ಇಂಧನ ದರದಲ್ಲಿ ಮತ್ತೆ ಹೆಚ್ಚಳ; ಪ್ರಮುಖ ಮಹಾನಗರಗಳಲ್ಲಿ ಶತಕ ಬಾರಿಸಿ ಮುನ್ನುಗ್ಗುತ್ತಿದೆ ಪೆಟ್ರೋಲ್​ ದರ!

Petrol Diesel Rate Today: ನಾಲ್ಕು ಪ್ರಮುಖ ಮಹಾನಗರಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 30 ರಿಂದ 39 ಪೈಸೆ ಮತ್ತು ಡೀಸೆಲ್ ಲೀಟರ್‌ಗೆ 24 ರಿಂದ 32 ಪೈಸೆ ಹೆಚ್ಚಾಗಿದೆ. ಇಂದಿನ ಬೆಲೆ ಏರಿಕೆಯೊಂದಿಗೆ ಪ್ರಮುಖ ಮಹಾನಗರಗಳಲ್ಲಿ ಇಂಧನದ ಬೆಲೆ ನೂರರ ಗಡಿ ದಾಟಿದೆ.

ಇಂಧನ ದರದಲ್ಲಿ ಮತ್ತೆ ಹೆಚ್ಚಳ; ಪ್ರಮುಖ ಮಹಾನಗರಗಳಲ್ಲಿ ಶತಕ ಬಾರಿಸಿ ಮುನ್ನುಗ್ಗುತ್ತಿದೆ ಪೆಟ್ರೋಲ್​ ದರ!
ಪ್ರಾತಿನಿಧಿಕ ಚಿತ್ರ
Edited By:

Updated on: Jul 10, 2021 | 8:39 AM

Petrol Diesel Price Today|ದೆಹಲಿ: ಒಂದು ದಿನದ ಸ್ಥಿರತೆಯ ನಂತರ ಪೆಟ್ರೋಲ್​ ಮತ್ತು ಡಿಸೇಲ್​ ಬೆಲೆಯಲ್ಲಿ ಇಂದು (ಜುಲೈ 10, ಶನಿವಾರ) ಏರಿಕೆ ಕಂಡು ಬಂದಿದೆ. ನಾಲ್ಕು ಪ್ರಮುಖ ಮಹಾನಗರಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 30 ರಿಂದ 39 ಪೈಸೆ ಮತ್ತು ಡೀಸೆಲ್ ಲೀಟರ್‌ಗೆ 24 ರಿಂದ 32 ಪೈಸೆ ಹೆಚ್ಚಾಗಿದೆ. ಇಂದಿನ ಬೆಲೆ ಏರಿಕೆಯೊಂದಿಗೆ ಪ್ರಮುಖ ಮಹಾನಗರಗಳಲ್ಲಿ ಇಂಧನದ ಬೆಲೆ ನೂರರ ಗಡಿ ದಾಟಿದೆ. ಬುಧವಾರ ಮತ್ತು ಗುರುವಾರ ಸತತ ಎರಡು ದಿನಗಳ ಕಾಲ ಏರಿಕೆಯಾದ ನಂತರ ಶುಕ್ರವಾರ ಪೆಟ್ರೋಲ್​ ಮತ್ತು ಡಿಸೇಲ್​ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಆದರೆ ಇಂದು ಮತ್ತೆ ಇಂಧನದ ದರ ಏರಿಕೆಯಾಗಿದೆ.

ಇಂದಿನ ಪೆಟ್ರೋಲ್​ ಮತ್ತು ಡಿಸೇಲ್ ಬೆಲೆ ಏರಿಕೆಯ ನಂತರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 100.91 ರೂಪಾಯಿ ತಲುಪಿದೆ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್​ಗೆ 89.88 ರೂಪಾಯಿ ತಲುಪಿದೆ. ಆ ಮೂಲಕ ಪೆಟ್ರೋಲ್​ ಬೆಲೆ 35 ಪೈಸೆ ಮತ್ತು ಡೀಸೆಲ್​ ಬೆಲೆ 26 ಪೈಸೆ ಹೆಚ್ಚಾಗಿದೆ. ಅಂತೆಯೇ, ಇಂದು ಮುಂಬೈಯಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 34 ಪೈಸೆ ಹೆಚ್ಚಳವಾಗಿದ್ದು, 106.93 ರೂಪಾಯಿಗೆ ತಲುಪಿದೆ ಮತ್ತು ಡೀಸೆಲ್ ಲೀಟರ್​ಗೆ 28 ಪೈಸೆ ಹೆಚ್ಚಳವಾಗಿದ್ದು, 97.46 ರೂಪಾಯಿಗೆ ತಲುಪಿದೆ.

