Viral Video: ನೋಡನೋಡುತ್ತಿದ್ದಂತೆ ಕುಸಿದುಬಿದ್ದ ಬೆಟ್ಟ; ರುದ್ರಪ್ರಯಾಗದ ಭೂಕುಸಿತದ ವಿಡಿಯೋ ವೈರಲ್
Rudraprayag Landslide: ಗುಡ್ಡದ ಒಂದು ಭಾಗ ಕುಸಿದು ಬೀಳುವ ಮುನ್ನ ಸ್ಥಳೀಯರು ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ರುದ್ರಪ್ರಯಾಗ: ಉತ್ತರಾಖಂಡದ ರುದ್ರಪ್ರಯಾಗದಲ್ಲಿ (Rudraprayag) ಇಂದು (ಗುರುವಾರ) ಭಾರೀ ಭೂಕುಸಿತ (Landslide) ಉಂಟಾಗಿ ರಾಷ್ಟ್ರೀಯ ಹೆದ್ದಾರಿ-109ರಲ್ಲಿ ಸಂಚಾರ ಸ್ಥಗಿತಗೊಂಡಿದೆ. ನೋಡನೋಡುತ್ತಿದ್ದಂತೆ ಬೆಟ್ಟದ ಒಂದು ಭಾಗವು ತರ್ಸಲಿ ಗ್ರಾಮದ ಬಳಿ ರಸ್ತೆಗೆ ಕುಸಿದು ಬಿದ್ದಿದೆ. ಈ ಭಯಾನಕ ವಿಡಿಯೋ ವೈರಲ್ (Shocking Video Viral) ಆಗಿದೆ. ಅದೃಷ್ಟವಶಾತ್ ಜೀಪ್, ಬೈಕ್, ಬಸ್ಗಳು ಆ ಸ್ಥಳದತ್ತ ಚಲಿಸುವ ಮೊದಲೇ ಈ ಘಟನೆ ನಡೆದಿರುವುದರಿಂದ ಸಾಕಷ್ಟು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಸ್ತೆ ಬಂದ್ ಆಗಿರುವುದರಿಂದ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಗುಡ್ಡದ ಒಂದು ಭಾಗ ಕುಸಿದು ಬೀಳುವ ಮುನ್ನ ಸ್ಥಳೀಯರು ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸದ್ಯದಲ್ಲೇ ಹೆದ್ದಾರಿಯನ್ನು ಸಂಚಾರಮುಕ್ತಗೊಳಿಸಲಾಗುವುದು, ವಾಹನಗಳ ಸಂಚಾರ ಪುನರಾರಂಭವಾಗಲಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಮಯೂರ್ ದೀಕ್ಷಿತ್ ತಿಳಿಸಿದ್ದಾರೆ.
Debris triggered by landslide blocks NH-109 at Rudraprayag
Read @ANI Story | https://t.co/qwtgUYxXd2#Landslide #Rudrprayag #NH109 pic.twitter.com/TIIwqSQeTb
— ANI Digital (@ani_digital) September 22, 2022
ಇದನ್ನೂ ಓದಿ: BIG NEWS: ನೇಪಾಳದಲ್ಲಿ ಭಾರಿ ಭೂಕುಸಿತ, 13 ಮಂದಿ ಸಾವು, 10 ಮಂದಿ ಕಾಣೆ
“ಪ್ರಯಾಣಿಕರನ್ನು ಸುರಕ್ಷಿತ ಸ್ಥಳಗಳಲ್ಲಿ ನಿಲ್ಲಿಸಲಾಗಿದೆ. ಹೆದ್ದಾರಿಯನ್ನು ತೆರೆಯಲಾಗುತ್ತಿದೆ. ಬೆಟ್ಟದ ಮಣ್ಣಿನ ಅವಶೇಷಗಳನ್ನು ತೆರವುಗೊಳಿಸಿದ ನಂತರ ವಾಹನ ಸಂಚಾರ ಪುನರಾರಂಭವಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಕೇದಾರನಾಥದ ಕಡೆಗೆ ಹೋಗುವ ಯಾತ್ರಾರ್ಥಿಗಳನ್ನು ರುದ್ರಪ್ರಯಾಗ, ತಿಲವಾರ, ಅಗಸ್ತ್ಯಮುನಿ ಮತ್ತು ಗುಪ್ತಕಾಶಿಯಲ್ಲಿ ತಡೆಯಗಾಲಿದೆ. ಸೋನ್‌ಪ್ರಯಾಗದಿಂದ ಹಿಂತಿರುಗುತ್ತಿದ್ದವರನ್ನು ಸೋನ್‌ಪ್ರಯಾಗ ಮತ್ತು ಸೀತಾಪುರದಲ್ಲಿ ಸುರಕ್ಷಿತ ಸ್ಥಳಗಳಲ್ಲಿ ತಡೆದು ನಿಲ್ಲಿಸಲಾಗಿದೆ.