AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಐ, ಡೀಪ್‌ಫೇಕ್‌ಗಳ ಅನಿಯಂತ್ರಿತ ಬಳಕೆ ವಿರುದ್ಧದ ಪಿಐಎಲ್ ಕುರಿತು ಪ್ರತಿಕ್ರಿಯೆಗೆ ಕೇಂದ್ರಕ್ಕೆ ಸಮಯಾವಕಾಶ ನೀಡಿದ ದೆಹಲಿ ಹೈಕೋರ್ಟ್

ಡೀಪ್‌ಫೇಕ್‌ಗಳಿಗೆ ಪ್ರವೇಶವನ್ನು ಒದಗಿಸುವ ವೆಬ್‌ಸೈಟ್‌ಗಳನ್ನು ಗುರುತಿಸಲು ಮತ್ತು ನಿರ್ಬಂಧಿಸಲು ಮತ್ತು ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಕೃತಕ ಬುದ್ಧಿಮತ್ತೆಯನ್ನು (ಎಐ) ನಿಯಂತ್ರಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ವಕೀಲ ಚೈತನ್ಯ ರೋಹಿಲ್ಲಾ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ.

ಎಐ, ಡೀಪ್‌ಫೇಕ್‌ಗಳ ಅನಿಯಂತ್ರಿತ ಬಳಕೆ ವಿರುದ್ಧದ ಪಿಐಎಲ್ ಕುರಿತು ಪ್ರತಿಕ್ರಿಯೆಗೆ ಕೇಂದ್ರಕ್ಕೆ ಸಮಯಾವಕಾಶ ನೀಡಿದ ದೆಹಲಿ ಹೈಕೋರ್ಟ್
ದೆಹಲಿ ಹೈಕೋರ್ಟ್
ರಶ್ಮಿ ಕಲ್ಲಕಟ್ಟ
|

Updated on:Jan 08, 2024 | 8:55 PM

Share

ದೆಹಲಿ ಜನವರಿ 08: ಡೀಪ್‌ಫೇಕ್‌ಗಳ(deepfakes) ಬಗ್ಗೆ ಕಳವಳ ವ್ಯಕ್ತಪಡಿಸುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (Public Interest Litigation) ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರಕ್ಕೆ ಸಮಯಾವಕಾಶ ನೀಡುವ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್ (Delhi High Court), ಈ ನಿಟ್ಟಿನಲ್ಲಿ ಕೇಂದ್ರ ನಿಯಮಗಳನ್ನು ರೂಪಿಸುವುದು ಉತ್ತಮ ಎಂದು ಸೋಮವಾರ ಹೇಳಿದೆ. ಈ ವಿಷಯವು ದೊಡ್ಡ ಆಯಾಮವನ್ನು ಹೊಂದಿದೆ ಆದ್ದರಿಂದ ಭಾರತ ನಿಯಮಗಳನ್ನು ರೂಪಿಸುವುದು ಒಳ್ಳೆಯದು ಎಂದು ನಾವು ಭಾವಿಸಿದ್ದೇವೆ. ಸರ್ಕಾರ ಈ ಬಗ್ಗೆ ಮೊದಲು ಚಿಂತಿಸಲಿ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ನೇತೃತ್ವದ ಪೀಠವು ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಎರಡು ವಾರಗಳ ಕಾಲಾವಕಾಶ ನೀಡುವಾಗ ಹೇಳಿದೆ.

ಡೀಪ್‌ಫೇಕ್‌ಗಳಿಗೆ ಪ್ರವೇಶವನ್ನು ಒದಗಿಸುವ ವೆಬ್‌ಸೈಟ್‌ಗಳನ್ನು ಗುರುತಿಸಲು ಮತ್ತು ನಿರ್ಬಂಧಿಸಲು ಮತ್ತು ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಕೃತಕ ಬುದ್ಧಿಮತ್ತೆಯನ್ನು (ಎಐ) ನಿಯಂತ್ರಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ವಕೀಲ ಚೈತನ್ಯ ರೋಹಿಲ್ಲಾ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ.

ಅರ್ಜಿದಾರರು ಏನು ಹೇಳಿದ್ದು?

ಅರ್ಜಿದಾರರು, ಡೀಪ್‌ಫೇಕ್ ತಂತ್ರಜ್ಞಾನದ ಇತ್ತೀಚಿನ ಕೆಲವು ದುರ್ಬಳಕೆಯನ್ನು ಎತ್ತಿ ತೋರಿಸುತ್ತಾ, ಎಐ ತನ್ನದೇ ಆದ ಗಂಭೀರ ಸವಾಲುಗಳನ್ನು ಹೊಂದಿದೆ ಈ ನಿಟ್ಟಿನಲ್ಲಿ ನಿಯಮಗಳ ಅನುಪಸ್ಥಿತಿಯಲ್ಲಿ ಉಂಟಾದ ನಿರ್ವಾತವನ್ನು ತುಂಬುವುದು ಅಗತ್ಯ ಎಂದು ಹೈಕೋರ್ಟ್‌ಗೆ ತಿಳಿಸಿದರು.

