AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Divya Medha Vati: ತಲೆನೋವು, ನಿದ್ರಾಹೀನತೆ ಸಮಸ್ಯೆಗೆ ಪತಂಜಲಿ ದಿವ್ಯ ಮೇಧಾ ವಟಿ ಪರಿಹಾರ

Insomnia & Headaches: Natural Ayurvedic Relief with Divya Medha Vati:ಇಂದಿನ ಒತ್ತಡದ ಜೀವನಶೈಲಿಯಲ್ಲಿ ನಿದ್ರಾಹೀನತೆ ಮತ್ತು ತಲೆನೋವು ಸಾಮಾನ್ಯ ಸಮಸ್ಯೆಗಳಾಗಿವೆ. ಪತಂಜಲಿಯ ದಿವ್ಯ ಮೇಧಾ ವಟಿ ಈ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರವನ್ನು ನೀಡುತ್ತದೆ ಎಂದು ಸಂಶೋಧನೆಗಳು ಸೂಚಿಸುತ್ತವೆ. ಇದು ಗಿಡಮೂಲಿಕೆಗಳ ಸಂಯೋಜನೆಯನ್ನು ಹೊಂದಿದ್ದು, ಮನಸ್ಸನ್ನು ಶಾಂತಗೊಳಿಸಿ, ನಿದ್ರೆಯನ್ನು ಉತ್ತೇಜಿಸುತ್ತದೆ ಮತ್ತು ತಲೆನೋವನ್ನು ಕಡಿಮೆ ಮಾಡುತ್ತದೆ. ಆದಾಗ್ಯೂ, ಯಾವುದೇ ಔಷಧಿಯನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ.

Divya Medha Vati: ತಲೆನೋವು, ನಿದ್ರಾಹೀನತೆ ಸಮಸ್ಯೆಗೆ ಪತಂಜಲಿ ದಿವ್ಯ ಮೇಧಾ ವಟಿ ಪರಿಹಾರ
ಪತಂಜಲಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 08, 2025 | 3:24 PM

Share

ಇಂದಿನ ವೇಗದ ಜೀವನದಲ್ಲಿ ತಲೆನೋವು ಮತ್ತು ನಿದ್ರಾಹೀನತೆ ಸಾಮಾನ್ಯ ಸಮಸ್ಯೆಗಳಾಗಿವೆ. ಮಾನಸಿಕ ಒತ್ತಡ, ಅತಿಯಾದ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಬಳಕೆ, ಕಳಪೆ ಜೀವನಶೈಲಿ, ಆತಂಕ, ಕೆಫೀನ್ ಸೇವನೆ ಮತ್ತು ಅನಿಯಮಿತ ನಿದ್ರೆಯ ಸಮಯ ಈ ಸಮಸ್ಯೆಗೆ ಪ್ರಮುಖ ಕಾರಣಗಳು. ಕೆಲವೊಮ್ಮೆ ದೇಹದಲ್ಲಿ ಪೋಷಕಾಂಶಗಳ ಕೊರತೆ ಅಥವಾ ಹಾರ್ಮೋನುಗಳ ಅಸಮತೋಲನವು ನಿದ್ರಾಹೀನತೆ (Insomnia or Sleeplessness) ಮತ್ತು ತಲೆನೋವಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಾವು ತಡರಾತ್ರಿಯವರೆಗೆ ನಿರಂತರವಾಗಿ ಎಚ್ಚರವಾಗಿದ್ದು ಸರಿಯಾಗಿ ವಿಶ್ರಾಂತಿ ಪಡೆಯದಿದ್ದರೆ, ಅದು ನಮ್ಮ ಮನಸ್ಸು ಮತ್ತು ದೇಹದ ಮೇಲೆ ನೇರ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಆಯುರ್ವೇದದಲ್ಲಿ (Ayurveda) ಉಲ್ಲೇಖಿಸಲಾದ ನೈಸರ್ಗಿಕ ಔಷಧದಿಂದ ಈ ಸಮಸ್ಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು ಎಂದು ಪತಂಜಲಿ ಹೇಳುತ್ತದೆ.

