ಭಾರತಕ್ಕೆಂದೇ ವಿಶೇಷ ಕೊರೊನಾ ಲಸಿಕೆ ಸಿದ್ಧಪಡಿಸಲು ಮುಂದಾಯ್ತು ಫೈಜರ್.. ಏನಿದರ ಮರ್ಮ?

ಮೈನಸ್​ 70 ಡಿಗ್ರಿ ತಾಪಮಾನದಲ್ಲಿ ಲಸಿಕೆಯನ್ನು ಕಾಪಾಡುವುದು ಕಷ್ಟಕರ ಎಂಬುದನ್ನು ಮನಗಂಡ ಫೈಜರ್ ಭಾರತದಲ್ಲಿ ಬಳಕೆಗೆ ಅನುಕೂಲವಾಗುವಂತೆ ಲಸಿಕೆಯನ್ನು ಮಾರ್ಪಾಡು ಮಾಡಲು ಹೊರಟಿದೆ.

ಭಾರತಕ್ಕೆಂದೇ ವಿಶೇಷ ಕೊರೊನಾ ಲಸಿಕೆ ಸಿದ್ಧಪಡಿಸಲು ಮುಂದಾಯ್ತು ಫೈಜರ್.. ಏನಿದರ ಮರ್ಮ?
ಸಾಂದರ್ಭಿಕ ಚಿತ್ರ
Follow us
Skanda
| Updated By: ಸಾಧು ಶ್ರೀನಾಥ್​

Updated on: Dec 10, 2020 | 12:07 PM

ದೆಹಲಿ: ಅಮೆರಿಕಾ ಮೂಲದ ಫೈಜರ್​ ಸಂಸ್ಥೆ ಭಾರತಕ್ಕೆ ಹೊಂದುವಂತಹ ವಿಶೇಷ ಕೊರೊನಾ ಲಸಿಕೆ ಸಿದ್ಧಪಡಿಸಲು ಮುಂದಾಗಿದೆ. ಸಾಮಾನ್ಯವಾಗಿ ಮೈನಸ್​ 70 ಡಿಗ್ರಿ ತಾಪಮಾನದಲ್ಲಿ ಶೇಖರಿಸಿಡಬೇಕಾದ ಕೊರೊನಾ ಲಸಿಕೆಯನ್ನು ಭಾರತದಲ್ಲಿ ಕಾಪಾಡುವುದು ಕಷ್ಟಕರ ಎಂಬುದನ್ನು ಮನಗಂಡ ಫೈಜರ್​ ಈ ವಿಶೇಷ ಕೊರೊನಾ ಲಸಿಕೆ  ತಯಾರಿಕೆ ನಿರ್ಧಾರ ತೆಗೆದುಕೊಂಡಿದೆ.

ಫೈಜರ್​ ಲಸಿಕೆಗೆ ಬ್ರಿಟನ್​ ಮತ್ತು ಬಹ್ರೈನ್​ ದೇಶಗಳಲ್ಲಿ ಈಗಾಗಲೇ ಅನುಮತಿ ಸಿಕ್ಕಿದೆ. ಸದ್ಯ ಭಾರತದ ವಿಶಾಲ ಮಾರುಕಟ್ಟೆಯನ್ನು ಅಧ್ಯಯನ ಮಾಡಿರುವ ಫೈಜರ್​ ಇಲ್ಲಿಗೆ ಕಾಲಿಡಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಆದರೆ, ಭಾರತದಲ್ಲಿ ಅನುಮತಿ ಸಿಕ್ಕರೂ ಲಸಿಕೆಯನ್ನು ಕಾಪಾಡಿಕೊಳ್ಳುವುದು ಸಾಧ್ಯವಿಲ್ಲ.