ಡೀಪ್‌ಫೇಕ್‌ಗಳು ಎಐ-ಚಾಲಿತ ಡೀಪ್-ಲರ್ನಿಂಗ್ ಸಾಫ್ಟ್‌ವೇರ್ ಅನ್ನು ಬಳಸಿಕೊಂಡು ರಚಿಸಲಾದ ವಿಡಿಯೊಗಳು ಅಥವಾ ಚಿತ್ರಗಳಾಗಿವೆ, ಅದು ಜನರು ನಿಜವಾಗಿ ಹೇಳದ ಅಥವಾ ಮಾಡದ ವಿಷಯಗಳನ್ನು ಹೇಳುವುದನ್ನು ಅಥವಾ ಮಾಡುವುದನ್ನು ತೋರಿಸುತ್ತದೆ.

ಇದನ್ನೂ ಓದಿ:ಪ್ರಶ್ನೆಗಾಗಿ ನಗದು ಪ್ರಕರಣ: ಮಹುವಾ ಮೊಯಿತ್ರಾ ಸರ್ಕಾರಿ ಮನೆ ತೆರವು ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್​​​

ಈ ಹಿಂದೆ ಹೈಕೋರ್ಟ್ ಹೇಳಿದ್ದೇನು?

ಈ ಹಿಂದೆ ಈ ವಿಷಯವನ್ನು ಆಲಿಸಿದ ಹೈಕೋರ್ಟ್, ತಂತ್ರಜ್ಞಾನವನ್ನು “ಹಿಡಿಯಲು” ಸಾಧ್ಯವಿಲ್ಲ ಎಂದು ಹೇಳಿತ್ತು. ತಂತ್ರಜ್ಞಾನದ ಸಕಾರಾತ್ಮಕ ಬಳಕೆ ಸೇರಿದಂತೆ ಬಹಳ ಮುಖ್ಯವಾದ ಸಮತೋಲನ ಅಂಶಗಳು ಒಳಗೊಂಡಿರುವುದರಿಂದ ಸಮಸ್ಯೆಗೆ ಚರ್ಚೆಯ ಅಗತ್ಯವಿದೆ. ಡೀಪ್‌ಫೇಕ್‌ಗಳಿಗೆ ಪರಿಹಾರವು ಎಲ್ಲಾ ಆಸಕ್ತಿಯನ್ನು ಸಮತೋಲನಗೊಳಿಸುವುದನ್ನು ಒಳಗೊಂಡಿರುತ್ತದೆ ಮತ್ತು ಅದನ್ನು ಸರ್ಕಾರದಿಂದ ಮಾತ್ರ ಮಾಡಬಹುದು. ಸುಲಭವಾದ ಪರಿಹಾರವಿಲ್ಲ. ಅದಕ್ಕೆ ಸಾಕಷ್ಟು ಚಿಂತನೆಯ ಅಗತ್ಯವಿದೆ. ಇದು ತುಂಬಾ ಸಂಕೀರ್ಣವಾದ ತಂತ್ರಜ್ಞಾನವಾಗಿದೆ,ಇದು ತನ್ನ ಎಲ್ಲಾ ಸಂಪನ್ಮೂಲಗಳನ್ನು ಹೊಂದಿರುವ ಸರ್ಕಾರ ಮಾತ್ರ ಮಾಡಬಹುದಾದ ಕೆಲ ಎಂದು ಪೀಠ ಹೇಳಿತು.

ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನು ಪರಿಶೀಲಿಸುತ್ತಿದ್ದಾರೆ ಮತ್ತು ನಿಯಮಾವಳಿಗಳು ಜಾರಿಯಲ್ಲಿವೆ ಎಂದು ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ತಿಳಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:53 pm, Mon, 8 January 24

ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ ಇದೆ: ನಟಿ ರಮ್ಯಾ
ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ ಇದೆ: ನಟಿ ರಮ್ಯಾ
‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ಭೀಕರ ಅಪಘಾತ: ಡಿಕ್ಕಿ ರಭಸಕ್ಕೆ ಎರಡು ಪೀಸ್ ಆದ ಟೆಂಪೊ, EXCLUSIVE ದೃಶ್ಯ
ಭೀಕರ ಅಪಘಾತ: ಡಿಕ್ಕಿ ರಭಸಕ್ಕೆ ಎರಡು ಪೀಸ್ ಆದ ಟೆಂಪೊ, EXCLUSIVE ದೃಶ್ಯ