ಉತ್ತರಾಖಂಡ್​​ನ ಹರಿದ್ವಾರದಲ್ಲಿರುವ ಪತಂಜಲಿ ಸಂಶೋಧನಾ ಸಂಸ್ಥೆ ನಡೆಸಿದ ರೀಸರ್ಚ್ ಪ್ರಕಾರ, ಪತಂಜಲಿಯ ಔಷಧವಾದ ದಿವ್ಯ ಮೇಧಾ ವಟಿ ಔಷಧವು ನಿದ್ರಾಹೀನತೆಯಿಂದ ಪರಿಹಾರ ನೀಡುತ್ತದೆ. ಇದು ತಲೆನೋವನ್ನು ಸಹ ನಿವಾರಿಸುತ್ತದೆ. ನಿರಂತರ ತಲೆನೋವು ಮತ್ತು ನಿದ್ರಾಹೀನತೆಯು ದೇಹದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಒಬ್ಬ ನಿದ್ರಾಹೀನ ವ್ಯಕ್ತಿಯು ಸದಾ ದಣಿದ, ಕಿರಿಕಿರಿಯ ಸ್ಥಿತಿಯಲ್ಲಿರಬಹುದು. ಗಮನದ ಕೊರತೆಯ ಸಮಸ್ಯೆ ಅನುಭವಿಸಬಹುದು. ಮೆದುಳಿಗೆ ಸಂಪೂರ್ಣ ವಿಶ್ರಾಂತಿ ಸಿಗದ ಕಾರಣ ಸ್ಮರಣಶಕ್ತಿ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಮತ್ತು ಇದು ಮಾನಸಿಕ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಅದರ ಪರಿಣಾಮವಾಗಿ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ನಿದ್ರೆಯ ಕೊರತೆಯು ಹಾರ್ಮೋನುಗಳ ಸಮತೋಲನವನ್ನು ಹಾಳು ಮಾಡುತ್ತದೆ. ಹೀಗಾಗುವುದರಿಂದ ದೇಹದ ತೂಕ ಹೆಚ್ಚಾಗುವುದು, ಚರ್ಮದ ಸಮಸ್ಯೆಗಳು ಮತ್ತು ಜೀರ್ಣಾಂಗ ವ್ಯವಸ್ಥೆಯ ಅಸ್ವಸ್ಥತೆಗಳಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಮೈಗ್ರೇನ್‌ನಂತಹ ಗಂಭೀರ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಆದ್ದರಿಂದ, ನಿದ್ರಾಹೀನತೆ ಸಮಸ್ಯೆ ಇದ್ದರೆ, ಸಮಯಕ್ಕೆ ಸರಿಯಾಗಿ ಅದರ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ.

ಇದನ್ನೂ ಓದಿ: Patanjali ದಿವ್ಯ ಶ್ವಾಸಾರಿ ವಟಿ: ಪ್ರಯೋಜನಗಳು, ಡೋಸೇಜ್ ಮತ್ತು ಮುನ್ನೆಚ್ಚರಿಕೆಗಳು

ಇದನ್ನೂ ಓದಿ
Image
ಮಸಾಲೆ ವಸ್ತುಗಳಿಂದ ಏನೆಲ್ಲಾ ಪ್ರಯೋಜನ ನೋಡಿ...
Image
ಪತಂಜಲಿಯ ಆರ್ಥೋಗ್ರಿಟ್ ನಿಂದ ಸಂಧಿವಾತವನ್ನು ನಿಯಂತ್ರಿಸಬಹುದು
Image
ಪತಂಜಲಿ ದಿವ್ಯ ಶ್ವಾಸಾರಿ ವಟಿ: ಉಸಿರಾಟದ ಆರೋಗ್ಯಕ್ಕಾಗಿ ಮಾರ್ಗಸೂಚಿ
Image
ನೋವು ನಿವಾರಕವಾದ ಪತಂಜಲಿ ಸರಳ ವ್ಯಾಯಾಮಗಳು

