PFI Ban: ದೇಶದಲ್ಲಿ PFIನ Twitter ಖಾತೆಗೆ ನಿರ್ಬಂಧ, ಕರ್ನಾಟಕದಲ್ಲಿ ಮಾತ್ರ ಚಾಲ್ತಿಯಲ್ಲಿದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 29, 2022 | 10:12 AM

ಸರ್ಕಾರವು ನಿಷೇಧಿಸಿರುವ ಇಸ್ಲಾಮಿಕ್ ಗ್ರೂಪ್ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (PFI) ಟ್ವಿಟರ್ ಖಾತೆಯನ್ನು ಭಾರತದಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಯಿಂದ ತಡೆಹಿಡಿಯಲಾಗಿದೆ. @PFIofficial ಖಾತೆಯು ಸುಮಾರು 81,000 ಬೆಂಬಲಿಗರನ್ನು ಹೊಂದಿದೆ. ಆದರೆ ಪಿಎಫ್​ಐ ಕರ್ನಾಟಕದ ಟ್ವಿಟರ್ ಖಾತೆ ಚಾಲ್ತಿಯಲ್ಲಿದೆ.

PFI Ban: ದೇಶದಲ್ಲಿ PFIನ Twitter ಖಾತೆಗೆ ನಿರ್ಬಂಧ, ಕರ್ನಾಟಕದಲ್ಲಿ ಮಾತ್ರ ಚಾಲ್ತಿಯಲ್ಲಿದೆ
Follow us on

ದೆಹಲಿ: ಸರ್ಕಾರವು ನಿಷೇಧಿಸಿರುವ ಇಸ್ಲಾಮಿಕ್ ಗ್ರೂಪ್ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (PFI) ಟ್ವಿಟರ್ ಖಾತೆಯನ್ನು ಭಾರತದಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಯಿಂದ ತಡೆಹಿಡಿಯಲಾಗಿದೆ. @PFIofficial ಖಾತೆಯು ಸುಮಾರು 81,000 ಬೆಂಬಲಿಗರನ್ನು ಹೊಂದಿದೆ. ಆದರೆ ಪಿಎಫ್​ಐ ಕರ್ನಾಟಕದ ಟ್ವಿಟರ್ ಖಾತೆ ಚಾಲ್ತಿಯಲ್ಲಿದೆ. ಎಲ್ಲ ಸಾಮಾಜಿಕ ಜಾಲತಾಣದಲ್ಲಿ PFIನ ಖಾತೆಗಳನ್ನು ತಡೆಹಿಡಿದಿಲ್ಲ. ಭಾರತದ ಕೆಲವೊಂದು ಭಾಗದಲ್ಲಿ ಈ PFI ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ನಿರ್ಬಂಧಿಸಲಾಗಿದೆ.

ಭಯೋತ್ಪಾದಕ ಆರೋಪದ ಸಂಬಂಧಿಸಿರುವಂತೆ PFI ಮತ್ತು ಅದರ ಅಂಗಸಂಸ್ಥೆಗಳ ಮೇಲೆ ಐದು ವರ್ಷಗಳ ನಿಷೇಧವನ್ನು ಕೇಂದ್ರ ಗೃಹ ಸಚಿವಾಲಯವು ಸೂಚನೆ ನೀಡಿದ ನಂತರ ಈ ಘಟನೆ ನಡೆದಿದೆ. ಕಳೆದ ಎರಡು ವಾರಗಳಿಂದ ದೇಶಾದ್ಯಂತ ನಡೆದ ದಾಳಿಗಳಲ್ಲಿ 200ಕ್ಕೂ ಹೆಚ್ಚು ಪಿಎಫ್‌ಐ ಮುಖಂಡರನ್ನು ಬಂಧಿಸಲಾಗಿದೆ.

ಪ್ಯಾನ್-ಇಂಡಿಯಾ ಪ್ರಾಮುಖ್ಯತೆಯ ಪ್ರಕರಣಗಳನ್ನು ತನಿಖೆ ಮಾಡುವ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಅಕ್ರಮ ಹಣವನ್ನು ಪತ್ತೆಹಚ್ಚುವ ಜಾರಿ ನಿರ್ದೇಶನಾಲಯ, PFI ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪಿನೊಂದಿಗೆ ಸಂಪರ್ಕ ಹೊಂದಿದೆ ಮತ್ತು ಶಸ್ತ್ರಾಸ್ತ್ರ ತರಬೇತಿ ಶಿಬಿರಗಳನ್ನು ನಡೆಸಿದೆ ಎಂದು ಆರೋಪಿಸಿದೆ. ನಿಷೇಧದ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ಪಿಎಫ್‌ಐ ನಿರ್ಧಾರಿಸಿದೆ. ಪಿಎಫ್‌ಐ ಈ ಆರೋಪಗಳನ್ನು ನಿರಾಕರಿಸಿದೆ.

Published On - 10:11 am, Thu, 29 September 22