ಇಂದು ಕೋಲ್ಕತ್ತಾದಲ್ಲಿ ಪೆಟ್ರೋಲ್ ಲೀಟರ್​ಗೆ 39 ಪೈಸೆ ಏರಿಕೆಯಾಗಿದ್ದು, 101.01 ರೂಪಾಯಿಗೆ ತಲುಪಿದೆ ಮತ್ತು ಡೀಸೆಲ್ ಪ್ರತಿ ಲೀಟರ್​ಗೆ 32 ಪೈಸೆ ಏರಿಕೆಯಾಗಿದ್ದು, 92.97 ರೂಪಾಯಿಗೆ ತಲುಪಿದೆ. ಚೆನ್ನೈನಲ್ಲಿ ಪೆಟ್ರೋಲ್ ಲೀಟರ್​ಗೆ 30 ಪೈಸೆ ಏರಿಕೆಯಾಗಿದ್ದು, 101.67 ರೂಪಾಯಿಗೆ ತಲುಪಿದೆ ಮತ್ತು ಡೀಸೆಲ್ ಪ್ರತಿ ಲೀಟರ್​ಗೆ 24 ಪೈಸೆ ಏರಿಕೆಯಾಗಿದ್ದು , 94.39 ರೂಪಾಯಿಗೆ ತಲುಪಿದೆ.

ಪ್ರಮುಖ ನಗರಗಳಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರ
ಬೆಂಗಳೂರಿನಲ್ಲಿ ಇಂದು ಪೆಟ್ರೋಲ್​ ಬೆಲೆ ಲೀಟರ್​ಗೆ 104.29 ರೂಪಾಯಿ ಆಗಿದ್ದು, ಡೀಸೆಲ್​ ಬೆಲೆ ಲೀಟರ್​ಗೆ 95.26 ರೂಪಾಯಿಗೆ ತಲುಪಿದೆ. ನೋಯ್ಡಾದಲ್ಲಿ ಪೆಟ್ರೋಲ್​ ಬೆಲೆ ಲೀಟರ್​ಗೆ 98.12 ರೂಪಾಯಿ ಆಗಿದ್ದು, ಡೀಸೆಲ್​ ಬೆಲೆ ಲೀಟರ್​ಗೆ 90.35 ರೂಪಾಯಿಗೆ ತಲುಪಿದೆ. ಹೈದರಾಬಾದ್​ನಲ್ಲಿ ಪೆಟ್ರೋಲ್​ ಬೆಲೆ ಲೀಟರ್​ಗೆ 104.86 ರೂಪಾಯಿ ಆಗಿದ್ದು, ಡೀಸೆಲ್​ ಬೆಲೆ ಲೀಟರ್​ಗೆ 97.96 ರೂಪಾಯಿಗೆ ತಲುಪಿದೆ. ಪಾಟ್ನಾದಲ್ಲಿ ಪೆಟ್ರೋಲ್​ ಬೆಲೆ ಲೀಟರ್​ಗೆ 103.18 ರೂಪಾಯಿ ಆಗಿದ್ದು, ಡೀಸೆಲ್​ ಬೆಲೆ ಲೀಟರ್​ಗೆ 95.46 ರೂಪಾಯಿಗೆ ತಲುಪಿದೆ.

ಪೆಟ್ರೋಲ್ ಬೆಲೆ 17 ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 100 ರ ಗಡಿ ದಾಟಿದೆ
17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂಪಾಯಿ ಆಗಿದೆ. ಇವುಗಳಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಲಡಾಖ್, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ತಮಿಳುನಾಡು, ಬಿಹಾರ, ಕೇರಳ, ಪಂಜಾಬ್, ಸಿಕ್ಕಿಂ, ದೆಹಲಿ, ಪುದುಚೇರಿ ಮತ್ತು ಪಶ್ಚಿಮ ಬಂಗಾಳ ಸೇರಿವೆ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುವ ಕೆಲಸವನ್ನು ಮಾಡುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.
ಇದನ್ನೂ ಓದಿ:
ವಿವಿಧ ನಗರದಲ್ಲಿ ಪೆಟ್ರೋಲ್​ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:
https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:
https://tv9kannada.com/business/diesel-price-today.html

TV9 Web

TV9 Kannada

Read More
Loading...
Unable to load recommendations.
Follow Us