ದಿವ್ಯ ಮೇಧಾ ವಟಿ ಸೇವನೆಯಿಂದ ಆಗುವ ಲಾಭಗಳು

ಆಯುರ್ವೇದದಲ್ಲಿ, ದಿವ್ಯ ಮೇಧಾ ವಟಿಯನ್ನು ಮನಸ್ಸನ್ನು ಶಾಂತಗೊಳಿಸಲು ಮತ್ತು ನಿದ್ರೆಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುವ ಪರಿಣಾಮಕಾರಿ ಔಷಧವೆಂದು ಪರಿಗಣಿಸಲಾಗಿದೆ. ಪತಂಜಲಿಯ ಸಂಶೋಧನೆಯ ಪ್ರಕಾರ, ಈ ಔಷಧಿ ತಲೆನೋವು ಮತ್ತು ಆತಂಕವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಇದು ಬ್ರಾಹ್ಮಿ, ಶಂಖಪುಷ್ಪಿ, ಅಶ್ವಗಂಧ ಮತ್ತು ಜಟಮಾನ್ಸಿಯಂತಹ ಗಿಡಮೂಲಿಕೆಗಳಿಂದ ಮಾಡಲ್ಪಟ್ಟಿದೆ. ಇದು ಮೆದುಳಿನ ನರಗಳನ್ನು ಶಾಂತಗೊಳಿಸುತ್ತದೆ ಮತ್ತು ಸಹಜ ರೀತಿಯಲ್ಲಿ ನಿದ್ರೆಗೆ ಉತ್ತೇಜಿಸುತ್ತದೆ. ಇದರ ನಿಯಮಿತ ಸೇವನೆಯು ಮಾನಸಿಕ ಆಯಾಸವನ್ನು ನಿವಾರಿಸುತ್ತದೆ, ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ ಮತ್ತು ಸ್ಮರಣೆಯನ್ನು ಸುಧಾರಿಸುತ್ತದೆ.

ಇದರ ಇತರ ಪ್ರಯೋಜನಗಳೂ ಉಂಟು. ಇದು ಸ್ಟ್ರೆಸ್ ಹಾರ್ಮೋನುಗಳು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಾನಸಿಕ ಶಕ್ತಿಯನ್ನು ನೀಡುತ್ತದೆ. ಅಧ್ಯಯನನಿರತ ವಿದ್ಯಾರ್ಥಿಗಳು, ಕಚೇರಿಯಲ್ಲಿ ಮಾನಸಿಕ ಒತ್ತಡದಲ್ಲಿ ಕೆಲಸ ಮಾಡುವ ಜನರು ಮತ್ತು ವೃದ್ಧರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಆದಾಗ್ಯೂ, ಇದರ ಸೇವನೆಯನ್ನು ಪ್ರಾರಂಭಿಸುವ ಮೊದಲು ಆಯುರ್ವೇದ ತಜ್ಞರನ್ನು ಸಂಪರ್ಕಿಸುವುದು ಉತ್ತಮ.

ಇದನ್ನೂ ಓದಿ: ದೇಹದ ವಿವಿಧ ಭಾಗಗಳು ನೋಯುತ್ತಿವೆಯಾ? ಆಚಾರ್ಯ ಬಾಲಕೃಷ್ಣರಿಂದ ಸುಲಭ ವ್ಯಾಯಾಮ

ಈ ವಿಷಯಗಳು ಗಮನದಲ್ಲಿರಲಿ

  • ಔಷಧಿಯನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಅಥವಾ ಊಟದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೆಗೆದುಕೊಳ್ಳಿ.
  • ಮೊಬೈಲ್, ಲ್ಯಾಪ್‌ಟಾಪ್ ಮತ್ತು ಟಿವಿಯ ಅತಿಯಾದ ಬಳಕೆಯನ್ನು ತಪ್ಪಿಸಿ.
  • ರಾತ್ರಿ ಮಲಗುವ ಕನಿಷ್ಠ 1 ಗಂಟೆ ಮೊದಲು ಸ್ಕ್ರೀನ್ ಟೈಮ್ ನಿಲ್ಲಿಸಿ.
  • ರಾತ್ರಿಯಲ್ಲಿ ಕೆಫೀನ್ ಮತ್ತು ದೊಡ್ಡ ಭೋಜನ ತಪ್ಪಿಸಿ.
  • ನಿಮ್ಮ ದಿನಚರಿಯಲ್ಲಿ ಯೋಗ ಮತ್ತು ವ್ಯಾಯಾಮವನ್ನು ಸೇರಿಸಿ.
  • ಒತ್ತಡ ಕಡಿಮೆ ಮಾಡಲು ಧ್ಯಾನ ಮಾಡಿ. ಸಾಕಷ್ಟು ನೀರು ಕುಡಿಯಿರಿ ಮತ್ತು ಸಮತೋಲಿತ ಆಹಾರವನ್ನು ತೆಗೆದುಕೊಳ್ಳಿ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