 ಫೈಜರ್ ಅತ್ಯಂತ ಪರಿಣಾಮಕಾರಿ​ ಲಸಿಕೆ ಈ ಸಮಸ್ಯೆಯನ್ನು ಅರ್ಥೈಸಿಕೊಂಡಿರುವ ಫೈಜರ್​ ಭಾರತದಲ್ಲಿ ಬಳಕೆಗೆ ಅನುಕೂಲವಾಗುವಂತೆ ಲಸಿಕೆಯನ್ನು ಮಾರ್ಪಾಡು ಮಾಡಲು ಹೊರಟಿದೆ. ಅಂದರೆ, ಸಾಧಾರಣ ಫ್ರೀಜರ್​ನಲ್ಲೂ ಲಸಿಕೆಯನ್ನು ಶೇಖರಿಸಲು ಸಾಧ್ಯವಾಗುವಂತೆ ಅಭಿವೃದ್ಧಿಪಡಿಸಲಿದ್ದೇವೆ ಎಂದು ಫೈಜರ್​ ತೀಳಿಸಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೊರೊನಾ ಲಸಿಕೆಗಳಲ್ಲಿ ಫೈಜರ್ ಅತ್ಯಂತ ಪರಿಣಾಮಕಾರಿ ಎಂದು ತಜ್ಞರು ತಿಳಿಸಿದ್ದಾರೆ. 2 ಡೋಸ್​ ಫೈಜರ್​ ಶೇ. 90ರಷ್ಟು ಪರಿಣಾಮಕಾರಿಯಾಗಿದ್ದು, 1 ಡೋಸ್​ ಶೇ. 67ರಷ್ಟು ಪರಿಣಾಮಕಾರಿ ಎಂದು ಅಧ್ಯಯನಗಳು ತಿಳಿಸಿವೆ.

ಭಾರತದ ಮಾರುಕಟ್ಟೆ ಹಾಗೂ ಇಲ್ಲಿನ ಅವಶ್ಯಕತೆಗಳನ್ನು ಮನಗಂಡು ಈಗಾಗಲೇ ಸಾಲು ಸಾಲು ಕಂಪೆನಿಗಳು ಅನುಮತಿ ಪಡೆಯಲು ತುದಿಗಾಲಲ್ಲಿ ನಿಂತಿವೆ. ಫೈಜರ್​ ಜೊತೆಗೆ ಭಾರತ್​ ಬಯೋಟೆಕ್, ಸೆರಮ್​ ಸಂಸ್ಥೆ, ಜೆನ್ನೋವಾ ಸಹ ಸ್ಪರ್ಧೆಯಲ್ಲಿವೆ.

ಅಲರ್ಜಿ ಸಮಸ್ಯೆ ಉಳ್ಳವರು ಫೈಜರ್​ ತೆಗೆದುಕೊಳ್ಳಬೇಡಿ ಇನ್ನೊಂದೆಡೆ ಬ್ರಿಟನ್​ನಲ್ಲಿ ಅಲರ್ಜಿ ಸಮಸ್ಯೆ ಉಳ್ಳವರು ಸದ್ಯಕ್ಕೆ ಫೈಜರ್​ – ಬಯೋ ಎನ್​ ಟೆಕ್ ಲಸಿಕೆಯನ್ನು ತೆಗೆದುಕೊಳ್ಳದಂತೆ ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಅಲರ್ಜಿ ಸಮಸ್ಯೆ ಎದುರಿಸುತ್ತಿದ್ದ ಕೆಲವರಲ್ಲಿ ಲಸಿಕೆ ತೆಗೆದುಕೊಂಡ ನಂತರ ಸಮಸ್ಯೆಗಳು ತಲೆದೋರಿದ ಕಾರಣ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಭಾರತ್ ಬಯೋಟೆಕ್​ಗೆ ವಿದೇಶಿ ಪ್ರತಿನಿಧಿಗಳ ಭೇಟಿ.. ಲಸಿಕೆ ತುರ್ತು ಬಳಕೆ, ಅನುಮತಿ ನಿರಾಕರಿಸಿದ ಕೇಂದ್ರ ಸರ್ಕಾರ

Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