
ಹರಿದ್ವಾರ, ಜುಲೈ 9: ಜಾಗತಿಕ ಆಯುರ್ವೇದ ಕ್ಷೇತ್ರದಲ್ಲಿ ಪತಂಜಲಿ ಆಯುರ್ವೇದ ಸಂಸ್ಥೆ (Patanjali Ayurveda) ಮಹತ್ವದ ಹೆಜ್ಜೆ ಇರಿಸಿದೆ. ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ನೇತೃತ್ವದ ಈ ಸಂಸ್ಥೆಯು ಇಂದು ಟೆಲಿಮೆಡಿಸಿನ್ ಕೇಂದ್ರವನ್ನು (Patanjali telemedicine center) ಉದ್ಘಾಟಿಸಿದೆ. ಇದು ವಿಶ್ವದ ಅತಿ ದೊಡ್ಡ ಮತ್ತು ಅಧಿಕೃತ ಆಯುರ್ವೇದ ಟೆಲಿಮೆಡಿಸಿನ್ ಪ್ಲಾಟ್‌ಫಾರ್ಮ್ ಎನಿಸಿದೆ. ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ವೇದ ಮಂತ್ರೋಚ್ಛಾರ ಮತ್ತು ಯಜ್ಞಗಳ ಮೂಲಕ ಈ ಪತಂಜಲಿ ಟೆಲಿ ಮೆಡಿಸಿನ್ ಸೆಂಟರ್ ಅನ್ನು ಔಪಚಾರಿಕವಾಗಿ ಅನಾವರಣಗೊಳಿಸಿದರು.
ಈ ಟೆಲಿಮೆಡಿಸಿನ್ ಸೆಂಟರ್ ಹರಿದ್ವಾರದಿಂದ ಹಿಡಿದು ದೇಶದ ಪ್ರತೀ ಮನೆ ಬಾಗಿಲಿಗೂ ಭಾರತದ ಋಷಿ ಪರಂಪರೆಯನ್ನು ಹರಡುವ ದೈವಿಕ ಸಾಧನವಾಗಲಿದೆ ಎಂದು ಈ ಸಂದರ್ಭದಲ್ಲಿ ಬಾಬಾ ರಾಮದೇವ್ ಹೇಳಿದರು. ಈಗ ವೈದ್ಯಕೀಯ ಸೇವೆಗಳು ಆನ್‌ಲೈನ್‌ನಲ್ಲೇ ಲಭ್ಯ ಇದ್ದು, ಅನಾರೋಗ್ಯ ಪೀಡಿತರಿಗೆ ಇದು ಬಹಳ ಅನುಕೂಲವಾಗುತ್ತದೆ. ಪತಂಜಲಿಯ ಟೆಲಿಮೆಡಿಸಿನ್ ಕೇಂದ್ರವು ಮಾನವ ಸೇವೆಯ ಅತ್ಯುತ್ತಮ ಉಪಕ್ರಮವಾಗಿದೆ ಎಂದು ಪತಂಜಲಿ ಸಂಸ್ಥಾಪಕರು ಬಣ್ಣಿಸಿದರು.
ಇದನ್ನೂ ಓದಿ: Divya Medha Vati: ತಲೆನೋವು, ನಿದ್ರಾಹೀನತೆ ಸಮಸ್ಯೆಗೆ ಪತಂಜಲಿ ದಿವ್ಯ ಮೇಧಾ ವಟಿ ಪರಿಹಾರ
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಆಚಾರ್ಯ ಬಾಲಕೃಷ್ಣ, ಇಂದು ಇಡೀ ಜಗತ್ತು ಯೋಗಕ್ಕಾಗಿ ಭಾರತದತ್ತ ನೋಡುತ್ತಿರುವಂತೆ, ಆಯುರ್ವೇದ ಮತ್ತು ಅದರ ಸೇವೆಗಳಿಗಾಗಿಯೂ ಜಗತ್ತು ಈಗ ಭಾರತದತ್ತ ಭರವಸೆಯಿಂದ ನೋಡುತ್ತಿದೆ ಎಂದು ಹೇಳಿದರು. ಈ ಟೆಲಿಮೆಡಿಸಿನ್ ಕೇಂದ್ರವು ಆ ದಿಕ್ಕಿನಲ್ಲಿ ಒಂದು ಉತ್ತಮ ಹೆಜ್ಜೆಯಾಗಿದೆ. ಪತಂಜಲಿ ಟೆಲಿಮೆಡಿಸಿನ್ ಕೇಂದ್ರವು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ಮತ್ತು ಸುಸಂಘಟಿತ ಮಾದರಿಯಾಗಿದೆ ಎಂದು ಆಚಾರ್ಯರು ಅಭಿಪ್ರಾಯಪಟ್ಟರು.
ಈ ಉಪಕ್ರಮವು ಪ್ರತಿ ಮನೆಯಲ್ಲೂ ಅಧಿಕೃತ, ಶಾಸ್ತ್ರಾಧಾರಿತ ಆಯುರ್ವೇದ ಆರೋಗ್ಯ ಪರಿಹಾರಗಳಿಗೆ ಆಧಾರವಾಗಿರುತ್ತದೆ. ದೂರದ ಪ್ರದೇಶಗಳಲ್ಲಿರುವ ಮತ್ತು ವಿದೇಶಗಳಲ್ಲಿ ವಾಸಿಸುವ ಮತ್ತು ಕೇಂದ್ರಕ್ಕೆ ಭೇಟಿ ನೀಡಲು ಸಾಧ್ಯವಾಗದಿರುವ ಜನರಿಗೆ ಈ ಟೆಲಿಮೆಡಿಸಿನ್ ಸೆಂಟರ್ ಪ್ರಯೋಜನ ಆಗಬಹುದು.
ಇದನ್ನೂ ಓದಿ: Patanjali ದಿವ್ಯ ಶ್ವಾಸಾರಿ ವಟಿ: ಪ್ರಯೋಜನಗಳು, ಡೋಸೇಜ್ ಮತ್ತು ಮುನ್ನೆಚ್ಚರಿಕೆಗಳು
ಯಜ್ಞವನ್ನು ಪೂರ್ಣಗೊಳಿಸುವುದರೊಂದಿಗೆ ಈ ಟೆಲಿಮೆಡಿಸಿನ್ ಸೆಂಟರ್ ಉದ್ಘಾಟನಾ ಸಮಾರಂಭವು ಮುಕ್ತಾಯವಾಯಿತು. ಪತಂಜಲಿ ಆಯುರ್ವೇದ ಆಸ್ಪತ್ರೆಯ ಎಲ್ಲಾ ವೈದ್ಯರು ಮತ್ತು ಪತಂಜಲಿ ಆಯುರ್ವೇದ ಕಾಲೇಜಿನ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
(ಪತ್ರಿಕಾ ಪ್ರಕಟಣೆ)