟರ್)ನಲ್ಲಿ ಮಿಶ್ರ ಪ್ರಕ್ರಿಯೆಗಳು ಬಂದಿದೆ. ತಮ್ಮ ಮದುವೆ ಬಗ್ಗೆ ಅತಿಯಾಗಿ ಉತ್ಸುಕರಾಗಿದ್ದಾರೆಂದು ತೋರುತ್ತದೆ, ಆದರೆ ಇದು ಇಲಾಖೆಗೆ ಮುಜುಗಾರ ಉಂಟು ಮಾಡಬಹುದು ಎಂದು ಹೇಳಿದ್ದಾರೆ. ಪೊಲೀಸ್ ಸೇವೆ ತುಂಬಾ ಕಠಿಣವಾಗಿರುವುದು. ಇನ್ನು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಮದುವೆ ಎನ್ನುವುದು ತುಂಬಾ ಕಷ್ಟ, ಆದರೆ ಇವರಿಬ್ಬರು ಒಂದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಕಾರಣ ಇಬ್ಬರ ಜೀವನ ಚೆನ್ನಾಗಿರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶಸ್ತ್ರಚಿಕಿತ್ಸೆ ಮೂಲಕ ಗುಪ್ತಾಂಗದಿಂದ ಬುಲೆಟ್ ತೆಗೆದು ಹಾಕಿದ ಮಹಿಳೆ!
ಈ ವಿಡಿಯೋ ಬಗ್ಗೆ ಪ್ರಕ್ರಿಯೆ ನೀಡಿದ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಈ ಪೊಲೀಸ್ ದಂಪತಿಗಳು ನಮ್ಮ ಇಲಾಖೆಯ ಕಾರು ಮತ್ತು ಸಮಸ್ತ್ರವನ್ನು ಫೋಟೋ ಶೂಟ್ಗೆ ಬಳಸಿರುವುದರಲ್ಲಿ ಯಾವುದೇ ತೊಂದರೆ ಇಲ್ಲ, ನಮ್ಮ ಅನುಮತಿ ಪಡೆದು ಈ ಶೂಟಿಂಗ್ಮಾಡಿದ್ದಾರೆ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:32 pm, Mon, 18 September 23